Friday, October 23, 2020
Home ಅಂತರ್ ರಾಜ್ಯ ತಮ್ಮಿಷ್ಟದಂತೆ ಬೇರೆ ಮದುವೆಯಾಗಲು ಹೆತ್ತ ಮಕ್ಕಳನ್ನೇ ಮಾರಿದ ಅಪ್ಪ-ಅಮ್ಮ!

ಇದೀಗ ಬಂದ ಸುದ್ದಿ

ವಿಡಿಯೋ ಕಾಲ್​​ ಮೂಲಕ ಮೊಮ್ಮಗನ ನೋಡಿ ಖುಷಿಪಟ್ಟ...

ಚಿರಂಜೀವಿ ಸರ್ಜಾ ಹಾಗು ಮೇಘನಾ ರಾಜ್ ಕುಟುಂಬದಲ್ಲಿ ಗಂಡು ಮಗುವಿನ ಆಗಮನದಿಂದ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಚಿರಂಜೀವಿ ಸರ್ಜಾ ಮಾವ ಅರ್ಜುನ್ ಸರ್ಜಾ ಮಾತ್ರ ಸಿನಿಮಾ ಶೂಟಿಂಗ್...

ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್​​​​​ದೇವ್​​ಗೆ ಹೃದಯಾಘಾತ

ನವದೆಹಲಿ: ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಹೃದಯಾಘಾತಕ್ಕೆ ಒಳಗಾಗಿದ್ದು, ದೆಹಲಿಯ ಫೋರ್ಟೀಸ್ ಎಸ್ಕಾರ್ಟ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಪಿಲ್ ದೇವ್ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ...

ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ

ಕೇರಳ: ಕೇರಳದ ತ್ರಿಶೂರ್​ ವೈದ್ಯಕೀಯ ಕಾಲೇಜ್​ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರ ವಿರುದ್ಧ ಗಂಭೀರ ವೈದ್ಯಕೀಯ ನಿರ್ಲಕ್ಷ್ಯ ಕೇಳಿ ಬಂದಿದೆ. ಕೋವಿಡ್​ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯನ್ನು ಆಸ್ಪತ್ರೆಯಲ್ಲಿನ ಮಂಚಕ್ಕೆ...

ಪಟಾಕಿ ಘಟಕದಲ್ಲಿ ಭೀಕರ ಸ್ಫೋಟ

ಶಿವಕಾಶಿ ಬಳಿಯ ಪಟಾಕಿ ಘಟಕದಲ್ಲಿ ಭೀಕರ ಸ್ಫೋಟಗೊಂಡ ಪರಿಣಾಮ ಐವರು ಸಾವಿಗೀಡಾಗಿದ್ದಾರೆ. ವಿರುಡುನಗರ ಜಿಲ್ಲೆಯ ಶಿವಕಾಶಿ ಬಳಿಯ ಪಟಾಕಿ ಘಟಕದಲ್ಲಿ ಈ ದುರಂತ ವರದಿಯಾಗಿದೆ. ಸಾವನ್ನಪ್ಪಿದವರ ಪೈಕಿ ಮೂವರು ಮಹಿಳೆಯರು...

ಬಂಧನ ಭೀತಿಯಿಂದ ಜಾಮೀನು ಪಡೆದ ಗಿರೀಶ್​ ಗದಿಗೆಪ್ಪಗೌಡ

ಧಾರವಾಡ: ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ಅವರಿಗೆ ಆಪ್ತ ಎನ್ನಲಾದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. 2 ಲಕ್ಷ ರೂಪಾಯಿ...

ತಮ್ಮಿಷ್ಟದಂತೆ ಬೇರೆ ಮದುವೆಯಾಗಲು ಹೆತ್ತ ಮಕ್ಕಳನ್ನೇ ಮಾರಿದ ಅಪ್ಪ-ಅಮ್ಮ!

 ಒಡಿಶಾ: ಇದೊಂದು ರೀತಿಯಲ್ಲಿ ವಿಚಿತ್ರ ಕೇಸ್​. ಇಲ್ಲಿ ಅಪ್ಪ-ಅಮ್ಮ ಇಬ್ಬರೂ ಒಟ್ಟಿಗೇ ಇದ್ದಾರೆ. ಆದರೆ ಇಬ್ಬರೂ ಪ್ರತ್ಯೇಕವಾಗಿ ತಮ್ಮಿಷ್ಟದಂತೆ ಬೇರೆ ಬೇರೆ ಮದುವೆಯಾಗಲು ಬಯಸಿದ್ದಾರೆ. ಇದೇ ಕಾರಣಕ್ಕೆ ತಮ್ಮ ಮಕ್ಕಳನ್ನೇ ಮಾರಿದ್ದಾರೆ!

ಇಂಥ ಒಂದು ವಿಷಾದ ಎನ್ನಿಸುವ ಘಟನೆ ನಡೆದಿರುವುದು ಒಡಿಶಾದ ಬುಡಕಟ್ಟು ಜಿಲ್ಲೆ ಮಲ್ಕಂಗಿರಿಯಲ್ಲಿ. ಒಂದನೇ ಮಗುವನ್ನು ಮಾರಾಟ ಮಾಡಿದ್ದರೂ ಅದು ಬೆಳಕಿಗೆ ಬಂದಿರಲಿಲ್ಲ. ಆದರೆ ಇದೀಗ ದಂಪತಿಯ ಎರಡನೆಯ ಮಗ 9 ವರ್ಷದ ಬಸುದೇವ್​ನನ್ನು ಮಾರಾಟ ಮಾಡಿದ ಮೇಲೆ ಘಟನೆ ಬಹಿರಂಗಗೊಂಡಿದೆ.

ಬಸುದೇವ್​ನ ತಂದೆ-ತಾಯಿ ಇಬ್ಬರೂ ಬೇರೆ ಬೇರೆ ಮದುವೆಯಾಗಲು ಬಯಸಿದ್ದರು. ಆದ್ದರಿಂದ ಅವರಿಗೆ ಮಕ್ಕಳು ಅಡ್ಡಿಯಾಗುತ್ತಿದ್ದರು. ಆದ್ದರಿಂದ ಇಂಥದ್ದೊಂದು ಕುಕೃತ್ಯಕ್ಕೆ ಇಳಿದಿದ್ದಾರೆ. ಮಾತ್ರವಲ್ಲದೇ ಮಕ್ಕಳನ್ನು ಮಾರಾಟ ಮಾಡಿದ ಮೇಲೆ ಬೇರೆ ಬೇರೆ ಮದುವೆಯಾಗಿ ಸಂಸಾರವನ್ನೂ ಶುರುಮಾಡಿದ್ದಾರೆ.

ಇತ್ತ ಬಸುದೇವ್ ತನ್ನನ್ನು ಮಾರಾಟ ಮಾಡಿದ ಮನೆಯಲ್ಲಿ ಪಡಬಾರದ ಕಷ್ಟ ಪಟ್ಟಿದ್ದಾನೆ. ಶಾಲೆಗೆ ಹೋಗುತ್ತಿದ್ದ ಆತನನ್ನು ಶಾಲೆಯಿಂದ ಬಿಡಿಸಿ ದನಕಾಯುವುದು ಸೇರಿದಂತೆ ಇನ್ನಿಲ್ಲದ ಕೆಲಸಕ್ಕೆ ಆತನನ್ನು ಒಡ್ಡಲಾಗಿದೆ. ಅಷ್ಟೇ ಅಲ್ಲದೇ ಅವನಿಗೆ ಊಟಕ್ಕೂ ಸರಿಯಾಗಿ ನೀಡುತ್ತಿರಲಿಲ್ಲ.

9 ವರ್ಷದ ಬಾಲಕನಿಗೆ ಚಿತ್ರಹಿಂಸೆಯಾಗಿದೆ. ಎಷ್ಟು ಕೆಲಸ ಮಾಡಿದರೂ ತುತ್ತು ಊಟಕ್ಕೂ ಕಷ್ಟವಾಗಿಬಿಟ್ಟಿದೆ. ಇದರಿಂದ ನೊಂದು ಬೆಂದು ಹೋದ ಬಾಲಕ ಅದೊಂದು ದಿನ ಮನೆಯಿಂದ ಓಡಿ ಹೋಗಿ ಸಮೀಪವಿರುವ ಅಂಗನವಾಡಿಯಲ್ಲಿ ಅಡಗಿ ಕುಳಿತ.

ಅಲ್ಲಿಂದ ಅವನ ಅದೃಷ್ಟ ಬದಲಾಯಿತು. ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಜಯಂತಿ ಖಾರಾ ಅವರು ಬಾಲಕನನ್ನು ನೋಡಿದ್ದಾರೆ. ನಂತರ ಅವನ ಬಳಿ ಏನೆಂದು ವಿಚಾರಿಸಿದ್ದಾರೆ. ಬಾಲಕ ತನ್ನ ಕಥೆ ಹೇಳಿದ್ದಾನೆ. ಜಯಂತಿ ಅವರಿಗೆ ಈತನ ವಿಷಯ ಕೇಳಿ ಕರುಳು ಚುರುಕ್​ ಎಂದಿದೆ. ತಾವೇ ಆಶ್ರಯ ಕೊಟ್ಟಿದ್ದಾರೆ.

ಇತ್ತ ಬಾಲಕ ನಾಪತ್ತೆಯಾಗಿದ್ದನ್ನು ಕಂಡ ಆತನ ಖರೀದಿದಾರರು, ಸ್ಥಳೀಯ ಆಡಳಿತಕ್ಕೆ ದೂರು ದಾಖಲು ಮಾಡಿದ್ದಾರೆ. ತಮ್ಮ ಮಗನನ್ನು ಅಕ್ರಮವಾಗಿ ಒತ್ತೆಯಾಳಾಗಿ ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ. ನಂತರ ಸ್ಥಳೀಯ ಆಡಳಿತ ಸಂಪೂರ್ಣ ವಿಷಯವನ್ನು ಜಯಂತಿ ಹಾಗೂ ಬಾಲಕನಿಂದ ಕೇಳಿ ಪಡೆದಿದೆ.

ಅದಾಗಲೇ ಬಾಲಕ ತನ್ನ ಸಹೋದರನನ್ನು ಕೂಡ ಅಪ್ಪ-ಅಮ್ಮ ಮಾರಾಟ ಮಾಡಿರುವ ವಿಷಯ ಹೇಳಿದ್ದಾನೆ. ಆದರೆ ಆತ ಎಲ್ಲಿದ್ದಾನೋ ಗೊತ್ತಿಲ್ಲ ಎಂದಿದ್ದಾನೆ. ವಿಷಯ ಕೇಳಿತಿಳಿದ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಆತನ ಪಾಲಕರ ಬಳಿ ಹೋಗಿದ್ದಾರೆ. ಅವರು ತಾವು ಮಗನನ್ನು ಮಾರಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಒಂದು ವೇಳೆ ಪಾಲಕರು ಅಥವಾ ಅವರ ಹತ್ತಿರದ ಸಂಬಂಧಿ ಬಾಲಕನನ್ನು ಕರೆದುಕೊಂಡು ಹೋಗಿ ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುವುದಾದರೆ ನಮ್ಮ ಅಭ್ಯಂತರವಿಲ್ಲ. ಒಂದು ವೇಳೆ ಅವರು ಒಪ್ಪದೇ ಹೋದರೆ ಅವನನ್ನು ಸಮಿತಿಯಲ್ಲಿಯೇ ನೋಡಿಕೊಂಡು, ಅವನ ಭವಿಷ್ಯವನ್ನು ರೂಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

TRENDING