Tuesday, October 20, 2020
Home ಕ್ರೈಂ ನ್ಯೂಸ್ ಕೌಟುಂಬಿಕ ಕಲಹದ ಹಿನ್ನೆಲೆ : ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು

ಇದೀಗ ಬಂದ ಸುದ್ದಿ

ಎಂಟು ಬಿಜೆಪಿ ಸದಸ್ಯರ ಬೆಂಬಲ ಜಿ.ಪಂ.ಅಧ್ಯಕ್ಷ ಪಟ್ಟಕ್ಕೆ...

ನಿರೀಕ್ಷೆಯಂತೆ ಕಾಂಗ್ರೆಸ್ ರಾಜಶೇಖರ ಹಿಟ್ನಾಳ ಅವುರು ಬಿಜೆಪಿ ಸದಸ್ಯರ ಬೆಂಬಲದೊಂದಿಗೆ  ಕೊಪ್ಪಳ ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷರಾಗಿ ಚುನಾಯಿತಗೊಳ್ಳುವ ಮೂಲಕ ರಾಜಕೀಯವಾಗಿ ಬಿಜೆಪಿಗೆ ಭಾರಿ ಹೊಡೆತವನ್ನು ಕೊಟ್ಟಿದ್ದಾರೆ.

ಎಸ್.ಟಿ ಮೀಸಲಾತಿ ಶೇ.7.5 ಹೆಚ್ಚಿಸಲು ಬಿಜೆಪಿ...

ಶಿರಾ : ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಡಳಿತದಲ್ಲಿದ್ದರೂ ಎಸ್.ಟಿ. ಮೀಸಲಾತಿಯನ್ನು ಶೇ 7.5 ಕ್ಕೆ ಹೆಚ್ಚಿಸಲು ವಿಫಲವಾಗಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.

ಪತ್ರಕರ್ತರೇನು ಕೊರೊನಾ ಯೋಧರಲ್ವಾ..? ಅವರದೇನು ಬದುಕುಗಳಲ್ವಾ..? ಅವರ...

ಬೆಂಗಳೂರು:ಕೊರೊನಾತಂಕ ಹಾಗೂ ಅದರ ಸಾವುಗಳ ಬಗ್ಗೆ ನಿರಂತರ ಸುದ್ದಿ ಮಾಡೋ ಸುದ್ದಿಮಿತ್ರರಿಗೆ ಸಂಬಂಧಿಸಿದ ಸುದ್ದಿ ಇದು.ಅವರ ಆರೋಗ್ಯದ ಬಗ್ಗೆ ಸೃಷ್ಟಿಯಾಗಿರುವ ನೂರಾರು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿರುವ ಸನ್ನಿವೇಶವಿದು.ಕೊರೊನಾ ಸುದ್ದಿಗಾಗಿ ಅವರ...

ಮುರಳೀಧರನ್ ಬಯೋಪಿಕ್’ಗೆ ಗುಡ್ ಬೈ ಹೇಳಿದ ‘ವಿಜಯ್...

ತಮಿಳುನಾಡು : ಬಿಗ್ ನ್ಯೂಸ್ ಎನ್ನುವಂತೆ ವಿಜಯ್ ಸೇತುಪತಿ ಅವರು ಮುತ್ತಯ್ಯ ಮುರಳೀಧರನ್ ಬಯೋಪಿಕ್ 800 ನಿಂದ ಹಿಂದೆ ಸರಿಯುತ್ತಿರುವುದಾಗಿ ಖಚಿತಪಡಿಸಿದ್ದು, ಇದೀಗ ಹಲವು ದಿನಗಳಿಂದ ವಿವಾದದಲ್ಲಿರುವ ಮುರಳಿಧರನ್ ಬಯೋಪಿಕ್...

ಕಲಬುರಗಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗಿದೆ. ಕಳೆದ ಎರಡು ದಿನಗಳಿಂದ ಬಿಡುವು ನೀಡಿದ ಮಳೆ ಮತ್ತೆ ಇಂದಿನಿಂದ ಸುರಿಯಲಾರಂಭಿಸಿದೆ. ಕಲಬುರಗಿ ಜಿಲ್ಲೆಯ ಜನತೆ ಭೀಮಾ...

ಕೌಟುಂಬಿಕ ಕಲಹದ ಹಿನ್ನೆಲೆ : ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು

 ದಾವಣಗೆರೆಕೌಟುಂಬಿಕ ಕಲಹದ ಕಾರಣದಿಂದ ಪತ್ನಿಯ ದೂರು ನೀಡಿದ್ದರಿಂದ ವಿಚಾರಣೆಗಾಗಿ ಠಾಣೆಗೆ ಕರೆತಂದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಪೊಲೀಸರ ಹಲ್ಲೆಯಿಂದ ಮೃತಪಟ್ಟಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದಾರೆ.

ಮಾಯಕೊಂಡ ಸಮೀಪದ ವಿಠ್ಠಲಾಪುರ ಗ್ರಾಮದ ಮರುಳಸಿದ್ದಪ್ಪ (46) ಮೃತಪಟ್ಟವರು. ಇವರ ಶವ ಠಾಣೆಗೆ 100 ಮೀಟರ್ ದೂರದಲ್ಲಿ ರೈಲ್ವೆ ಗೇಟಿನ ಬಳಿ ಇರುವ ಬಸ್‌ ನಿಲ್ದಾಣದಲ್ಲಿ ಪತ್ತೆಯಾಗಿದೆ.

ಮರುಳಸಿದ್ದಪ್ಪ ಅವರಿಗೆ ಮದುವೆಯಾಗಿದ್ದು, ಇಬ್ಬರು ಪುತ್ರಿಯರು ಇದ್ದಾರೆ. ಬೇರೆ ಯುವತಿಯೊಂದಿಗೆ ನಾಪತ್ತೆಯಾಗಿದ್ದ ಎನ್ನಲಾಗಿದ್ದು, ಈ ಸಂಬಂಧ ಪತ್ನಿ ವೃಂದಮ್ಮ ಮಾಯಕೊಂಡ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಮಾಯಕೊಂಡ ಠಾಣೆಯ ಪೊಲೀಸರು ಸಮೀಪದ ಹುಚ್ಚವ್ವನಹಳ್ಳಿಯಲ್ಲಿ ಇದ್ದ ಈತನನ್ನು ಸೋಮವಾರ ಕರೆತಂದು ಠಾಣೆಯಲ್ಲಿ ಇರಿಸಿದ್ದರು.

ಠಾಣೆಯಲ್ಲೇ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಪೊಲೀಸರು ರಾತ್ರಿ ವೇಳೆ ಕರೆ ಮಾಡಿ ಮರುಳಸಿದ್ದಪ್ಪ ಅವರ ಕುಟುಂಬದವರಿಗೆ ಹೇಳಿದ್ದರು. ಆದರೆ ಕುಟುಂಬದವರು ಬೆಳಿಗ್ಗೆ ಬರುವುದಾಗಿ ಹೇಳಿದ್ದರು. ಮಧ್ಯಾಹ್ನ 12 ಗಂಟೆಯ ವೇಳೆಗೆ ಮರುಳಸಿದ್ದಪ್ಪ ಅವರ ಶವ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿದೆ.

‘ರಾತ್ರಿ ವೇಳೆ ಠಾಣೆಯಲ್ಲೇ ಇದ್ದು, ಎದೆನೋವು ಕಾಣಿಸಿಕೊಂಡಿತು ಎಂದಿದ್ದರು. ಹೀಗಾಗಿ ಹೊರಗೆ ಬಿಟ್ಟೆವು. ಹೃದಯಾಘಾತದಿಂದ ಸತ್ತಿದ್ದಾರೆ’ ಎಂಬುದು ಪೊಲೀಸರ ಹೇಳಿಕೆ.

‘ರಾತ್ರಿ ವೇಳೆ ನಮ್ಮ ಅಣ್ಣ ಊಟ ಮಾಡಿ ಚೆನ್ನಾಗಿಯೇ ಇದ್ದ. ಪೊಲೀಸರೇ ನನ್ನ ಅಣ್ಣನನ್ನು ಹೊಡೆದು ಹಾಕಿ ಶವವನ್ನು ಎಸೆದು ಹೋಗಿದ್ದಾರೆ’ ಎಂದು ಮೃತನ ಸಹೋದರ ರುದ್ರೇಶಿ ಆರೋಪಿಸಿದ್ದಾರೆ.

ಮೂವರ ಅಮಾನತು

ಘಟನೆಗೆ ಸಂಬಂಧಿಸಿದಂತೆ ಮಾಯಕೊಂಡ ಠಾಣೆಯ ಪಿಎಸ್‌ಐ ಪ್ರಕಾಶ್, ಹೆಡ್‌ ಕಾನ್‌ಸ್ಟೆಬಲ್‌ ನಾಗರಾಜ್ ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌ ಶೇರ್ ಅಲಿ ಅವರನ್ನು ಅಮಾನತುಗೊಳಿಸಲಾಗಿದೆ.

‘ಪೊಲೀಸ್‌ ಕಸ್ಟಡಿಯಲ್ಲೇ ಸಾವು ಸಂಭವಿಸಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಸೇರಿ ಮೂವರನ್ನು ಅಮಾನತು ಮಾಡಲಾಗಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ಮೃತನ ಕುಟುಂಬಕ್ಕೆ ನ್ಯಾಯ ಒದಗಿಸುತ್ತೇವೆ. ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ಕೊಡಿಸುತ್ತೇವೆ. ಸಿಐಡಿ ತನಿಖೆ ನಡೆಸಲಾಗುವುದು.

TRENDING