Wednesday, January 27, 2021
Home ಜಿಲ್ಲೆ ಚಿತ್ರದುರ್ಗ ಬುಕ್ಲೂರಹಳ್ಳಿ ಜಮೀನು ಒಂದರ ಬಳಿ ಕಂತೆ ಕಂತೆಯ ಲಕ್ಷಾಂತರ ಹಣ ಪತ್ತೆ

ಇದೀಗ ಬಂದ ಸುದ್ದಿ

ಬುಕ್ಲೂರಹಳ್ಳಿ ಜಮೀನು ಒಂದರ ಬಳಿ ಕಂತೆ ಕಂತೆಯ ಲಕ್ಷಾಂತರ ಹಣ ಪತ್ತೆ

ಚಿತ್ರದುರ್ಗ : ದುಷ್ಕರ್ಮಿಗಳು ಕದ್ದಿರೋ ಹಣವನ್ನ ಹೆದರಿ ಬಿಸಾಕಿ ಹೋಗಿರುವ ಅನುಮಾನ ವ್ಯಕ್ತವಾಗಿದೆ. ಯಾಕಂದ್ರೆ ಕಳೆದ ಮೂರು ದಿನಗಳ ಹಿಂದೆ ದಿಲೀಪ್ ಬ್ಯುಲ್ಡ್ ಕಾನ್ ಕಂಪನಿಯಲ್ಲಿ 36 ಲಕ್ಷ ರೂಪಾಯಿ ಕಳ್ಳತನವಾಗಿತ್ತು. ಇದೀಗ ದಿಲೀಪ್ ಬ್ಯುಲ್ಡ್​ ಕಾನ್ ಕಚೇರಿ‌ ಹಿಂಭಾಗದ ಜಮೀನಿನಲ್ಲಿ ಈ ಹಣ ಪತ್ತೆಯಾಗಿದೆ.

ಹೀಗಾಗಿ ಯಾರೋ ಕಳ್ಳರೇ ಈ ಹಣವನ್ನ ಬಿಸಾಡಿ ಹೋಗಿದ್ದಾರೆ ಅಂತಾ ಹೇಳಲಾಗುತ್ತಿದೆ. ಇನ್ನು ಭಾರೀ ಮೊತ್ತದ ಹಣವನ್ನ ನೋಡಿದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ತಳಕು ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿತ್ತಿದ್ದಾರೆ.

 ಗ್ರಾಮಸ್ಥರಲ್ಲಿ  ಹಣ ನೋಡಿ ಬೆಚ್ಚಿ ಬಿದ್ದೊರು ಘಟನೆ ನೆಡದಿರುವುದು ಎಲ್ಲಿ ಅಂತೀರಾ ಹೌದ ಇದು ಘಟನೆ‌  ನಡೆದಿರೊದು  ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ  ರಾಷ್ಟ್ರೀಯ ಹೆದ್ದರಿಯ ಸಮೀಪ ಬುಕ್ಲೋರಹಳ್ಳಿ ಎನ್ನುವ ಗ್ರಾಮದ ಸಮೀಪ.

ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ವ್ಯಪ್ತಿಯ ಬುಕ್ಲೋರಹಳ್ಳಿ  ಬಳಿಯ ದಿಲೀಪ್ ಬುಲ್ಡ್ ಕಂಪನಿ ರಸ್ತೆ ಕಾರ್ಯ ವನ್ನು ಮಾಡುತ್ತಿದ್ದು ಅಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರಿಗೆ  ಕೊಡಬೇಕಿದ್ದ 36 ಲಕ್ಷ ಹಣವನ್ನೂ ದುಷ್ಕರ್ಮಿಗಳು  ಕಳ್ಳತನ ಮಾಡಿದ್ದರು  ಕಳ್ಳತನವಾದ ವಿಚಾರವಾಗಿ  ಕಂಪನಿಯವರು ತಳಕು ಠಾಣೆಗೆ ಮಾಹಿತಿ‌ನೀಡಿ   ಪ್ರಕರಣ ದಾಖಲು‌ಮಾಡಿದ್ದರು.

 ಪ್ರಕರಣ ತನಿಖೆ ಪ್ರಾರಂಭ ಹಂತದಲ್ಲೆ ಇದ್ದಾಗ ಇಂದು ಅಚ್ಚರಿಗೆ ಕಾರಣವಾಗಿದೆ. ಕಂಪನಿಯಲ್ಲಿ‌‌‌‌ ಕದ್ದ ಹಣವನ್ನೂ  ಜಮೀನೊಂದರಲ್ಲಿ‌ ಹಾಕಿರುವ ಘಟನೆ ನಡೆದಿದೆ. ಹಣ ಕದ್ದ ಕಳ್ಳರು ಭಯದಿಂದ ಜಮೀನೊಂದರಲ್ಲಿ‌ಹಾಕಿರಿವ ಶಂಕ ವ್ಯಕ್ತವಾಗಿದೆ. ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು‌ತಜ್ಞರೊಂದಿಗೆ ವೃತ್ತ ನಿರೀಕ್ಷಕರಾದ ನೆಲವಾಗಲು ಮಂಜುನಾಥ ತಳಕು ಠಾಣಾ ಪಿ.ಎಸ್.ಐ ಕೆ.ಸತೀಶ ನಾಯ್ಕ್ ಸ್ಥಳಕ್ಕೆ ಬೇಟಿ ನೀಡಿ‌ ಪರಿಶೀಲನೆ ಮಾಡುತ್ತಿದ್ದಾರೆ..  

TRENDING