Friday, October 23, 2020
Home ಜಿಲ್ಲೆ ಚಿನ್ಮಯಾನಂದ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್​​ ವಾಪಸ್​ ಪಡೆದ ಕಾನೂನು ವಿದ್ಯಾರ್ಥಿನಿ

ಇದೀಗ ಬಂದ ಸುದ್ದಿ

ಬಂಧನ ಭೀತಿಯಿಂದ ಜಾಮೀನು ಪಡೆದ ಗಿರೀಶ್​ ಗದಿಗೆಪ್ಪಗೌಡ

ಧಾರವಾಡ: ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ಅವರಿಗೆ ಆಪ್ತ ಎನ್ನಲಾದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. 2 ಲಕ್ಷ ರೂಪಾಯಿ...

ಕಿತ್ತೂರು ಉತ್ಸವ ಒಂದೇ ದಿನಕ್ಕೆ ಸೀಮಿತ

ಬೆಳಗಾವಿ: ಈ ಬಾರಿ ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಕಿತ್ತೂರು ಸಾಂಸ್ಕೃತಿಕ ಉತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಕಿತ್ತೂರು ಸಂಸ್ಥಾನದ ಉಳಿವಿಗಾಗಿ ವೀರರಾಣಿ ಚೆನ್ನಮ್ಮ 1824ರಲ್ಲಿ ತನ್ನ ಸೈನ್ಯದೊಂದಿಗೆ ಬ್ರಿಟಿಷರೊಂದಿಗೆ ಸೆಣಸಾಡಿ,...

ವಿಜಯ ದಶಮಿಯಂದು ಸುತ್ತೂರು ಮಠಕ್ಕೆ ಸಾರ್ವಜನಿಕರಿಗಿಲ್ಲ ಪ್ರವೇಶ

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಪ್ರತಿ ವರ್ಷ ಆಯುಧ ಪೂಜೆ ಮತ್ತು ವಿಜಯ ದಶಮಿಯಂದು ವಿಶೇಷ ಪೂಜೆ ಹಾಗೂ ಬನ್ನಿ ಪೂಜೆಯನ್ನು ನೆರವೇರಿಸಲಾಗುತ್ತಿತ್ತು. ಆದರೆ ಈ...

ಹಾಸನಾಂಬ ದರ್ಶನೋತ್ಸವ ಸಿದ್ದತೆ‌ ಆರಂಭ

ಹಾಸನ: ಹಾಸನಾಂಬ ದರ್ಶನೋತ್ಸವ ಸಿದ್ದತೆ‌ ಪ್ರಾರಂಭವಾಗಿದ್ದು, ಸಾರ್ವಜನಿಕರ ಅನುಕೂಲಕ್ಕೆ ಎಲ್​ಇಡಿ ಪರದೆಗಳ ಅಳವಡಿಕೆಗೆ ಜಾಗ ಆಯ್ಕೆ ಹಾಗೂ ಬ್ಯಾರಿಕೇಡ್​ಗಳ ನಿರ್ಮಾಣ ಕುರಿತು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.

ರಾಜ್ಯದಲ್ಲಿ ಪ್ರವಾಹಕ್ಕೆ ಅಂದಾಜು 15,000 ಕೋಟಿ ರೂ....

ಬೆಂಗಳೂರು: ನೆರೆ ಪ್ರದೇಶದಲ್ಲಿ ಸಂತ್ರಸ್ತರಿಗೆ ಯಾವುದೇ ಸಮಸ್ಯೆ ಆಗದಂತೆ‌ ನೋಡಿಕೊಳ್ಳಿ. ಯಾರ ಬಾಯಿಗೂ ಆಹಾರವಾಗದಂತೆ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳಿಗೆ ತಾಕೀತು ಮಾಡಿದರು.

ಚಿನ್ಮಯಾನಂದ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್​​ ವಾಪಸ್​ ಪಡೆದ ಕಾನೂನು ವಿದ್ಯಾರ್ಥಿನಿ

ಮಾಜಿ ಸಚಿವ ಚಿನ್ಮಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್​ ದಾಖಲು ಮಾಡಿದ್ದ ಕಾನೂನು ವಿದ್ಯಾರ್ಥಿನಿ ಇದೀಗ ತಮ್ಮ ದೂರು ಹಿಂಪಡೆದುಕೊಂಡಿದ್ದಾರೆ. ಈ ಹಿಂದೆ ತಾವು ಬಿಜೆಪಿ ನಾಯಕನಿಂದ ನಿರಂತರವಾಗಿ ಅತ್ಯಾಚಾರಕ್ಕೊಳಗಾಗಿದ್ದಾಗಿ ಗಂಭೀರ ಆರೋಪ ಮಾಡಿದ್ದರು.

ಆದರೆ, ಇದೀಗ ಲಖನೌದ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಿಂದ ತಮ್ಮ ಹೇಳಿಕೆ ವಾಪಸ್​ ಪಡೆದುಕೊಂಡಿದ್ದಾರೆ. ತಾವು ಮಾಡಿದ್ದ ಅತ್ಯಾಚಾರದ ಆರೋಪ ನಿರಾಕರಿಸುವುದಾಗಿ ತಿಳಿಸಿದ್ದಾರೆ. 2019ರಲ್ಲಿ ಚಿನ್ಮಯಾನಂದ ಮೇಲೆ ಅತ್ಯಾಚಾರದ ಪ್ರಕರಣ ಮಾಡಿದ್ದರಿಂದ ಸೆಪ್ಟೆಂಬರ್​​ 20, 2019ರಲ್ಲಿ ಇವರನ್ನ ಬಂಧನ ಮಾಡಲಾಗಿತ್ತು.

ಚಿನ್ಮಯಾನಂದ್ ಅವರ ಟ್ರಸ್ಟ್​​ ನಡೆಸುತ್ತಿರುವ ಸಹಜಾನ್​ಪುರ್​​ ಕಾನೂನು ಕಾಲೇಜ್​​ನಲ್ಲಿ ವಿದ್ಯಾರ್ಥಿನಿಯಾಗಿದ್ದ ಯುವತಿ ತಮಗೆ ಕೊಲೆ ಬೆದರಿಕೆ ಸಹ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಇದೀಗ ದಿಢೀರ್​ ಆಗಿ ತಮ್ಮ ಹೇಳಿಕೆಯಲ್ಲಿ ಬದಲಾವಣೆ ಮಾಡಿರುವ ಕಾರಣ ಆಕ್ರೋಶಗೊಂಡಿರುವ ಪ್ರಾಸಿಕ್ಯೂಷನ್​​​ ಸಿಆರ್​ಪಿಸಿ ಸೆಕ್ಷನ್​ 340ರ ಅಡಿ ಅರ್ಜಿ ಸಲ್ಲಿಸಿದ್ದು, ಸುಳ್ಳು ಆರೋಪಕ್ಕಾಗಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಚಿನ್ಮಯಾನಂದ ಕೇಂದ್ರ ಸಚಿವರಾಗಿದ್ದರು. ಅಲಹಾಬಾದ್​ ಹೈಕೋರ್ಟ್​ ನಿರ್ದೇಶನದ ಮೇರೆಗೆ ಲಖನೌ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುತ್ತಿತ್ತು. ಬಂಧನವಾಗಿದ್ದ ಚಿನ್ಮಯಾನಂದ ಫೆಬ್ರವರಿ 3,2020ರಂದು ಜಾಮೀನು ಪಡೆದು ಬಿಡುಗಡೆಯಾಗಿದ್ದರು.

ದಿ ನ್ಯೂಸ್24 ಕನ್ನಡ

TRENDING