Tuesday, October 20, 2020
Home ಅಂತರ್ ರಾಷ್ಟ್ರೀಯ ಕೋವಿಡ್‌ ಚಿಕಿತ್ಸೆ ನಡುವೆಯೂ ಅಭಿಮಾನಿಗಳ ಭೇಟಿಗೆ ಆಸ್ಪತ್ರೆಯಿಂದ ಹೊರ ಬಂದ ‘ಟ್ರಂಪ್’

ಇದೀಗ ಬಂದ ಸುದ್ದಿ

ಎಂಟು ಬಿಜೆಪಿ ಸದಸ್ಯರ ಬೆಂಬಲ ಜಿ.ಪಂ.ಅಧ್ಯಕ್ಷ ಪಟ್ಟಕ್ಕೆ...

ನಿರೀಕ್ಷೆಯಂತೆ ಕಾಂಗ್ರೆಸ್ ರಾಜಶೇಖರ ಹಿಟ್ನಾಳ ಅವುರು ಬಿಜೆಪಿ ಸದಸ್ಯರ ಬೆಂಬಲದೊಂದಿಗೆ  ಕೊಪ್ಪಳ ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷರಾಗಿ ಚುನಾಯಿತಗೊಳ್ಳುವ ಮೂಲಕ ರಾಜಕೀಯವಾಗಿ ಬಿಜೆಪಿಗೆ ಭಾರಿ ಹೊಡೆತವನ್ನು ಕೊಟ್ಟಿದ್ದಾರೆ.

ಎಸ್.ಟಿ ಮೀಸಲಾತಿ ಶೇ.7.5 ಹೆಚ್ಚಿಸಲು ಬಿಜೆಪಿ...

ಶಿರಾ : ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಡಳಿತದಲ್ಲಿದ್ದರೂ ಎಸ್.ಟಿ. ಮೀಸಲಾತಿಯನ್ನು ಶೇ 7.5 ಕ್ಕೆ ಹೆಚ್ಚಿಸಲು ವಿಫಲವಾಗಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.

ಪತ್ರಕರ್ತರೇನು ಕೊರೊನಾ ಯೋಧರಲ್ವಾ..? ಅವರದೇನು ಬದುಕುಗಳಲ್ವಾ..? ಅವರ...

ಬೆಂಗಳೂರು:ಕೊರೊನಾತಂಕ ಹಾಗೂ ಅದರ ಸಾವುಗಳ ಬಗ್ಗೆ ನಿರಂತರ ಸುದ್ದಿ ಮಾಡೋ ಸುದ್ದಿಮಿತ್ರರಿಗೆ ಸಂಬಂಧಿಸಿದ ಸುದ್ದಿ ಇದು.ಅವರ ಆರೋಗ್ಯದ ಬಗ್ಗೆ ಸೃಷ್ಟಿಯಾಗಿರುವ ನೂರಾರು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿರುವ ಸನ್ನಿವೇಶವಿದು.ಕೊರೊನಾ ಸುದ್ದಿಗಾಗಿ ಅವರ...

ಮುರಳೀಧರನ್ ಬಯೋಪಿಕ್’ಗೆ ಗುಡ್ ಬೈ ಹೇಳಿದ ‘ವಿಜಯ್...

ತಮಿಳುನಾಡು : ಬಿಗ್ ನ್ಯೂಸ್ ಎನ್ನುವಂತೆ ವಿಜಯ್ ಸೇತುಪತಿ ಅವರು ಮುತ್ತಯ್ಯ ಮುರಳೀಧರನ್ ಬಯೋಪಿಕ್ 800 ನಿಂದ ಹಿಂದೆ ಸರಿಯುತ್ತಿರುವುದಾಗಿ ಖಚಿತಪಡಿಸಿದ್ದು, ಇದೀಗ ಹಲವು ದಿನಗಳಿಂದ ವಿವಾದದಲ್ಲಿರುವ ಮುರಳಿಧರನ್ ಬಯೋಪಿಕ್...

ಕಲಬುರಗಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗಿದೆ. ಕಳೆದ ಎರಡು ದಿನಗಳಿಂದ ಬಿಡುವು ನೀಡಿದ ಮಳೆ ಮತ್ತೆ ಇಂದಿನಿಂದ ಸುರಿಯಲಾರಂಭಿಸಿದೆ. ಕಲಬುರಗಿ ಜಿಲ್ಲೆಯ ಜನತೆ ಭೀಮಾ...

ಕೋವಿಡ್‌ ಚಿಕಿತ್ಸೆ ನಡುವೆಯೂ ಅಭಿಮಾನಿಗಳ ಭೇಟಿಗೆ ಆಸ್ಪತ್ರೆಯಿಂದ ಹೊರ ಬಂದ ‘ಟ್ರಂಪ್’

 ವಾಷಿಂಗ್ಟನ್, ಅ.05 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಕೋವಿಡ್ ಸೋಂಕು ದೃಢಪಟ್ಟ ಕಾರಣ 74 ವರ್ಷದ ಡೊನಾಲ್ಡ್‌ ಟ್ರಂಪ್ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಾಲ್ಟರ್ ರೀಡ್ ರಾಷ್ಟ್ರೀಯ ಸೇನಾ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟ್ರಂಪ್ ಅಭಿಮಾನಿಗಳಿಗೆ ಅಚ್ಚರಿ ನೀಡುವುದಾಗಿ ಟ್ವೀಟರ್‌ನಲ್ಲಿ ವಿಡಿಯೋ ಹಾಕಿದ್ದರು. ಆಸ್ಪತ್ರೆ ಬಳಿ ಜಮಾವಣೆಗೊಂಡಿದ್ದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದರು.

ಡೊನಾಲ್ಡ್ ಟ್ರಂಪ್ ಆಸ್ಪತ್ರೆಯಿಂದ ಹೊರಗೆ ಬಂದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು. ಕಾರಿನಲ್ಲಿ ಆಸ್ಪತ್ರೆ ಮುಂಭಾಗ ಸೇರಿದ್ದ ಜನರತ್ತ ಕೈ ಬೀಸಿ, ಚಪ್ಪಾಳೆ ತಟ್ಟುತ್ತಾ ಅವರು ಮುಂದೆ ಸಾಗಿದರು. ಈ ಮೂಲಕ ವಿಡಿಯೋದಲ್ಲಿ ಹೇಳಿದಂತೆಯೇ ನಡೆದುಕೊಂಡರು.

ಕೋವಿಡ್ ಸೋಂಕು ದೃಢಪಟ್ಟ ಕಾರಣ ಡೊನಾಲ್ಡ್ ಟ್ರಂಪ್‌ರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಾನು ಆರೋಗ್ಯವಾಗಿದ್ದೇನೆ, ಆತಂಕ ಬೇಡ ಎಂದು ಅವರು ಟ್ವೀಟ್ ಮಾಡಿದ್ದರು. ಕೋವಿಡ್ ಸೋಂಕು ತಗುಲಿದ ಕಾರಣ ಟ್ರಂಪ್ ಚುನಾವಣಾ ಪ್ರಚಾರಗಳನ್ನು ರದ್ದು ಮಾಡಲಾಗಿತ್ತು.

ಕೋವಿಡ್ ಸೋಂಕು ತಗುಲಿದ್ದ ಡೊನಾಲ್ಡ್ ಟ್ರಂಪ್‌ಗೆ ಸ್ವಲ್ಪ ಆಯಾಸ, ಸೋಂಕಿನ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದ್ದವು. ಅವರಿಗೆ ವೈರಾಣಿ ನಿಗ್ರಹ ಔಷಧಿಯನ್ನು ನೀಡಲಾಗುತ್ತಿದೆ ಎಂದು ಪ್ರಕಟಿಸಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಸೋಮವಾರ ಅವರು ಡಿಸ್ಚಾರ್ಜ್ ಆಗಲಿದ್ದಾರೆ.

TRENDING