Thursday, October 22, 2020
Home ರಾಜ್ಯ "ನನ್ನ ಹೆಸರು ಹೇಳಿದರೆ ಬಿಜೆಪಿಯಲ್ಲಿ ಅಧಿಕಾರ ಸಿಗುತ್ತೆ" : ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಲೇವಡಿ

ಇದೀಗ ಬಂದ ಸುದ್ದಿ

ಪರಿಶಿಷ್ಟ ಪಂಗಡಕ್ಕೆ ಸಿಗಬೇಕಾದ ಶೇ.7.5 ಮೀಸಲಾತಿ ಕೊಡಲು...

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಬನಹಟ್ಟಿ ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ    ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲ್ಲೂಕು ಘಟಕದ ವತಿಯಿಂದ ಸರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಅರಮನೆಯಲ್ಲಿ ಸಾಂಪ್ರದಾಯಿಕ ಸರಸ್ವತಿ ಪೂಜೆ ನೆರವೇರಿಸಿದ ಯದುವೀರ್

ಮೈಸೂರು: ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದು ವಿದ್ಯಾದೇವತೆ ಸರಸ್ವತಿ ಪೂಜೆಯನ್ನು ನೆರವೇರಿಸಿದರು. ನವರಾತ್ರಿಯ 5ನೇ ದಿನ ಇಂದು ಅರಮನೆಯ ವಿದ್ಯಾ ದೇವತೆಯಾದ ಸರಸ್ವತಿಗೆ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ...

ವಿಜಯವಾಡ ಕನಕದುರ್ಗ ದೇವಸ್ಥಾನದ ಬಳಿ ...

ವಿಜಯವಾಡ: ದುರ್ಗಾ ದೇವಾಲಯದ ಬಳಿಯ ಗುಡ್ಡವೊಂದು ಕುಸಿದು ಬಿದ್ದು, ಮೂವರು ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ನವರಾತ್ರಿ ಉತ್ಸವ ಹಿನ್ನೆಲೆ ದೇವಾಸ್ಥಾನದ ಸುತ್ತಮುತ್ತ ಶೆಡ್​ ಹಾಕಲಾಗಿತ್ತು. ಕಳೆದ ಮೂರ್ನಾಲ್ಕು ದಿನದಿಂದ ಸುರಿಯತ್ತಿರುವ...

ಜೆಡಿಎಸ್‌ ಬಿಟ್ಟು ಬಿಜೆಪಿ ಸೇರಿದ ನಟಿ ಅಮೂಲ್ಯ...

 ರಾಜರಾಜೇಶ್ವರಿ ನಗರ ಕ್ಷೇತ್ರದ ಜೆಡಿಎಸ್ ನಾಯಕ, ನಟಿ ಅಮೂಲ್ಯ ಮಾವ ಜಿ. ಎಚ್. ರಾಮಚಂದ್ರ ಬಿಜೆಪಿ ಸೇರಿದರು. ಆರ್. ಆರ್. ನಗರ ಉಪ ಚುನಾವಣೆ ಸಂದರ್ಭದಲ್ಲಿಯೇ ಅವರು ಜೆಡಿಎಸ್ ತೊರೆದಿದ್ದಾರೆ.

ಕೋವಿಡ್ ನಿಯಮ ಗಾಳಿಗೆ ತೂರಿದ ಅಥಣಿ ತಾಲೂಕು...

ಅಥಣಿ: ಕೊರೊನಾ ಸೋಂಕು ಹಿನ್ನೆಲೆ ಸರ್ಕಾರ ಕೋವಿಡ್ ನಿಯಮಗಳನ್ನು ರೂಪಿಸಿ ಆದೇಶ ಹೊರಡಿಸಿದೆ. ಆದರೆ, ಜನ ಸಾಮಾನ್ಯರಿಗೆ ಒಂದು ನ್ಯಾಯ ತಾಲೂಕು ಆಡಳಿತಕ್ಕೆ ಒಂದು ನ್ಯಾಯ ಅನ್ನುವ ರೀತಿಯಲ್ಲಿ ಕೊವಿಡ್ -19...

“ನನ್ನ ಹೆಸರು ಹೇಳಿದರೆ ಬಿಜೆಪಿಯಲ್ಲಿ ಅಧಿಕಾರ ಸಿಗುತ್ತೆ” : ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಲೇವಡಿ

 ಬೆಂಗಳೂರು, ಅ.8- ನನ್ನ ಹೆಸರು ಹೇಳಿದರೇ ಬಿಜೆಪಿಯಲ್ಲಿ ಅಧಿಕಾರಗಳು ಸಿಗುತ್ತವೆ. ಆ ಮಾರುಕಟ್ಟೆ ಉದ್ದೇಶಕ್ಕಾಗಿ ಕೆಲವರು ನನ್ನ ಹೆಸರು ಬಳಸಿಕೊಳ್ಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ. ಬಿಜೆಪಿ ಭ್ರಷ್ಟಾಚಾರದ ವಿರುದ್ಧ ರಚಿಸಲಾದ ಹಾಡುಗಳು, ಪೋಸ್ಟರ್ಗಳನ್ನು ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಭ್ರಷ್ಟ ಎಂಬ ಬಗ್ಗೆ ಬಿಜೆಪಿಯವರ ಬಳಿ ದಾಖಲೆಗಳಿದ್ದರೆ ಜನರ ಮುಂದಿಡಲಿ ಎಂದು ಸವಾಲು ಹಾಕಿದ್ದಾರೆ.

ಸಚಿವ ಸಿ.ಟಿ.ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಈಗ ದೆಹಲಿಗೆ ಹೋಗುತ್ತಿದ್ದಾರೆ. ಅವರು ನನ್ನನ್ನು ಭ್ರಷ್ಟ ತತ್ವಜ್ಞಾನಿಯಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ನಾನು ಭ್ರಷ್ಟನೋ, ತತ್ವಜ್ಞಾನಿಯೋ ಎಂಬುದು ಬೇರೆ ಮಾತು. ಬಿಜೆಪಿ ನಾಯಕರು ನನ್ನ ಮೇಲೆ ಮಾಡುವ ಆರೋಪಗಳಿಗೆ ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡಲು.

ನಾನು ಭ್ರಷ್ಟ ಎಂದು ಯಾವ ತನಿಖೆ ನಡೆದಿದೆ, ಯಾವ ಆಯೋಗ ನನ್ನ ವಿರುದ್ಧ ವರದಿ ನೀಡಿದೆ, ಎಷ್ಟು ದೂರುಗಳು ದಾಖಲಾಗಿವೆ ಎಂಬುದನನ್ನು ಬಹಿರಂಗ ಪಡಿಸಲಿ. ಹಾಗೇಯೇ ಬಿಜೆಪಿಯವರು ಬಂಗಾರು ಲಕ್ಷ್ಮಣ್ ಅವಯಿಂದ ಯಾರೆಲ್ಲಾ ಭ್ರಷ್ಟರಿದ್ದಾರೆ. ಅವರ ಪಕ್ಷದ ಶಾಸಕ ಆಸ್ತಿಗಳೆಷ್ಟು ಎಂದೇಲ್ಲಾ ಬಹಿರಂಗವಾಗಿ ಹೇಳಲಿ ಎಂದು ತಿರುಗೇಟು ನೀಡಿದರು.

ಬಿಜೆಪಿಯಲ್ಲಿ ನನ್ನ ಹೆಸರು ಹೇಳಿದರೆ ಅಕಾರಗಳು ಸಿಗುತ್ತವೆ. ನನ್ನ ಟೀಕೆ ಮಾಡುವ ನಾಯಕರಿಗೆ ಮಾರುಕಟ್ಟೆ ಹೆಚ್ಚಾಗುತ್ತದೆ. ಅದಕ್ಕಾಗಿ ಆರೋಪ ಮಾಡುತ್ತಾರೆ, ಮಾಡಿಕೊಳ್ಳಲಿ ಎಂದು ಹೇಳಿದರು.ಸಿಬಿಐ ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳು ನನ್ನ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಅದಕ್ಕೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನೂ ಸೂಕ್ತ ಸಮಯದಲ್ಲಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಉಪಚುನಾವಣೆ ಮತ್ತು ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲವಾಗಿಲ್ಲ. ಅಭ್ಯರ್ಥಿಗಳ ಆಯ್ಕೆ ಮೊದಲು 40 ಮಂದಿ ಹಿರಿಯ ನಾಯಕರ ಜೊತೆ ಚರ್ಚೆ ಮಾಡಿದ್ದೇನೆ. ರಮೇಶ್ ಬಾಬುಗೆ ಟಿಕೆಟ್ ನೀಡುವ ಮೊದಲು ಆಕಾಂಕ್ಷಿಗಳಾಗಿದ್ದ ಇತರ ಮೂರ್ನಾಲ್ಕು ಮಂದಿಯ ಜೊತೆಯೂ ಚರ್ಚೆ ಮಾಡಿದ್ದೇನೆ. ಎಲ್ಲರನ್ನು ಸಮಾದಾನ ಪಡಿಸಲಾಗಿದೆ ಎಂದು ಹೇಳಿದರು.

ಈ ಮೊದಲು ಯಾವುದೇ ಚುನಾವಣೆಯಾದರೂ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮೂವರ ಹೆಸರನ್ನು ಪ್ಯಾನಲ್ಲಿಸ್ಟ್ನಲ್ಲಿ ಕಳುಹಿಸಲಾಗುತ್ತಿತ್ತು. ಈ ಬಾರಿ ಎಲ್ಲಾ ಕ್ಷೇತ್ರಗಳಿಗೂ ಒಬ್ಬಬ್ಬ ಅಭ್ಯರ್ಥಿಯ ಹೆಸರನ್ನು ಮಾತ್ರ ಕಳುಹಿಸಲಾಗಿದೆ. ಅದಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಿದೆ ಎಂದರು.

ಶಿರಾ ಕ್ಷೇತ್ರದ ಚರ್ಚೆ ಬಂದಾಗ ಯುವ ನಾಯಕರಿಲ್ಲವೇ ಎಂದು ವರಿಷ್ಠರು ನನ್ನ ಬಳಿ ಕೇಳಿದ್ದರು. ರಾಜೇಶ್ಗೌಡ ಮತ್ತು ಅವರ ಕುಟುಂಬ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಚಾರ ನಡೆಸಿದೆ. ಅವರ ಬಗ್ಗೆ ನಾವು ಯಾಕೆ ತಲೆ ಕೆಡಿಸಿಕೊಳ್ಳಬೇಕು. ರಾಜೇಶ್ಗೌಡ ಯಾರೆಂದು ನನಗೆ ಗೋತ್ತಿಲ್ಲ, ಒಮ್ಮೆಯೂ ಅವರು ನನ್ನನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟಡಿಸಿದರು.

ವಿಧಾನಸಭೆ ಉಪಚುನಾವಣೆಗೆ ಅಸೂಚನೆ ಜಾರಿಯಾಗುತ್ತಿದ್ದಂತೆ ಅಕ್ಟೋಬರ್ 14ರಂದು ರಾಜರಾಜೇಶ್ವರಿನಗರದಲ್ಲಿ, ಅ.15ರಂದು ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ನಾನು ಮತ್ತು ಪ್ರತಿಪಕ್ಷದ ನಾಯಕರು ಎರಡು ಕಡೆ ಹಾಜರಿರುತ್ತೇವೆ ಮತ್ತು ಸ್ಥಳೀಯ ನಾಯಕರು ಭಾಗವಹಿಸುತ್ತಾರೆ ಎಂದು ಹೇಳಿದರು.

TRENDING