Wednesday, January 27, 2021
Home ಬೆಂಗಳೂರು ಅ.12ರಿಂದ 30ರವರೆಗೆ ಶಿಕ್ಷಕರಿಗೆ ಮಧ್ಯಂತರ ರಜೆ: ಸಿಎಂ ಬಿ.ಎಸ್.ವೈ ಘೋಷಣೆ

ಇದೀಗ ಬಂದ ಸುದ್ದಿ

ಅ.12ರಿಂದ 30ರವರೆಗೆ ಶಿಕ್ಷಕರಿಗೆ ಮಧ್ಯಂತರ ರಜೆ: ಸಿಎಂ ಬಿ.ಎಸ್.ವೈ ಘೋಷಣೆ

ಬೆಂಗಳೂರು: ಶಿಕ್ಷಕರ ಮಧ್ಯಂತರ ರಜೆಯನ್ನು ಕಡಿತಗೊಳಿಸಿದ್ದ ರಾಜ್ಯ ಸರ್ಕಾರದ ನಡೆಗೆ ವ್ಯಾಪಕ ವಿರೋಧ ಕಂಡುಬಂದ ಹಿನ್ನಲೆಯಲ್ಲಿ ಸರ್ಕಾರ ಈ ಆದೇಶವನ್ನು ಹಿಂಪಡೆದಿದೆ. ಅ.12ರಿಂದ 30ರವರೆಗೆ ಶಾಲಾ ಶಿಕ್ಷಕರಿಗೆ ಮಧ್ಯಂತರ ರಜೆ ನೀಡುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಚಿಸಿದ್ದಾರೆ.

ಈ ಕುರಿತು ಸಿಎಂ ಬಿಎಸ್ ವೈ ಇಂದು ಆದೇಶ ನೀಡಿದ್ದು, ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ಸದ್ಯ ಶಾಲೆಗಳನ್ನು ಪ್ರಾರಂಭಿಸದಿರಲು ಮತ್ತು ವಿದ್ಯಾಗಮ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ಈಗಾಗಲೇ ಆದೇಶಿಸಲಾಗಿದೆ ಎಂದಿದ್ದಾರೆ.

ಶಿಕ್ಷಕರ ಮಧ್ಯಂತರ ರಜೆಯನ್ನು ಕಡಿತಗೊಳಿಸಿದ್ದ ರಾಜ್ಯ ಸರ್ಕಾರದ ನಡೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಸರಕಾರಿ ಶಾಲೆ ಶಿಕ್ಷಕರು ಕೋವಿಡ್ ಕರ್ತವ್ಯ ಹಾಗೂ ವಿದ್ಯಾಗಮ ಯೋಜನೆಯಡಿ ಈ ದಿನದ ತನಕ ಕೆಲಸ ಮಾಡಿದ್ದಾರೆ. ಆದರೆ ರಾಜ್ಯ ಸರಕಾರ ಈ ವರ್ಷ ಶೈಕ್ಷಣಿಕ ವರ್ಷದ ಮಧ್ಯಂತರ ರಜೆಯನ್ನು ರದ್ದುಗೊಳಿಸಿ ಶಿಕ್ಷಕರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದರು.

TRENDING