Wednesday, October 21, 2020
Home ಅಂತರ್ ರಾಷ್ಟ್ರೀಯ 'ಭಾರತದ ಉತ್ತರ ಗಡಿಯಲ್ಲಿ ಚೀನಾದಿಂದ ಬರೊಬ್ಬರಿ 60 ಸಾವಿರ ಯೋಧರ ನಿಯೋಜನೆ'! : ಅಮೆರಿಕದ...

ಇದೀಗ ಬಂದ ಸುದ್ದಿ

ಯೋಗ್ಯತೆ ಇರುವ ಯಾರು ಬೇಕಾದರೂ ಸಮಗ್ರ ಕರ್ನಾಟಕ...

ಕೊಪ್ಪಳ, ಅ 21: ಸಮಗ್ರ ಕರ್ನಾಟಕದ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಕೊಪ್ಪಳ ನಗರದಲ್ಲಿ ಮಾಧ್ಯಮದವರೊಂದಿಗೆ...

ಅಫಘಾನಿಸ್ತಾನ: ದೇಶ ತೊರೆಯಲು ವೀಸಾಗಾಗಿ ಮುಗಿಬಿದ್ದ ವೇಳೆ...

ಕಾಬೂಲ್: ಅಫಘಾನಿಸ್ತಾನದ ಪೂರ್ವ ನಂಗರ್ಹಾರ್ ಪ್ರಾಂತ್ಯದ ರಾಜಧಾನಿಯಾದ ಜಲಾಲಾಬಾದ್ ನಗರದಲ್ಲಿ ಬುಧವಾರ ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ 11 ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶ ತೊರೆಯಲು...

ಸವದತ್ತಿಯಲ್ಲಿ ಸಿಡಿಲಿಗೆ 45ಕ್ಕೂ ಹೆಚ್ಚು ಕುರಿಗಳು ಬಲಿ

ಬೆಳಗಾವಿ: ನಿನ್ನೆ ಜಿಲ್ಲೆಯಾದ್ಯಂತ ಸುರಿದ ಗುಡುಗು ಸಹಿತ ಸಿಡಿಲು ಮಳೆಗೆ ನವಿಲುತೀರ್ಥ ಡ್ಯಾಂ ಹತ್ತಿರ ಸಿಡಿಲು ಬಡಿದು 45ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಳಗಾವಿ ಸೇರಿದಂತೆ ಹಲವು ತಾಲೂಕುಗಳಲ್ಲಿ...

ಬಳ್ಳಾರಿಯಿಂದ ವೈಮಾನಿಕ ಸಮೀಕ್ಷೆ ಆರಂಭಿಸಿದ ಸಿಎಂ

ಬಳ್ಳಾರಿ: ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಮಳೆಯಿಂದಾದ ಬೆಳೆ ನಷ್ಟದ ಕುರಿತ ವೈಮಾನಿಕ ಸಮೀಕ್ಷೆ ಕಾರ್ಯವನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳ್ಳಾರಿಯಿಂದಲೇ ಆರಂಭಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪಶು ಸಂಗೋಪನಾ ಸಚಿವ...

ಕಾರು ಖರೀದಿದಾರರಿಗೆ ಟಾಟಾ ಮೋಟಾರ್ಸ್ ನಿಂದ ಬಂಪರ್...

 ಟಾಟಾ ಮೋಟರ್ಸ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡ್ತಿದೆ. ದೇಶದ ಪ್ರಸಿದ್ಧ ಆಟೋಮೋಟಿವ್ ಬ್ರಾಂಡ್ ಟಾಟಾ ಮೋಟಾರ್ಸ್ ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದೊಂದಿಗೆ ಈ ಘೋಷಣೆ ಮಾಡಿದೆ. ಪ್ರಯಾಣಿಕ ವಾಹನವನ್ನು ಗ್ರಾಹಕರಿಗೆ ಅತ್ಯಾಕರ್ಷಕ...

‘ಭಾರತದ ಉತ್ತರ ಗಡಿಯಲ್ಲಿ ಚೀನಾದಿಂದ ಬರೊಬ್ಬರಿ 60 ಸಾವಿರ ಯೋಧರ ನಿಯೋಜನೆ’! : ಅಮೆರಿಕದ ವಿದೇಶಾಂಗ ಕಾರ್ಯದರ್ಶಿ

 ವಾಷಿಂಗ್ ಟನ್ಭಾರತದ ಉತ್ತರ ಗಡಿಯಲ್ಲಿ ಚೀನಾ ಬರೊಬ್ಬರಿ 60,000 ಸೈನಿಕರನ್ನು ನಿಯೋಜಿಸಿದೆ ಎಂದು ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೋಂಪೊಯೋ ಹೇಳಿದ್ದು, ಚೀನಾದು ಅತ್ಯಂತ ಕೆಟ್ಟ ವರ್ತನೆ ಎಂದು ವಿಶ್ಲೇಷಿಸಿದ್ದಾರೆ.

ಕ್ವಾಡ್ ರಾಷ್ಟ್ರಗಳು- ಇಂಡೋ ಫೆಸಿಫಿಕ್ ದೇಶಗಳಾದ ಅಮೆರಿಕ, ಜಪಾನ್, ಭಾರತ, ಆಸ್ಟ್ರೇಲೊಯಾದ ವಿದೇಶಾಂಗ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ನೀಡಿದ ಸಂದರ್ಶನದಲ್ಲಿ ಮೈಕ್ ಪೋಂಪಿಯೊ ಚೀನಾ ವಿರುದ್ಧ ಹರಿಹಾಯ್ದಿದ್ದು, ಚೀನಾದ್ದು ಅತ್ಯಂತ ಕೆಟ್ಟ ವರ್ತನೆ ಎಂದು ಹೇಳಿದ್ದಾರೆ.

ಕೊರೋನಾ ವೈರಸ್ ಪರಿಸ್ಥಿತಿ ತಲೆದೋರಿದ ನಂತರ ಹಾಗೂ ಈಶಾನ್ಯ ಲಡಾಖ್ ನ ಎಲ್‌ಎಸಿಯಲ್ಲಿ ಚೀನಾ ತೋರಿದ ವರ್ತನೆಗಳ ನಂತರದಲ್ಲಿ, ವಿಶ್ವಾದ್ಯಂತ ಚೀನಾದ ವಿರುದ್ಧ ಅಭಿಪ್ರಾಯ ಮೂಡಿತ್ತಿದ್ದು, ಈ ಸಂದರ್ಭದಲ್ಲಿ ಕ್ವಾಡ್ ದೇಶಗಳ ವಿದೇಶಾಂಗ ಸಚಿವರು ಸಭೆ ನಡೆಸಿ ಚೀನಾದ ಬಗ್ಗೆ ಚರ್ಚಿಸಿರುವುದು ಮಹತ್ವ ಪಡೆದುಕೊಂಡಿದೆ.

ಫಾಕ್ಸ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮೈಕ್ ಪೋಂಪಿಯೋ, ಭಾರತದ ಉತ್ತರ ಭಾಗದ ಗಡಿಯಲ್ಲಿ ಚೀನಾ 60,000 ಸೈನಿಕರನ್ನು ನಿಯೋಜಿಸಿದೆ. ಕ್ವಾಡ್ ದೇಶಗಳ ವಿದೇಶಾಂಗ ಸಚಿವರೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದೆ. ಎಲ್ಲರೂ ಸಹ ಚೀನಾದ ಕಮ್ಯುನಿಸ್ಟ್ ಪಕ್ಷ ಉಂಟುಮಾಡುತ್ತಿರುವ ಅಪಾಯಗಳನ್ನು ಎದುರಿಸುತ್ತಿದ್ದಾರೆ. ಅವರ ರಾಷ್ಟ್ರಗಳಲ್ಲಿಯೂ ಇದು ಸ್ಪಷ್ಟವಾಗಿದೆ, ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಜೊತೆ ಮಾತುಕತೆ ನಡೆಯಿತು, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ-ಸೌಹಾರ್ದತೆ ಹಾಗೂ ಸಂವೃದ್ಧಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದು ಮೈಕ್ ಪೊಂಪಿಯೋ ತಿಳಿಸಿದ್ದಾರೆ.

ಚೀನಾದ ಕಮ್ಯುನಿಸ್ಟ್ ಪಕ್ಷ ನಮ್ಮಗಳ ಮೇಲೆ ದಬ್ಬಾಳಿಕೆ ಮಾಡಲು ಕ್ವಾಡ್ ರಾಷ್ಟ್ರಗಳು ದೀರ್ಘಕಾಲ ಅವಕಾಶ ಮಾಡಿಕೊಟ್ಟಿದ್ದವು. ಜಾಗೃತವಾಗಿರಲಿಲ್ಲ. ಆಸ್ಟ್ರೇಲಿಯಾದಲ್ಲೂ ಚೀನಾ ದಬ್ಬಾಳಿಕೆ ಮಾಡುತ್ತಿದೆ. ಬೆದರಿಸುತ್ತಿದೆ, ಕ್ವಾಡ್ ದೇಶಗಳು ಚೀನಾದಿಂದ ಎದುರಾಗುತ್ತಿರುವ ಅಪಾಯವನ್ನು ಚರ್ಚಿಸಿವೆ. ಈ ಹೋರಾಟದಲ್ಲಿ ಕ್ವಾಡ್ ದೇಶಗಳಿಗೆ ಅಮೆರಿಕಾದ ಬೆಂಬಲ ಅಗತ್ಯವಾಗಿದೆ ಎಂದು ಮೈಕ್ ಪೊಂಪಿಯೋ ಹೇಳಿದ್ದಾರೆ.

TRENDING