Wednesday, October 21, 2020
Home ಅಂತರ್ ರಾಜ್ಯ ರಾಕೇಶ್ ರೋಷನ್ ಮೇಲೆ ಶೂಟೌಟ್ ಪ್ರಕರಣ: ಪರಾರಿಯಾಗಿದ್ದ ಶಾರ್ಪ್ ಶೂಟರ್ ಅರೆಸ್ಟ್

ಇದೀಗ ಬಂದ ಸುದ್ದಿ

ರಾಯಚೂರು ಲ್ಯಾಬೋರೇಟರಿ ಕಂಪನಿಯಲ್ಲಿ ಕೆಮಿಕಲ್ ಲೀಕ್

ರಾಯಚೂರು: ತಾಲೂಕಿನ ವಡಲ್ಲೂರು ಗ್ರಾಮದ ಬಳಿ ಇರುವ ರಾಯಚೂರು ಲ್ಯಾಬೋರೇಟರಿ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಸಿಪಿಪಿ ಎಂಬ ಕೆಮಿಕಲ್ ಲೀಕ್ ಆಗಿರುವ ಪರಿಣಾಮ, ಓರ್ವ ಮೃತಪಟ್ಟಿದ್ದು, ಮೂವರು ಅಸ್ವಸ್ಥರಾಗಿರುವ ಘಟನೆ ಕಳೆದ...

ಸಿಎಂ ವಿರುದ್ಧ ಹೇಳಿಕೆ : ಯತ್ನಾಳರನ್ನ ಪಕ್ಷದಿಂದ...

 ಕೊಪ್ಪಳ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಹೇಳಿಕೆ ಮೂರ್ಖತನದ್ದು, ಪಕ್ಷದ ರಾಜ್ಯ ಅಧ್ಯಕ್ಷರು ಯತ್ನಾಳರನ್ನ ಪಕ್ಷದಿಂದ ಹೊರಹಾಕುವಂತೆ ಪ್ರಾರ್ಥಿಸುವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಯತ್ನಾಳ...

ಶಿವಮೊಗ್ಗ : ಸಿಗಂದೂರು ದೇವಾಲಯ ಮುಜರಾಯಿಗೆ ತೆರೆ...

 ಶಿವಮೊಗ್ಗ, ಅ 21 : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ನೀಡುವ ಕುರಿತು ಹಬ್ಬಿರುವ ಸುದ್ದಿಗಳಿಗೆ ಬಿಜೆಪಿ ಶಾಸಕ ಹಾರತಾಳು ಹಾಲಪ್ಪ ತೆರೆ...

ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ಕಾರ್ಯಕರ್ತರ...

ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ಕುಸುಮ ಪರ ಲಕ್ಷ್ಮೀದೇವಿನಗರ ಬೂತ್ 156 ಬಳಿ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ವಾರ್ಡ್ ಅಧ್ಯಕ್ಷರಾದ ಜವರೇಗೌಡ, ಕಾರ್ಯಕರ್ತರಾದ ಚಿಕ್ಕರಾಜು, ರಾಕೇಶ್, ವಿನೋದ್, ರೂಪೇಶ್, ಮಾಲಿಕ್ ಮತ್ತು...

ಮಾಜಿ ಶಾಸಕ ಮೊಯ್ದಿನ್ ಬಾವಾರಿಗೆ ಜೀವ ಬೆದರಿಕೆ...

 ಮಂಗಳೂರು: ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತೆರಳಿ ಕೊಪ್ಪರಿಗೆ ಪೂಜೆಯಲ್ಲಿ ಪಾಲ್ಗೊಂಡಿದ್ದಕ್ಕೆ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ರಾಕೇಶ್ ರೋಷನ್ ಮೇಲೆ ಶೂಟೌಟ್ ಪ್ರಕರಣ: ಪರಾರಿಯಾಗಿದ್ದ ಶಾರ್ಪ್ ಶೂಟರ್ ಅರೆಸ್ಟ್

 ಮಹಾರಾಷ್ಟ್ರ : ಬಾಲಿವುಡ್ ಖ್ಯಾತ ನಿರ್ದೇಶಕ ರಾಕೇಶ್ ರೋಷನ್ ಅವರ ಮೇಲೆ 2000ನೇ ಇಸವಿಯಲ್ಲಿ ದಾಳಿ ನಡೆಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ನಟೋರಿಯಸ್ ಕ್ರಿಮಿನಲ್, ಶಾರ್ಪ್ ಶೂಟರ್ ನನ್ನು ಬಂಧಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕುಖ್ಯಾತ ಕ್ರಿಮಿನಲ್ ಸುನೀಲ್ ವಿ ಗಾಯಕ್ವಾಡ್ ನನ್ನು ಶುಕ್ರವಾರ 9ಗಂಟೆ ರಾತ್ರಿ ಕಲ್ವಾದ ಪಾರ್ಸಿಕ್ ಸರ್ಕಲ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಗಾಯಕ್ವಾಡ್ ಪಾರ್ಸಿಕ್ ಸರ್ಕಲ್ ಪ್ರದೇಶಕ್ಕೆ ಬರುತ್ತಾನೆ ಎಂಬ ಖಚಿತ ಮಾಹಿತಿ ಪಡೆದ ನಂತರ ಆತನನ್ನು ಬಂಧಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಅನಿಲ್ ಹೊನ್ರಾವ್ ತಿಳಿಸಿದ್ದಾರೆ.

ಗಾಯಕ್ವಾಡ್ ವಿರುದ್ಧ 11 ಕೊಲೆ ಪ್ರಕರಣ, ಏಳು ಕೊಲೆ ಯತ್ನದ ಪ್ರಕರಣಗಳು ದಾಖಲಾಗಿದ್ದವು. 2000ನೇ ಇಸವಿಯಲ್ಲಿ ರಾಕೇಶ್ ರೋಷನ್ ಮೇಲೆ ನಡೆಸಿದ ದಾಳಿಯೂ ಸೇರಿದೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

2000ನೇ ಇಸವಿ ಜನವರಿಯಲ್ಲಿ ಮುಂಬೈನ ಪಶ್ಚಿಮ ವಲಯದಲ್ಲಿನ ಸಾಂತಾ ಕ್ರೂಝ್ ಕಚೇರಿಯ ಹೊರಭಾಗದಲ್ಲಿ ರಾಕೇಶ್ ರೋಷನ್ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಆರೋಪಿ ಆರು ಸುತ್ತು ಗುಂಡಿನ ದಾಳಿ ನಡೆಸಿದ್ದ, ಇದರಲ್ಲಿ ಎರಡು ಗುಂಡು ರಾಕೇಶ್ ರೋಷನ್ ಗೆ ತಗುಲಿತ್ತು ಎಂದು ವರದಿ ಹೇಳಿದೆ.

ಕೊಲೆ ಪ್ರಕರಣದ ಆರೋಪದಲ್ಲಿ ಗಾಯಕ್ವಾಡ್ ಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಾಸಿಕ್ ಸೆಂಟ್ರಲ್ ಜೈಲಿನಲ್ಲಿದ್ದ ಈತ ಜೂನ್ 26ರಂದು 28 ದಿನಗಳ ಕಾಲದ ಪೆರೋಲ್ ಮೇಲೆ ಹೊರಬಂದಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪೆರೋಲ್ ಅವಧಿ ಮುಗಿದ ನಂತರ ಗಾಯಕ್ವಾಡ್ ಜೈಲಿಗೆ ವಾಪಸ್ ಆಗಲಿದ್ದಾನೆ ಎಂದು ಅಧಿಕಾರಿಗಳು ನಿರೀಕ್ಷಿಸಿದ್ದರು. ಆದರೆ ಆತ ಹಾಗೆ ಮಾಡದೆ ಅಡಗಿಕೊಂಡಿದ್ದ. ಕೊನೆಗೂ ಕಳೆದ ರಾತ್ರಿ ಪೊಲೀಸರು ಮತ್ತೆ ಬಂಧಿಸಿದ್ದಾರೆ.

ಅಧಿಕಾರಿಗಳ ಮಾಹಿತಿ ಪ್ರಕಾರ, 1999 ಮತ್ತು 2000ನೇ ಇಸವಿ ವೇಳೆ ಈ ಕ್ರಿಮಿನಲ್ ಸಕ್ರಿಯನಾಗಿದ್ದ. ಅಲ್ಲದೇ ಹಲವಾರು ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿದ್ದ. ಗಾಯಕ್ವಾಡ್ ಕುಖ್ಯಾತ ಗ್ಯಾಂಗ್ ಗಳಾದ ಅಲಿ ಬುಡೇಶ್ ಮತ್ತು ಸುಭಾಶ್ ಸಿಂಗ್ ಠಾಕೂರ್ ನೇತೃತ್ವದ ಗ್ಯಾಂಗ್ ಜತೆ ಸಂಪರ್ಕ ಹೊಂದಿದ್ದ.

TRENDING