Saturday, October 24, 2020
Home ಜಿಲ್ಲೆ ಬೆಳಗಾವಿ ‘ಸುರೇಶ ಅಂಗಡಿ ನಿರ್ಲಕ್ಷ್ಯ ವಹಿಸದಿದ್ದರೆ ಬದುಕುತ್ತಿದ್ದರೇನೋ...': ಜಗದೀಶ ಶೆಟ್ಟರ್

ಇದೀಗ ಬಂದ ಸುದ್ದಿ

ಕಾಲೇಜು ಪುನಾರಂಭದ ಬಗ್ಗೆ ವಿದ್ಯಾರ್ಥಿಗಳ ಆತಂಕ

ಬೆಂಗಳೂರು : ನವೆಂಬರ್ 17 ರಿಂದ ಮೊದಲ ಹಂತವಾಗಿ ಉನ್ನತ ಶಿಕ್ಷಣ ಸಂಸ್ಥೆಗಳ ತರಗತಿಗಳನ್ನು ಪುನಾರಂಭಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಕಳೆದ ಏಳೆಂಟು ತಿಂಗಳಿನಿಂದ ಮುಚ್ಚಿದ್ದ ಎಲ್ಲ ಪದವಿ, ಇಂಜಿನಿಯರಿಂಗ್ ಹಾಗೂ...

ಹಂಪಿ ಡಿವೈಎಸ್​​ಪಿ ರಾಜೀನಾಮೆ ವಿಚಾರ

ಬಳ್ಳಾರಿ: ಹಂಪಿ ಡಿವೈಎಸ್​​ಪಿ ರಾಜೀನಾಮೆ ಪತ್ರ ಸಲ್ಲಿಕೆ ವಿಚಾರದಲ್ಲಿ ಶಿಷ್ಠಾಚಾರ ಪಾಲನೆಯಾಗಿಲ್ಲ. ಹೀಗಾಗಿ ವಾಪಸ್ ಕಳುಹಿಸಿರಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ10 ಕೋಟಿ ಗಡಿ ದಾಟಿದ ಕೊರೊನಾ ...

 ನವದೆಹಲಿ: ದೇಶದಲ್ಲಿ ಶನಿವಾರದ ವೇಳೆಗೆ 10 ಕೋಟಿಗೂ ಹೆಚ್ಚು ಕೊವಿಡ್ -19 ಪರೀಕ್ಷೆಗಳನ್ನು ನಡೆಸುವ ಮೂಲಕ ಹೊಸ ಎತ್ತರಕ್ಕೇರಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೇಂದ್ರೀಕೃತ...

ಕೇಂದ್ರದ ‘ಬಜೆಟ್’ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಕೇಂದ್ರ ಬಜೆಟ್‌ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ. ಹಾಲಿ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಇಂದಿರಾಗಾಂಧಿಯವರ ಬಳಿಕ ಬಜೆಟ್ ಮಂಡನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡ್ರಗ್ಸ್ ಪ್ರಕರಣ : ರಾಗಿಣಿ ಆಪ್ತ ಗಿರೀಶ್...

ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ಅವರಿಗೆ ಆಪ್ತ ಎನ್ನಲಾದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. 2 ಲಕ್ಷ ರೂಪಾಯಿ...

‘ಸುರೇಶ ಅಂಗಡಿ ನಿರ್ಲಕ್ಷ್ಯ ವಹಿಸದಿದ್ದರೆ ಬದುಕುತ್ತಿದ್ದರೇನೋ…’: ಜಗದೀಶ ಶೆಟ್ಟರ್

 ಬೆಳಗಾವಿ: ‘ಸುರೇಶ ಅಂಗಡಿ ಅವರು ಮಾಸ್ಕ್ ಹಾಕುವುದರಲ್ಲಿ ನಿರ್ಲಕ್ಷ್ಯ ವಹಿಸಿದರು. ಯಾವುದೇ ಚಟವಿಲ್ಲದ ನನಗೆ ಏನೂ ಆಗುವುದಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಅವರಲ್ಲಿತ್ತು. ನಿರ್ಲಕ್ಷ್ಯ ತಾಳದೇ ಇದ್ದಿದ್ದರೆ ಬದುಕುತ್ತಿದ್ದರೇನೋ…’

– ಹೀಗೆ ಹೇಳಿದ ಕೈಗಾರಿಕಾ ಸಚಿವ ಹಾಗೂ ಅಂಗಡಿ ಅವರ ಬೀಗರೂ ಆದ ಜಗದೀಶ ಶೆಟ್ಟರ್‌ ಒಂದು ಕ್ಷಣ ಭಾವುಕರಾದರು.

ಇಲ್ಲಿ ಸಂಘ ಪರಿವಾರದಿಂದ ಭಾನುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ‘ಕೊರೊನಾ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು; ಮಾಸ್ಕ್‌ ಧರಿಸಿ ಎಂದು ಹಲವು ಬಾರಿ ಹೇಳಿದ್ದೆ. ಆಸ್ಪತ್ರೆಯಲ್ಲೂ ಅವರು ಆರಾಮಿದ್ದೇನೆ ಎಂದೇ ವೈದ್ಯರಿಗೆ ಹೇಳಿದ್ದರು’ ಎಂದು ತಿಳಿಸಿದರು.

‘ಪಕ್ಷ ಸಂಘಟನೆಗೆ ಆದ್ಯತೆ ನೀಡಿದ್ದಾಗಲೂ ನನ್ನೊಂದಿಗೆ ಕೈಜೋಡಿಸಿದ್ದರು. ಇಲ್ಲಿ ಏನೂ ಇಲ್ಲದಿದ್ದ ಬಿಜೆಪಿ ಹೆಮ್ಮರವಾಗಿ ಬೆಳೆಯಲು ಅವರ ಕೊಡುಗೆಯೂ ಅಪಾರವಾಗಿದೆ’ ಎಂದು ನೆನದರು.

ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡುತ್ತಿದ್ದೆವು. ಏನೇ ಹೇಳಿದರೂ ಸಿಟ್ಟು ಮಾಡಿಕೊಳ್ಳಲಿಲ್ಲ. ಸದಾ ಹಸನ್ಮುಖಿ ಆಗಿದ್ದರು’ ಎಂದು ಸ್ಮರಿಸಿದರು.

‘ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದರೂ ಅವರು ಮಾಸ್ಕ್ ಹಾಕಿಕೊಳ್ಳುತ್ತಿರಲಿಲ್ಲ. ಈ ವಿಷಯದಲ್ಲಿ ಹಲವು ಬಾರಿ ಸಲಹೆ ನೀಡಿದ್ದೆ. ತಾವು ಓದಿದ್ದ ಶಾಲೆಗೆ ಹೋಗಿದ್ದರು. ಆಪ್ತರೆಲ್ಲರೊಂದಿಗೆ ಮಾತನಾಡಿದ್ದರು’ ಎಂದು ತಿಳಿಸಿದರು.

ಜನಪ್ರತಿನಿಧಿಗೆ ಮಾದರಿ:

ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ‘ಜನಪ್ರತಿನಿಧಿ ಹೇಗಿರಬೇಕು ಎನ್ನುವುದನ್ನು ಎಲ್ಲರಿಗೂ ತೋರಿಸಿಕೊಟ್ಟು ಹೋಗಿದ್ದಾರೆ. ಸಮಾಜದಿಂದ ಲೇಸೆನಿಸಿಕೊಂಡು, ಆದರ್ಶದ ಬದುಕು ಬದುಕಿದವರು. ಕಾಯಕದಿಂದ ಜೀವನ ರೂಪಿಸಿಕೊಂಡವರು’ ಎಂದು ನೆನೆದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ‘ಸಾಮಾನ್ಯ ಕುಟುಂಬದಿಂದ ಸಾಧಿಸಬಹುದು ಎನ್ನುವುದಕ್ಕೆ ಅಂಗಡಿ ಉದಾಹರಣೆಯಾಗಿದ್ದಾರೆ. ಕೆಲಸಗಳ ಮೂಲಕ ಈ ಭಾಗಕ್ಕೆ ಗೌರವ ತಂದುಕೊಟ್ಟರು. ಯಾವಾಗಲೂ ರಾಜಕಾರಣಕ್ಕೇ ಸಮಯ ಕೊಡಬೇಡಿ ಉದ್ಯೋಗವನ್ನೂ ಮಾಡಿ ಎಂದು ಸಲಹೆ ನೀಡುತ್ತಿದ್ದರು’ ಎಂದು ಸ್ಮರಿಸಿದರು.

ಶಾಸಕ ಅನಿಲ ಬೆನಕೆ, ‘ಅವರು ಇಲ್ಲೇ ಚಿಕಿತ್ಸೆ ಪಡೆದಿದ್ದರೆ ಇಂತಹ ಅನಾಹುತ ಆಗುತ್ತಿರಲಿಲ್ಲ’ ಎಂದರು.

ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ‘ವ್ಯಾಪಾರಿ ಆಗಿದ್ದರಿಂದ ಬಿಜೆಪಿಯ ವಿಚಾರಗಳನ್ನು ಅವರು ಚೆನ್ನಾಗಿ ಮಾರ್ಕೆಟಿಂಗ್ ಮಾಡಿದರು. ಸುಲಭವಾಗಿ ಸಿಗುತ್ತಿದ್ದ ಸಂಸದರಾಗಿದ್ದರು. ಬೇರೆ ಪಕ್ಷದವರಿಗೂ ಕೆಲಸ ಮಾಡಿಕೊಡುತ್ತಿದ್ದರು’ ಎಂದು ಒಡನಾಟ ಹಂಚಿಕೊಂಡರು.

ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿದರು. ಅಂಗಡಿ ಕುಟುಂಬದವರು, ಮುಖಂಡರು ಇದ್ದರು.

ಕೊನೆಯ 9 ದಿನಗಳು

ಅಳಿಯ ಡಾ.ರಾಹುಲ್ ಪಾಟೀಲ ಮಾತನಾಡಿ, ‘ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗದ ಯೋಜನೆಗೆ ಅನುಮೋದನೆ ಸಿಕ್ಕಿದ್ದಕ್ಕೆ ಬಹಳ ಸಂತಸ ಪಟ್ಟಿದ್ದರು. ಸೆ.8ರಂದು ಅವರಿಗೆ ಜ್ವರ ಬಂದಿದ್ದರೂ ಮಾತ್ರೆ ತೆಗೆದುಕೊಂಡು ಜನರ ಕೆಲಸಕ್ಕೆ ಒತ್ತು ನೀಡಿದರು. ಪುತ್ರಿಯರು ಹೇಳಿದರೂ ಪರೀಕ್ಷೆ ಮಾಡಿಸಿಕೊಳ್ಳಲಿಲ್ಲ. ಸೋಂಕಿನ ಅಪಾಯ ಬಹಳ ಕೈಮೀರಿ ಹೋಗಿತ್ತು. ಸದಾ ಜನರ ಮಧ್ಯದಲ್ಲಿರುತ್ತಿದ್ದ ಅವರು, ಕೊನೆಯ 9 ದಿನಗಳು ಯಾರೊಂದಿಗೂ ಸಂಪರ್ಕಕ್ಕೆ ಬಾರದಿದ್ದರಿಂದ ನೊಂದಿದ್ದರು. ಕಾಯಕವೇ ಕೈಲಾಸ ಎನ್ನುವುದಕ್ಕೆ ಅವರು ಉದಾಹರಣೆಯಾಗಿದ್ದಾರೆ’ ಎಂದು ಹೇಳಿದರು.

TRENDING