Saturday, October 24, 2020
Home ಬೆಂಗಳೂರು ಸ್ಯಾಂಡಲ್ ವುಡ್​​​ ಡ್ರಗ್ಸ್ ಕೇಸ್: ಇಂದು ನಶೆ ರಾಣಿಯರ ಜಾಮೀನು ಅರ್ಜಿ ವಿಚಾರಣೆ

ಇದೀಗ ಬಂದ ಸುದ್ದಿ

ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ಗೂ ಕೊರೊನಾ

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್​ಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಬಗ್ಗೆ ಟ್ವೀಟ್​ ಮಾಡಿ ಸ್ಪಷ್ಟಪಡಿಸಿರುವ ಅವರು, "ನಾನು ಲಾಕ್​ಡೌನ್​...

ಹೂ, ಹಣ್ಣುಗಳ ಬೆಲೆ ಏರಿಕೆ

ರಾಯಚೂರು: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ತೋಟಗಾರಿಕೆ ಬೆಳೆಗಳಿಗೂ ಹಾನಿ ಸಂಭವಿಸಿದೆ. ದಸರಾ ಹಬ್ಬದ ಮುಂಚಿನ ದಿನವಾದ ಇಂದು ಸರಸ್ವತಿ ಪೂಜೆ ಹಿನ್ನೆಲೆ ಮಾರುಕಟ್ಟೆಗೆ ವಿವಿಧ ಬಗ್ಗೆಯ ಹೂವು, ಹಣ್ಣುಗಳು ಬಂದಿದೆ....

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಿ.ವೈ.ವಿಜಯೇಂದ್ರ

ತುಮಕೂರು: ಇಲ್ಲಿನ ಸಿದ್ಧಗಂಗಾ ಮಠಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಅವರ ದರ್ಶನ ಪಡೆದರು. ನಂತರ ಸಿದ್ಧಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ರಾಜ್ಯದಲ್ಲಿ ಇನ್ನೆರಡು ದಿನ‌ ವ್ಯಾಪಕ ಮಳೆ

ಬೆಂಗಳೂರು: ರಾಜ್ಯದಲ್ಲಿ ಇನ್ನೆರಡು ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಮತ್ತು ನಾಳೆ ಹಾಗೂ ನಾಡಿದ್ದು ಹೆಚ್ಚು ಮಳೆಯಾಗಲಿದ್ದು, 27ರ ನಂತರ ಮಳೆರಾಯನ...

ಕಾಲೇಜು ಪುನಾರಂಭದ ಬಗ್ಗೆ ವಿದ್ಯಾರ್ಥಿಗಳ ಆತಂಕ

ಬೆಂಗಳೂರು : ನವೆಂಬರ್ 17 ರಿಂದ ಮೊದಲ ಹಂತವಾಗಿ ಉನ್ನತ ಶಿಕ್ಷಣ ಸಂಸ್ಥೆಗಳ ತರಗತಿಗಳನ್ನು ಪುನಾರಂಭಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಕಳೆದ ಏಳೆಂಟು ತಿಂಗಳಿನಿಂದ ಮುಚ್ಚಿದ್ದ ಎಲ್ಲ ಪದವಿ, ಇಂಜಿನಿಯರಿಂಗ್ ಹಾಗೂ...

ಸ್ಯಾಂಡಲ್ ವುಡ್​​​ ಡ್ರಗ್ಸ್ ಕೇಸ್: ಇಂದು ನಶೆ ರಾಣಿಯರ ಜಾಮೀನು ಅರ್ಜಿ ವಿಚಾರಣೆ

ಸ್ಯಾಂಡಲ್​​ವುಡ್​​​ ಡ್ರಗ್ಸ್ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಪ್ರಕರಣದ ಕುರಿತು ವಾದಪ್ರತಿವಾದ ಆಲಿಸಲಿರುವ ಎನ್ಡಿಪಿಎಸ್ ನ್ಯಾಯಾಲಯವೂಇಬ್ಬರ ಜಾಮೀನು ಅರ್ಜಿ ಕುರಿತಾಗಿ ಆದೇಶ ಪ್ರಕಟಿಸಲಿದೆ. ಹೀಗಾಗಿ ಇಂದಾದರೂ ಇಬ್ಬರು ನಟಿಯರಿಗೆ ಜಾಮೀನು ಸಿಗಲಿದೆಯಾ ಅಥವಾ ಜೈಲುವಾಸವೇ ಮುಂದುವರೆಯಲಿದೆಯಾ ಎಂಬುದು ನಿರ್ಧಾರವಾಗಲಿದೆ. ಇನ್ನೊಂದೆಡೆ ಜಾರಿ ನಿರ್ದೇಶನಾಲಯವೂ ಸಂಜನಾ ಮತ್ತು ರಾಗಿಣಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ. ಸಿಸಿಬಿ ಪೊಲೀಸರೊಂದಿಗೆ ಇಡಿ ಅಧಿಕಾರಿಗಳು ಕೂಡ ಇನ್ನೂ ಎರಡು ದಿನಗಳ ಕಾಲ ವಿಚಾರಣೆ ಮುಂದುವರಿಸಲಿದೆ. ಪರಪ್ಪನ ಅಗ್ರಹಾರದ ಜೈಲಿನಲ್ಲೇ ನಟಿಯರಿಬ್ಬರ ವಿಚಾರಣೆ ನಡೆಸುತ್ತಿದೆಇಂದು ಒಂದು ವೇಳೆ ಕೋರ್ಟ್ಜಾಮೀನು ನೀಡದಿದ್ದರೇ ಜೈಲೇ ಗತಿ ಎಂಬ ಆತಂಕದಲ್ಲಿ ಇಬ್ಬರು ನಟಿಯರಿದ್ದಾರೆ.

ಇನ್ನು, ರಾಗಿಣಿ ಮತ್ತು ಸಂಜನಾ ಜೊತೆಗೆ ರಾಹುಲ್ ಥಾನ್ಸೆ, ವಿರೇಂದ್ರ ಖನ್ನಾ, ರವಿಶಂಕರ್ ಕೂಡ ಜಾಮೀನು ಕೋರಿ ಕೋರ್ಟ್​ ಮೊರೆ ಹೋಗಿದ್ದಾರೆ. ಇಬ್ಬರು ನಟಿಯರೊಂದಿಗೆ ಈ ಮೇಲಿನವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ಅಂತಿಮ ತೀರ್ಪು ನೀಡಲಿದೆ. ನಶೆ ನಟಿಯರಿಗೆ ಯಾಕೋ ಸದ್ಯಕ್ಕೆ ನಸೀಬು ಕೈಗೂಡುವಂತೆ ಕಾಣುತ್ತಿಲ್ಲ. ದಿನ ಕಳೆದಂತೆಲ್ಲ ಜೈಲೂಟವೇ ಗತಿ ಎನ್ನುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ನಟಿಯರಾದ ರಾಗಿಣಿ ಮತ್ತು ಸಂಜನಾ ಹತಾಷೆಯಿಂದ ಕಂಗಲಾಗಿ ಹೋಗಿದ್ದಾರೆ ಎನ್ನುತ್ತಿವೆ ಜೈಲಿನ ಆಪ್ತ ಮೂಲಗಳು. ಸ್ಯಾಂಡಲ್​​ವುಡ್ ಡ್ರಗ್ಸ್ ಪ್ರಕರಣದ ವಾಸನೆ ಪ್ರಾರಂಭದಲ್ಲಿಯೇ ನಟಿಯರಾದ ರಾಗಿಣಿ ಮತ್ತು ಸಂಜನಾ ಮೂಗಿಗೆ ಬಡಿದಿತ್ತು. ಇದರ ಬಗ್ಗೆ ಸುಳಿವು ಪಡೆದಿದ್ದ ಸಿಸಿಬಿ ನಶೆ ನಂಟು ಅಧಾರದ ಮೇಲೆ ಇಬ್ಬರು ನಟಿಯರನ್ನು ಒಂದು ವಾರಗಳ ಕಾಲ ತೀವ್ರ ವಿಚಾರಣೆ ನಡೆಸಿತ್ತು. ಮಾತ್ರವಲ್ಲದೆ ಹಲವು ಪರೀಕ್ಷೆಗಳನ್ನು ನಡೆಸಿ ಸುಸ್ತು ಹೊಡೆಸಿದ್ದರು. ಅದಾಗಲೇ ಇಬ್ಬರು ನಟಿಯರಿಗೆ ಡ್ರಗ್ ನಶೆ ಇಳಿದು ಗಿರಕಿ ಹೊಡೆಯುವಂತಾಗಿತ್ತು. ಇನ್ನೇನು ಸಿಸಿಬಿ ವಿಚಾರಣೆ ಮುಗಿಯಿತು, ಸಿಸಿಬಿ ಕಸ್ಟಡಿ ಅಂತ್ಯವಾಗ್ತಿದಂತೆ ಜಾಮೀನು ದೊರೆಯುತ್ತದೆ ಎಂದುಕೊಂಡಿದ್ದ ನಟಿಮಣಿಯರಿಗೆ ಕೋರ್ಟ್ ಶಾಕ್ ನೀಡಿ ಪರಪ್ಪನ ಅಗ್ರಹಾರ ಜೈಲಿಗಟ್ಟಿತ್ತು. ಅದಾಗಲೇ ಸಿಸಿಬಿ ತೀವ್ರ ತರದ ವಿಚಾರಣೆಯಿಂದ ಬೆದರಿ ಬೆಂಡಾಗಿದ್ದ ನಟಿಮಣಿಯರು ಜೈಲೂಟ ಫಿಕ್ಸ್ ಆಗ್ತಿದಂತೆ ಮತ್ತಷ್ಟು ಕುಗ್ಗಿ ಹೋಗಿದ್ದರು.

ಆಗಿದ್ದಾಯ್ತು ಒಂದೆರಡು ದಿನ ಜೈಲು ವಾಸದ ಬಳಿಕ ಜಾಮೀನು ಸಿಗಬಹುದು. ಜೈಲಿನಿಂದ ಹೋರ ಹೋಗಿಬಿಡಬಹುದು ಎಂದುಕೊಂಡಿದ್ದ ರಾಗಿಣಿ ಮತ್ತು ಸಂಜನಾ ಇಲ್ಲಿಯವರೆಗೆ ಜೈಲು ವಾಸದಿಂದ ಮುಕ್ತಿ ಸಿಕ್ಕಿಲ್ಲ. ಸಿಗುವ ಸಾಧ್ಯತೆಗಳು ಸದ್ಯಕ್ಕಂತು ಗೋಚರವಾಗುತ್ತಿಲ್ಲ. ಬರೋಬ್ಬರಿ 13 ದಿನಗಳ ಜೈಲುವಾಸ ನಶೆ ನಟಿಯರ ಬದುಕನ್ನು ಹೈರಾಣಾಗಿಸಿದೆ. ಸಿನಿಮಾ ಹಂಗಾಮ, ಹೈ ಪ್ರೋಫೈಲ್ ಲೈಪ್, ಪಾರ್ಟಿ ಮೋಜು‌ ಮಸ್ತಿ ಅಂತಾ ಕಾಲ‌ ಕಳೆಯುತ್ತಿದ್ದ ನಟಿಮಣಿಯರು ಒಪ್ಪೊತ್ತಿನ ಕೂಳಿಗು ನಾಲ್ಕು ಗೋಡೆ ಮದ್ಯೆ ಕಾಯಬೇಕಿದೆ. ಕೊಳೆಯಬೇಕಿದೆ. ಜೊತೆಗೆ ಒಬ್ಬ ಸಾಮಾನ್ಯ ವಿಚಾರಣಾದೀನ ಆರೋಪಿಯಂತೆ ದಿನ ದೂಡಬೇಕಿದೆ. ಇದು ನಟಿಯರ ಮನಸ್ಸಿನ ಮೇಲೆ ಗಾಡವಾದ ಪ್ರಭಾವ ಬೀರಿದೆ.

ಒಂದು ಕಡೆ ಜಾಮೀನು ದೊರೆಯುತ್ತಿಲ್ಲ ಎಂಬ ಹತಾಶೆ ಮನೋಭಾವ. ಜೈಲುವಾಸ ಸಾಕು ಸಾಕು ಎನ್ನಿಸುವಷ್ಟು ಬೇಸರವಾಗಿದೆ. ಇದರ ನಡುವೆ ಇಡಿ ವಿಚಾರಣೆ ಇಬ್ಬರು ನಟಿಯರನ್ನು ಹೈರಾಣಾಗಿಸಿದೆ. ಸಿಸಿಬಿ ವಿಚಾರಣೆಯಿಂದಲೇ ಸಾಕಾಗಿ ಹೋಗಿದ್ದ ನಟಿಯರು ಜೈಲಿನಲ್ಲಾದರೂ ಯಾವುದೇ ವಿಚಾರಣೆ ಇಲ್ಲದೆ ನೆಮ್ಮದಿಯಿಂದಿರಬಹುದು ಎಂದುಕೊಂಡಿದ್ದ ಇವರಿಗೆ ಇಡಿ ಶಾಕ್ ನೀಡಿದೆ. ಕಳೆದ ಮೂರು ದಿನಗಳಿಂದ ಸತತ ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು ಐಷಾರಾಮಿ ಜೀವನ, ಆದಾಯ ಮೀರಿ ಆಸ್ತಿ ಗಳಿಕೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದ್ದರು.  

TRENDING