Wednesday, October 21, 2020
Home ಕ್ರೈಂ ನ್ಯೂಸ್ ಸಾಗರ : ಬೆಳ್ಳಂಬೆಳಗ್ಗೆ ಪತ್ನಿ ಕಣ್ಣೆದುರಲ್ಲೇ ಗಂಡ-ಅತ್ತೆಯ ಬರ್ಬರ ಹತ್ಯೆ!

ಇದೀಗ ಬಂದ ಸುದ್ದಿ

ಮತ್ತೆ ನಮ್ಮ ಸರ್ಕಾರ ಬಂದು, ಸಿಎಂ...

 ಬಾಗಲಕೋಟೆ: 'ಮತ್ತೆ ನಮ್ಮ ಸರ್ಕಾರ ಬಂದು, ನಾನು ಸಿಎಂ ಆದರೆ ನಿಮಗೆ 10 ಕೆ.ಜಿ ಅಕ್ಕಿ ಕೊಡುವೆ' ಎಂದು ವಿಧಾನಸಭೆ ವಿರೋಧ‍ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಬಾದಾಮಿ...

ರಾಷ್ಟ್ರಪತಿ ಕೈಗೆ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿಗೆ...

ಕೊಲಂಬೊ: ರಾಷ್ಟ್ರಪತಿಯವರ ಕೈಗೆ ಸಮಗ್ರ ಆಡಳಿತ ಸೂತ್ರ ನೀಡಲು ಅಗತ್ಯ ಸಂವಿಧಾನ ತಿದ್ದುಪಡಿ ಮಾಡಬೇಕಾದರೆ ಮೊದಲು ಜನಮತ ಸಂಗ್ರಹ ನಡೆಸಬೇಕಾದ್ದು ಅವಶ್ಯ. ಪ್ರಜೆಗಳೇ ಪ್ರಭುಗಳಾಗಿರುವ ಕಾರಣ ಇದು ಅತೀ ಅಗತ್ಯ ಎಂದು...

ದೇಶವನ್ನುದ್ದೇಶಿಸಿ ಮೋದಿ ಆಡಿದ ಐದು ಪ್ರಮುಖ ಅಂಶ

ಕೊರೋನಾ ಸಂಕಷ್ಟ ಸಮಯ ಆರಂಭವಾದ ನಂತರ ಕಳೆದ ಏಳು ತಿಂಗಳಲ್ಲಿ ಏಳನೇ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಹಬ್ಬದ ಸಮಯದಲ್ಲಿ ಜನರು ಮೈಮರೆಯದಂತೆ ಎಚ್ಚರಿಕೆವಹಿಸುವಂತೆ ಸಲಹೆ ನೀಡಿದರು. ಹಬ್ಬಗಳ ಸಾಲುಗಳು...

ಸ್ಪೈಸ್ ಜೆಟ್ ನಿಂದ ದೆಹಲಿ- ಮಸ್ಕತ್ ವಿಮಾನ...

ನಾಲ್ಕು ಅಂತರರಾಷ್ಟ್ರೀಯ ಸೇವೆಯೂ ಸೇರಿದಂತೆ 62 ವಿಮಾನಗಳನ್ನು ಮಂಗಳವಾರ ಸ್ಪೈಸ್ ಜೆಟ್ ನಿಂದ ಪರಿಚಯಿಸಲಾಗಿದೆ. ಒಮನ್ ಜತೆಗೆ ಏರ್ ಬಬಲ್ ಒಪ್ಪಂದ ಮಾಡಿಕೊಂಡಿರುವ ಸ್ಪೈಸ್ ಜೆಟ್, ಅಕ್ಟೋಬರ್ 22ನೇ ತಾರೀಕಿನಿಂದ...

ಚಿತ್ರದುರ್ಗ 89 ಜನರಿಗೆ ಕೋವಿಡ್‌,10 ಸಾವಿರಕ್ಕೇರಿದ ಸೋಂಕಿತರ...

 ಚಿತ್ರದುರ್ಗ: ಜಿಲ್ಲೆಯಲ್ಲಿ ಮಂಗಳವಾರ 89 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ 10,692ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವು ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌...

ಸಾಗರ : ಬೆಳ್ಳಂಬೆಳಗ್ಗೆ ಪತ್ನಿ ಕಣ್ಣೆದುರಲ್ಲೇ ಗಂಡ-ಅತ್ತೆಯ ಬರ್ಬರ ಹತ್ಯೆ!

ಶಿವಮೊಗ್ಗ: ಸಾಗರ ತಾಲೂಕಿನಲ್ಲಿ ವೃದ್ಧ ಜೋಡಿ ಬರ್ಬರವಾಗಿ ಕೊಲೆಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು ಡಬಲ್​ ಮರ್ಡರ್​ ಆಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಭಾನುವಾರ ಬೆಳ್ಳಂಬೆಳಗ್ಗೆ ಹಳೇ ಇಕ್ಕೇರಿ ಗ್ರಾಮದ ಕಸಕಸೆಕೊಡ್ಲುವಿನ ಗ್ರಾಮದಲ್ಲಿ ತಾಯಿ ಮತ್ತು ಮಗನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಬಂಗಾರಮ್ಮ (62) ಮತ್ತು ಇವರ ಪುತ್ರ ಪ್ರವೀಣ್ (32) ಕೊಲೆಯಾದ ದುರ್ದೈವಿಗಳು.

ತಾಯಿ-ಮಗನನ್ನು ದುಷ್ಕರ್ಮಿಗಳು ಚಾಕುವಿನಿಂದ ಮನಸೋಇಚ್ಛೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪ್ರವೀಣ್​ ಪತ್ನಿ ರೋಹಿಣಿ ಹಾಗೂ 10 ತಿಂಗಳ ಮಗುವಿನ ಮುಂದೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಮನೆಯಲ್ಲಿದ್ದ ಹಣ ಮತ್ತು ಮೊಬೈಲ್ ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಗ್ರಾಮದಲ್ಲಿ ಸಣ್ಣಪುಟ್ಟ ಜಮೀನು ಹೊಂದಿರುವ ಇವರ ಕೊಲೆಗೆ ಬಲವಾದ ಕಾರಣವೇನು? ಎಂಬುದು ತನಿಖೆಯಲ್ಲಿ ಬಯಲಾಗಬೇಕಿದೆ. ಕೆಲ ದಿನಗಳ ಹಿಂದಷ್ಟೇ ಕರೂರಿನಲ್ಲಿ ನಡೆದ ವೃದ್ಧರಿಬ್ಬರ ಕೊಲೆ ರಹಸ್ಯ ಇನ್ನೂ ಬಯಲಾಗಿಲ್ಲ. ಇದೀಗ ಕಸಕಸೆಕೊಡ್ಲುವಿನ ತಾಯಿ-ಮಗನ ಕೊಲೆ ಮಲೆನಾಡಿಗರನ್ನ ಬೆಚ್ಚಿಬೀಳಿಸಿದೆ.

ಸ್ಥಳಕ್ಕೆ ಎಸ್.ಪಿ. ಶಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TRENDING