Wednesday, October 28, 2020
Home ಅಂತರ್ ರಾಷ್ಟ್ರೀಯ ಉ. ಕೊರಿಯಾ ಮಾತ್ರ ಇದುವರೆಗೆ ಕೊರೊನಾ ಮುಕ್ತ ರಾಷ್ಟ್ರ: ದೇಶದ ಜನತೆಗೆ ಶುಭಾಶಯ ಹೇಳಿದ ಕಿಮ್...

ಇದೀಗ ಬಂದ ಸುದ್ದಿ

ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಸಿಗದ ಆದ್ಯತೆ

ಬ್ಯಾಂಕಿಂಗ್ ನೇಮಕಾತಿಗೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(IBPS) ಪರೀಕ್ಷೆ ನಡೆಸಲಿದ್ದು ಈ ಸಲವೂ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿಲ್ಲ. ಬ್ಯಾಂಕ್ ಸಿಬ್ಬಂದಿ ಆಯ್ಕೆಗೆ ನಡೆಸುವ...

ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಪೊಗರು’...

 ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಸೌತ್ ಇಂಡಸ್ಟ್ರಿಯಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಹಾಡು ಹಾಗೂ ಡೈಲಾಗ್ ಟ್ರೈಲರ್ ಮೂಲಕ ಸಖತ್...

ಮೈದುಂಬಿ ಹರಿಯುತ್ತಿದೆ ದೂಧ್ ಸಾಗರ ಜಲಪಾತ !

ಪಣಜಿ: ಕಳೆದ ಕೆಲ ದಿನಗಳ ಹಿಂದೆ ಗೋವಾದ ಪ್ರಸಿದ್ಧ ದೂಧ್ ಸಾಗರ ಜಲಪಾತ ಪ್ರವಾಸೋದ್ಯಮ ಆರಂಭಗೊಂಡಿದ್ದರೂ ನಿರೀಕ್ಷಿತ ಸಂಖ್ಯೆಯಲ್ಲಿ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಆಗಮಿಸದಿರುವುದು ಕಂಡುಬರುತ್ತಿದೆ. ದೂಧ್...

RR ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ...

ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ನಟಿ ಖುಷ್ಬೂ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಆಗಮಿಸಲಿರುವ ಅವರು, ಆರ್.ಆರ್. ನಗರ...

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 43893 ...

 ನವದೆಹಲಿ :  ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳಿಗಿಂತ ಗುಣಮುಖ ಪ್ರಕರಣಗಳ ಸಂಖ್ಯೆಯಲ್ಲೇ ಏರಿಕೆ ಕಂಡು ಬಂದಿದೆ. ದೇಶದಲ್ಲಿ ಒಂದೇ ದಿನ 43893 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ...

ಉ. ಕೊರಿಯಾ ಮಾತ್ರ ಇದುವರೆಗೆ ಕೊರೊನಾ ಮುಕ್ತ ರಾಷ್ಟ್ರ: ದೇಶದ ಜನತೆಗೆ ಶುಭಾಶಯ ಹೇಳಿದ ಕಿಮ್ ಜಾಂಗ್ ಉನ್

ಪ್ಯೊಂಗ್ಯಾಂಗ್ಇಡೀ ವಿಶ್ವ ಕೊರೋನಾ ವೈರಸ್ ನಿಂದ ತತ್ತರಿಸುತ್ತಿದ್ದರೆ ಉತ್ತರ ಕೊರಿಯಾ ಮಾತ್ರ ಇದುವರೆಗೆ ಕೊರೋನಾ ಸೋಂಕಿನಿಂದ ಮುಕ್ತವಾಗಿದೆ. ಸಾಂಕ್ರಾಮಿಕದ ಸಂಕಷ್ಟದ ಸಂದರ್ಭದಲ್ಲಿ ದೇಶದ ನಾಗರಿಕರು ಉತ್ತಮ ಆರೋಗ್ಯ ಕಾಳಜಿ ಕಾಪಾಡಿಕೊಂಡಿರುವುದಕ್ಕೆ ಧನ್ಯವಾದ ಹೇಳಲು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ನಿನ್ನೆ ಮಿಲಿಟರಿ ಪರೇಡ್ ನಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದರು.

ಉತ್ತರ ಕೊರಿಯಾದ ಆಡಳಿತಾರೂಢ ವರ್ಕರ್ಸ್ ಪಾರ್ಟಿಯ 75ನೇ ವರ್ಷಾಚರಣೆ ಆಚರಿಸಿಕೊಳ್ಳುತ್ತಿದ್ದು ಈ ಸಂದರ್ಭದಲ್ಲಿ ರಾಷ್ಟ್ರದ ವಾಹಿನಿಯನ್ನುದ್ದೇಶಿಸಿ ಮಾತನಾಡಿದ ಕಿಮ್ ಜಾಂಗ್ ಉನ್, ಕೊರೋನಾ ಸೋಂಕಿಗೆ ತುತ್ತಾಗದೆ ಜನರು ಉತ್ತಮ ಆರೋಗ್ಯ ಕಾಪಾಡಿಕೊಂಡಿರುವುದಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಸೋಂಕಿಗೆ ಯಾವ ನಾಗರಿಕರೂ ತುತ್ತಾಗದಿರುವಂತೆ ನೋಡಿಕೊಳ್ಳುವುದು ನಮ್ಮ ಸಹಜ ಕರ್ತವ್ಯವಾಗಿದ್ದು ನಮ್ಮ ಪಕ್ಷದ ಯಶಸ್ಸನ್ನು ಸಹ ಇದು ತೋರಿಸುತ್ತದೆ. ಈ ಯಶಸ್ಸು ನನಗೆ ತೀವ್ರ ಸಂತಸ ತಂದಿದೆ ಎಂದು ಹೇಳಿದರು.

ನಮ್ಮ ಪಕ್ಷಕ್ಕೆ ಪ್ರತಿಯೊಬ್ಬ ನಾಗರಿಕರ ಜೀವ ಬೇರೆಲ್ಲಕ್ಕಿಂತಲೂ ಮುಖ್ಯ. ನಾಗರಿಕರ ಆರೋಗ್ಯ ನಮ್ಮ ಪಕ್ಷದ ಇರುವಿಕೆಗೆ ಸಹ ಮುಖ್ಯವಾಗಿದೆ ಎಂದು ಕಿಮ್ ಜಾಂಗ್ ಉನ್ ಹೇಳಿದ್ದಾರೆ.

ನೆರೆಯ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಕೊರೋನಾ ವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡು ಇಡೀ ವಿಶ್ವಕ್ಕೆ ಹರಡಿದರೂ ಕೂಡ ಉತ್ತರ ಕೊರಿಯಾಕ್ಕೆ ಮಾತ್ರ ಇದುವರೆಗೆ ಅದರ ಬಿಸಿ ತಟ್ಟಿಲ್ಲ.

ವರ್ಕರ್ಸ್ ಪಾರ್ಟಿಯ 75ನೇ ಸ್ಥಾಪನಾ ವರ್ಷಾಚರಣೆ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕಿಮ್ ಜಾಂಗ್ ಉನ್ ಗೆ ಶುಭಾಶಯ ತಿಳಿಸಿದ್ದಾರೆ. ವರ್ಕರ್ಸ್ ಪಾರ್ಟಿಯ ನಾಯಕತ್ವ ಮತ್ತು ಸಾಧನೆ ಅತ್ಯಂತ ಪ್ರಶಂಸನೀಯ. ಕಳೆದ 100 ವರ್ಷಗಳಲ್ಲಿಯೇ ವಿಶ್ವಾದ್ಯಂತ ಕಂಡುಕೇಳರಿಯದ ತೊಂದರೆ, ಅಪಾಯದಲ್ಲಿ ಇಡೀ ವಿಶ್ವ ಸಿಲುಕಿದ್ದು ಕೋವಿಡ್-19 ವ್ಯಾಪಕವಾಗಿ ಹರಡುತ್ತಿದೆ. ಅಂತಹುದರಲ್ಲಿ ಉತ್ತರ ಕೊರಿಯಾ ಮಾತ್ರ ಸಮಸ್ಯೆಗೆ ಸಿಲುಕದಿರುವುದು ಪ್ರಶಂಸನೀಯ ಸಂಗತಿ ಎಂದು ಜಿನ್ ಪಿಂಗ್ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

TRENDING