Monday, October 19, 2020
Home ಜಿಲ್ಲೆ ಗುಂಡಿಟ್ಟು ಬಿಜೆಪಿ ನಾಯಕನ ಹತ್ಯೆ : ಟಿಎಂಸಿ ವಿರುದ್ಧ ವ್ಯಾಪಕ ಆಕ್ರೋಶ

ಇದೀಗ ಬಂದ ಸುದ್ದಿ

ಎಂಟು ಬಿಜೆಪಿ ಸದಸ್ಯರ ಬೆಂಬಲ ಜಿ.ಪಂ.ಅಧ್ಯಕ್ಷ ಪಟ್ಟಕ್ಕೆ...

ನಿರೀಕ್ಷೆಯಂತೆ ಕಾಂಗ್ರೆಸ್ ರಾಜಶೇಖರ ಹಿಟ್ನಾಳ ಅವುರು ಬಿಜೆಪಿ ಸದಸ್ಯರ ಬೆಂಬಲದೊಂದಿಗೆ  ಕೊಪ್ಪಳ ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷರಾಗಿ ಚುನಾಯಿತಗೊಳ್ಳುವ ಮೂಲಕ ರಾಜಕೀಯವಾಗಿ ಬಿಜೆಪಿಗೆ ಭಾರಿ ಹೊಡೆತವನ್ನು ಕೊಟ್ಟಿದ್ದಾರೆ.

ಎಸ್.ಟಿ ಮೀಸಲಾತಿ ಶೇ.7.5 ಹೆಚ್ಚಿಸಲು ಬಿಜೆಪಿ...

ಶಿರಾ : ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಡಳಿತದಲ್ಲಿದ್ದರೂ ಎಸ್.ಟಿ. ಮೀಸಲಾತಿಯನ್ನು ಶೇ 7.5 ಕ್ಕೆ ಹೆಚ್ಚಿಸಲು ವಿಫಲವಾಗಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.

ಪತ್ರಕರ್ತರೇನು ಕೊರೊನಾ ಯೋಧರಲ್ವಾ..? ಅವರದೇನು ಬದುಕುಗಳಲ್ವಾ..? ಅವರ...

ಬೆಂಗಳೂರು:ಕೊರೊನಾತಂಕ ಹಾಗೂ ಅದರ ಸಾವುಗಳ ಬಗ್ಗೆ ನಿರಂತರ ಸುದ್ದಿ ಮಾಡೋ ಸುದ್ದಿಮಿತ್ರರಿಗೆ ಸಂಬಂಧಿಸಿದ ಸುದ್ದಿ ಇದು.ಅವರ ಆರೋಗ್ಯದ ಬಗ್ಗೆ ಸೃಷ್ಟಿಯಾಗಿರುವ ನೂರಾರು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿರುವ ಸನ್ನಿವೇಶವಿದು.ಕೊರೊನಾ ಸುದ್ದಿಗಾಗಿ ಅವರ...

ಮುರಳೀಧರನ್ ಬಯೋಪಿಕ್’ಗೆ ಗುಡ್ ಬೈ ಹೇಳಿದ ‘ವಿಜಯ್...

ತಮಿಳುನಾಡು : ಬಿಗ್ ನ್ಯೂಸ್ ಎನ್ನುವಂತೆ ವಿಜಯ್ ಸೇತುಪತಿ ಅವರು ಮುತ್ತಯ್ಯ ಮುರಳೀಧರನ್ ಬಯೋಪಿಕ್ 800 ನಿಂದ ಹಿಂದೆ ಸರಿಯುತ್ತಿರುವುದಾಗಿ ಖಚಿತಪಡಿಸಿದ್ದು, ಇದೀಗ ಹಲವು ದಿನಗಳಿಂದ ವಿವಾದದಲ್ಲಿರುವ ಮುರಳಿಧರನ್ ಬಯೋಪಿಕ್...

ಕಲಬುರಗಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ

ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗಿದೆ. ಕಳೆದ ಎರಡು ದಿನಗಳಿಂದ ಬಿಡುವು ನೀಡಿದ ಮಳೆ ಮತ್ತೆ ಇಂದಿನಿಂದ ಸುರಿಯಲಾರಂಭಿಸಿದೆ. ಕಲಬುರಗಿ ಜಿಲ್ಲೆಯ ಜನತೆ ಭೀಮಾ...

ಗುಂಡಿಟ್ಟು ಬಿಜೆಪಿ ನಾಯಕನ ಹತ್ಯೆ : ಟಿಎಂಸಿ ವಿರುದ್ಧ ವ್ಯಾಪಕ ಆಕ್ರೋಶ

ಪಶ್ಚಿಮ ಬಂಗಾಳದ ನಾರ್ತ್ 24 ಪರಗಣ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಬಿಜೆಪಿ ನಾಯಕರೊಬ್ಬರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಈ ಕೃತ್ಯದಿಂದಾಗಿ ಬಿಜೆಪಿ ಮತ್ತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಡುವೆ ಮತ್ತೆ ಸಂಘರ್ಷಕ್ಕೆ ಕಾರಣವಾಗಿದ್ದು, ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದೆ.

ತೀತಾಗಢದ ಬಳಿ ಬಿ.ಟಿ ರಸ್ತೆಯಲ್ಲಿ ಬೈಕ್‍ನಲ್ಲಿ ಬಂದ ಇಬ್ಬರು ಬಿಜೆಪಿ ನಾಯಕ ಮತ್ತು ಸ್ಥಳೀಯ ಕೌನ್ಸಿಲರ್ ಮನಿಷ್ ಸುಕಿಯಾ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾದರು. ತೀವ್ರ ರಕ್ತಸ್ರಾವದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರು ಆಸ್ಪತ್ರೆಗೆ ಕೊಂಡ್ಯೊಯುವ ಮಾರ್ಗದಲ್ಲಿ ಕೊನೆಯುಸಿರೆಳೆದರು.

ಈ ಕೃತ್ಯದಿಂದ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಇದರ ಹಿಂದೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕೈವಾಡ ಇದೆ ಎಂದು ಪಕ್ಷದ ಮುಖಂಡರು ಆರೋಪಿಸಿದ್ದಾರೆ. ಈ ಆರೋಪಗಳನ್ನು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ತಳ್ಳಿ ಹಾಕಿದೆ.

ಬಿಜೆಪಿ ವಿರೋಗಳು (ಟಿಎಂಸಿ) ಈ ಕೃತ್ಯ ಎಸಗಿದ್ದಾರೆ. ಪೊಲೀಸ್ ಠಾಣೆಯ ಮುಂದೆಯೇ ಈ ಹತ್ಯೆ ನಡೆದಿದೆ. ನಮಗೆ ಪೊಲೀಸ್ ತನಿಖೆ ಮೇಲೆ ವಿಶ್ವಾಸವಿಲ್ಲ. ಈ ಘಟನೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಆಗ್ರಹಿಸಿದ್ದಾರೆ.

ಈ ಕೃತ್ಯವನ್ನು ಖಂಡಿಸಿ ಬಿಜೆಪಿ ಇಂದು 12 ಗಂಟೆಗಳ ರಾಜ್ಯ ಬಂದ್‍ಗೆ ಕರೆ ನೀಡಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಬಿಜೆಪಿ ಕೌನ್ಸಿಲರ್ ಹತ್ಯೆಗೆ ತೃಣಮೂಲ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಸಂಸದ ಅರ್ಜುನ್ ಸಿಂಗ್ ಆರೋಪಿಸಿದ್ದಾರೆ. ಆದರೆ ಈ ಎಲ್ಲ ಆರೋಪಿಗಳನ್ನು ಹಿರಿಯ ಟಿಎಂಸಿ ನಾಯಕ ನಿರ್ಮಲ್ ಘೋಷ್ ತಳ್ಳಿ ಹಾಕಿದ್ದಾರೆ. ಈ ಕೃತ್ಯಕ್ಕೆ ವೈಯಕ್ತಿಕ ವೈಷಮ್ಯ ಕಾರಣ ಹೊರತು ಇದು ರಾಜಕೀಯ ಕಾರಣದ ಹತ್ಯೆ ಅಲ್ಲ ಎಂದು ಹೇಳಿದ್ದಾರೆ.

ದಿ ನ್ಯೂಸ್24 ಕನ್ನಡ

TRENDING