Wednesday, October 21, 2020
Home ಅಂತರ್ ರಾಜ್ಯ ತಮಿಳುನಾಡು ದಲಿತ ಶಾಸಕನ ಅಂತರ್ಜಾತಿ ವಿವಾಹ ಪ್ರಕರಣ: ಮಹತ್ವದ ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್!

ಇದೀಗ ಬಂದ ಸುದ್ದಿ

ಮತ್ತೆ ನಮ್ಮ ಸರ್ಕಾರ ಬಂದು, ಸಿಎಂ...

 ಬಾಗಲಕೋಟೆ: 'ಮತ್ತೆ ನಮ್ಮ ಸರ್ಕಾರ ಬಂದು, ನಾನು ಸಿಎಂ ಆದರೆ ನಿಮಗೆ 10 ಕೆ.ಜಿ ಅಕ್ಕಿ ಕೊಡುವೆ' ಎಂದು ವಿಧಾನಸಭೆ ವಿರೋಧ‍ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಬಾದಾಮಿ...

ರಾಷ್ಟ್ರಪತಿ ಕೈಗೆ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿಗೆ...

ಕೊಲಂಬೊ: ರಾಷ್ಟ್ರಪತಿಯವರ ಕೈಗೆ ಸಮಗ್ರ ಆಡಳಿತ ಸೂತ್ರ ನೀಡಲು ಅಗತ್ಯ ಸಂವಿಧಾನ ತಿದ್ದುಪಡಿ ಮಾಡಬೇಕಾದರೆ ಮೊದಲು ಜನಮತ ಸಂಗ್ರಹ ನಡೆಸಬೇಕಾದ್ದು ಅವಶ್ಯ. ಪ್ರಜೆಗಳೇ ಪ್ರಭುಗಳಾಗಿರುವ ಕಾರಣ ಇದು ಅತೀ ಅಗತ್ಯ ಎಂದು...

ದೇಶವನ್ನುದ್ದೇಶಿಸಿ ಮೋದಿ ಆಡಿದ ಐದು ಪ್ರಮುಖ ಅಂಶ

ಕೊರೋನಾ ಸಂಕಷ್ಟ ಸಮಯ ಆರಂಭವಾದ ನಂತರ ಕಳೆದ ಏಳು ತಿಂಗಳಲ್ಲಿ ಏಳನೇ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಹಬ್ಬದ ಸಮಯದಲ್ಲಿ ಜನರು ಮೈಮರೆಯದಂತೆ ಎಚ್ಚರಿಕೆವಹಿಸುವಂತೆ ಸಲಹೆ ನೀಡಿದರು. ಹಬ್ಬಗಳ ಸಾಲುಗಳು...

ಸ್ಪೈಸ್ ಜೆಟ್ ನಿಂದ ದೆಹಲಿ- ಮಸ್ಕತ್ ವಿಮಾನ...

ನಾಲ್ಕು ಅಂತರರಾಷ್ಟ್ರೀಯ ಸೇವೆಯೂ ಸೇರಿದಂತೆ 62 ವಿಮಾನಗಳನ್ನು ಮಂಗಳವಾರ ಸ್ಪೈಸ್ ಜೆಟ್ ನಿಂದ ಪರಿಚಯಿಸಲಾಗಿದೆ. ಒಮನ್ ಜತೆಗೆ ಏರ್ ಬಬಲ್ ಒಪ್ಪಂದ ಮಾಡಿಕೊಂಡಿರುವ ಸ್ಪೈಸ್ ಜೆಟ್, ಅಕ್ಟೋಬರ್ 22ನೇ ತಾರೀಕಿನಿಂದ...

ಚಿತ್ರದುರ್ಗ 89 ಜನರಿಗೆ ಕೋವಿಡ್‌,10 ಸಾವಿರಕ್ಕೇರಿದ ಸೋಂಕಿತರ...

 ಚಿತ್ರದುರ್ಗ: ಜಿಲ್ಲೆಯಲ್ಲಿ ಮಂಗಳವಾರ 89 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ 10,692ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವು ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌...

ದಲಿತ ಶಾಸಕನ ಅಂತರ್ಜಾತಿ ವಿವಾಹ ಪ್ರಕರಣ: ಮಹತ್ವದ ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್!

 ಚೆನ್ನೈ: ಕೋರ್ಟ್​ ಮೆಟ್ಟಿಲೇರಿದ್ದ ಕಲಕುರಿಚಿ ಎಐಎಡಿಎಂಕೆ ಶಾಸಕ ಪ್ರಭು ಅವರ ಅಂತರ್ಜಾತಿ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆ ನಡೆಸಿದ ಮದ್ರಾಸ್​ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.

ಪ್ರಭು ಪತ್ನಿ ಸೌಂದರ್ಯ ಅವರ ತಂದೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಈ ಪ್ರಕರಣದಲ್ಲಿ 19 ವರ್ಷದ ಸೌಂದರ್ಯ ವಯಸ್ಕಳಾಗಿದ್ದು, ಸಹಮತದಿಂದಲೇ 35 ವರ್ಷದ ಪ್ರಭು ಅವರನ್ನು ಮದುವೆಯಾಗಿದ್ದಾಳೆ. ಆಕೆಯನ್ನು ಅಪಹರಿಸಿ ಬಲವಂತವಾಗಿ ವಿವಾಹವಾಗಿಲ್ಲ. ಪ್ರಭು ಮತ್ತು ಸೌಂದರ್ಯ ನಿಶ್ಚಿಂತೆಯಿಂದ ಜೀವನ ನಡೆಸಬಹುದು ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ತೀರ್ಪಿಗೂ ಮುನ್ನ ನ್ಯಾಯಾಲಯದಲ್ಲಿ ಪ್ರಭು ಮತ್ತು ಸೌಂದರ್ಯ ಅವರ ಹೇಳಿಕೆಯನ್ನು ಪಡೆದುಕೊಳ್ಳಲಾಯಿತು. ಸೌಂದರ್ಯ ತಂದೆ ಸ್ವಾಮಿನಾಥನ್​ ಮೇಲ್ಜಾತಿಯವರಾಗಿದ್ದು, ದಲಿತ ಶಾಸಕ ಪ್ರಭು ವಿರುದ್ಧ ಗಂಭೀರ ಆರೋಪ ಮಾಡಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ನನ್ನ ಮಗಳನ್ನು ಅಪಹರಿಸಿ, ಬಲವಂತವಾಗಿ ಮದುವೆ ಮಾಡಿಕೊಳ್ಳಲಾಗಿದೆ ಎಂದು ದೂರಿದ್ದರು. ಅಲ್ಲದೆ, ಶಾಸಕನ ಕುಟುಂಬದಿಂದ ನನಗೆ ಜೀವ ಬೆದರಿಕೆ ಇದೆ ಎಂದು ಸ್ವಾಮಿನಾಥನ್​ ಅವರು ಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್​ ಅರ್ಜಿ ಸಲ್ಲಿಸಿ, ನ್ಯಾಯಾಲಯದ ಮುಂದೆ ತನ್ನ ಮಗಳನ್ನು ಹಾಜರುಪಡಿಸಬೇಕೆಂದು ಕೇಳಿಕೊಂಡಿದ್ದರು. ​

ಶುಕ್ರವಾರ ತನ್ನ ಪತಿ ಪ್ರಭುವಿನೊಂದಿಗೆ ಸೌಂದರ್ಯ ನ್ಯಾಯಾಲಯಕ್ಕೆ ಹಾಜರಾಗಿ ತನ್ನು ಹೇಳಿಕೆಯನ್ನು ನೀಡಿದ್ದಾರೆ.. ನನ್ನನ್ನು ಅಪಹರಿಸಿಲ್ಲ. ಬಲವಂತವಾಗಿ ಮದುವೆಯಾಗಿಲ್ಲ. ಸ್ವಇಚ್ಛೆಯಿಂದಲೇ ಮದುವೆಯಾಗಿದ್ದೇನೆಂದು ಸೌಂದರ್ಯ ಹೇಳಿದ್ದಾಳೆ. ಹೇಳಿಕೆ ಪರಿಗಣಿಸಿದ ನ್ಯಾಯಮೂರ್ತಿಗಳಾದ ಎಂಎಂ ಸುಂದರೇಶ್​ ಮತ್ತು ಕೃಷ್ಣಕುಮಾರ್​ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಸೌಂದರ್ಯ ವಯಸ್ಕಳಾಗಿದ್ದಾಳೆ. ಮದುವೆಗೆ ಯಾರೂ ಸಹ ಬಲವಂತ ಮಾಡಿಲ್ಲ. ಪರಸ್ಪರ ಒಪ್ಪಿಗೆಯಿಂದಲೇ ಮದುವೆಯಾಗಿದ್ದಾರೆ ಎಂದು ಮಹತ್ವದ ತೀರ್ಪು ನೀಡಿತು.

ಇಷ್ಟಕ್ಕೆ ಸಹಿಸದ ಸ್ವಾಮಿನಾಥನ್​ ಇಬ್ಬರ ನಡುವೆ ವಯಸ್ಸಿನ ಅಂತರವನ್ನು ನ್ಯಾಯಾಲಯದಲ್ಲಿ ಕೆದಕಿದರು. ಆದರೆ, ಸೌಂದರ್ಯ ವಯಸ್ಕಳಾಗಿರುವುದರಿಂದ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ ಎಂದು ಹೇಳಿ ನ್ಯಾಯಾಲಯ ಪ್ರಕರಣವನ್ನೇ ರದ್ದು ಮಾಡಿತು.

ಘಟನೆ ಹಿನ್ನೆಲೆ

ಅಕ್ಟೋಬರ್​ 5ರಂದು ಶಾಸಕ ಪ್ರಭು ಮತ್ತು ಯುವತಿ ಸೌಂದರ್ಯ ನಡುವೆ ವರನ ನಿವಾಸದಲ್ಲೇ ಮದುವೆ ನಡೆಯಿತು. ಮದುವೇ ದಿನವೇ ನಿವಾಸಕ್ಕೆ ಆಗಮಿಸಿದ ಸೌಂದರ್ಯ ತಂದೆ ಎಸ್​. ಸ್ವಾಮಿನಾಥನ್​ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಸಿದ್ದರು. ಅಲ್ಲದೆ, ಮೇಲ್ಜಾತಿಯವರಾದ ಸ್ವಾಮಿನಾಥನ್​ ಇಲ್ಲಿ ಜಾತಿಯ ಸಮಸ್ಯೆಯಿಲ್ಲ. ಮಗಳು ಮತ್ತು ಶಾಸಕನ ನಡುವಿನ ವಯಸ್ಸಿನ ಅಂತರವೇ ನಮ್ಮ ಕಳವಳಕ್ಕೆ ಕಾರಣ ಎಂದು ಕಣ್ಣೀರಿಟ್ಟಿದ್ದರು. ಬಳಿಕ ಬಲವಂತವಾಗಿ ಮದುವೆಯಾಗಿದ್ದಾರೆಂದು ಕೋರ್ಟ್​ ಮೆಟ್ಟಿಲೇರಿದ್ದರು.

TRENDING