Wednesday, October 28, 2020
Home ಅಂತರ್ ರಾಜ್ಯ ದಂತ ವೈದ್ಯೆ ಕೊಲೆ ಪ್ರಕರಣ: ಕೇಳಿದ್ದನ್ನು ಕೊಡದಿದ್ದಕ್ಕೆ ಕೊಂದೆ ಎಂದ ಪ್ರಿಯಕರ!

ಇದೀಗ ಬಂದ ಸುದ್ದಿ

ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಸಿಗದ ಆದ್ಯತೆ

ಬ್ಯಾಂಕಿಂಗ್ ನೇಮಕಾತಿಗೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(IBPS) ಪರೀಕ್ಷೆ ನಡೆಸಲಿದ್ದು ಈ ಸಲವೂ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿಲ್ಲ. ಬ್ಯಾಂಕ್ ಸಿಬ್ಬಂದಿ ಆಯ್ಕೆಗೆ ನಡೆಸುವ...

ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಪೊಗರು’...

 ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಸೌತ್ ಇಂಡಸ್ಟ್ರಿಯಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಹಾಡು ಹಾಗೂ ಡೈಲಾಗ್ ಟ್ರೈಲರ್ ಮೂಲಕ ಸಖತ್...

ಮೈದುಂಬಿ ಹರಿಯುತ್ತಿದೆ ದೂಧ್ ಸಾಗರ ಜಲಪಾತ !

ಪಣಜಿ: ಕಳೆದ ಕೆಲ ದಿನಗಳ ಹಿಂದೆ ಗೋವಾದ ಪ್ರಸಿದ್ಧ ದೂಧ್ ಸಾಗರ ಜಲಪಾತ ಪ್ರವಾಸೋದ್ಯಮ ಆರಂಭಗೊಂಡಿದ್ದರೂ ನಿರೀಕ್ಷಿತ ಸಂಖ್ಯೆಯಲ್ಲಿ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಆಗಮಿಸದಿರುವುದು ಕಂಡುಬರುತ್ತಿದೆ. ದೂಧ್...

RR ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ...

ಬೆಂಗಳೂರು: ಆರ್.ಆರ್. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ನಟಿ ಖುಷ್ಬೂ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿಗೆ ಆಗಮಿಸಲಿರುವ ಅವರು, ಆರ್.ಆರ್. ನಗರ...

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 43893 ...

 ನವದೆಹಲಿ :  ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳಿಗಿಂತ ಗುಣಮುಖ ಪ್ರಕರಣಗಳ ಸಂಖ್ಯೆಯಲ್ಲೇ ಏರಿಕೆ ಕಂಡು ಬಂದಿದೆ. ದೇಶದಲ್ಲಿ ಒಂದೇ ದಿನ 43893 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ...

ದಂತ ವೈದ್ಯೆ ಕೊಲೆ ಪ್ರಕರಣ: ಕೇಳಿದ್ದನ್ನು ಕೊಡದಿದ್ದಕ್ಕೆ ಕೊಂದೆ ಎಂದ ಪ್ರಿಯಕರ!

ತ್ರಿಸ್ಸೂರ್​: ಕೇರಳದ ದಂತ ವೈದ್ಯೆ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಹೇಶ್​ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, ವಿಚಾರಣೆ ವೇಳೆ ಕೊಲೆಗೆ ಕಾರಣವನ್ನು ಬಹಿರಂಗಪಡಿಸಿದ್ದಾನೆ. ಅಲ್ಲದೆ, ಬಚಾವ್​ ಆಗಲು ತಿಸ್ಸೂರ್​ನಲ್ಲಿ ಸಾಕಷ್ಟು ಅಡಗುತಾಣಗಳನ್ನು ಹುಡುಕಾಡಿದೆ ಎಂದಿದ್ದಾನೆ.

ಪವರಟ್ಟಿ ಮೂಲದ ಮಹೇಶ್​, ಸೆಪ್ಟೆಂಬರ್​ 29ರಂದು ದಂತ ವೈದ್ಯ ಡಾ. ಸೋನಾಗೆ ಕುಟ್ಟನೆಲ್ಲೂರಿನಲ್ಲಿರುವ ಕ್ಲಿನಿಕ್​ನಲ್ಲಿ ಕುಟುಂಬದ ಎದುರೇ ಚಾಕು ಇರಿದಿದ್ದ. ಹಲ್ಲೆ ಮಾಡಿದ ಬಳಿಕ ಪರಾರಿ ತ್ರಿಸ್ಸೂರ್​ನಲ್ಲಿ ಬಚ್ಚಿಕೊಳ್ಳಲು ಯತ್ನಿಸಿದ್ದ. ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಸೋನಾ ಚಕಿತ್ಸೆ ಫಲಕಾರಿಯಾಗದೇ ಅಕ್ಟೋಬರ್​ 4ರಂದು ತ್ರಿಸ್ಸೂರ್​ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಂಗಳವಾರ ಸಂಜೆ ಪೂನಕುನ್ನಮ್​ನಲ್ಲಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಆತನೇ ಶರಣಾಗಲು ಚಿಂತಿಸಿದ್ದ ಎಂದು ವರದಿಯಾಗಿದೆ. ಕೊಲೆ ಮಾಡಿದ ಬಳಿಕ ತ್ರಿಸ್ಸೂರ್​ನ ಕುನ್ನಮ್​ಕುಲಂ ಮತ್ತು ಕೊಡಂಗುಲ್ಲರ್​ನಲ್ಲಿ ಬಚ್ಟಿಟ್ಟುಕೊಂಡಿದ್ದಾಗಿ ಸ್ವತಃ ಆರೋಪಿ ಮಹೇಶ್​ ಹೇಳಿಕೊಂಡಿದ್ದಾನೆ. ನಾನು ಸೋನಾಳ ಉದ್ಯಮ ಪಾಲುದಾರನಾಗಿದ್ದೆ. ಆಕೆ ತ್ರಿಸ್ಸೂರ್​ನಲ್ಲಿ ಬಿಡಿಎಸ್​ ಅಧ್ಯಯನ ಮಾಡುವಾಗ ನನಗೆ ಪರಿಚಯವಾದಳು. ಡಿವೋರ್ಸ್​ ನಂತರ ತ್ರಿಸ್ಸೂರ್​ಗೆ ಮರಳಿ ಕುರಿಯಾಚಿರಾ ಏರಿಯಾದಲ್ಲಿರುವ ಫ್ಲ್ಯಾಟ್​ನಲ್ಲಿ ನನ್ನೊಂದಿಗೆ ಲಿವ್​ ಇನ್​ ರಿಲೇಷನ್​ನಲ್ಲಿದ್ದಳು. ಎರಡು ವರ್ಷಗಳ ಹಿಂದೆ ಕುಟ್ಟನೆಲ್ಲೂರಿನಲ್ಲಿ ನಾನು ಮತ್ತು ಸೋನಾ ಡೆಂಟಲ್​ ಕ್ಲಿನಿಕ್​ ಸ್ಥಾಪಿಸಿದ್ದೆವು ಎಂದು ಮಹೇಶ್​ ಪೊಲೀಸರ ಮುಂದೆ ಬಹಿರಂಗಪಡಿಸಿದ್ದಾನೆ.

ಕ್ಲಿನಿಕ್​ಗೆ ನಾನು ಸಹ ಬಂಡವಾಳ ಹೂಡಿದ್ದೆ. ಕ್ಲಿನಿಕ್​ ಆರಂಭವಾದಾಗಿನಿಂದ ಸೋನಾ ನನಗೆ ಲಾಭವಾಗಲಿ ಅಥವಾ ಬಂಡವಾಳದ ಹಣವನ್ನಾಗಲಿ ಹಂಚಿಕೊಳ್ಳಲಿಲ್ಲ. ಕೇಳಿದರೂ ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹೀಗಾಗಿ ಕ್ಲಿನಿಕ್​ನಿಂದ ಬರುವ ಇಡೀ ಆದಾಯವನ್ನು ತೆಗೆದುಕೊಳ್ಳಲು ಆರಂಭಿಸಿದೆ ಎಂದು ಮಹೇಶ್​ ಹೇಳಿದ್ದು, ಇದೇ ವಿಚಾರವಾಗಿ ಇಬ್ಬರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಕೊಲೆಗೂ ಮುನ್ನ ಸೋನಾ, ಮಹೇಶ್​ ವಿರುದ್ಧ ದೂರು ಸಹ ನೀಡಿದ್ದಳು. ಇದೂ ಕೂಡ ಸೊನಾ ಕೊಲೆಗೆ ಕಾರಣವಾಗಿದೆ. ಇದೀಗ ಬಂಧನಕ್ಕೊಳಗಾಗಿರುವ ಆರೋಪಿ ಮಹೇಶ್​ ವಿರುದ್ಧ ವಿವಿಧ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯದ ಎದುರು ಹಾಜರುಪಡಿಸಲಾಗುತ್ತದೆ. 

TRENDING