Saturday, October 24, 2020
Home ದೆಹಲಿ ಅಧಿವೇಶನ ಮುಗಿಯುತ್ತಿದ್ದಂತೆಯೇ ಭಾರತಕ್ಕೆ ಬಂದಿಳಿದ ಅಮ್ಮ-ಮಗ

ಇದೀಗ ಬಂದ ಸುದ್ದಿ

ಕಾಲೇಜು ಪುನಾರಂಭದ ಬಗ್ಗೆ ವಿದ್ಯಾರ್ಥಿಗಳ ಆತಂಕ

ಬೆಂಗಳೂರು : ನವೆಂಬರ್ 17 ರಿಂದ ಮೊದಲ ಹಂತವಾಗಿ ಉನ್ನತ ಶಿಕ್ಷಣ ಸಂಸ್ಥೆಗಳ ತರಗತಿಗಳನ್ನು ಪುನಾರಂಭಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಕಳೆದ ಏಳೆಂಟು ತಿಂಗಳಿನಿಂದ ಮುಚ್ಚಿದ್ದ ಎಲ್ಲ ಪದವಿ, ಇಂಜಿನಿಯರಿಂಗ್ ಹಾಗೂ...

ಹಂಪಿ ಡಿವೈಎಸ್​​ಪಿ ರಾಜೀನಾಮೆ ವಿಚಾರ

ಬಳ್ಳಾರಿ: ಹಂಪಿ ಡಿವೈಎಸ್​​ಪಿ ರಾಜೀನಾಮೆ ಪತ್ರ ಸಲ್ಲಿಕೆ ವಿಚಾರದಲ್ಲಿ ಶಿಷ್ಠಾಚಾರ ಪಾಲನೆಯಾಗಿಲ್ಲ. ಹೀಗಾಗಿ ವಾಪಸ್ ಕಳುಹಿಸಿರಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ10 ಕೋಟಿ ಗಡಿ ದಾಟಿದ ಕೊರೊನಾ ...

 ನವದೆಹಲಿ: ದೇಶದಲ್ಲಿ ಶನಿವಾರದ ವೇಳೆಗೆ 10 ಕೋಟಿಗೂ ಹೆಚ್ಚು ಕೊವಿಡ್ -19 ಪರೀಕ್ಷೆಗಳನ್ನು ನಡೆಸುವ ಮೂಲಕ ಹೊಸ ಎತ್ತರಕ್ಕೇರಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೇಂದ್ರೀಕೃತ...

ಕೇಂದ್ರದ ‘ಬಜೆಟ್’ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಕೇಂದ್ರ ಬಜೆಟ್‌ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ. ಹಾಲಿ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಇಂದಿರಾಗಾಂಧಿಯವರ ಬಳಿಕ ಬಜೆಟ್ ಮಂಡನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡ್ರಗ್ಸ್ ಪ್ರಕರಣ : ರಾಗಿಣಿ ಆಪ್ತ ಗಿರೀಶ್...

ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ಅವರಿಗೆ ಆಪ್ತ ಎನ್ನಲಾದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. 2 ಲಕ್ಷ ರೂಪಾಯಿ...

ಅಧಿವೇಶನ ಮುಗಿಯುತ್ತಿದ್ದಂತೆಯೇ ಭಾರತಕ್ಕೆ ಬಂದಿಳಿದ ಅಮ್ಮ-ಮಗ

 ನವದೆಹಲಿ: ಇತ್ತ ಮುಂಗಾರು ಅಧಿವೇಶನ ಶುರುವಾಗುತ್ತಿದ್ದಂತೆಯೇ ವೈದ್ಯಕೀಯ ಚಿಕಿತ್ಸೆ ಎಂದು ಹೇಳಿ ಅಮೆರಿಕಕ್ಕೆ ಹಾರಿದ್ದ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ಅಧಿವೇಶನ ಮುಗಿಯುತ್ತಿದ್ದಂತೆಯೇ ಕೊನೆಗೂ ಭಾರತಕ್ಕೆ ವಾಪಸ್​ ಆಗಿದ್ದಾರೆ.

ವೈದ್ಯಕೀಯ ಚಿಕಿತ್ಸೆಗಾಗಿ ತಾವು ತೆರಳಲಿದ್ದು, ಅಧಿವೇಶನಕ್ಕೆ ಹಾಜರಾಗುವುದಾಗಿ ಸೋನಿಯಾ ಹೇಳಿದ್ದರೆ, ಅವರಿಗಿಂತಲೂ ಒಂದು ವಾರ ಮುಂಚಿತವಾಗಿ ತಾವು ಬರುವುದಾಗಿ ರಾಹುಲ್​ ಗಾಂಧಿ ಹೇಳಿ ಹೋಗಿದ್ದರು.

ಇದೀಗ ಇಬ್ಬರೂ ಒಟ್ಟಿಗೇ ಬಂದಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ.

ನಿಗದಿತ ವೈದ್ಯಕೀಯ ತಪಾಸಣೆಗಾಗಿ ತೆರಳಿರುವೆ ಎಂದು ಸೋನಿಯಾ ಗಾಂಧಿ ಅವರು ಸೆಪ್ಟೆಂಬರ್ 12ರಂದು ಅಮೆರಿಕಕ್ಕೆ ತೆರಳಿದ್ದರು.

ಸೋನಿಯಾ ಗಾಂಧಿ ಅವರು ತುಂಬಾ ದಿನಗಳಿಂದ ತಪಾಸಣೆಗೆ ಒಳಗಾಗಿರಲಿಲ್ಲ. ಹೀಗಾಗಿ ಅಮೆರಿಕಕ್ಕೆ ಹೋಗಿ ತಪಾಸಣೆ ಮಾಡಿಕೊಂಡು ಬಂದಿದ್ದಾರೆ. ಕರೊನಾ ಕಾರಣದಿಂದಾಗಿ ಅವರು ಮರಳುವುದು ತಡವಾಗಲಿದೆ, ಆದರೆ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳು ಹೇಳಿದ್ದವು. ರಾಹುಲ್​ ಗಾಂಧಿಯವರು ಒಂದು ವಾರ ಮುಂಚೆಯೇ ಬರಲಿದ್ದಾರೆ ಎಂದು ಹೇಳಲಾಗಿತ್ತು.

ಇದೀಗ ಅಧಿವೇಶವನ್ನು ಮೊಟಕುಗೊಳಿಸಿರುವ ಕಾರಣ, ತಾವು ಅದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ತಾಯಿ-ಮಗ ಸ್ಪಷ್ಟನೆ ನೀಡಿದ್ದಾರೆ.

ಕೃಷಿ ಮಸೂದೆ ವಿಚಾರವಾಗಿ ಅಧಿವೇಶನದಲ್ಲಿ ಕಾಂಗ್ರೆಸ್​ ಕೋಲಾಹಲ ಎಬ್ಬಿಸುತ್ತಿರುವ ಈ ಸಂದರ್ಭದಲ್ಲಿ ಹಂಗಾಮಿ ಅಧ್ಯಕ್ಷೆ ಇಲ್ಲದಿರುವುದು ಪಕ್ಷದ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

TRENDING