Tuesday, October 27, 2020
Home ಜಿಲ್ಲೆ ಚಿಕ್ಕಮಗಳೂರು ಪರಿಸರ ಸೂಕ್ಷ್ಮ ವಲಯ ಘೋಷಣೆ ಮತ್ತೊಮ್ಮೆ ಪರಿಶೀಲಿಸಬೇಕು : ಡಾ. ವೀರಸೋಮೇಶ್ವರ ಜಗದ್ಗುರು

ಇದೀಗ ಬಂದ ಸುದ್ದಿ

6,500 ಕೋಟಿ ಚಕ್ರಬಡ್ಡಿ ಮನ್ನಾ ಘೋಷಿಸಿದ ಕೇಂದ್ರ...

ಆದಾಯದ ಕೊರತೆ ಎದುರಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಚಿಕ್ಕ ರಿಲೀಫ್ ನೀಡಿದ್ದು ದೀಪಾವಳಿ ಕೊಡುಗೆ ಎಂಬಂತೆ ಚಕ್ರಬಡ್ಡಿ ಮನ್ನಾ ಆದೇಶ ಹೊರಡಿಸಿದೆ. ಒಟ್ಟು 6,500 ಕೋಟಿ ರೂಪಾಯಿ ಮೌಲ್ಯದ ಚಕ್ರಬಡ್ಡಿ...

SBI ಬ್ಯಾಂಕ್‌ ಗ್ರಾಹಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

 ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಎಟಿಎಂಗಳಿಂದ ನಗದು ಹಿಂಪಡೆಯುವದಕ್ಕೆ ಸಂಬಂಧಿಸಿದ ತನ್ನ ನಿಯಮವನ್ನು ಈಗಾಗಲೇ ಬದಲಿಸಿದೆ. ಸೆಪ್ಟೆಂಬರ್ 18 ರಿಂದ ಜಾರಿಗೆ ಬಂದ ಎಸ್...

ಎಸ್.ಬಂಗಾರಪ್ಪ ಸ್ಮಾರಕ ನಿರ್ಮಾಣಕ್ಕೆ ಒಂದು ಕೋಟಿ ರೂ,...

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಸ್ಮಾರಕ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್’ಗೂ ಕೊರೋನಾ...

ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ಸೋಮವಾರ ತಿಳಿದುಬಂದಿದೆ. ಈ ಕುರಿತು ಮಹಾರಾಷ್ಟ್ರ ರಾಜ್ಯ ಉಪ...

ಯಾದಗಿರಿ : ಪ್ರವಾಹದಿಂದ ಸಂಕಷ್ಟಕ್ಕೀಡಾದ ಸಾವಿರ...

ಯಾದಗಿರಿ : ಪ್ರಚಾರದ ಹಂಗಿಲ್ಲದೆ ಕಾಯಕ ಯೋಗಿಗಳಂತೆ , ಎಲೆಮರೆ ಕಾಯಿಯಂತೆ ನಿಸ್ವಾರ್ಥ ಸಮಾಜ ಸೇವೆ ಮಾಡುತ್ತಿರುವವರು ಬೆಂಗಳೂರಿನ  ಪ್ರೊಫೆಸರ್. ಎಂ.ಆರ್ .ದೊರೆಸ್ವಾಮಿಯವರು. ಬೆಂಗಳೂರಿನ ಪಿಇಎಸ್...

ಪರಿಸರ ಸೂಕ್ಷ್ಮ ವಲಯ ಘೋಷಣೆ ಮತ್ತೊಮ್ಮೆ ಪರಿಶೀಲಿಸಬೇಕು : ಡಾ. ವೀರಸೋಮೇಶ್ವರ ಜಗದ್ಗುರು

ಚಿಕ್ಕಮಗಳೂರು  : ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಭದ್ರಾ ಹುಲಿ ಯೋಜನೆ ಮತ್ತು ಪರಿಸರ ಸೂಕ್ಷ್ಮ ವಲಯವನ್ನು ಜನವಸತಿ ಗ್ರಾಮ ಹೊರತುಪಡಿಸಿ ಜಾರಿಗೊಳಿಸಬೇಕು. ಈಗಿನ ಘೋಷಣೆ ಅವೈಜ್ಞಾನಿಕವಾಗಿದ್ದು ಮತ್ತೊಮ್ಮೆ ಪರಿಶೀಲಿಸುವ ಅವಶ್ಯಕತೆ ಇದೆ ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದ್ದಾರೆ.

 ಭದ್ರಾ ಹುಲಿ ಯೋಜನೆಗಾಗಿ 1974ರಲ್ಲಿ 492 ಚ.ಕಿ.ಮೀಟರ್ ಘೋಷಿಸಲಾಗಿತ್ತು. ಈಗ ಮತ್ತೆ ಘೋಷಿಸಲು ಹೊರಟಿರುವ ವ್ಯಾಪ್ತಿ ಅವೈಜ್ಞಾನಿಕವಾಗಿದ್ದು ಯಾವುದೇ ಗ್ರಾಮದ ಜನತೆಗಾಗಲಿ ಸಮಿತಿಗಳಿಗಾಗಲಿ, ಗ್ರಾಮ ಸಭೆಗಳ ಸಮಿತಿಗೆ ಗೊತ್ತಿಲ್ಲದೇ ಇರುವುದು  ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಎನ್.ಆರ್.ಪುರ ತಾಲೂಕಿನ ಹತ್ತಾರು ಗ್ರಾಮಗಳಿಗೆ ಈ ಯೋಜನೆಯಿಂದ ತೊಂದರೆಯಾಗುವುದಲ್ಲದೇ ಸುಮಾರು 25 ದೇವಾಲಯಗಳು, 3 ಚರ್ಚ್ ಮತ್ತು 4 ಮಸೀದಿಗಳು ಒಳಗೊಂಡಿರುತ್ತವೆ.

ಈ ಎರಡು ಯೋಜನೆಗಳಿಂದ ಎನ್.ಆರ್.ಪುರ ತಾಲೂಕು ಕಣ್ಮರೆಯಾಗುವ ದುಸ್ಥಿತಿಗೆ ಬಂದಿದೆ. ಭದ್ರಾ ಮೇಲ್ದಂಡೆ ಮತ್ತು ಭದ್ರಾ ಹುಲಿ ಯೋಜನೆಯಿಂದ ಈಗಾಗಲೇ ನಿರಾಶ್ರಿತರಾದ ಕುಟುಂಬಗಳು ಮತ್ತೆ ಈ ಯೋಜನೆಗೆ ಒಳಪಡುತ್ತಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.

ರೈತರ ಮೂಲ ಸೌಕರ್ಯಗಳಾದ ರಸ್ತೆ ಅಭಿವೃದ್ಧಿ, ವಿದ್ಯುತ್ ಸಂಪರ್ಕ, ಕೃಷಿ ಚಟುವಟಿಕೆ, ಭದ್ರಾ ನದಿ ನೀರಿನ ಬಳಕೆ, ಜಾನುವಾರು ಸಂರಕ್ಷಣೆ, ರಸಗೊಬ್ಬರ ಬಳಕೆ, ಧಾರ್ಮಿಕ ಉತ್ಸವ, ಜಾತ್ರೆ ಮತ್ತು ರಾತ್ರಿ ಸಂಚಾರ ಇವೆಲ್ಲವುಗಳಿಗೆ ಈ ಯೋಜನೆಯಿಂದ ಕೃಷಿ ಅವಲಂಬಿತ ಕುಟುಂಬಗಳು ಹೆಚ್ಚು ತೊಂದರೆ ಅನುಭವಿಸುವ ಪರಿಸ್ಥಿತಿ ಬರುತ್ತದೆ.

ಮಲೆನಾಡು ಹಿತರಕ್ಷಣಾ ಸಮಿತಿಯೂ ಕೂಡಾ ಇದನ್ನು ವಿರೋಧಿಸುತ್ತಿದ್ದು ಇದೇ 15 ರಂದು ತಾಲೂಕು ಬಂದ್ ಗೆ ಕರೆ ನೀಡಿದೆ…

ಆದ್ದರಿಂದ ಈ 2 ಯೋಜನೆಗಳನ್ನು

ಪರಿಶೀಲಿಸಿ ಜನವಸತಿ ಗ್ರಾಮಗಳನ್ನು ಹೊರತುಪಡಿಸಿ ಜಾರಿಗೆ ತರಲು ಸರ್ಕಾರ ನಿರ್ಧಾರ ಕೈಗೊಳ್ಳಬೇಕೆಂದು ಶ್ರೀ ರಂಭಾಪುರಿ ಜಗದ್ಗುರುಗಳು ಒತ್ತಾಯಿಸಿದ್ದಾರೆ. ಇದರೊಂದಿಗೆ ಮುಖ್ಯಮಂತ್ರಿಗಳಿಗೆ ಈ ಕುರಿತು ಪತ್ರ ಬರೆಯಲಾಗುವುದು ಎಂದು ಸಹ ಅವರು ತಿಳಿಸಿದ್ದಾರೆ.  

TRENDING