Saturday, October 24, 2020
Home ಬೆಂಗಳೂರು NEET Result 2020: ಇಂದು ಸಂಜೆ ನೀಟ್ ಫಲಿತಾಂಶ ಪ್ರಕಟ

ಇದೀಗ ಬಂದ ಸುದ್ದಿ

ದೇಶದಲ್ಲಿ10 ಕೋಟಿ ಗಡಿ ದಾಟಿದ ಕೊರೊನಾ ...

 ನವದೆಹಲಿ: ದೇಶದಲ್ಲಿ ಶನಿವಾರದ ವೇಳೆಗೆ 10 ಕೋಟಿಗೂ ಹೆಚ್ಚು ಕೊವಿಡ್ -19 ಪರೀಕ್ಷೆಗಳನ್ನು ನಡೆಸುವ ಮೂಲಕ ಹೊಸ ಎತ್ತರಕ್ಕೇರಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೇಂದ್ರೀಕೃತ...

ಕೇಂದ್ರದ ‘ಬಜೆಟ್’ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಕೇಂದ್ರ ಬಜೆಟ್‌ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ. ಹಾಲಿ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಇಂದಿರಾಗಾಂಧಿಯವರ ಬಳಿಕ ಬಜೆಟ್ ಮಂಡನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡ್ರಗ್ಸ್ ಪ್ರಕರಣ : ರಾಗಿಣಿ ಆಪ್ತ ಗಿರೀಶ್...

ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ಅವರಿಗೆ ಆಪ್ತ ಎನ್ನಲಾದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. 2 ಲಕ್ಷ ರೂಪಾಯಿ...

ಕೊರೊನಾ: ಮುಂದಿನ ಮೂರು ತಿಂಗಳೇ ನಿರ್ಣಾಯಕ –...

ನವದೆಹಲಿ : ಕೊರೊನಾ ಪರಿಸ್ಥಿತಿ ನಿರ್ಣಯಿಸಲು ಮುಂದಿನ ಮೂರು ತಿಂಗಳು ದೇಶದಲ್ಲಿ ನಿರ್ಣಾಯಕವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ದೇಶದಲ್ಲಿ ಸಾಲು ಸಾಲು...

ಕೊರೊನಾ : ಮಹಾಮಾರಿಯಿಂದ ಚೇತರಿಕೆಯಲ್ಲೂ...

ನವದೆಹಲಿ: ಈ ಹಿಂದೆ ಮಾರಕ ಕೊರೋನಾ ವೈರಸ್ ಸೋಂಕಿನ ಹೊಡೆತಕ್ಕೆ ಒಳಗಾಗಿ ಗರಿಷ್ಠ ಸೋಂಕಿತರನ್ನು ಹೊಂದಿ ಕುಖ್ಯಾತಿ ಪಡೆದಿದ್ದ 10 ರಾಜ್ಯಗಳಲ್ಲಿ ಇದೀಗ ದಾಖಲೆ ಪ್ರಮಾಣದ ಚೇತರಿಕೆ ಕಾಣುತ್ತಿದೆ.

NEET Result 2020: ಇಂದು ಸಂಜೆ ನೀಟ್ ಫಲಿತಾಂಶ ಪ್ರಕಟ

ಎನ್​ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ನಡೆಸುವ ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್​ ಟೆಸ್ಟ್​) ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಫಲಿತಾಂಶ ಇಂದು ಪ್ರಕಟವಾಗಲಿದೆ. ಇಂದು ಸಂಜೆ 4 ಗಂಟೆಯ ವೇಳೆಗೆ ಎನ್​ಟಿಎ ಫಲಿತಾಂಶವನ್ನು ಘೋಷಿಸಲಿದೆ. ದೇಶಾದ್ಯಂತ ಸುಮಾರು 14.37 ಲಕ್ಷ ಅಭ್ಯರ್ಥಿಗಳು ನೀಟ್ ಪರೀಕ್ಷೆಯನ್ನು ಬರೆದಿದ್ದರು. ಕೊರೋನಾದಿಂದಾಗಿ ನೀಟ್ ಪರೀಕ್ಷೆ ಬರೆಯಲು ಸಾಧ್ಯವಾಗದವರಿಗೆ ಅಕ್ಟೋಬರ್ 14ರಂದು ಪರೀಕ್ಷೆ ನಡೆಸಲಾಗಿತ್ತು. ಆ ಪರೀಕ್ಷೆಗಳ ಫಲಿತಾಂಶ ಇಂದು ಸಂಜೆ ಪ್ರಕಟವಾಗಲಿದೆ.

ನೀಟ್ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಫಲಿತಾಂಶವನ್ನು ntaneet.nic.in ವೆಬ್​ಸೈಟ್​ನಲ್ಲಿ ವೀಕ್ಷಿಸಬಹುದು ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳು ಅಡ್ಮಿಟ್​ ಕಾರ್ಡ್​ನಲ್ಲಿ ತಮ್ಮ ರೋಲ್ ನಂಬರ್ ದಾಖಲಿಸಬೇಕು. ನಂತರ ಫಲಿತಾಂಶವನ್ನು ವೀಕ್ಷಿಸಬಹುದು. ನೀಟ್ ಪರೀಕ್ಷೆಗಳ ಫಲಿತಾಂಶವನ್ನು ಅಕ್ಟೋಬರ್ 12ರಂದು ಪ್ರಕಟಿಸಲಾಗುವುದು ಎಂದು ಪರೀಕ್ಷಾ ಮಂಡಳಿ ತಿಳಿಸಿತ್ತು. ಆದರೆ, ಬಳಿಕ ಅಕ್ಟೋಬರ್ 16ರಂದು ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಿತ್ತು. ಕೊರೋನಾ ಪ್ರೋಟೋಕಾಲ್ ನಡುವೆಯೂ ಸೆಪ್ಟೆಂಬರ್ 14ರಂದು ನೀಟ್ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. NEET ಪರೀಕ್ಷೆ ಫಲಿತಾಂಶ ಪ್ರಕಟವಾದ ನಂತರ nta.ac.in, ntaneet.nic.in ವೆಬ್​ಸೈಟ್​ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು. ಅಥವಾ ಇಲ್ಲಿ ಕ್ಲಿಕ್ ಮಾಡುವ ಮೂಲಕವೂ ಫಲಿತಾಂಶ ವೀಕ್ಷಿಸಬಹುದು. 

ಪರೀಕ್ಷೆ ಫಲಿತಾಂಶ ವೀಕ್ಷಿಸಲು ಹೀಗೆ ಮಾಡಿ….

  • ಅಧಿಕೃತ ವೆಬ್​ಸೈಟ್ ntaneet.nic.in ಗೆ ಹೋಗಿ.
  • ವೆಬ್​ಸೈಟ್​ನಲ್ಲಿರುವ ಡೌನ್​ಲೋಡ್​ ರಿಸಲ್ಟ್​ ಎಂಬಲ್ಲಿ ಕ್ಲಿಕ್ ಮಾಡಿ
  • ನಿಮ್ಮ ರಿಜಿಸ್ಟ್ರೇಷನ್ ನಂಬರ್, ರೋಲ್ ನಂಬರ್ ನಮೂದಿಸಿ.
  • ಆಗ ನಿಮ್ಮ ಫಲಿತಾಂಶ ವೆಬ್​ಸೈಟ್​ನ ಸ್ಕ್ರೀನ್ ಮೇಲೆ ಕಾಣುವುದು.
  • ಆ ಫಲಿತಾಂಶದ ಸ್ಕ್ರೀನ್ ಅನ್ನು ಡೌನ್​ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ಎಂಬಿಬಿಎಸ್/ ಬಿಎಸ್​ಡಿ ಕೋರ್ಸ್​ಗಳಿಗೆ ಅಭ್ಯರ್ಥಿಗಳು ನೀಟ್​ನಲ್ಲಿ ಶೇ. 50ರಷ್ಟು ಅಂಕ ಪಡೆದು ತೇರ್ಗಡೆಯಾಗಬೇಕು. ಎಸ್​ಸಿ, ಎಸ್​ಟಿ ಅಭ್ಯರ್ಥಿಗಳು ಶೇ. 40 ಅಂಕ ಪಡೆಯಬೇಕು. ಪಿಡಬ್ಲ್ಯುಡಿ ಅಭ್ಯರ್ಥಿಗಳು ಶೇ 45 ಅಂಕ ಪಡೆಯಬೇಕು.

TRENDING