Friday, October 23, 2020
Home ಕೋವಿಡ್-19 COVID 19 India Updates: ದೇಶದಲ್ಲಿ 67 ಲಕ್ಷ ದಾಟಿದ ಸೋಂಕಿತರ ಸಂಖ್ಯೆ!

ಇದೀಗ ಬಂದ ಸುದ್ದಿ

ಬಂಧನ ಭೀತಿಯಿಂದ ಜಾಮೀನು ಪಡೆದ ಗಿರೀಶ್​ ಗದಿಗೆಪ್ಪಗೌಡ

ಧಾರವಾಡ: ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ಅವರಿಗೆ ಆಪ್ತ ಎನ್ನಲಾದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. 2 ಲಕ್ಷ ರೂಪಾಯಿ...

ಕಿತ್ತೂರು ಉತ್ಸವ ಒಂದೇ ದಿನಕ್ಕೆ ಸೀಮಿತ

ಬೆಳಗಾವಿ: ಈ ಬಾರಿ ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಕಿತ್ತೂರು ಸಾಂಸ್ಕೃತಿಕ ಉತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಕಿತ್ತೂರು ಸಂಸ್ಥಾನದ ಉಳಿವಿಗಾಗಿ ವೀರರಾಣಿ ಚೆನ್ನಮ್ಮ 1824ರಲ್ಲಿ ತನ್ನ ಸೈನ್ಯದೊಂದಿಗೆ ಬ್ರಿಟಿಷರೊಂದಿಗೆ ಸೆಣಸಾಡಿ,...

ವಿಜಯ ದಶಮಿಯಂದು ಸುತ್ತೂರು ಮಠಕ್ಕೆ ಸಾರ್ವಜನಿಕರಿಗಿಲ್ಲ ಪ್ರವೇಶ

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಪ್ರತಿ ವರ್ಷ ಆಯುಧ ಪೂಜೆ ಮತ್ತು ವಿಜಯ ದಶಮಿಯಂದು ವಿಶೇಷ ಪೂಜೆ ಹಾಗೂ ಬನ್ನಿ ಪೂಜೆಯನ್ನು ನೆರವೇರಿಸಲಾಗುತ್ತಿತ್ತು. ಆದರೆ ಈ...

ಹಾಸನಾಂಬ ದರ್ಶನೋತ್ಸವ ಸಿದ್ದತೆ‌ ಆರಂಭ

ಹಾಸನ: ಹಾಸನಾಂಬ ದರ್ಶನೋತ್ಸವ ಸಿದ್ದತೆ‌ ಪ್ರಾರಂಭವಾಗಿದ್ದು, ಸಾರ್ವಜನಿಕರ ಅನುಕೂಲಕ್ಕೆ ಎಲ್​ಇಡಿ ಪರದೆಗಳ ಅಳವಡಿಕೆಗೆ ಜಾಗ ಆಯ್ಕೆ ಹಾಗೂ ಬ್ಯಾರಿಕೇಡ್​ಗಳ ನಿರ್ಮಾಣ ಕುರಿತು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.

ರಾಜ್ಯದಲ್ಲಿ ಪ್ರವಾಹಕ್ಕೆ ಅಂದಾಜು 15,000 ಕೋಟಿ ರೂ....

ಬೆಂಗಳೂರು: ನೆರೆ ಪ್ರದೇಶದಲ್ಲಿ ಸಂತ್ರಸ್ತರಿಗೆ ಯಾವುದೇ ಸಮಸ್ಯೆ ಆಗದಂತೆ‌ ನೋಡಿಕೊಳ್ಳಿ. ಯಾರ ಬಾಯಿಗೂ ಆಹಾರವಾಗದಂತೆ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳಿಗೆ ತಾಕೀತು ಮಾಡಿದರು.

COVID 19 India Updates: ದೇಶದಲ್ಲಿ 67 ಲಕ್ಷ ದಾಟಿದ ಸೋಂಕಿತರ ಸಂಖ್ಯೆ!

 ನವದೆಹಲಿ : ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಆತಂಕ ಮೂಡಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ 72,049 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 67 ಲಕ್ಷದ ಗಡಿ ದಾಟಿದೆ. ಅಲ್ಲದೇ, ಈ ಮಾಹಾಮಾರಿಗೆ ಒಂದೇ ದಿನ 986 ಜನರು ಬಲಿಯಾಗಿದ್ದಾರೆ. ಕೊರೊನಾ ಪೀಡಿತ ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ. ಪ್ರಾರಂಭದಿಂದಲೂ ಕೊರೊನಾ ಹೊಡೆತಕ್ಕೆ ಸಿಲುಕಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖ ಕಾಣುತ್ತಿಲ್ಲ. ಅಲ್ಲಿನ ಸೋಂಕಿತರ ಸಂಖ್ಯೆ 74,97,847ಕ್ಕೆ ಏರಿಕೆ ಕಂಡಿದೆ. ಅಮೆರಿಕದಲ್ಲಿ 43,34,605 ಸಕ್ರಿಯ ಪ್ರಕರಣಗಳಿದ್ದು, 2,10,852 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ಆದರೆ, ನೆಮ್ಮದಿಯ ಸಂಗತಿ ಎಂದರೆ ಈ ವರ್ಷಾಂತ್ಯಕ್ಕೆ ಕೊರೊನಾ ಲಸಿಕೆ ಸಿದ್ಧವಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಒಂದು ವೇಳೆ ಔಷಧಿ ಸಿಕ್ಕರೆ, ಅಮೆರಿಕ, ಭಾರತ, ಬ್ರೆಜಿಲ್, ರಷ್ಯಾ, ಸ್ಪೇನ್, ಪೆರು, ಬ್ರಿಟನ್ ಸೇರಿದಂತೆ ಕೊರೊನಾ ಹೊಡೆತಕ್ಕೆ ತೀವ್ರವಾಗಿ ಬಲಿಯಾಗಿರುವ ರಾಷ್ಟ್ರಗಳಲ್ಲಿನ ಜನರು ನೆಮ್ಮದಿಯ ಉಸಿರು ಬಿಡಲಿದ್ದಾರೆ.

ಭಾರತ ದೇಶದಲ್ಲಿ ಸೋಂಕಿತರು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಕೊರೊನಾ ವಾರಿಯರ್ಸ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಇದರಿಂದ ತಿಳಿದು ಬರುತ್ತಿದೆ. ಸದ್ಯ ದೇಶದಲ್ಲಿ 9,07,883 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 67,57,132ಕ್ಕೆ ಏರಿಕೆ ಕಂಡಿದೆ. ದೇಶದಲ್ಲಿ ಇದುವರೆಗೂ 8,22,71,657 ಜನ ಕೊರೊನಾ ಟೆಸ್ಟ್ ಗೆ ಒಳಪಟ್ಟಿದ್ದಾರೆ.

ರಾಜ್ಯವಾರು ನೋಡುವಾದದರೆ, ಮಹಾರಾಷ್ಟ್ರ ರಾಜ್ಯ ಮಹಾಮಾರಿಗೆ ಹೆಚ್ಚು ಪೆಟ್ಟು ತಿನ್ನುತ್ತಿದೆ. ಉಳಿದಂತೆ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಹಾಗೂ ಉತ್ತರ ಪ್ರದೇಶ ರಾಜ್ಯಗಳಿವೆ. ಮಹಾರಾಷ್ಟ್ರ (14,65,911), ಆಂಧ್ರ ಪ್ರದೇಶ (7,29,307), ಕರ್ನಾಟಕ (6,57,705), ತಮಿಳುನಾಡು(6,30,408) ಮತ್ತು ಉತ್ತರ ಪ್ರದೇಶ (4,20,937) ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಹಾರಾಷ್ಟ್ರ ರಾಜ್ಯವೊಂದರಲ್ಲಿಯೇ ಮಹಾಮಾರಿಗೆ 38,717 ಜನರು ಬಲಿಯಾಗಿದ್ದಾರೆ.

TRENDING