Friday, October 23, 2020
Home ಸುದ್ದಿ ಜಾಲ ಜನರ ರಾಷ್ಟ್ರಪತಿ ಅಬ್ದುಲ್ ಕಲಾಂ ಜನ್ಮದಿನ

ಇದೀಗ ಬಂದ ಸುದ್ದಿ

ವಿಡಿಯೋ ಕಾಲ್​​ ಮೂಲಕ ಮೊಮ್ಮಗನ ನೋಡಿ ಖುಷಿಪಟ್ಟ...

ಚಿರಂಜೀವಿ ಸರ್ಜಾ ಹಾಗು ಮೇಘನಾ ರಾಜ್ ಕುಟುಂಬದಲ್ಲಿ ಗಂಡು ಮಗುವಿನ ಆಗಮನದಿಂದ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಚಿರಂಜೀವಿ ಸರ್ಜಾ ಮಾವ ಅರ್ಜುನ್ ಸರ್ಜಾ ಮಾತ್ರ ಸಿನಿಮಾ ಶೂಟಿಂಗ್...

ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್​​​​​ದೇವ್​​ಗೆ ಹೃದಯಾಘಾತ

ನವದೆಹಲಿ: ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಹೃದಯಾಘಾತಕ್ಕೆ ಒಳಗಾಗಿದ್ದು, ದೆಹಲಿಯ ಫೋರ್ಟೀಸ್ ಎಸ್ಕಾರ್ಟ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಪಿಲ್ ದೇವ್ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ...

ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ

ಕೇರಳ: ಕೇರಳದ ತ್ರಿಶೂರ್​ ವೈದ್ಯಕೀಯ ಕಾಲೇಜ್​ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರ ವಿರುದ್ಧ ಗಂಭೀರ ವೈದ್ಯಕೀಯ ನಿರ್ಲಕ್ಷ್ಯ ಕೇಳಿ ಬಂದಿದೆ. ಕೋವಿಡ್​ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯನ್ನು ಆಸ್ಪತ್ರೆಯಲ್ಲಿನ ಮಂಚಕ್ಕೆ...

ಪಟಾಕಿ ಘಟಕದಲ್ಲಿ ಭೀಕರ ಸ್ಫೋಟ

ಶಿವಕಾಶಿ ಬಳಿಯ ಪಟಾಕಿ ಘಟಕದಲ್ಲಿ ಭೀಕರ ಸ್ಫೋಟಗೊಂಡ ಪರಿಣಾಮ ಐವರು ಸಾವಿಗೀಡಾಗಿದ್ದಾರೆ. ವಿರುಡುನಗರ ಜಿಲ್ಲೆಯ ಶಿವಕಾಶಿ ಬಳಿಯ ಪಟಾಕಿ ಘಟಕದಲ್ಲಿ ಈ ದುರಂತ ವರದಿಯಾಗಿದೆ. ಸಾವನ್ನಪ್ಪಿದವರ ಪೈಕಿ ಮೂವರು ಮಹಿಳೆಯರು...

ಬಂಧನ ಭೀತಿಯಿಂದ ಜಾಮೀನು ಪಡೆದ ಗಿರೀಶ್​ ಗದಿಗೆಪ್ಪಗೌಡ

ಧಾರವಾಡ: ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ಅವರಿಗೆ ಆಪ್ತ ಎನ್ನಲಾದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. 2 ಲಕ್ಷ ರೂಪಾಯಿ...

ಜನರ ರಾಷ್ಟ್ರಪತಿ ಅಬ್ದುಲ್ ಕಲಾಂ ಜನ್ಮದಿನ

ಜನರ ರಾಷ್ಟ್ರಪತಿ ಜನ್ಮದಿನ: ಅಬ್ದುಲ್ ಕಲಾಂ ಕುರಿತು ಆಸಕ್ತಿಕರ ಸಂಗತಿಗಳು

ಮನೆ ಮನೆಗೆ ದಿನಪತ್ರಿಕೆ ಹಾಕುತ್ತ ಓದಿದ ಬಾಲಕ ಭಾರತವನ್ನು ನ್ಯೂಕ್ಲಿಯರ್ ಪವರ್ ರಾಷ್ಟ್ರಗಳ ಪಟ್ಟಿಗೆ ಸೇರಿಸಿದ. ಕೊನೆಗೆ ರಾಷ್ಟ್ರಪತಿ ಹುದ್ದೆಗೂ ಏರಿದ. ದೇಶ ಕಂಡ ಎರಡನೇ ಮಹಾತ್ಮನ ಬಗ್ಗೆ ಇಲ್ಲಿದೆ ಆಸಕ್ತಿಕರ ಮಾಹಿತಿ. ಮಹಾನ್ ಚೇತನ ಅಬ್ದುಲ್ ಕಲಾಂ ದೇಹ ನಮ್ಮಿಂದ ದೂರವಾಗಿದ್ದರೂ ಅವರ ಸಾಧನೆ, ವ್ಯಕ್ತಿತ್ವಗಳು, ಸ್ಪೂರ್ತಿದಾಯಕ ಮಾತುಗಳು ನಮಗೆ ಸದಾ ಮಾರ್ಗದರ್ಶನ ಮಾಡುತ್ತಲೇ ಇರುತ್ತವೆ. ಬದುಕಿನ ಕೊನೆಯ ಘಳಿಗೆಯವರೆಗೂ ಮಾರ್ಗರ್ಶಕರಾಗಿಯೇ ಬದುಕಿದ ಕಲಾಂ ಬಗೆಗಿನ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

1. ತಮಿಳುನಾಡಿನ ರಾಮೇಶ್ವರಂನಲ್ಲಿ ಅಕ್ಟೋಬರ್ 15, 1931ರಲ್ಲಿ ಕಲಾಂ ಜನಿಸಿದರು. ತಿರುಚಿನಾಪಳ್ಳಿಯ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ 1954ರಲ್ಲಿ ವಿಜ್ಞಾನ ಪದವಿ ಪಡೆದ ಬಳಿಕ 1957ರಲ್ಲಿ ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎಂಐಟಿ) ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಪಡೆದರು.

2. ರೋಹಿಣಿ ಕೃತಕ ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ ತಲುಪಿಸಿದ ಭಾರತದ ಮೊದಲ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಎಸ್‍ಎಲ್‍ವಿ 3) ಅಭಿವೃದ್ಧಿಯ ನೇತೃತ್ವ ವಹಿಸಿದ್ದರು ಕಲಾಂ. ಉಪಗ್ರಹಣ ಉಡಾವಣೆ ಬಳಿಕ ಭಾರತ ಸ್ಪೇಸ್ ಕ್ಲಬ್‌ಗೆ ಸೇರುವಂತಾಯಿತು.

3. ಇಸ್ರೋದಲ್ಲಿ ಎರಡು ದಶಕಗಳ ಕಾಲ ಕಾರ್ಯನಿರ್ವಹಿಸಿದ ಕಲಾಂ ಬಳಿಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ) ದೇಶೀಯ ನಿರ್ದೇಶಿತ ಕ್ಷಿಪಣಿ ಅಭಿವೃದ್ಧಿಯ ನೇತೃತ್ವ ವಹಿಸಿದ್ದರು.

4. ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಅಭಿವೃದ್ಧಿ ಮತ್ತು ಪರೀಕ್ಷೆಯ ನೇತೃತ್ವ ವಹಿಸಿ ಯಶಸ್ವಿಯಾದ ಕಾರಣ ಕಲಾಂ ಅವರನ್ನು ಮಿಸೈಲ್ ಮ್ಯಾನ್ ಎಂದೇ ಕರೆಯಲಾಗುತ್ತದೆ.

ಕಲಾಂ ಅವರ ಮುಂದಾಳತ್ವದಲ್ಲಿ ನಡೆದ ಪೋಖ್ರಾನ್-2 ಅಣುಪರೀಕ್ಷೆ ಬಳಿಕ ಭಾರತ ನ್ಯೂಕ್ಲಿಯರ್ ಪವರ್ ರಾಷ್ಟ್ರಗಳ ಗುಂಪಿಗೆ ಸೇರುವಂತಾಯಿತು. ಯುಎಸ್‍ಎ, ಚೀನಾ, ಯುಕೆ, ಫ್ರಾನ್ಸ್ ಮತ್ತು ರಷ್ಯಾ ಮಾತ್ರ ನ್ಯೂಕ್ಲಿಯರ್ ಪವರ್ ರಾಷ್ಟ್ರಗಳು ಎನ್ನಿಸಿಕೊಂಡಿದ್ದವು.

5. 2018ರಲ್ಲಿ ತೆರೆಕಂಡ ಬಾಲಿವುಡ್‍ ಸಿನಿಮಾ ‘ಪರಮಾಣು: ದಿ ಸ್ಟೋರಿ ಆಫ್ ಪೋಖ್ರಾನ್’ ಕಲಾಂ ಅವರ ಸ್ಫೂರ್ತಿಯಿಂದ ತೆರೆಗೆ ತಂದ ಸಿನಿಮಾ.

6. ಭಾರತ ಮತ್ತು ವಿದೇಶದಲ್ಲಿರುವ ವಿಶ್ವವಿದ್ಯಾಲಯಗಳಿಂದ ಇದುವರೆಗೆ 48 ಗೌರವ ಡಾಕ್ಟರೇಟ್‌ಗೆ ಪಾತ್ರರಾಗಿದ್ದಾರೆ.

7. ಭಾರತದ ನಾಗರಿಕ ಪ್ರಶಸ್ತಿಗಳಾದ ಪದ್ಮ ಭೂಷಣ (1981), ಪದ್ಮವಿಭೂಷಣ (1990) ಮತ್ತು ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ (1997) ಕಲಾಂ ಮುಡಿಗೇರಿವೆ.

8. ಭೌತಶಾಸ್ತ್ರ ಮತ್ತು ರಕ್ಷಣಾ ಕ್ಷೇತ್ರಕ್ಕಷ್ಟೇ ಅಲ್ಲದೆ ಗ್ರಾಮೀಣ ಭಾರತದ ಆರೋಗ್ಯ ರಕ್ಷಣೆಗೂ ಕಲಾಂ ತಮ್ಮ ಕೊಡುಗೆ ನೀಡಿದ್ದಾರೆ. ಹೃದ್ರೋಗ ತಜ್ಞ ಸೋಮ ರಾಜು ಅವರ ಜತೆಗೆ ಕೈಜೋಡಿಸಿ ಕಡಿಮೆ ಬೆಲೆಯ ಸ್ಟೆಂಟ್‌ಗಳನ್ನು ಅಭಿವೃದ್ಧಿಪಡಿಸಿದರು. ಬಳಿಕ ಇದು ಕಲಾಂ-ರಾಜು ಸ್ಟಂಟ್ ಎಂದೇ ಜನಪ್ರಿಯವಾಯಿತು.

9. ಏಳು ವರ್ಷಗಳ ಕಾಲ (1992-1999) ಪ್ರಧಾನಿ ಅವರ ಮುಖ್ಯ ವೈಜ್ಞಾನಿಕ ಸಲಹೆಗಾರ ಹಾಗೂ ಡಿಆರ್‌ಡಿಓ ಸೆಕ್ರೆಟರಿಯಾಗಿದ್ದರು.

10. 2002ರಲ್ಲಿ ಲಕ್ಷ್ಮಿ ಸೆಹ್ಗಲ್ ಅವರನ್ನು ಸೋಲಿಸುವ ಮೂಲಕ ರಾಷ್ಟ್ರಪತಿ ಹುದ್ದೇಗೇರಿದರು. ತಮ್ಮ ಸರಳ ಜೀವನ, ರಾಜಕೀಯದಿಂದ ಹೊರತಾದ ವಿಚಾರಧಾರೆಗಳಿಂದ ‘ಪೀಪಲ್ಸ್ ಪ್ರೆಸಿಡೆಂಟ್’ ಎಂದು ಹೆಸರಾದ ಕಲಾಂ ಜನಾನುರಾಗಿಯಾಗಿದ್ದರು.

TRENDING