Tuesday, October 20, 2020
Home ಸುದ್ದಿ ಜಾಲ ಅರುಣ್ ಶೌರಿ ಅವರ ಹೊಸ ಕೃತಿ 'ಪ್ರಿಪೇರಿಂಗ್ ಡೆತ್' ಶೀಘ್ರ ಮಾರುಕಟ್ಟೆಗೆ

ಇದೀಗ ಬಂದ ಸುದ್ದಿ

ಎಂಟು ಬಿಜೆಪಿ ಸದಸ್ಯರ ಬೆಂಬಲ ಜಿ.ಪಂ.ಅಧ್ಯಕ್ಷ ಪಟ್ಟಕ್ಕೆ...

ನಿರೀಕ್ಷೆಯಂತೆ ಕಾಂಗ್ರೆಸ್ ರಾಜಶೇಖರ ಹಿಟ್ನಾಳ ಅವುರು ಬಿಜೆಪಿ ಸದಸ್ಯರ ಬೆಂಬಲದೊಂದಿಗೆ  ಕೊಪ್ಪಳ ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷರಾಗಿ ಚುನಾಯಿತಗೊಳ್ಳುವ ಮೂಲಕ ರಾಜಕೀಯವಾಗಿ ಬಿಜೆಪಿಗೆ ಭಾರಿ ಹೊಡೆತವನ್ನು ಕೊಟ್ಟಿದ್ದಾರೆ.

ಎಸ್.ಟಿ ಮೀಸಲಾತಿ ಶೇ.7.5 ಹೆಚ್ಚಿಸಲು ಬಿಜೆಪಿ...

ಶಿರಾ : ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಡಳಿತದಲ್ಲಿದ್ದರೂ ಎಸ್.ಟಿ. ಮೀಸಲಾತಿಯನ್ನು ಶೇ 7.5 ಕ್ಕೆ ಹೆಚ್ಚಿಸಲು ವಿಫಲವಾಗಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.

ಪತ್ರಕರ್ತರೇನು ಕೊರೊನಾ ಯೋಧರಲ್ವಾ..? ಅವರದೇನು ಬದುಕುಗಳಲ್ವಾ..? ಅವರ...

ಬೆಂಗಳೂರು:ಕೊರೊನಾತಂಕ ಹಾಗೂ ಅದರ ಸಾವುಗಳ ಬಗ್ಗೆ ನಿರಂತರ ಸುದ್ದಿ ಮಾಡೋ ಸುದ್ದಿಮಿತ್ರರಿಗೆ ಸಂಬಂಧಿಸಿದ ಸುದ್ದಿ ಇದು.ಅವರ ಆರೋಗ್ಯದ ಬಗ್ಗೆ ಸೃಷ್ಟಿಯಾಗಿರುವ ನೂರಾರು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿರುವ ಸನ್ನಿವೇಶವಿದು.ಕೊರೊನಾ ಸುದ್ದಿಗಾಗಿ ಅವರ...

ಮುರಳೀಧರನ್ ಬಯೋಪಿಕ್’ಗೆ ಗುಡ್ ಬೈ ಹೇಳಿದ ‘ವಿಜಯ್...

ತಮಿಳುನಾಡು : ಬಿಗ್ ನ್ಯೂಸ್ ಎನ್ನುವಂತೆ ವಿಜಯ್ ಸೇತುಪತಿ ಅವರು ಮುತ್ತಯ್ಯ ಮುರಳೀಧರನ್ ಬಯೋಪಿಕ್ 800 ನಿಂದ ಹಿಂದೆ ಸರಿಯುತ್ತಿರುವುದಾಗಿ ಖಚಿತಪಡಿಸಿದ್ದು, ಇದೀಗ ಹಲವು ದಿನಗಳಿಂದ ವಿವಾದದಲ್ಲಿರುವ ಮುರಳಿಧರನ್ ಬಯೋಪಿಕ್...

ಕಲಬುರಗಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗಿದೆ. ಕಳೆದ ಎರಡು ದಿನಗಳಿಂದ ಬಿಡುವು ನೀಡಿದ ಮಳೆ ಮತ್ತೆ ಇಂದಿನಿಂದ ಸುರಿಯಲಾರಂಭಿಸಿದೆ. ಕಲಬುರಗಿ ಜಿಲ್ಲೆಯ ಜನತೆ ಭೀಮಾ...

ಅರುಣ್ ಶೌರಿ ಅವರ ಹೊಸ ಕೃತಿ ‘ಪ್ರಿಪೇರಿಂಗ್ ಡೆತ್’ ಶೀಘ್ರ ಮಾರುಕಟ್ಟೆಗೆ

 ನವದೆಹಲಿ: ಎಲ್ಲರ ಬದುಕಿನಲ್ಲಿಯೂ ಅದು ನಿಶ್ಚಿತ. ಎಂದೋ ಒಂದು ದಿನ ಅದಕ್ಕೆ ಮುಖಾಮುಖಿ ಆಗಲೇಬೇಕು. ಆದರೆ, ಅದಕ್ಕಾಗಿ ಯಾರೊಬ್ಬರು ಕನಿಷ್ಠ ಸಿದ್ಧತೆ ಮಾಡಿಕೊಂಡಿರುವುದಿಲ್ಲ. ಅದು ‘ಸಾವು’.

ಶಾಂತಿಯುತವಾಗಿ ಸಾವಿಗೆ ಎದುರುಗೊಳ್ಳುವುದು ಹೇಗೆ? ಇಂಥದೊಂದು ಪ್ರಶ್ನೆಗೆ ಉತ್ತರ ಹುಡುಕುವ ಯತ್ನವಾಗಿ ಲೇಖಕ ಅರುಣ್ ಶೌರಿ ಹೊಸ ಪುಸ್ತಕ ‘ಪ್ರಿಪೇರಿಂಗ್ ಡೆತ್’ ರಚಿಸಿದ್ದಾರೆ.

ಪ್ರಮುಖ ಧರ್ಮಗ್ರಂಥಗಳು, ತತ್ವಶಾಸ್ತ್ರದ ಉಲ್ಲೇಖದೊಂದಿಗೆ ಆಧ್ಯಾತ್ಮಿಕತೆಯ ತರಬೇತಿಯು ಶಾಂತಿಯುತವಾಗಿ ಸಾವು ಎದುರಿಸಲು, ಅದನ್ನು ಸಮಚಿತ್ತದಿಂದ ಸ್ವೀಕರಿಸಲು ಜನರಿಗೆ ನೆರವಾಗುತ್ತದೆ ಎಂದು ಶೌರಿ ಅವರು ಪ್ರತಿಪಾದಿಸುತ್ತಾರೆ.

ಪ್ರಿಪೇರಿಂಗ್ ಡೆತ್ ಶೀರ್ಷಿಕೆಯ ಕೃತಿಯು ಸಾಯುವ ಹೊತ್ತಿನಲ್ಲಿ ಮನಸ್ಸನ್ನು ಶಾಂತವಾಗಿಸುವ ನಿಟ್ಟಿನಲ್ಲಿ ಹಲವು ಒಳನೋಟಗಳು, ವ್ಯಾಖ್ಯಾನಗಳು, ಪ್ರಾಯೋಗಿಕ ಸಲಹೆಗಳನ್ನು ಒಳಗೊಂಡಿದೆ. ಕೃತಿಯು ಇದೇ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ ಎಂದು ಪ್ರಕಾಶನ ಸಂಸ್ಥೆ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ತಿಳಿಸಿದೆ.

‘ಸಾವು ದೀರ್ಘಕಾಲಿಕವಾಗಿ ಪ್ರಚಲಿತ ವಿಷಯ. ಪ್ರಸ್ತುತ ಸಂದರ್ಭದಲ್ಲಿ ಕಳೆದ ಹತ್ತು ತಿಂಗಳಲ್ಲಿ ಅಸಂಖ್ಯ ಜನರು ಕೋವಿಡ್-19ನಿಂದಾಗಿ ಸತ್ತಿದ್ದಾರೆ. ಹೀಗಾಗಿ, ಸಾವು ಪ್ರಸ್ತುತ ಪ್ರಚಲಿತವಾದ ವಿಷಯ. ನಮ್ಮಲ್ಲಿ ಬಹುತೇಕ ಜನರಿಗೆ ಗೊತ್ತಿಲ್ಲದ ಅನೇಕ ಅಂಶಗಳು ಈ ಕೃತಿಯಲ್ಲಿವೆ’ ಎನ್ನುತ್ತಾರೆ ಅರುಣ್ ಶೌರಿ.

ಬುದ್ಧ, ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿ, ಮಹಾತ್ಮಗಾಂಧಿ, ವಿನೋಬಾ ಭಾವೆ ಸೇರಿದಂತೆ ಹಲವರ ಅಂತಿಮ ದಿನಗಳ ಘಟನೆಗಳು, ಅವರ ಉಪನ್ಯಾಸಗಳನ್ನು ಕೃತಿಯಲ್ಲಿ ಉಲ್ಲೇಖಿಸಲಾಗಿದೆ.

‘ನನಗೆ ಉಪಯುಕ್ತ ಎನಿಸಿದ ಕೆಲವು ಉಪನ್ಯಾಸಗಳು, ಆಧ್ಯಾತ್ಮದ ಚಿಂತನೆಗಳನ್ನು ಉಲ್ಲೇಖಿಸಿದ್ದೇನೆ. ಕೆಲವು ತಿಂಗಳ ಹಿಂದೆ ನಾನು ತೀವ್ರ ನಿಗಾ ಘಟಕದಲ್ಲಿ ಇದ್ದಾಗ ಇವುಗಳು ನನಗೆ ಸಹಕಾರಿ ಆಗಿದ್ದವು’ ಎಂದು ಅವರು ಹೇಳಿದರು.

ಶೌರಿ ಅವರು ತಮ್ಮ ಮನೆ ಮಹಾರಾಷ್ಟ್ರದ ಲಾವಾಸ ಬಳಿ ನಡೆದಾಡುವಾಗ ಬಿದ್ದಿದ್ದರು. ಆಗ ತಲೆಗೆ ಪೆಟ್ಟಾಗಿತ್ತು. ಅವರು ಕಳೆದ ಡಿಸೆಂಬರ್ 1ರಂದು ಆಸ್ಪತ್ರೆಗೆ ದಾಖಲಾಗಿದ್ದರು.

TRENDING