Tuesday, October 27, 2020
Home ಜಿಲ್ಲೆ ಬೆಂಗಳೂರು ಭಾಗ್ಯಲಕ್ಷ್ಮಿ ಯೋಜನೆ : ಫಲಾನುಭವಿಗಳಿಗೆ 3 ವರ್ಷದಿಂದ ಸಿಗದ ಬಾಂಡ್

ಇದೀಗ ಬಂದ ಸುದ್ದಿ

6,500 ಕೋಟಿ ಚಕ್ರಬಡ್ಡಿ ಮನ್ನಾ ಘೋಷಿಸಿದ ಕೇಂದ್ರ...

ಆದಾಯದ ಕೊರತೆ ಎದುರಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಚಿಕ್ಕ ರಿಲೀಫ್ ನೀಡಿದ್ದು ದೀಪಾವಳಿ ಕೊಡುಗೆ ಎಂಬಂತೆ ಚಕ್ರಬಡ್ಡಿ ಮನ್ನಾ ಆದೇಶ ಹೊರಡಿಸಿದೆ. ಒಟ್ಟು 6,500 ಕೋಟಿ ರೂಪಾಯಿ ಮೌಲ್ಯದ ಚಕ್ರಬಡ್ಡಿ...

SBI ಬ್ಯಾಂಕ್‌ ಗ್ರಾಹಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

 ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಎಟಿಎಂಗಳಿಂದ ನಗದು ಹಿಂಪಡೆಯುವದಕ್ಕೆ ಸಂಬಂಧಿಸಿದ ತನ್ನ ನಿಯಮವನ್ನು ಈಗಾಗಲೇ ಬದಲಿಸಿದೆ. ಸೆಪ್ಟೆಂಬರ್ 18 ರಿಂದ ಜಾರಿಗೆ ಬಂದ ಎಸ್...

ಎಸ್.ಬಂಗಾರಪ್ಪ ಸ್ಮಾರಕ ನಿರ್ಮಾಣಕ್ಕೆ ಒಂದು ಕೋಟಿ ರೂ,...

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಸ್ಮಾರಕ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್’ಗೂ ಕೊರೋನಾ...

ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ಸೋಮವಾರ ತಿಳಿದುಬಂದಿದೆ. ಈ ಕುರಿತು ಮಹಾರಾಷ್ಟ್ರ ರಾಜ್ಯ ಉಪ...

ಯಾದಗಿರಿ : ಪ್ರವಾಹದಿಂದ ಸಂಕಷ್ಟಕ್ಕೀಡಾದ ಸಾವಿರ...

ಯಾದಗಿರಿ : ಪ್ರಚಾರದ ಹಂಗಿಲ್ಲದೆ ಕಾಯಕ ಯೋಗಿಗಳಂತೆ , ಎಲೆಮರೆ ಕಾಯಿಯಂತೆ ನಿಸ್ವಾರ್ಥ ಸಮಾಜ ಸೇವೆ ಮಾಡುತ್ತಿರುವವರು ಬೆಂಗಳೂರಿನ  ಪ್ರೊಫೆಸರ್. ಎಂ.ಆರ್ .ದೊರೆಸ್ವಾಮಿಯವರು. ಬೆಂಗಳೂರಿನ ಪಿಇಎಸ್...

ಭಾಗ್ಯಲಕ್ಷ್ಮಿ ಯೋಜನೆ : ಫಲಾನುಭವಿಗಳಿಗೆ 3 ವರ್ಷದಿಂದ ಸಿಗದ ಬಾಂಡ್

 ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮ(ಎಲ್.ಐ.ಸಿ.) ಮತ್ತು ಸರ್ಕಾರದ ನಡುವಿನ ತಿಕ್ಕಾಟದ ಕಾರಣ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ಸಿಗದಂತಾಗಿದೆ. ಮೂರು ವರ್ಷದಿಂದ ಪ್ರಮಾಣಪತ್ರ ಸಿಕ್ಕಿಲ್ಲ. ಅಂಚೆ ಇಲಾಖೆಯ ಬಾಂಡ್ ಕೂಡ ಇಲ್ಲದೆ ಸುಮಾರು 4ಲಕ್ಷ ಹೆಣ್ಣುಮಕ್ಕಳು ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ಹೇಳಲಾಗಿದೆ.

2018 -19 ನೇ ಸಾಲಿನಲ್ಲಿ ಯೋಜನೆಗೆ 3 ಲಕ್ಷ ಹೆಣ್ಣುಮಕ್ಕಳ ನೋಂದಣಿಯಾಗಿದ್ದು ಇದುವರೆಗೂ ಭಾಗ್ಯಲಕ್ಷ್ಮಿ ಬಾಂಡ್ ನೀಡಲಾಗಿಲ್ಲ. 2020 ನೇ ಸಾಲಿನಿಂದ ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ) ಬದಲಿಗೆ ಅಂಚೆ ಇಲಾಖೆ ವ್ಯಾಪ್ತಿಗೆ ಯೋಜನೆ ತರಲು ತೀರ್ಮಾನಿಸಲಾಗಿದೆ.

ಈ ಕುರಿತಂತೆ ಅಂಚೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡುವೆ ಒಪ್ಪಂದವಾಗಿದ್ದರೂ ಯೋಜನೆ ಅನುಷ್ಠಾನವಾಗಿಲ್ಲ. 2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಭಾಗ್ಯಲಕ್ಷ್ಮಿ ಯೋಜನೆ ಆರಂಭಿಸಿದ್ದರು. ಹೆಣ್ಣುಮಕ್ಕಳ ಹೆಸರಲ್ಲಿ ಸರ್ಕಾರದಿಂದ ನಿರ್ದಿಷ್ಟ ಮೊತ್ತವನ್ನು ಠೇವಣಿಯಾಗಿ ನೀಡಲಿದ್ದು 18 ವರ್ಷ ತುಂಬಿದ ನಂತರ 1 ಲಕ್ಷ ರೂ. ನೀಡಲಾಗುತ್ತದೆ.

ಕಳೆದ ಮೂರು ವರ್ಷಗಳಿಂದ ಯೋಜನೆ ಕುಂಠಿತವಾಗಿದೆ. ಠೇವಣಿ ಮೇಲಿನ ಬಡ್ಡಿದರ ಕಡಿಮೆಯಾಗುತ್ತಿರುವುದರಿಂದ ಎಲ್‌ಐಸಿ ಎರಡು ವರ್ಷದಿಂದ ಬಾಂಡ್ ವಿತರಿಸಿಲ್ಲ ಎನ್ನಲಾಗಿದೆ. 2020ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಅಡಿ ಬಾಂಡ್ ನೀಡಲು ನಿರ್ಧರಿಸಿದರೂ ಯೋಜನೆ ಅನುಷ್ಠಾನವಾಗಿಲ್ಲ. ತಾಂತ್ರಿಕ ಕಾರಣದಿಂದ ವಿತರಣೆ ವಿಳಂಬವಾಗಿದ್ದು ಶೀಘ್ರವೇ ಬಾಂಡ್ ವಿತರಿಸಲಾಗುವುದು. ಪ್ರಸಕ್ತಯ ವರ್ಷದಲ್ಲಿ ನೋಂದಣಿ ಮಾಡಿಸಿದವರಿಗೆ ಸುಕನ್ಯಾ ಸಮೃದ್ಧಿಯೋಜನೆಯಡಿ ಬಾಂಡ್ ನೀಡಲಾಗುವುದು. ಹಿಂದಿನ ವರ್ಷದವರೆಗೂ ನೋಂದಣಿ ಮಾಡಿಸಿದವರಿಗೆ ಎಲ್‌ಐಸಿ ವತಿಯಿಂದ ಬಾಂಡ್ ನೀಡಲಾಗುವುದು ಎಂದು ಹೇಳಲಾಗಿದೆ.

TRENDING