Wednesday, January 27, 2021
Home ಜಿಲ್ಲೆ ಹಥ್ರಾಸ್​ ಪ್ರಕರಣ ಖಂಡಿಸಿ ನಟ ಚೇತನ್​​ ನೇತೃತ್ವದಲ್ಲಿ ಪ್ರತಿಭಟನೆ

ಇದೀಗ ಬಂದ ಸುದ್ದಿ

ಹಥ್ರಾಸ್​ ಪ್ರಕರಣ ಖಂಡಿಸಿ ನಟ ಚೇತನ್​​ ನೇತೃತ್ವದಲ್ಲಿ ಪ್ರತಿಭಟನೆ

ನೆಲಮಂಗಲ: ಉತ್ತರಪ್ರದೇಶದ ಹಥ್ರಾಸ್​​ನಲ್ಲಿ ನಡೆದ ಅತ್ಯಾಚಾರ ಪ್ರಕರಣ ವಿರೋಧಿಸಿ ನಟ ಚೇತನ್ ನೇತೃತ್ವದಲ್ಲಿ ತಮಟೆ ಚಳುವಳಿ ಮಾಡಲಾಯಿತು.

ಬೆಂಗಳೂರು ಹೊರವಲಯದ ಬಾಗಲಗುಂಟೆ ಸರ್ಕಲ್​ನಲ್ಲಿ ದಲಿತ ಸಂರಕ್ಷಣಾ ಸಮಿತಿ ಹಾಗೂ ನಟ ಚೇತನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಉತ್ತರಪ್ರದೇಶ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಪ್ರತಿಭಟನಾನಿರತರು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಟ ಚೇತನ್, ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಕಠಿಣ ಶಿಕ್ಷೆಗೊಳಪಡಿಸಬೇಕು. ದೇಶದಲ್ಲಿ ಈ ರೀತಿಯ ಘಟನೆ ಮರುಕಳಿಸದಂತೆ ಕಠಿಣ ಕಾನೂನು ರೂಪಿಸುವಂತೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಒತ್ತಾಯಿಸಿದರು.

ದಿ ನ್ಯೂಸ್24 ಕನ್ನಡ

TRENDING