Wednesday, October 21, 2020
Home ಜಿಲ್ಲೆ ಮೈಸೂರು ನಂಜನಗೂಡು : ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಪೈಪೋಟಿ

ಇದೀಗ ಬಂದ ಸುದ್ದಿ

ಅಫಘಾನಿಸ್ತಾನ: ದೇಶ ತೊರೆಯಲು ವೀಸಾಗಾಗಿ ಮುಗಿಬಿದ್ದ ವೇಳೆ...

ಕಾಬೂಲ್: ಅಫಘಾನಿಸ್ತಾನದ ಪೂರ್ವ ನಂಗರ್ಹಾರ್ ಪ್ರಾಂತ್ಯದ ರಾಜಧಾನಿಯಾದ ಜಲಾಲಾಬಾದ್ ನಗರದಲ್ಲಿ ಬುಧವಾರ ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ 11 ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶ ತೊರೆಯಲು...

ಸವದತ್ತಿಯಲ್ಲಿ ಸಿಡಿಲಿಗೆ 45ಕ್ಕೂ ಹೆಚ್ಚು ಕುರಿಗಳು ಬಲಿ

ಬೆಳಗಾವಿ: ನಿನ್ನೆ ಜಿಲ್ಲೆಯಾದ್ಯಂತ ಸುರಿದ ಗುಡುಗು ಸಹಿತ ಸಿಡಿಲು ಮಳೆಗೆ ನವಿಲುತೀರ್ಥ ಡ್ಯಾಂ ಹತ್ತಿರ ಸಿಡಿಲು ಬಡಿದು 45ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಳಗಾವಿ ಸೇರಿದಂತೆ ಹಲವು ತಾಲೂಕುಗಳಲ್ಲಿ...

ಬಳ್ಳಾರಿಯಿಂದ ವೈಮಾನಿಕ ಸಮೀಕ್ಷೆ ಆರಂಭಿಸಿದ ಸಿಎಂ

ಬಳ್ಳಾರಿ: ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಮಳೆಯಿಂದಾದ ಬೆಳೆ ನಷ್ಟದ ಕುರಿತ ವೈಮಾನಿಕ ಸಮೀಕ್ಷೆ ಕಾರ್ಯವನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳ್ಳಾರಿಯಿಂದಲೇ ಆರಂಭಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪಶು ಸಂಗೋಪನಾ ಸಚಿವ...

ಕಾರು ಖರೀದಿದಾರರಿಗೆ ಟಾಟಾ ಮೋಟಾರ್ಸ್ ನಿಂದ ಬಂಪರ್...

 ಟಾಟಾ ಮೋಟರ್ಸ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡ್ತಿದೆ. ದೇಶದ ಪ್ರಸಿದ್ಧ ಆಟೋಮೋಟಿವ್ ಬ್ರಾಂಡ್ ಟಾಟಾ ಮೋಟಾರ್ಸ್ ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದೊಂದಿಗೆ ಈ ಘೋಷಣೆ ಮಾಡಿದೆ. ಪ್ರಯಾಣಿಕ ವಾಹನವನ್ನು ಗ್ರಾಹಕರಿಗೆ ಅತ್ಯಾಕರ್ಷಕ...

ಮಹಾರಾಷ್ಟ್ರದ ಹಿರಿಯ ಮುಖಂಡ ಏಕ್ ನಾಥ್...

ಮುಂಬೈ: ಭಾರತೀಯ ಜನತಾ ಪಕ್ಷಕ್ಕೆ ಭಾರೀ ಹಿನ್ನಡೆ ಎಂಬಂತೆ ಮಹಾರಾಷ್ಟ್ರದ ಬಿಜೆಪಿ ಹಿರಿಯ ಮುಖಂಡ ಏಕ್ ನಾಥ್ ಖಡ್ಸೆ ಬುಧವಾರ(ಅಕ್ಟೋಬರ್ 21, 2020) ಪಕ್ಷವನ್ನು ತ್ಯಜಿಸಿ ಎನ್ ಸಿಪಿಗೆ ಸೇರ್ಪಡೆಯಾಗಿರುವುದಾಗಿ ವರದಿ...

ನಂಜನಗೂಡು : ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಪೈಪೋಟಿ

ನಂಜನಗೂಡುನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದ್ದು, ನಂಜನಗೂಡು ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷರ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ನಿಗಧಿಯಾಗಿದೆ.

31 ಸ್ಥಾನದ ನಗರಸಭೆಯಲ್ಲಿ ಬಿ.ಜೆ.ಪಿ. 15, ಕಾಂಗ್ರೆಸ್ 10, ಜೆಡಿಎಸ್ 3 ಹಾಗೂ 3 ಮಂದಿ ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ನಗರಸಭೆ ಅಧಿಕಾರ ಹಿಡಿಯಲು 16 ಸ್ಥಾನಗಳ ಅವಶ್ಯಕತೆಯಿದ್ದು, ಬಿಜೆಪಿ 15 ಸ್ಥಾನದ ಜೊತೆಗೆ ಶಾಸಕ ಹಾಗೂ ಸಂಸದರಿಗೆ ಮತದಾನದ ಅವಕಾಶವಿರುವುದರಿಂದ 17 ಮತದೊಂದಿಗೆ ಬಿಜೆಪಿ ನಗರಸಭೆಯ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಮಹಿಳೆ ಅಥವಾ ಪುರುಷರು ಸ್ಪರ್ಧಿಸಲು ಅವಕಾಶ ಇರುವುದರಿಂದ ಬಿಜೆಪಿ ಸದಸ್ಯರ ನಡುವೆ ಪೈಪೋಟಿ ನಡೆಯಲಿದೆ. 24ನೇ ವಾರ್ಡ್‌ನ ಕ್ರಷರ್ ಮಹದೇವಸ್ವಾಮಿ, 7ನೇ ವಾರ್ಡ್‌ನ ಮಹದೇವ ಪ್ರಸಾದ್, 15 ನೇ ವಾರ್ಡ್‌ನ ಮಹದೇವಮ್ಮ ಬಾಲಚಂದ್ರ, 31ನೇ ವಾರ್ಡ್‌ನ ನಾಗಮಣಿ ಶಂಕರಪ್ಪ ನಡುವೆ ಪೈಪೋಟಿ ನಡೆಯಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.

ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗದವರಿಗೆ ನೀಡುವುದಾದರೆ ಮಹದೇವಮ್ಮ ಬಾಲಚಂದ್ರ, ನಾಗಮಣಿ ಶಂಕರಪ್ಪ ಅಥವಾ ಪರಿಶಿಷ್ಟ ವರ್ಗದ ಮೀನಾಕ್ಷಿ ನಾಗರಾಜು ಸೇರಿದಂತೆ ಈ ಮೂವರು ಸದಸ್ಯರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ.

ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ‘ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಬೆಂಗಳೂರಿನಲ್ಲಿದ್ದಾರೆ. ಮುಂದಿನ ವಾರ ಸಂಸದರ ಮೈಸೂರಿನ ಮನೆಯಲ್ಲಿ ಸಭೆ ನಡೆಸಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಿದ್ದಾರೆ. ನಗರಸಭೆ ಯಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಇರುವುದರಿಂದ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಬಿಜೆಪಿಗೆ ಸಿಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

TRENDING