Friday, October 23, 2020
Home ಸಿನಿಮಾ ಎನ್ ಸಿ ಬಿ ವಿಚಾರಣೆ ಬಳಿಕ ಮತ್ತೆ ಗೋವಾಗೆ ಹೊರಟ ನಟಿ ದೀಪಿಕಾ ಪಡುಕೋಣೆ

ಇದೀಗ ಬಂದ ಸುದ್ದಿ

ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ

ಕೇರಳ: ಕೇರಳದ ತ್ರಿಶೂರ್​ ವೈದ್ಯಕೀಯ ಕಾಲೇಜ್​ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರ ವಿರುದ್ಧ ಗಂಭೀರ ವೈದ್ಯಕೀಯ ನಿರ್ಲಕ್ಷ್ಯ ಕೇಳಿ ಬಂದಿದೆ. ಕೋವಿಡ್​ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯನ್ನು ಆಸ್ಪತ್ರೆಯಲ್ಲಿನ ಮಂಚಕ್ಕೆ...

ಪಟಾಕಿ ಘಟಕದಲ್ಲಿ ಭೀಕರ ಸ್ಫೋಟ

ಶಿವಕಾಶಿ ಬಳಿಯ ಪಟಾಕಿ ಘಟಕದಲ್ಲಿ ಭೀಕರ ಸ್ಫೋಟಗೊಂಡ ಪರಿಣಾಮ ಐವರು ಸಾವಿಗೀಡಾಗಿದ್ದಾರೆ. ವಿರುಡುನಗರ ಜಿಲ್ಲೆಯ ಶಿವಕಾಶಿ ಬಳಿಯ ಪಟಾಕಿ ಘಟಕದಲ್ಲಿ ಈ ದುರಂತ ವರದಿಯಾಗಿದೆ. ಸಾವನ್ನಪ್ಪಿದವರ ಪೈಕಿ ಮೂವರು ಮಹಿಳೆಯರು...

ಬಂಧನ ಭೀತಿಯಿಂದ ಜಾಮೀನು ಪಡೆದ ಗಿರೀಶ್​ ಗದಿಗೆಪ್ಪಗೌಡ

ಧಾರವಾಡ: ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ಅವರಿಗೆ ಆಪ್ತ ಎನ್ನಲಾದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. 2 ಲಕ್ಷ ರೂಪಾಯಿ...

ಕಿತ್ತೂರು ಉತ್ಸವ ಒಂದೇ ದಿನಕ್ಕೆ ಸೀಮಿತ

ಬೆಳಗಾವಿ: ಈ ಬಾರಿ ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಕಿತ್ತೂರು ಸಾಂಸ್ಕೃತಿಕ ಉತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಕಿತ್ತೂರು ಸಂಸ್ಥಾನದ ಉಳಿವಿಗಾಗಿ ವೀರರಾಣಿ ಚೆನ್ನಮ್ಮ 1824ರಲ್ಲಿ ತನ್ನ ಸೈನ್ಯದೊಂದಿಗೆ ಬ್ರಿಟಿಷರೊಂದಿಗೆ ಸೆಣಸಾಡಿ,...

ವಿಜಯ ದಶಮಿಯಂದು ಸುತ್ತೂರು ಮಠಕ್ಕೆ ಸಾರ್ವಜನಿಕರಿಗಿಲ್ಲ ಪ್ರವೇಶ

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಪ್ರತಿ ವರ್ಷ ಆಯುಧ ಪೂಜೆ ಮತ್ತು ವಿಜಯ ದಶಮಿಯಂದು ವಿಶೇಷ ಪೂಜೆ ಹಾಗೂ ಬನ್ನಿ ಪೂಜೆಯನ್ನು ನೆರವೇರಿಸಲಾಗುತ್ತಿತ್ತು. ಆದರೆ ಈ...

ಎನ್ ಸಿ ಬಿ ವಿಚಾರಣೆ ಬಳಿಕ ಮತ್ತೆ ಗೋವಾಗೆ ಹೊರಟ ನಟಿ ದೀಪಿಕಾ ಪಡುಕೋಣೆ

ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಎನ್ ಸಿ ಬಿ ವಿಚಾರಣೆ ಬಳಿಕ ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ನಟಿ ದೀಪಿಕಾ ಹೆಸರು ಕೇಳಿಬರುತ್ತಿದ್ದಂತೆ ದೀಪಿಕಾ ಅಭಿಮಾನಿಗಳು ಸೋರಿದಂತೆ ಇಡೀ ಬಾಲಿವುಡ್ ಗೆ ಶಾಕ್ ಆಗಿತ್ತು. ಎನ್ ಸಿ ಬಿ ನೋಟಿಸ್ ದೀಪಿಕಾ ಕೈ ಸೇರುತ್ತಿದ್ದಂತೆ ದೀಪಿಕಾ ಕುಸಿದು ಹೋಗಿದ್ದರು. ಆದರೀಗ ವಿಚಾರಣೆ ಮುಗಿಸಿ ಮತ್ತೆ ದೀಪಿಕಾ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.

ಮಾದಕ ವಸ್ತು ನಿಯಂತ್ರಣ ಇಲಾಖೆ, ಸೆಪ್ಟಂಬರ್ 26ರಂದು ದೀಪಿಕಾಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆ ಸಮಯದಲ್ಲಿ ದೀಪಿಕಾ ಗೋವಾದಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಶಕುನ್ ಬಾತ್ರಾ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣದಲ್ಲಿ ದೀಪಿಕಾ ನಿರತರಾಗಿದ್ದರು. ಪತಿ ರಣ್ವೀರ್ ಸಿಂಗ್ ಸಹ ದೀಪಿಕಾ ಜೊತೆ ಗೋವಾದಲ್ಲಿದ್ದರು.

ಎನ್ ಸಿ ಬಿ ನೋಟಿಸ್ ದೀಪಿಕಾ ಕೈ ಸೇರುತ್ತಿದ್ದಂತೆ ಚಿತ್ರೀಕರಣ ಅರ್ಧದಲ್ಲೇ ನಿಲ್ಲಿಸಿ ಪತಿಯ ಜೊತೆ ಮುಂಬೈಗೆ ವಾಪಸ್ ಆಗಿದ್ದರು. ಬಳಿಕ ಎನ್ ಸಿ ಬಿ ವಿಚಾರಣೆಗೆ ಹಾಜರಾಗಿದ್ದರು. ಟ್ಯಾಲೆಂಟ್ ಮ್ಯಾನೇಜರ್ ಜೊತೆ ದೀಪಿಕಾ ‘ಮಾಲ್’ ಇದಿಯಾ ಎಂದು ಮಾಡಿದ ಡ್ರಗ್ಸ್ ಚಾಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ದೀಪಿಕಾ ಡ್ರಗ್ಸ್ ಚಾಟ್ ಬಹಿರಂಗವಾದ ಬಳಿಕ, ಈ ಚಾಟ್ ಅನ್ನು ಆಧರಿಸಿ ನೋಟಿಸ್ ನೀಡಲಾಗಿತ್ತು.

ಎನ್ ಸಿ ಬಿ ಅಧಿಕಾರಿಗಳು ದೀಪಿಕಾರನ್ನು ಸುಮಾರು 5 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆಯಲ್ಲಿ ದೀಪಿಕಾ ಡ್ರಗ್ಸ್ ಚಾಟ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಡ್ರಗ್ಸ್ ಸೇವಿಸುವುದಿಲ್ಲ ಎಂದು ಹೇಳಿದ್ದಾರಂತೆ. ಇದೀಗ ವಿಚಾರಣೆ ಮುಗಿದು 10 ದಿನಗಳ ಬಳಿ ದೀಪಿಕಾ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ದೀಪಿಕಾ ಇಲ್ಲದೆ ಈ 10 ದಿನಗಳ ಕಾಲ ಉಳಿದ ಭಾಗದ ಚಿತ್ರೀಕರಣ ಮಾಡಿ ಮುಗಿಸಿದ್ದಾರಂತೆ ನಿರ್ದೇಶಕರು.

ಶಕುನ್ ಬಾತ್ರಾ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ದೀಪಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಾಯಕ ಸಿದ್ಧಾರ್ಥ್ ಚತುರ್ವೇದಿ ಮತ್ತು ನಾಯಕಿ ಅನನ್ಯಾ ಪಾಂಡೆ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಲಾಕ್ ಡೌನ್ ಬಳಿಕ ಚಿತ್ರೀಕರಣ ಪ್ರಾರಂಭಮಾಡಿದ್ದು, ಈಗಾಗಲೇ ಸಾಕಷ್ಟು ಚಿತ್ರೀಕರಣ ಮುಕ್ತಾಯವಾಗಿದೆ.

TRENDING