Wednesday, January 27, 2021
Home ಜಿಲ್ಲೆ ಉತ್ತರ ಕನ್ನಡ ಬಸ್-ಕಾರಿನ ನಡುವೆ ಅಪಘಾತ: 9 ಮಂದಿ ಸಾವು

ಇದೀಗ ಬಂದ ಸುದ್ದಿ

ಬಸ್-ಕಾರಿನ ನಡುವೆ ಅಪಘಾತ: 9 ಮಂದಿ ಸಾವು

ಪುರಾಣಪುರ್ ಪ್ರದೇಶದಲ್ಲಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ 9 ಜನರು ಸಾವನ್ನಪಿದ್ರೆ, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜೈ ಪ್ರಕಾಶ್ ತಿಳಿಸಿದ್ದಾರೆ.

“ಪುರಾಣಪುರ್​ ಗಡಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತರ ಬಸ್ ಹೊಲದಲ್ಲಿ ಪಲ್ಟಿಯಾದ ಪರಿಣಾಮ ಬಸ್​ನಲ್ಲಿದ್ದ ಹಲವಾರು ಜನರು ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದವರು ಕೂಡ ಗಾಯಗೊಂಡಿದ್ದಾರೆ” ಎಂದು ಎಸ್​ಪಿ ಜೈ ಪ್ರಕಾಶ್ ತಿಳಿಸಿದ್ದಾರೆ.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಾಥಮಿಕ ಚಿಕಿತ್ಸೆಯ ನಂತರ ಕೆಲವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಬಲಿಯಾದವರಲ್ಲಿ ಹೆಚ್ಚಿನವರು ಪಿಲಿಭಿತ್‌ಗೆ ಸೇರಿದವರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದಿ ನ್ಯೂಸ್24 ಕನ್ನಡ

TRENDING