Wednesday, October 21, 2020
Home ಅಂತರ್ ರಾಜ್ಯ ತಮಿಳುನಾಡು ಸ್ಟಾರ್ ನಟ ವಿಷ್ಣು ವಿಶಾಲ್ ತಂದೆ ವಿರುದ್ಧ ತಿರುಗಿಬಿದ್ದ ಕಾಲಿವುಡ್ ಹಾಸ್ಯನಟ ಸೂರಿ..!

ಇದೀಗ ಬಂದ ಸುದ್ದಿ

ಮತ್ತೆ ನಮ್ಮ ಸರ್ಕಾರ ಬಂದು, ಸಿಎಂ...

 ಬಾಗಲಕೋಟೆ: 'ಮತ್ತೆ ನಮ್ಮ ಸರ್ಕಾರ ಬಂದು, ನಾನು ಸಿಎಂ ಆದರೆ ನಿಮಗೆ 10 ಕೆ.ಜಿ ಅಕ್ಕಿ ಕೊಡುವೆ' ಎಂದು ವಿಧಾನಸಭೆ ವಿರೋಧ‍ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಬಾದಾಮಿ...

ರಾಷ್ಟ್ರಪತಿ ಕೈಗೆ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿಗೆ...

ಕೊಲಂಬೊ: ರಾಷ್ಟ್ರಪತಿಯವರ ಕೈಗೆ ಸಮಗ್ರ ಆಡಳಿತ ಸೂತ್ರ ನೀಡಲು ಅಗತ್ಯ ಸಂವಿಧಾನ ತಿದ್ದುಪಡಿ ಮಾಡಬೇಕಾದರೆ ಮೊದಲು ಜನಮತ ಸಂಗ್ರಹ ನಡೆಸಬೇಕಾದ್ದು ಅವಶ್ಯ. ಪ್ರಜೆಗಳೇ ಪ್ರಭುಗಳಾಗಿರುವ ಕಾರಣ ಇದು ಅತೀ ಅಗತ್ಯ ಎಂದು...

ದೇಶವನ್ನುದ್ದೇಶಿಸಿ ಮೋದಿ ಆಡಿದ ಐದು ಪ್ರಮುಖ ಅಂಶ

ಕೊರೋನಾ ಸಂಕಷ್ಟ ಸಮಯ ಆರಂಭವಾದ ನಂತರ ಕಳೆದ ಏಳು ತಿಂಗಳಲ್ಲಿ ಏಳನೇ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಹಬ್ಬದ ಸಮಯದಲ್ಲಿ ಜನರು ಮೈಮರೆಯದಂತೆ ಎಚ್ಚರಿಕೆವಹಿಸುವಂತೆ ಸಲಹೆ ನೀಡಿದರು. ಹಬ್ಬಗಳ ಸಾಲುಗಳು...

ಸ್ಪೈಸ್ ಜೆಟ್ ನಿಂದ ದೆಹಲಿ- ಮಸ್ಕತ್ ವಿಮಾನ...

ನಾಲ್ಕು ಅಂತರರಾಷ್ಟ್ರೀಯ ಸೇವೆಯೂ ಸೇರಿದಂತೆ 62 ವಿಮಾನಗಳನ್ನು ಮಂಗಳವಾರ ಸ್ಪೈಸ್ ಜೆಟ್ ನಿಂದ ಪರಿಚಯಿಸಲಾಗಿದೆ. ಒಮನ್ ಜತೆಗೆ ಏರ್ ಬಬಲ್ ಒಪ್ಪಂದ ಮಾಡಿಕೊಂಡಿರುವ ಸ್ಪೈಸ್ ಜೆಟ್, ಅಕ್ಟೋಬರ್ 22ನೇ ತಾರೀಕಿನಿಂದ...

ಚಿತ್ರದುರ್ಗ 89 ಜನರಿಗೆ ಕೋವಿಡ್‌,10 ಸಾವಿರಕ್ಕೇರಿದ ಸೋಂಕಿತರ...

 ಚಿತ್ರದುರ್ಗ: ಜಿಲ್ಲೆಯಲ್ಲಿ ಮಂಗಳವಾರ 89 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ 10,692ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವು ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌...

ಸ್ಟಾರ್ ನಟ ವಿಷ್ಣು ವಿಶಾಲ್ ತಂದೆ ವಿರುದ್ಧ ತಿರುಗಿಬಿದ್ದ ಕಾಲಿವುಡ್ ಹಾಸ್ಯನಟ ಸೂರಿ..!

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಸೂರಿ ನಿರ್ಮಾಪಕ ಅಂಬುವೆಲ್​ ಮತ್ತು ಪ್ರಖ್ಯಾತ ನಟ ವಿಷ್ಣು ವಿಶಾಲ್​ ತಂದೆ ರಮೇಶ್​ ಕುಡಾವ್ಲ ವಿರುದ್ಧ 2.70 ಕೋಟಿ ರೂ. ವಂಚನೆ ಮಾಡಿದ್ದಾರೆಂದು ಆರೋಪಿಸಿ ಚೆನ್ನೈನ ಆದ್ಯಾರ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ​

ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದು, ಹೇಳಿಕೆ ದಾಖಲಿಸಿಕೊಳ್ಳಲು ಅಕ್ಟೋಬರ್​ 29ರಂದು ಹಾಜರಾಗುವಂತೆ ನಟ ಸೂರಿಗೆ ಸಿಸಿಬಿ ಸಮನ್ಸ್​ ನೀಡಿದೆ. ಪ್ರಕರಣದ ಆರೋಪಿಗಳಿಗೂ ಸಮನ್ಸ್​ ನೀಡುವ ಸಾಧ್ಯತೆ ಇದೆ.

ಸಮಾನ ಬೆಲೆಯಲ್ಲಿ ಭೂಮಿ ಕೊಂಡುಕೊಳ್ಳುವ ಭರವಸೆ ನೀಡಿ ನಿರ್ಮಾಪಕ ಅಂಬುವೆಲ್​ ಮತ್ತು ವಿಷ್ಣು ತಂದೆ ರಮೇಶ್​ ಕುಡಾವ್ಲ ಅವರು ಸೂರಿಯಿಂದ 2.70 ಕೋಟಿ ತೆಗೆದುಕೊಂಡಿದ್ದರಂತೆ. ಇದೊಂದೆ ಆರೋಪವಲ್ಲದೆ, 2015ರ ವೀರ ಧೀರ ಸೂರನ್ ಚಿತ್ರದ 40 ಲಕ್ಷ ಸಂಭಾವನೆಯನ್ನೂ ಸಹ ಇನ್ನೂ ಕೊಟ್ಟಿಲ್ಲ ಎಂದು ದೂರಿದ್ದಾರೆ.​​

ನಟ ಸೂರಿ, ವಿಷ್ಣು ವಿಶಾಲ್​ರೊಂದಿಗೆ ವೆನ್ನಿಲಾ ಕಬಡಿ ಕುಜು, ವೆಲೈನ್ನು ವಂತುಟ್ಟ ವೆಲ್ಲಿಕ್ಕಾರನ್​ ಮತ್ತು ಕಥಾನಾಯಗನ್​ ಸೇರಿದಂತೆ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

ದೂರಿನ ಬೆನ್ನಲ್ಲೇ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ವಿಷ್ಣು, ನನ್ನ ತಂದೆ ಹಾಗೂ ನನ್ನ ವಿರುದ್ಧ ಬಂದಿರುವ ತಪ್ಪು ಆರೋಪ ಕೇಳಿ ನಿಜಕ್ಕೂ ನನಗೆ ನೋವಾಯಿತು. ನಿಸ್ಸಂಶಯವಾಗಿ ಇದರಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಕಾರ್ಯನಿರ್ವಹಿಸುತ್ತಿವೆ ಎಂದಿರುವ ವಿಷ್ಣು, 2017ರಲ್ಲಿ ಕವಾರಿಮಾನ್ ಪರಂಬರೈ ಚಿತ್ರಕ್ಕಾಗಿ ವಿಷ್ಣು ವಿಶಾಲ್ ಸ್ಟುಡಿಯೋಜ್ ಸೂರಿಗೆ ಮುಂಗಡ ಹಣವನ್ನು ಪಾವತಿಸಿದೆ. ಆದರೆ, ಕಾರಣಾಂತರಗಳಿಂದ ಚಿತ್ರೀಕರಣ ಮುಂದುವರಿಯಲಿಲ್ಲ. ಹೀಗಾಗಿ ಸೂರಿ ಅವರು ಮುಂಗಡವನ್ನು ಮರುಪಾವತಿಸಬೇಕಾಗಿದೆ ಎಂದು ಅವರ ವಿರುದ್ಧವೇ ಆರೋಪ ಮಾಡಿದ್ದಾರೆ.

ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ ಎಂದಿರುವ ವಿಷ್ಣು, ಸತ್ಯಾಸತ್ಯತೆ ತಿಳಿದು ಮಾಧ್ಯಮದವರು ವರದಿ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸತ್ಯ ಹೊರಗೆ ಬರುವವರೆಗೂ ಕಾಯಿರಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.  

TRENDING