Wednesday, October 21, 2020
Home ಬೆಂಗಳೂರು ಅರ್ಚಕರು, ಬ್ರಾಹ್ಮಣ ಅಡುಗೆ ತಯಾರಿಸುವವರಿಗೆ 5 ಲಕ್ಷ ಆರೋಗ್ಯ ವಿಮೆ ಜಾರಿ

ಇದೀಗ ಬಂದ ಸುದ್ದಿ

ಸವದತ್ತಿಯಲ್ಲಿ ಸಿಡಿಲಿಗೆ 45ಕ್ಕೂ ಹೆಚ್ಚು ಕುರಿಗಳು ಬಲಿ

ಬೆಳಗಾವಿ: ನಿನ್ನೆ ಜಿಲ್ಲೆಯಾದ್ಯಂತ ಸುರಿದ ಗುಡುಗು ಸಹಿತ ಸಿಡಿಲು ಮಳೆಗೆ ನವಿಲುತೀರ್ಥ ಡ್ಯಾಂ ಹತ್ತಿರ ಸಿಡಿಲು ಬಡಿದು 45ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಳಗಾವಿ ಸೇರಿದಂತೆ ಹಲವು ತಾಲೂಕುಗಳಲ್ಲಿ...

ಬಳ್ಳಾರಿಯಿಂದ ವೈಮಾನಿಕ ಸಮೀಕ್ಷೆ ಆರಂಭಿಸಿದ ಸಿಎಂ

ಬಳ್ಳಾರಿ: ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಮಳೆಯಿಂದಾದ ಬೆಳೆ ನಷ್ಟದ ಕುರಿತ ವೈಮಾನಿಕ ಸಮೀಕ್ಷೆ ಕಾರ್ಯವನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳ್ಳಾರಿಯಿಂದಲೇ ಆರಂಭಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪಶು ಸಂಗೋಪನಾ ಸಚಿವ...

ಕಾರು ಖರೀದಿದಾರರಿಗೆ ಟಾಟಾ ಮೋಟಾರ್ಸ್ ನಿಂದ ಬಂಪರ್...

 ಟಾಟಾ ಮೋಟರ್ಸ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡ್ತಿದೆ. ದೇಶದ ಪ್ರಸಿದ್ಧ ಆಟೋಮೋಟಿವ್ ಬ್ರಾಂಡ್ ಟಾಟಾ ಮೋಟಾರ್ಸ್ ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದೊಂದಿಗೆ ಈ ಘೋಷಣೆ ಮಾಡಿದೆ. ಪ್ರಯಾಣಿಕ ವಾಹನವನ್ನು ಗ್ರಾಹಕರಿಗೆ ಅತ್ಯಾಕರ್ಷಕ...

ಮಹಾರಾಷ್ಟ್ರದ ಹಿರಿಯ ಮುಖಂಡ ಏಕ್ ನಾಥ್...

ಮುಂಬೈ: ಭಾರತೀಯ ಜನತಾ ಪಕ್ಷಕ್ಕೆ ಭಾರೀ ಹಿನ್ನಡೆ ಎಂಬಂತೆ ಮಹಾರಾಷ್ಟ್ರದ ಬಿಜೆಪಿ ಹಿರಿಯ ಮುಖಂಡ ಏಕ್ ನಾಥ್ ಖಡ್ಸೆ ಬುಧವಾರ(ಅಕ್ಟೋಬರ್ 21, 2020) ಪಕ್ಷವನ್ನು ತ್ಯಜಿಸಿ ಎನ್ ಸಿಪಿಗೆ ಸೇರ್ಪಡೆಯಾಗಿರುವುದಾಗಿ ವರದಿ...

ವಿಶ್ವವಿದ್ಯಾಲಯಗಳ ಅಭಿವೃದ್ಧಿ ಕುರಿತು ಶಿಕ್ಷಣ ಮಂಡಲದ ‌ಜೊತೆ...

ಬೆಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರಲು ಸರ್ಕಾರ ಮತ್ತಷ್ಟು ದೃಢ ಹೆಜ್ಜೆಗಳನ್ನು ಇಡುತ್ತದೆ. ಅದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಎಲ್ಲಾ ಅಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದು ಉನ್ನತ...

ಅರ್ಚಕರು, ಬ್ರಾಹ್ಮಣ ಅಡುಗೆ ತಯಾರಿಸುವವರಿಗೆ 5 ಲಕ್ಷ ಆರೋಗ್ಯ ವಿಮೆ ಜಾರಿ

ಬೆಂಗಳೂರು, ಅ.10- ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ರಾಜ್ಯದ ಅರ್ಚಕರು ಮತ್ತು ಅಡುಗೆ ತಯಾರಿಸುವ ಬ್ರಾಹ್ಮಣರಿಗೆ 5 ಲಕ್ಷ ಆರೋಗ್ಯ ವಿಮೆ ಮಾಡುವುದಾಗಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಇಂದಿಲ್ಲಿ ಘೋಷಿಸಿದೆ.

ಇಂದು ನಡೆದ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ ಅವರು ದೇವಾಲಯಗಳಲ್ಲಿ ಪೂಜೆ-ಪುನಸ್ಕಾರ ನಡೆಸುವ ಅರ್ಚಕರು ಮತ್ತು ಅಡುಗೆ ತಯಾರಿಸುವವರಿಗೆ ಮಂಡಳಿ ವತಿಯಿಂದ 5 ಲಕ್ಷ ಆರೋಗ್ಯ ವಿಮೆ ನೀಡುವುದಾಗಿ ಪ್ರಕಟಿಸಿದರು.

ಆರೋಗ್ಯ ವಿಮೆ ಯೋಜನೆಯ ಸಂಪೂರ್ಣ ಹಣವನ್ನು ಮಂಡಳಿಯಿಂದಲೇ ನೀಡಲಾಗುವುದು. ಸದ್ಯದಲ್ಲೇ ಇದನ್ನು ಅಕೃತವಾಗಿ ಜಾರಿ ಮಾಡಲಾಗುವುದು ಎಂದು ಸಚ್ಚಿದಾನಂದಮೂರ್ತಿ ಘೋಷಿಸಿದರು.
ರಾಜ್ಯದಲ್ಲಿರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಅರ್ಚಕರು ಮತ್ತು ಪುರೋಹಿತರ ಅಂಕಿ-ಅಂಶಗಳನ್ನು ಸಂಗ್ರಹಿಸುವುದೇ ಬಹುದೊಡ್ಡ ಸವಾಲಾಗಿದೆ. ಹೀಗಾಗಿ ಕಾರ್ಯಕಾರಿ ಮಂಡಳಿಯ ಸದಸ್ಯರು ತಕ್ಷಣವೇ ದತ್ತಾಂಶಗಳನ್ನು ಸಂಗ್ರಹಿಸುವಂತೆ ಸೂಚನೆ ಕೊಟ್ಟರು.

ಯಾವ ಯಾವ ಪ್ರದೇಶಗಳಲ್ಲಿ ಅರ್ಚಕರು ಮತ್ತು ಪುರೋಹಿತರು ವಾಸವಾಗಿದ್ದರೋ ಅಂತಹ ಕಡೆ ಮಂಡಳಿ ಸದಸ್ಯರು ಖುದ್ದು ತೆರಳಿ ಮಾಹಿತಿ ಕಲೆ ಹಾಕಬೇಕು. ವಿದ್ಯಾವಂತ ಯುವಕರು ಕೂಡ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಸರ್ಕಾರದ ಯೋಜನೆಗಳನ್ನು ಪಡೆಯುವಾಗ ನಮ್ಮ ಸಮುದಾಯದವರು ಅಂಜಿಕೆ ಪಟ್ಟುಕೊಂಡು ಹಿಂದುಳಿಯುವುದು ಬೇಡ. ಆರ್ಥಿಕವಾಗಿ ಹಿಂದುಳಿದವರು ಸರ್ಕಾರದ ಪ್ರತಿಯೊಂದು ಸೌಲಭ್ಯಗಳನ್ನೂ ಮುಂದೆ ಬಂದು ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರದ ಸೌಲಭ್ಯಗಳನ್ನು ಪಡೆಯುವುದು ನಮ್ಮ ಮೂಲಭೂತ ಹಕ್ಕು. ಇದಕ್ಕೆ ಅಂಜಿಕೆ ಪಡಬೇಕಾದ ಅಗತ್ಯವಿಲ್ಲ. ನಮ್ಮ ಸಮುದಾಯದ ವಿದ್ಯಾವಂತ ಯುವಕರು ಈ ಬಗ್ಗೆ ಜಾಗೃತಿ ಮೂಡಿಸಬೇಕು.

ತಮ್ಮ ಅಕಾರಾವಯಲ್ಲಿ ಸಮುದಾಯದ ಏಳಿಗೆಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಸಚ್ಚಿದಾನಂದ ಮೂರ್ತಿ ಆಶ್ವಾಸನೆ ನೀಡಿದರು.
ಮಂಡಳಿಯ ಪದಾಕಾರಿಗಳು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

TRENDING