Tuesday, October 27, 2020
Home ಕ್ರೈಂ ನ್ಯೂಸ್ ಸೈಬರ್ ದೌರ್ಜನ್ಯಕ್ಕೆ 35%ರಷ್ಟು ಮಹಿಳೆಯರೇ ಟಾರ್ಗೆಟ್ : ಇದು ಹೇಗೆ? ಆತಂಕದ ಅಂಕಿ-ಅಂಶ ನೀಡಿದೆ ವಿಶ್ವಸಂಸ್ಥೆ

ಇದೀಗ ಬಂದ ಸುದ್ದಿ

6,500 ಕೋಟಿ ಚಕ್ರಬಡ್ಡಿ ಮನ್ನಾ ಘೋಷಿಸಿದ ಕೇಂದ್ರ...

ಆದಾಯದ ಕೊರತೆ ಎದುರಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಚಿಕ್ಕ ರಿಲೀಫ್ ನೀಡಿದ್ದು ದೀಪಾವಳಿ ಕೊಡುಗೆ ಎಂಬಂತೆ ಚಕ್ರಬಡ್ಡಿ ಮನ್ನಾ ಆದೇಶ ಹೊರಡಿಸಿದೆ. ಒಟ್ಟು 6,500 ಕೋಟಿ ರೂಪಾಯಿ ಮೌಲ್ಯದ ಚಕ್ರಬಡ್ಡಿ...

SBI ಬ್ಯಾಂಕ್‌ ಗ್ರಾಹಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

 ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಎಟಿಎಂಗಳಿಂದ ನಗದು ಹಿಂಪಡೆಯುವದಕ್ಕೆ ಸಂಬಂಧಿಸಿದ ತನ್ನ ನಿಯಮವನ್ನು ಈಗಾಗಲೇ ಬದಲಿಸಿದೆ. ಸೆಪ್ಟೆಂಬರ್ 18 ರಿಂದ ಜಾರಿಗೆ ಬಂದ ಎಸ್...

ಎಸ್.ಬಂಗಾರಪ್ಪ ಸ್ಮಾರಕ ನಿರ್ಮಾಣಕ್ಕೆ ಒಂದು ಕೋಟಿ ರೂ,...

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಸ್ಮಾರಕ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್’ಗೂ ಕೊರೋನಾ...

ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ಸೋಮವಾರ ತಿಳಿದುಬಂದಿದೆ. ಈ ಕುರಿತು ಮಹಾರಾಷ್ಟ್ರ ರಾಜ್ಯ ಉಪ...

ಯಾದಗಿರಿ : ಪ್ರವಾಹದಿಂದ ಸಂಕಷ್ಟಕ್ಕೀಡಾದ ಸಾವಿರ...

ಯಾದಗಿರಿ : ಪ್ರಚಾರದ ಹಂಗಿಲ್ಲದೆ ಕಾಯಕ ಯೋಗಿಗಳಂತೆ , ಎಲೆಮರೆ ಕಾಯಿಯಂತೆ ನಿಸ್ವಾರ್ಥ ಸಮಾಜ ಸೇವೆ ಮಾಡುತ್ತಿರುವವರು ಬೆಂಗಳೂರಿನ  ಪ್ರೊಫೆಸರ್. ಎಂ.ಆರ್ .ದೊರೆಸ್ವಾಮಿಯವರು. ಬೆಂಗಳೂರಿನ ಪಿಇಎಸ್...

ಸೈಬರ್ ದೌರ್ಜನ್ಯಕ್ಕೆ 35%ರಷ್ಟು ಮಹಿಳೆಯರೇ ಟಾರ್ಗೆಟ್ : ಇದು ಹೇಗೆ? ಆತಂಕದ ಅಂಕಿ-ಅಂಶ ನೀಡಿದೆ ವಿಶ್ವಸಂಸ್ಥೆ

 ನವದೆಹಲಿ: ತಂತ್ರಜ್ಞಾನ ಮುಂದುವರೆದಂತೆಲ್ಲಾ ಹೆಚ್ಚು ಹೆಚ್ಚು ದೌರ್ಜನ್ಯ, ಮೋಸ ಪ್ರಕರಣಗಳು ಬೆಳೆಯುತ್ತಲೇ ಸಾಗಿದೆ. ಅದರಲ್ಲಿಯೂ ಸಾಮಾಜಿಕ ಜಾಲತಾಣ ಇಡೀ ಜಗತ್ತನ್ನು ಎಷ್ಟು ಹತ್ತಿರ ಮಾಡುತ್ತಿದೆಯೋ, ಅಷ್ಟೇ ಅಪಾಯಕಾರಿಯಾಗಿಯೂ ಗುರುತಿಸ್ಪಡುತ್ತಿದೆ, ಸೈಬರ್​ ಕ್ರೈಂಗಳ ಸಂಖ್ಯೆಯೂ ಹೆಚ್ಚುತ್ತಲೇ ಸಾಗಿದೆ.

ಅಂಥದ್ದೇ ಒಂದು ಆತಂಕದ ವಿಷಯವನ್ನು ವಿಶ್ವಸಂಸ್ಥೆ ಹಾಗೂ ಡಿಎನ್​ಎ ಆಯನಲಿಸೀಸ್ ನಡೆಸಿರುವ ಸಮೀಕ್ಷೆಯಿಂದ ಹೊರಬಂದಿದೆ. ಇದಕ್ಕಾಗಿಯೇ ವಿವಿಧ ಹೆಸರುಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಚಾಲೆಂಜ್​ಗಳು, ಫೋಟೋ ಸ್ಪರ್ಧೆಗಳು ಇತ್ಯಾದಿಗಳಿಗೆ ಮಹಿಳೆಯರು ತನ್ನ ಫೋಟೋಗಳನ್ನು ಅಪ್​ಲೋಡ್​ ಮಾಡುವಾಗ 100 ಬಾರಿ ಯೋಚಿಸಿ ಎಂದು ಪದೇ ಪದೇ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ.

ತಮ್ಮ ತೀರಾ ವೈಯಕ್ತಿಯ ವಿವರಗಳನ್ನು ಫೀಲಿಂಗ್​ ಬ್ಯಾಡ್​, ಫೀಲಿಂಗ್​ ಲೋನ್ಲಿ… ಇತ್ಯಾದಿ ಮೂಲಕ ಸಾರ್ವಜನಿಕವಾಗಿ ವ್ಯಕ್ತಪಡಿಸುವುದನ್ನೂ ನಿಲ್ಲಿಸಬೇಕಿದೆ ಎಂದು ಎಚ್ಚರಿಕೆಯನ್ನೂ ಕೊಡಲಾಗಿದೆ. ಇಂಥ ಮಹಿಳೆಯರ ಮೇಲೆ ಕಣ್ಣಿಡುವ ಕೆಲವರು ಅವರ ಭಾವನೆಗಳನ್ನು ತಿಳಿದುಕೊಂಡು ದೌರ್ಜನ್ಯ ಎಸಗುತ್ತಿರುವ ಬಗ್ಗೆ ಇದಾಗಲೇ ಹಲವಾರು ಮಂದಿ ಎಚ್ಚರಿಕೆ ನೀಡಿದ್ದಾರೆ.

ವಿಶ್ವ ಸಂಸ್ಥೆಯು, ಭಾರತ ಸೇರಿದಂತೆ ವಿಶ್ವದ 22 ರಾಷ್ಟ್ರಗಳಲ್ಲಿ ಈ ಸಮೀಕ್ಷೆ ನಡೆಸಿತ್ತು. ಇದಕ್ಕಾಗಿ ಪ್ರತಿ ರಾಷ್ಟ್ರದಿಂದ 15 ರಿಂದ 25 ವರ್ಷದೊಳಗಿನ 14 ಸಾವಿರಕ್ಕಿಂತ ಹೆಚ್ಚು ಮಹಿಳೆಯರನ್ನೂ ಆಯ್ಕೆ ಮಾಡಲಾಗಿತ್ತು.

ಇದು ನೀಡಿರುವ ವರದಿಯ ಪ್ರಕಾರ ಜಾಗತಿಕವಾಗಿ ಶೇ. 35ರಷ್ಟು ಮಹಿಳೆಯರು ವಿವಿಧ ತೆರೆನಾದ ಸೈಬರ್ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇವರ ಪೈಕಿ ಶೇ.60ರಷ್ಟು ಮಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕವೇ ಹಿಂಸೆ ನೀಡಲಾಗುತ್ತಿದೆ. ಈ ಕಾರಣದಿಂದ ಸುಮಾರು ಶೆ. 20ರಷ್ಟು ಮಹಿಳೆಯರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿಷ್ಕ್ರೀಯಗೊಳಿಸಿದ್ದಾರೆಂದು ತಿಳಿಸಿದೆ.

ಭಾರತದಲ್ಲಿ ದೆಹಲಿ ಮತ್ತು ಇತರ ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಇದರಿಂದ ಇಂಟರ್ ನೆಟ್ ಮೂಲಕ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಶೇ.36ರಷ್ಟು ಹೆಚ್ಚಾಗುತ್ತಿದೆಯೆಂದು ತಿಳಿದುಬಂದಿದೆ. ಆದರೆ ವಿಷಾದದ ಸಂಗತಿ ಎಂದರೆ ಶೇ. 25ರಷ್ಟು ಮಂದಿ ಮಾತ್ರ ಶಿಕ್ಷೆಗೊಳಗಾಗುತ್ತಿದ್ದಾರೆ.

ಡಿಎನ್​ಎ ಆಯನಲಿಸೀಸ್ ನಡೆಸಿರುವ ಸಂಶೋಧನೆಯ ಪ್ರಕಾರ ಕೂಡ ಜಗತ್ತಿನ ಶೇ. 35ರಷ್ಟು ಮಹಿಳೆಯರು ವಿವಿಧ ಮಾದರಿಯ ಸೈಬರ್ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರಂತೆ. ಅದರಲ್ಲಿಯೂ 25 ವರ್ಷದೊಳಗಿನ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಮೋಸ, ವಂಚನೆ, ದೌರ್ಜನ್ಯಕ್ಕೆ ಒಳಗಾಗುತ್ತಿರುವ ಅಂಶವನ್ನು ಈ ವರದಿ ಬಿಚ್ಚಿಟ್ಟಿದೆ.

ಇದು ನಡೆಸಿರುವ ಸಮೀಕ್ಷೆಯ ಪ್ರಕಾರ ಜಗತ್ತಿನಾದ್ಯಂತ 400 ದಶಲಕ್ಷಕ್ಕಿಂತಲೂ ಹೆಚ್ಚಿನ ಮಹಿಳೆಯರು ಸೈಬರ್ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.

ಹಿಂಸೆ ಹೇಗೆ?
ಈ ಎಲ್ಲಾ ವರದಿಗಳು ಹೇಳಿರುವ ಪ್ರಕಾರ ಶೇ. 39ರಷ್ಟು ಮಹಿಳೆಯರಿಗೆ ಫೇಸ್​ಬುಕ್ ಮೂಲಕ ಬೇಡದ ಸಂದೇಶಗಳು, ಕರೆಗಳು ಬರುತ್ತಿವೆ, ಶೇ.29ರಷ್ಟು ಮಂದಿಗೆ ಇನ್​ಸ್ಟಾಗ್ರಾಂ ಮೂಲಕ ಅನವಶ್ಯಕ ಹಿಂಸೆ ನೀಡಲಾಗುತ್ತಿದ್ದರೆ, ಮೆಸೇಜಿಂಗ್ ಆಯಪ್, ವಾಟ್ಸ್​ಆಯಪ್​ ಮೂಲಕ ಶೇ. 14ರಷ್ಟು ಮಹಿಳೆಯರು ಸೈಬಲ್​ ಹಿಂಸೆಗೆ ಒಳಗಾಗುತ್ತಿದೆ. ಇನ್ನೂ ಶೇ. 10 ಸ್ನ್ಯಾಪ್ ಚಾಟ್, ಶೇ. 9 ಟ್ವಿಟ್ಟರ್, ಶೇ. 6 ಟಿಕ್​ಟಾಕ್ ನಲ್ಲಿ ಮಹಿಳೆಯರು ಹಿಂಸೆಗೊಳಗಾಗುತ್ತಿದ್ದಾರೆ.

TRENDING