Wednesday, October 21, 2020
Home ದೆಹಲಿ ಮಾರ್ಕ್ಸ್‌ಶೀಟ್ ನಲ್ಲಿ ಹೆಸರು ಬದಲಾವಣೆಗೆ ಅವಕಾಶ ಕೊಡಿ: CBSE ಗೆ ಸುಪ್ರೀಂ‌ ಸೂಚನೆ

ಇದೀಗ ಬಂದ ಸುದ್ದಿ

ಮತ್ತೆ ನಮ್ಮ ಸರ್ಕಾರ ಬಂದು, ಸಿಎಂ...

 ಬಾಗಲಕೋಟೆ: 'ಮತ್ತೆ ನಮ್ಮ ಸರ್ಕಾರ ಬಂದು, ನಾನು ಸಿಎಂ ಆದರೆ ನಿಮಗೆ 10 ಕೆ.ಜಿ ಅಕ್ಕಿ ಕೊಡುವೆ' ಎಂದು ವಿಧಾನಸಭೆ ವಿರೋಧ‍ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಬಾದಾಮಿ...

ರಾಷ್ಟ್ರಪತಿ ಕೈಗೆ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿಗೆ...

ಕೊಲಂಬೊ: ರಾಷ್ಟ್ರಪತಿಯವರ ಕೈಗೆ ಸಮಗ್ರ ಆಡಳಿತ ಸೂತ್ರ ನೀಡಲು ಅಗತ್ಯ ಸಂವಿಧಾನ ತಿದ್ದುಪಡಿ ಮಾಡಬೇಕಾದರೆ ಮೊದಲು ಜನಮತ ಸಂಗ್ರಹ ನಡೆಸಬೇಕಾದ್ದು ಅವಶ್ಯ. ಪ್ರಜೆಗಳೇ ಪ್ರಭುಗಳಾಗಿರುವ ಕಾರಣ ಇದು ಅತೀ ಅಗತ್ಯ ಎಂದು...

ದೇಶವನ್ನುದ್ದೇಶಿಸಿ ಮೋದಿ ಆಡಿದ ಐದು ಪ್ರಮುಖ ಅಂಶ

ಕೊರೋನಾ ಸಂಕಷ್ಟ ಸಮಯ ಆರಂಭವಾದ ನಂತರ ಕಳೆದ ಏಳು ತಿಂಗಳಲ್ಲಿ ಏಳನೇ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಹಬ್ಬದ ಸಮಯದಲ್ಲಿ ಜನರು ಮೈಮರೆಯದಂತೆ ಎಚ್ಚರಿಕೆವಹಿಸುವಂತೆ ಸಲಹೆ ನೀಡಿದರು. ಹಬ್ಬಗಳ ಸಾಲುಗಳು...

ಸ್ಪೈಸ್ ಜೆಟ್ ನಿಂದ ದೆಹಲಿ- ಮಸ್ಕತ್ ವಿಮಾನ...

ನಾಲ್ಕು ಅಂತರರಾಷ್ಟ್ರೀಯ ಸೇವೆಯೂ ಸೇರಿದಂತೆ 62 ವಿಮಾನಗಳನ್ನು ಮಂಗಳವಾರ ಸ್ಪೈಸ್ ಜೆಟ್ ನಿಂದ ಪರಿಚಯಿಸಲಾಗಿದೆ. ಒಮನ್ ಜತೆಗೆ ಏರ್ ಬಬಲ್ ಒಪ್ಪಂದ ಮಾಡಿಕೊಂಡಿರುವ ಸ್ಪೈಸ್ ಜೆಟ್, ಅಕ್ಟೋಬರ್ 22ನೇ ತಾರೀಕಿನಿಂದ...

ಚಿತ್ರದುರ್ಗ 89 ಜನರಿಗೆ ಕೋವಿಡ್‌,10 ಸಾವಿರಕ್ಕೇರಿದ ಸೋಂಕಿತರ...

 ಚಿತ್ರದುರ್ಗ: ಜಿಲ್ಲೆಯಲ್ಲಿ ಮಂಗಳವಾರ 89 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ 10,692ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವು ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌...

ಮಾರ್ಕ್ಸ್‌ಶೀಟ್ ನಲ್ಲಿ ಹೆಸರು ಬದಲಾವಣೆಗೆ ಅವಕಾಶ ಕೊಡಿ: CBSE ಗೆ ಸುಪ್ರೀಂ‌ ಸೂಚನೆ

 ನವದೆಹಲಿ: 10 ಮತ್ತು 12ನೇ ತರಗತಿಯ ಪ್ರಮಾಣ ಪತ್ರ ಮತ್ತು ಮಾರ್ಕ್‌ಶೀಟ್‌ಗಳಲ್ಲಿ ವಿದ್ಯಾರ್ಥಿಗಳ ಹೆಸರು ಬದಲಾವಣೆಗೆ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ದೆಹಲಿ ಹೈಕೋರ್ಟ್‌ ಸಿಬಿಎಸ್‌ಇಗೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲಾನ್ ಅವರಿದ್ದ ನ್ಯಾಯಪೀಠವು ಈ ಕುರಿತು ಸಲ್ಲಿಕೆಯಾಗಿರುವ ಹಲವು ಅರ್ಜಿಗಳಲ್ಲಿ ವ್ಯಕ್ತವಾಗಿರುವ ಸಲಹೆಗಳನ್ನು ಪರಿಗಣಿಸುವಂತೆ ಸಿಬಿಎಸ್‌ಇಗೆ ಮಂಗಳವಾರ ಸೂಚನೆ ನೀಡಿತು.

‘ಹೆಸರು ಬದಲಾವಣೆಗಾಗಿ ಎಲ್ಲ ವಿದ್ಯಾರ್ಥಿಗಳೂ ಕೋರುತ್ತಿಲ್ಲ. ಕೋರುತ್ತಿರುವ ಕೆಲವರ ಪರಿಸ್ಥಿತಿ, ಇಷ್ಟಗಳನ್ನು ನೀವು ಅರ್ಥಮಾಡಿಕೊಳ್ಳಬೇಕಿದೆ. ಎಷ್ಟಾದರೂ ಅದು ಅವರ ಹೆಸರು ತಾನೆ? ಬೇಕೆನಿಸುವಷ್ಟು ಸಲ ಬದಲಿಸಿಕೊಳ್ಳಲಿ ಬಿಡಿ. ಇಂಥ ವಿವಾದಗಳಿಗೆ ಆಸ್ಪದ ಮಾಡಿಕೊಡಬೇಡಿ, ಇದು ವಕೀಲರಿಗೆ ಅನುಕೂಲ ಮಾಡಿಕೊಡಬಹುದು. ಆದರೆ, ಸಂಸ್ಥೆಗೆ ಅಲ್ಲ’ ಎಂದು ಹೈಕೋರ್ಟ್‌ ಮಾತಿನ ಚಾಟಿ ಬೀಸಿತು.

ಪ್ರಮಾಣಪತ್ರದಲ್ಲಿ ಒಂದೆಡೆ ಹೊಸ ಹೆಸರು ನಮೂದಿಸಲು ಅವಕಾಶ ಮಾಡಿಕೊಡಿ. ವಿತರಣೆಯಾದ ಸಂದರ್ಭದಲ್ಲಿ ಇದ್ದ ಹೆಸರು ಹಾಗೆಯೇ ಇರಲಿ ಎಂದು ನ್ಯಾಯಾಲಯ ಸಲಹೆ ಮಾಡಿತು.

‘ಮಂಡಳಿಯು ಯಾರೊಬ್ಬರ ಗುರುತನ್ನೂ ದೃಢೀಕರಿಸಲು ಆಗುವುದಿಲ್ಲ. ಮೊದಲ ಬಾರಿಗೆ ನೀಡಿರುವ ಮಾಹಿತಿಯನ್ನು ಆಧರಿಸಿ ಪ್ರಮಾಣಪತ್ರ ವಿತರಿಸುತ್ತದೆ’ ಎಂದು ಸಿಬಿಎಸ್‌ಇ ವಕೀಲರು ನ್ಯಾಯಾಲಯಕ್ಕೆ ವಿವರಿಸಿದರು.

‘ನೀವು ಹೇಗೂ ಮೊದಲ ಬಾರಿಯ ಗುರುತನ್ನೂ ದೃಢೀಕರಿಸುತ್ತಿಲ್ಲ. ಅಭ್ಯರ್ಥಿಗಳು ಕೊಡುವ ಮಾಹಿತಿ ಆಧರಿಸಿ ಪ್ರಮಾಣಪತ್ರ ನೀಡುತ್ತೀರಿ. ಹೀಗಿರುವಾಗ ಮೊದಲು, ಎರಡು ಅಥವಾ ಮೂರನೇ ಬಾರಿಯೂ ಅವರು ಕೊಡು ಮಾಹಿತಿ ಆಧರಿಸಿಯೇ ಹೆಸರು ಬದಲಿಸಿಕೊಡಿ’ ಎಂದು ನ್ಯಾಯಪೀಠ ಹೇಳಿತು.

ತನ್ನ 10 ಮತ್ತು 12ನೇ ತರಗತಿ ಅಂಕಪಟ್ಟಿಯಲ್ಲಿ ತಾಯಿಯ ಹೆಸರು ಬದಲಿಸಿಕೊಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿ ದೆಹಲಿ ಹೈಕೋರ್ಟ್‌ ಮಾರ್ಚ್‌ ತಿಂಗಳಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಸಿಬಿಎಸ್‌ಇ ಮೇಲ್ಮನವಿ ಸಲ್ಲಿಸಿದೆ.

ಅರ್ಜಿ ಸಲ್ಲಿಸಿದ್ದ ವ್ಯಕ್ತಿಯ ತಾಯಿಯು ನಂತರದ ದಿನಗಳಲ್ಲಿ ವಿವಾಹ ವಿಚ್ಛೇದನ ಪಡೆದು, ತನ್ನ ಹೆಸರನ್ನು ಬದಲಿಸಿಕೊಂಡಿದ್ದರು. ಅದೇ ಹೆಸರನ್ನು ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳಲ್ಲಿ ನಮೂದಿಸಬೇಕೆಂದು ಸಿಬಿಎಸ್‌ಇಗೆ ನಿರ್ದೇಶನ ನೀಡಲು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.

ವಿಚಾರಣೆಯನ್ನು ನ್ಯಾಯಾಲಯವು ನವೆಂಬರ್ 20ಕ್ಕೆ ಮುಂದೂಡಿದೆ.

TRENDING