Saturday, October 24, 2020
Home ಜಿಲ್ಲೆ ಚಿಕ್ಕಮಗಳೂರು ಅಡಿಕೆ ತೋಟಗಳಿಗೆ ಹೊಸ ವೈರಸ್ ದಾಳಿ.!; ಸಂಕಷ್ಟದಲ್ಲಿ ಮಲೆನಾಡ ರೈತ

ಇದೀಗ ಬಂದ ಸುದ್ದಿ

ದೇಶದಲ್ಲಿ10 ಕೋಟಿ ಗಡಿ ದಾಟಿದ ಕೊರೊನಾ ...

 ನವದೆಹಲಿ: ದೇಶದಲ್ಲಿ ಶನಿವಾರದ ವೇಳೆಗೆ 10 ಕೋಟಿಗೂ ಹೆಚ್ಚು ಕೊವಿಡ್ -19 ಪರೀಕ್ಷೆಗಳನ್ನು ನಡೆಸುವ ಮೂಲಕ ಹೊಸ ಎತ್ತರಕ್ಕೇರಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೇಂದ್ರೀಕೃತ...

ಕೇಂದ್ರದ ‘ಬಜೆಟ್’ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಕೇಂದ್ರ ಬಜೆಟ್‌ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ. ಹಾಲಿ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಇಂದಿರಾಗಾಂಧಿಯವರ ಬಳಿಕ ಬಜೆಟ್ ಮಂಡನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡ್ರಗ್ಸ್ ಪ್ರಕರಣ : ರಾಗಿಣಿ ಆಪ್ತ ಗಿರೀಶ್...

ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ಅವರಿಗೆ ಆಪ್ತ ಎನ್ನಲಾದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. 2 ಲಕ್ಷ ರೂಪಾಯಿ...

ಕೊರೊನಾ: ಮುಂದಿನ ಮೂರು ತಿಂಗಳೇ ನಿರ್ಣಾಯಕ –...

ನವದೆಹಲಿ : ಕೊರೊನಾ ಪರಿಸ್ಥಿತಿ ನಿರ್ಣಯಿಸಲು ಮುಂದಿನ ಮೂರು ತಿಂಗಳು ದೇಶದಲ್ಲಿ ನಿರ್ಣಾಯಕವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ದೇಶದಲ್ಲಿ ಸಾಲು ಸಾಲು...

ಕೊರೊನಾ : ಮಹಾಮಾರಿಯಿಂದ ಚೇತರಿಕೆಯಲ್ಲೂ...

ನವದೆಹಲಿ: ಈ ಹಿಂದೆ ಮಾರಕ ಕೊರೋನಾ ವೈರಸ್ ಸೋಂಕಿನ ಹೊಡೆತಕ್ಕೆ ಒಳಗಾಗಿ ಗರಿಷ್ಠ ಸೋಂಕಿತರನ್ನು ಹೊಂದಿ ಕುಖ್ಯಾತಿ ಪಡೆದಿದ್ದ 10 ರಾಜ್ಯಗಳಲ್ಲಿ ಇದೀಗ ದಾಖಲೆ ಪ್ರಮಾಣದ ಚೇತರಿಕೆ ಕಾಣುತ್ತಿದೆ.

ಅಡಿಕೆ ತೋಟಗಳಿಗೆ ಹೊಸ ವೈರಸ್ ದಾಳಿ.!; ಸಂಕಷ್ಟದಲ್ಲಿ ಮಲೆನಾಡ ರೈತ

ಚಿಕ್ಕಮಗಳೂರು: ಕಾಫಿನಾಡು ಅನ್ನೋ ಹಣೆಪಟ್ಟಿ ಹೊಂದಿದ್ದರೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿಯೊಂದನ್ನೇ ಬೆಳೆಯಲ್ಲ. ಅಡಿಕೆ, ಭತ್ತ, ಮೆಣಸು ಸೇರಿದಂತೆ ಅನೇಕ ಬೆಳೆಗಳನ್ನ ಬೆಳೆದು ರೈತರು ಬದುಕು ಕಟ್ಟಿಕೊಂಡಿದ್ದಾರೆ. ಅದರಲ್ಲೂ ಮಲೆನಾಡಿನ ಭಾಗದಲ್ಲಿ ನೀರಿನ ಪ್ರಮಾಣ ಜಾಸ್ತಿ ಇರೋದ್ರಿಂದ ಅಡಿಕೆ ಬೆಳೆಯೂ ಕೂಡ ಲಕ್ಷಾಂತರ ರೈತರಿಗೆ ವರವಾಗಿ ಪರಿಣಮಿಸಿತ್ತು. ಆದರೀಗ, ಕಣ್ಣಿಗೆ ಕಾಣದ ವೈರಸ್ ಬೆಳೆಯನ್ನೇ ತಿಂದು ಹಾಕ್ತಿದೆ. ಒಂದು ತುದಿಯಿಂದ ಇಡೀ ಮರಗಳು ಒಣಗುತ್ತಾ ಬರುತ್ತಿವೆ. ವೈರಸ್ನಿಂದ ಅಡಿಕೆ ಬೆಳೆಗಾರರು ಅಕ್ಷರಶಃ ಕಣ್ಣೀರಲ್ಲಿ ಕೈ ತೊಳೆಯುವ ದುಸ್ಥಿತಿ ಎದುರಾಗಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಸಂಸೆ, ನೆಲ್ಲಿಬೀಡು, ಎಳನೀರು, ಬಸ್ರಿಕಲ್ಲು, ಕೆಂಗನಕೊಂಡ, ಬಡಮನೆ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಅಡಿಕೆ ಮರಗಳು ಸಂಪೂರ್ಣ ಒಣಗಿ ಹೋಗ್ತೀವಿ. ಹೊಸದೊಂದು ರೋಗ ಅಡಿಕೆ ಮರದ ಗರಿಯಿಂದ ಶುರುವಾಗಿ ಬಳಿಕ ರೆಂಬೆ, ಕೊಂಬೆಗಳ ಮೂಲಕ ಬುಡದವರೆಗೂ ವ್ಯಾಪಿಸಿ ನೋಡ ನೋಡ್ತಿದಂತೆ ಕೆಲವೇ ಕೆಲವು ದಿನಗಳಲ್ಲಿ ಮರವೇ ಇಲ್ಲದಂತಾಗ್ತಿದೆ. ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡ ಈ ರೋಗ ಇದೀಗ ನೂರಾರು ಎಕರೆಯಲ್ಲಿ ಅಡಿಕೆ ತೋಟಗಳಲ್ಲಿ ತನ್ನ ಅಟ್ಟಹಾಸ ತೋರ್ತಿದೆ. ಈಗಾಗಲೇ ಅತಿಹೆಚ್ಚು ಮಳೆ, ಹಳದಿ ರೋಗ ಸೇರಿದಂತೆ ಒಂದಿಲ್ಲೊಂದು ಸಮಸ್ಯೆಯಿಂದ ತತ್ತರಿಸಿ ಹೋಗಿರೋ ರೈತ ಇದೀಗ ಈ ಹೊಸದಾದ ರೋಗದಿಂದ ಮತ್ತಷ್ಟು ಕಂಗಲಾಗಿದ್ದಾನೆ. ಅಡಿಕೆ ತೋಟವನ್ನ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಬೆಳೆಗಾರ ಇದೀಗ ತನ್ನ ಸಂಪೂರ್ಣ ಬೆಳೆಯನ್ನ ಹಂತ-ಹಂತವಾಗಿ ಕಳೆದುಕೊಳ್ತಿದ್ದು ಭವಿಷ್ಯದ ಬಗ್ಗೆ ಆತಂಕಕ್ಕೀಡಾಗಿದ್ದಾನೆ. ವಿದ್ಯಾಗಮ ಮುಂದುವರಿಯುತ್ತದೆ; ಯೋಜನೆ ವೈಫಲ್ಯ ಎನ್ನುವುದು ತಪ್ಪು: ಶಿಕ್ಷಣ ಸಚಿವ ಸುರೇಶ್ ಕುಮಾರ್

ಹಸಿರು ಬಣ್ಣ ಹೊದ್ದುಕೊಂಡು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಅಡಿಕೆ ತೋಟ ಇದೀಗ ಹಳದಿ ಬಣ್ಣಕ್ಕೆ ವಾಲಿದೆ. ಸದಾ ಒಂದಿಲ್ಲೊಂದು ಸಮಸ್ಯೆಯಲ್ಲೇ ತನ್ನ ಇಡೀ ಜೀವನವನ್ನ ಕಳೆಯುವ ಅನ್ನದಾತನಿಗೆ ದೇವ್ರು ಕೂಡ ಪದೇ ಪದೇ ಪರೀಕ್ಷೆಗಳನ್ನೇ ಕೊಡ್ತಾನೇ ಇರ್ತಾನೆ ಅನ್ನೋದಕ್ಕೆ ಇದೇ ಸಾಕ್ಷಿ. ಮೊದಮೊದಲು ಕೆಲವೆಡೆ ಮಾತ್ರ ಕಂಡು ಬಂದ ಈ ರೋಗ ಇದೀಗ ತನ್ನ ವ್ಯಾಪ್ತಿಯನ್ನ ಎಲ್ಲೆಡೆ ವ್ಯಾಪಿಸಿದೆ. ಗಾಳಿಯ ಮೂಲಕ ಇದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡುತ್ತಿದೆ, ತಡೆಯಲು ಸಾಧ್ಯವಾಗ್ತಿಲ್ಲ ಅಂತ ರೈತರು ಅಸಹಾಯಕತೆ ತೋರಿದ್ದಾರೆ. ಇದು ಯಾವ ವೈರಸ್, ಇದನ್ನ ಹೇಗೆ ತಡೆಯೋದು ಅನ್ನೋದು ಅಧಿಕಾರಿಗಳಿಗೂ ಕೂಡ ಅರ್ಥವಾಗದಿರೋದ್ರಿಂದ ಈ ಭಾಗದ ರೈತರು ಅಡಿಕೆ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.

ಒಟ್ಟಾರೆ, ಕಣ್ಣಿಗೆ ಕಾಣದ ಹೆಮ್ಮಾರಿ ಕೊರೊನಾ ಹೇಗೆ ಜನರನ್ನ ಬಲಿ ಹಾಕ್ತಿದ್ಯೋ ಅದೇ ರೀತಿ ಕಣ್ಣಿಗೆ ಕಾಣದ ಈ ವೈರಸ್ ಕೂಡ ಅಡಿಕೆ ಬೆಳೆಯನ್ನ ಬಲಿ ತೆಗೆದುಕೊಳ್ತಿದೆ. ಇನ್ನು ತಾನು ಹತ್ತಾರು ವರ್ಷಗಳ ಕಾಲ ಕಷ್ಟಪಟ್ಟು ಬೆಳೆದಿದ್ದ ಬೆಳೆ ಕಣ್ಣೆದುರೇ ಬಲಿಯಾಗ್ತಿರೋದ ಕಂಡು ನಾವು ಬದುಕನ್ನೇ ಬಲಿ ಕೊಡುವಂತಾಗಿದೆ ಅನ್ನೋದು ಬೆಳೆಗಾರರ ಅಳಲು. ಸಮಸ್ಯೆಯಲ್ಲೇ ಜೀವನ ಸಾಗಿಸ್ತಿರೋ ಬೆಳೆಗಾರರೀಗ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆಯ ಗಂಭೀರತೆಯನ್ನ ಅರಿತುಕೊಂಡು ಬೆಳೆಗಾರರ ನೆರವಿಗೆ ಧಾವಿಸಬೇಕಿದೆ.  

TRENDING