Tuesday, October 27, 2020
Home ಸುದ್ದಿ ಜಾಲ ಭೂಮಿಗೆ ಸಮೀಪದಲ್ಲಿ ಕಾಣಲಿದೆ ಮಂಗಳ ಗ್ರಹ

ಇದೀಗ ಬಂದ ಸುದ್ದಿ

ಮದರಸಾದಲ್ಲಿ ಬಾಂಬ್ ಸ್ಫೋಟ :7 ಮಕ್ಕಳ ಸಾವು...

ಪೇಶಾವರ : ವಾಯುವ್ಯ ಪಾಕಿಸ್ತಾನದ ಪೇಶಾವರ ಹೊರವಲಯದಲ್ಲಿರುವ ಮದರಸಾದ ಮೇಲೆ ಬಾಂಬ್​ ದಾಳಿ ನಡೆದಿದೆ. ಜಾಮಿಯಾ ಜುಬೈರಿಯಾ ಮದರಸಾದ ಮುಖ್ಯ ಸಭಾಂಗಣದಲ್ಲಿ ಧರ್ಮಗುರು ಇಸ್ಲಾಂ ಧರ್ಮದ ಬೋಧನೆಗಳ...

ಇತ್ತೀಚೆಗೆ ಬಿಜೆಪಿ ಸೇರಿದ್ದ ನಾಯಕಿ ಖುಷ್ಬೂ ಸೇರಿ...

ಚೆನ್ನೈ: ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ನಟಿ ಖುಷ್ಬೂ ಸುಂದರ್ ಗೆ ತಮಿಳುನಾಡು ಪೊಲೀಸರು ಶಾಕ್ ನೀಡಿದ್ದಾರೆ. ಪ್ರತಿಭಟನೆಯೊಂದಕ್ಕೆ ತೆರಳಿದ್ದ ಖುಷ್ಬೂ ಮತ್ತು ಕೆಲವು ಬಿಜೆಪಿ ನಾಯಕರನ್ನು ಬಂಧಿಸಲಾಗಿದೆ.

ಬಂಡೀಪುರದಲ್ಲಿ ನಟ ಧನ್ವೀರ್​​ ವಿರುದ್ಧ ಎಫ್ಐಆರ್

ಚಾಮರಾಜನಗರ: ನಟ ಧನ್ವೀರ್ ವಿರುದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಮೀಸಲು ಪ್ರದೇಶದ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972- ಸೆಕ್ಷನ್...

R R ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ...

 ಬೆಂಗಳೂರು : ರಾಜರಾಜೇಶ್ವರಿನಗರ ಉಪ ಚುನಾವಣೆಯ ಕಣ ತಾರಕಕ್ಕೇರಿದೆ. ಆಡಳಿತ ವಿರೋಧ ಪಕ್ಷಗಳ ನಡುವೆ ವಾಕ್ ಸಮರ ಮುಂದುವರಿದಂತ ಸಂದರ್ಭದಲ್ಲಿಯೇ ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಚುನಾವಣಾ ಅವ್ಯವಹಾರದ...

ಕಮಲ್‌ನಾಥ್, ದಿಗ್ವಿಜಯ್ ಸಿಂಗ್ ‘ಅತಿದೊಡ್ಡ ವಂಚಕರು’: ಜ್ಯೋತಿರಾದಿತ್ಯ...

ನವದೆಹಲಿ: 'ಮಧ್ಯಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಕಮಲ್ ನಾಥ್ ಮತ್ತು ದಿಗ್ವಿಜಯ್ ಸಿಂಗ್ ಅವರೇ 'ಅತಿದೊಡ್ಡ ವಂಚಕರು' ಎಂದು ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಆರೋಪಿಸಿದ್ದಾರೆ. 'ಭ್ರಷ್ಟ ಆಡಳಿತ'ವನ್ನು ನೀಡುವ ಮೂಲಕ ಇವರು...

ಭೂಮಿಗೆ ಸಮೀಪದಲ್ಲಿ ಕಾಣಲಿದೆ ಮಂಗಳ ಗ್ರಹ

 ಉಡುಪಿ: ಅಕ್ಟೋಬರ್‌ 13ರಂದು ಮಂಗಳಗ್ರಹ ಭೂಮಿಗೆ ಹತ್ತಿರವಾಗಿ ಕಾಣುತ್ತಾನೆ. ಈ ಆಕಾಶ ವಿಸ್ಮಯವನ್ನು ಖಗೋಳಾಸಕ್ತರು ಕಣ್ತುಂಬಿಕೊಳ್ಳಬಹುದು ಎಂದು ಪೂರ್ಣಪ್ರಜ್ಞ ಅಮೆಚೂರ್‌ ಆಸ್ಟ್ರೋನಾಮರ್ಸ್‌ ಕ್ಲಬ್‌ನ ಸಹ ಸಂಚಾಲಕ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಸುಮಾರು 2 ವರ್ಷ 2 ತಿಂಗಳಿಗೊಮ್ಮೆ ಭೂಮಿಯ ಸಮೀಪದಲ್ಲಿ ಮಂಗಳ ಗ್ರಹ ಕಾಣುತ್ತದೆ. ಸಮೀಪ ಬಂದಾಗ ಕೆಂಬಣ್ಣದಿಂದ ದೊಡ್ಡದಾಗಿ ಹೊಳೆಯುತ್ತ ರಾತ್ರಿ ಆಕಾಶದಲ್ಲಿ ಎಲ್ಲರನ್ನೂ ಸೆಳೆಯುತ್ತದೆ. ಅ.13 ರಂದು ಭೂಮಿಗೆ ಸಮೀಪ ಅಂದರೆ 6 ಕೋಟಿ 20 ಲಕ್ಷ ಕಿ.ಮೀ ದೂರದಲ್ಲಿ ಕಾಣಿಸಲಿದ್ದು, ವಾರವಿಡಿ ಬರಿಗಣ್ಣಿಗೆ ಗೋಚರಿಸಲಿದೆ. ಇದಕ್ಕೆ ಮಾರ್ಸ್ ಒಪೋಸಿಷನ್ (ಮಂಗಳನ ವಿಯುತಿ) ಎನ್ನುತ್ತಾರೆ ಎಂದು ತಿಳಿಸಿದ್ದಾರೆ.

ಕೆಂಡದಂತೆ ಕಾಣುವ ಕಾರಣಕ್ಕೆ ಮಂಗಳ ಗ್ರಹಕ್ಕೆ ಅಂಗಾರಕ ಎಂಬ ಹೆಸರು ಬಂದಿದ್ದು, ಯಾವಾಗಲೂ ಹೀಗೆ ಕಾಣುವುದಿಲ್ಲ. 2021 ಡಿಸೆಂಬರ್ ಸಮಯಕ್ಕೆ ಭೂಮಿಯಿಂದ ಸುಮಾರು 39 ಕೋಟಿ ಕಿ.ಮೀ ದೂರದಲ್ಲಿ ಕಾಣುವ ಮಂಗಳ ಪ್ರತಿ 2 ವರ್ಷ 2 ತಿಂಗಳಿಗೊಮ್ಮೆ ಹತ್ತಿರ ಬರುತ್ತಾನೆ. ಅ.13ರಂದು ಭೂಮಿಗೆ ಹತ್ತಿರವಾಗಿ ಕಾಣುವಷ್ಟು ಮತ್ತೆ ಕಾಣಿಸಿಕೊಳ್ಳುವುದು 2,035ಕ್ಕೆ ಮಾತ್ರ. ಹಿಂದೆ 2003ರಲ್ಲಿ 2018 ರಲ್ಲಿ ಭೂಮಿಗೆ ಹತ್ತಿರದಲ್ಲಿ ಮಂಗಳ ಗ್ರಹ ಗೋಚರಿಸಿತ್ತು ಎಂದರು.

ಸೌರವ್ಯೂಹದ ಬೇರಾವ ಗ್ರಹವೂ ಕೆಂಪು ಬಣ್ಣದಿಂದ ಕಾಣುವುದಿಲ್ಲ. ವಾತಾವರಣವಿಲ್ಲದ ಮಂಗಳ ಗ್ರಹವು ಕಬ್ಬಿಣ ಆಕ್ಸೈಡ್‌ನ ಹುಡಿಗಳ ಧೂಳು, ಸೂರ್ಯನ ಬೆಳಕನ್ನು ಹೀರಿ ಕೆಂಬಣ್ಣ ಹೊರಸೂಸುವುದರಿಂದ ಮಂಗಳ ಕೆಂಬಣ್ಣದಲ್ಲಿ ಕಾಣುತ್ತದೆ.

ಬರಿಗಣ್ಣಿಗೆ ಕಾಣುವ ಗ್ರಹಗಳಾದ ಶುಕ್ರ, ಮಂಗಳ, ಗುರು, ಶನಿ ನಮಗೆ ಒಂದೇ ಗಾತ್ರದಲ್ಲಿ ಕಾಣುವುದಿಲ್ಲ, ಸೂರ್ಯನಿಂದ ಹೆಚ್ಚುಕಡಿಮೆ ಒಂದೇ ದೂರದಲ್ಲಿದ್ದರೂ, ಭೂಮಿಯಿಂದ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ದೂರದಲ್ಲಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ.

1964ರಿಂದ ಮಂಗಳನ ಅದ್ಯಯನಕ್ಕಾಗಿ ಕೃತಕ ಉಪಗ್ರಹಗಳನ್ನು ಹಾರಿಸಲಾಗಿದ್ದರೂ ಶೇ 60 ರಷ್ಟು ಸಫಲವಾಗಿಲ್ಲ. 2018ರ ಹೊತ್ತಿಗೆ 8 ಕೃತಕ ಉಪಗ್ರಹಗಳು ಮಂಗಳನ ಅದ್ಯಯನ ನಡೆಸುತ್ತಿವೆ. ಇಲ್ಲಿಯವರೆಗೆ 56 ಕೃತಕ ಉಪಗ್ರಹಗಳು ಅದ್ಯಯನಕ್ಕೆ ತೆರಳಿದ್ದರೂ ಕೇವಲ 26 ಮಾತ್ರ ಸಫಲವಾಗಿವೆ.

2 ವರ್ಷ 2 ತಿಂಗಳಿಗೊಮ್ಮೆ ಭೂಮಿಗೆ ಸಮೀಪವಾಗುವ ಸಂದರ್ಭ ಮಂಗಳನ ಅದ್ಯಯನಕ್ಕಾಗಿ ಹೆಚ್ಚಾಗಿ ಕಾಲ ನಿಗದಿ ಮಾಡಲಾಗುತ್ತದೆ. ರಷ್ಯಾ, ಅಮೆರಿಕ ಮಾತ್ರ ಮಂಗಳನ ಅಂಗಳದಲ್ಲಿ ಕೃತಕ ಉಪಗ್ರಹಗಳನ್ನು ಇಳಿಸಿ ಅದ್ಯಯನ ಮಾಡಿದ ರಾಷ್ಟ್ರಗಳಾಗಿವೆ. ಯುರೋಪಿಯನ್ ಸ್ಪೇಸ್ ಎಜೆನ್ಸಿ ಮತ್ತು ಭಾರತವು ಕೃತಕ ಉಪಗ್ರಹಗಳನ್ನು ಕಳುಹಿಸಿ ಮಂಗಳನ ಸುತ್ತ ಅದ್ಯಯನ ನಡೆಸಿ ಯಶಸ್ಸು ಕಂಡಿವೆ ಎಂದು ಡಾ.ಎ.ಪಿ ಭಟ್ ತಿಳಿಸಿದ್ದಾರೆ.

TRENDING