Friday, October 23, 2020
Home ಬೆಂಗಳೂರು ಡಿ.ಜೆ.ಹಳ್ಳಿ ಗಲಭೆ ದಿನ ನಾವೇನು ನೋಡಿದ್ದೇವೋ ಅದನ್ನು NIA ಮುಂದೆ ಹೇಳಿದ್ದೇವೆ : ಶಾಸಕ ...

ಇದೀಗ ಬಂದ ಸುದ್ದಿ

ವಿಡಿಯೋ ಕಾಲ್​​ ಮೂಲಕ ಮೊಮ್ಮಗನ ನೋಡಿ ಖುಷಿಪಟ್ಟ...

ಚಿರಂಜೀವಿ ಸರ್ಜಾ ಹಾಗು ಮೇಘನಾ ರಾಜ್ ಕುಟುಂಬದಲ್ಲಿ ಗಂಡು ಮಗುವಿನ ಆಗಮನದಿಂದ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಚಿರಂಜೀವಿ ಸರ್ಜಾ ಮಾವ ಅರ್ಜುನ್ ಸರ್ಜಾ ಮಾತ್ರ ಸಿನಿಮಾ ಶೂಟಿಂಗ್...

ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್​​​​​ದೇವ್​​ಗೆ ಹೃದಯಾಘಾತ

ನವದೆಹಲಿ: ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಹೃದಯಾಘಾತಕ್ಕೆ ಒಳಗಾಗಿದ್ದು, ದೆಹಲಿಯ ಫೋರ್ಟೀಸ್ ಎಸ್ಕಾರ್ಟ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಪಿಲ್ ದೇವ್ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ...

ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ

ಕೇರಳ: ಕೇರಳದ ತ್ರಿಶೂರ್​ ವೈದ್ಯಕೀಯ ಕಾಲೇಜ್​ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರ ವಿರುದ್ಧ ಗಂಭೀರ ವೈದ್ಯಕೀಯ ನಿರ್ಲಕ್ಷ್ಯ ಕೇಳಿ ಬಂದಿದೆ. ಕೋವಿಡ್​ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯನ್ನು ಆಸ್ಪತ್ರೆಯಲ್ಲಿನ ಮಂಚಕ್ಕೆ...

ಪಟಾಕಿ ಘಟಕದಲ್ಲಿ ಭೀಕರ ಸ್ಫೋಟ

ಶಿವಕಾಶಿ ಬಳಿಯ ಪಟಾಕಿ ಘಟಕದಲ್ಲಿ ಭೀಕರ ಸ್ಫೋಟಗೊಂಡ ಪರಿಣಾಮ ಐವರು ಸಾವಿಗೀಡಾಗಿದ್ದಾರೆ. ವಿರುಡುನಗರ ಜಿಲ್ಲೆಯ ಶಿವಕಾಶಿ ಬಳಿಯ ಪಟಾಕಿ ಘಟಕದಲ್ಲಿ ಈ ದುರಂತ ವರದಿಯಾಗಿದೆ. ಸಾವನ್ನಪ್ಪಿದವರ ಪೈಕಿ ಮೂವರು ಮಹಿಳೆಯರು...

ಬಂಧನ ಭೀತಿಯಿಂದ ಜಾಮೀನು ಪಡೆದ ಗಿರೀಶ್​ ಗದಿಗೆಪ್ಪಗೌಡ

ಧಾರವಾಡ: ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ಅವರಿಗೆ ಆಪ್ತ ಎನ್ನಲಾದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. 2 ಲಕ್ಷ ರೂಪಾಯಿ...

ಡಿ.ಜೆ.ಹಳ್ಳಿ ಗಲಭೆ ದಿನ ನಾವೇನು ನೋಡಿದ್ದೇವೋ ಅದನ್ನು NIA ಮುಂದೆ ಹೇಳಿದ್ದೇವೆ : ಶಾಸಕ ರಿಜ್ವಾನ್

ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ದಿನ ನಾವೇನು ನೋಡಿದ್ದೇವೆ ಎಂಬದನ್ನು ಎನ್‍ಐಎ ಮುಂದೆ ಹೇಳಿದ್ದೇವೆ ಎಂದು ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಸ್ಪಷ್ಟ ಪಡಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಹೆಚ್ಚಾದ ಸಂದರ್ಭದಲ್ಲಿ ಪೊಲೀಸರು ನನಗೆ ಮತ್ತು ಚಾಮರಾಜಪೇಟೆ ಶಾಸಕ ಜಮೀರ್‍ಅಹಮದ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಬಂದು ಗುಂಪನ್ನು ಸಮಾದಾನ ಪಡಿಸುವಂತೆ ಕೇಳಿಕೊಂಡಿದ್ದರು.

ಅದಕ್ಕಾಗಿ ನಾವಿಬ್ಬರು ಹೋಗಿದ್ದೇವು. ಸ್ಥಳಕ್ಕೆ ಹೋದ ಸಂದರ್ಭದಲ್ಲಿ ಏನೇಲ್ಲಾ ನಡೆಯುತ್ತಿತ್ತು. ಗಲಭೆ ಶಮನಗೊಳಿಸಲು ನಾವು ಏನು ಪ್ರಯತ್ನ ನಡೆಸಿದ್ದೇವು ಎಂಬುದನ್ನು ಎನ್‍ಐಎಗೆ ವಿವರಿಸಿದ್ದೇವೆ.

ಎನ್‍ಐಎ ನಮಗೆ ನೋಟಿಸ್ ನೀಡಿರಲಿಲ್ಲ, ಆ ತನಿಖಾ ಸಂಸ್ಥೆಯ ಅಧಿಕಾರಿಗಳು ದೂರವಾಣಿ ಕರೆ ಮಾಡಿದ್ದರು. ನಿಮಗೆ ತಿಳಿದ ಮಾಹಿತಿಯನ್ನು ಹಂಚಿಕೊಂಡರೆ ತನಿಖೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದ್ದರಿಂದ ನಾನು ಅ.12ರಂದು ದೊಮ್ಮಲೂರಿನ ಎನ್‍ಐಎ ಕಚೇರಿಗೆ ಹೋಗಿ ನನಗೆ ತಿಳಿದಿದ್ದನ್ನು ಹೇಳಿದ್ದೇನೆ.

ಮಾರನೇಯ ದಿನ ಜಮೀರ್ ಅಹಮದ್ ಖಾನ್ ಹೋಗಿ ಬಂದಿದ್ದಾರೆ. ಡಿವೈಎಸ್ ದರ್ಜೆಯ ಎನ್‍ಐಎ ಅಕಾರಿಯೊಬ್ಬರು ನಮ್ಮಿಂದ ಮೌಕಿಕ ಮಾಹಿತಿ ಪಡೆದರು ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಗುಂಪು ಗಲಭೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ತೊಂದರೆಗೆ ಒಳಗಾದರಿಗೆ, ಅಮಾಯಕರಿಗೆ ನ್ಯಾಯಾ ಸಿಗಬೇಕು. ಅದಕ್ಕಾಗಿ ಎನ್‍ಐಎ ಇನ್ನೂ ಎಷ್ಟು ಬಾರಿ ಮಾಹಿತಿ ಕೇಳಿದರೂ ನಮಗೆ ತಿಳಿದಿದ್ದನ್ನು ಹೇಳಲು ಸಿದ್ಧರಿದ್ದೇವೆ ಎಂದು ಸ್ಪಷ್ಟ ಪಡಿಸಿರು.

# ಎಸ್ಡಿಪಿಐ ಎಲ್ಲಿ ?
ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಿಸಿಬಿ ಕೂಡ ತನಿಖೆ ನಡೆಸುತ್ತಿದೆ. ಗಲಭೆ ನಡೆದಾಗ ಅದರಲ್ಲಿ ಎಸ್‍ಡಿಪಿಐ ಕೈವಾಡ ಇದೆ, ಆ ಪಕ್ಷವನ್ನು ನಿಷೇಧ ಮಾಡುತ್ತೇವೆ ಎಂದು ಸರ್ಕಾರದ ಪ್ರಮುಖ ಹುದ್ದೆಯಲ್ಲಿ ಇದ್ದವರು ಹೇಳಿಕೆ ನೀಡಿದ್ದರು.

ಪ್ರಕರಣದ ತನಿಖೆಗೆ ನಡೆಸಿದ ಸಿಸಿಬಿ ಮಧ್ಯಂತರ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ. ಅದರಲ್ಲಿ ಎಸ್‍ಡಿಪಿಐ ಹೆಸರು ಪ್ರಸ್ತಾಪವಾದಂತೆ ಕಾಣುತ್ತಿಲ್ಲ. ಹಾಗಿದ್ದರೆ ಆರಂಭದಲ್ಲಿ ಹೇಳಿಕೆ ನೀಡಿದ್ದವರು ಈಗ ಏಕೆ ಮೌನವಾಗಿದ್ದಾರೆ, ರಾಜಕೀಯಕ್ಕಾಗಿ ಹೇಳಿಕೆ ನೀಡಿದ್ರಾ, ಘಟನೆ ನಂತರ ಎಸ್‍ಡಿಪಿಐ ಜೊತೆ ಶಾಮೀಲಾದ್ರಾ ಎಂದು ರಿಜ್ವಾನ್ ಪ್ರಶ್ನಿಸಿದರು.

TRENDING