Tuesday, October 27, 2020
Home ಜಿಲ್ಲೆ ಸಿಎಎ ವಿರುದ್ಧದ ಹೋರಾಟಕ್ಕೆ ಮಹಿಳೆಯರಿಗೆ ದಿನಗೂಲಿ! ಸಾಕ್ಷ್ಯ ಒದಗಿಸಿದ ದೆಹಲಿ ಪೊಲೀಸರು

ಇದೀಗ ಬಂದ ಸುದ್ದಿ

ಬಂಡೀಪುರದಲ್ಲಿ ನಟ ಧನ್ವೀರ್​​ ವಿರುದ್ಧ ಎಫ್ಐಆರ್

ಚಾಮರಾಜನಗರ: ನಟ ಧನ್ವೀರ್ ವಿರುದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಮೀಸಲು ಪ್ರದೇಶದ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972- ಸೆಕ್ಷನ್...

R R ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ...

 ಬೆಂಗಳೂರು : ರಾಜರಾಜೇಶ್ವರಿನಗರ ಉಪ ಚುನಾವಣೆಯ ಕಣ ತಾರಕಕ್ಕೇರಿದೆ. ಆಡಳಿತ ವಿರೋಧ ಪಕ್ಷಗಳ ನಡುವೆ ವಾಕ್ ಸಮರ ಮುಂದುವರಿದಂತ ಸಂದರ್ಭದಲ್ಲಿಯೇ ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಚುನಾವಣಾ ಅವ್ಯವಹಾರದ...

ಕಮಲ್‌ನಾಥ್, ದಿಗ್ವಿಜಯ್ ಸಿಂಗ್ ‘ಅತಿದೊಡ್ಡ ವಂಚಕರು’: ಜ್ಯೋತಿರಾದಿತ್ಯ...

ನವದೆಹಲಿ: 'ಮಧ್ಯಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಕಮಲ್ ನಾಥ್ ಮತ್ತು ದಿಗ್ವಿಜಯ್ ಸಿಂಗ್ ಅವರೇ 'ಅತಿದೊಡ್ಡ ವಂಚಕರು' ಎಂದು ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಆರೋಪಿಸಿದ್ದಾರೆ. 'ಭ್ರಷ್ಟ ಆಡಳಿತ'ವನ್ನು ನೀಡುವ ಮೂಲಕ ಇವರು...

ಮತ್ತೆ ಗತವೈಭವದತ್ತ ಸಾಗುತ್ತಿದೆ ವಾಹನಗಳ ಮಾರಾಟ

ಪ್ರಸಕ್ತ ಆರ್ಥಿಕ ವರ್ಷ ಆರಂಭದಿಂದ ಹಿನ್ನಡೆ ಅನುಭವಿಸಿದ್ದ ವಾಹನಗಳ ಮಾರಾಟ ಮತ್ತೆ ಗತವೈಭವಕ್ಕೆ ಸಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ ಸಪ್ಟೆಂಬರ್ ನಲ್ಲಿ ಹಿನ್ನಡೆ ಅನುಭವಿಸಿದ್ದ ದ್ವಿಚಕ್ರ ವಾಹನಗಳ ಮಾರಾಟ ಮತ್ತು...

TET ಉತ್ತೀರ್ಣರಾದವರಿಗೆ ಭರ್ಜರಿ ಗುಡ್...

ಬೆಂಗಳೂರು: ಶಿಕ್ಷಕರ ಹುದ್ದೆಗೆ ಅರ್ಹತೆ ಪಡೆಯಲು ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಉತ್ತೀರ್ಣರಾದವರ ಪ್ರಮಾಣಪತ್ರದ ಸಿಂಧುತ್ವ ಅವಧಿಯನ್ನು ಜೀವಿತಾವಧಿವರೆಗೆ ವಿಸ್ತರಿಸಲಾಗಿದೆ. ಈಗಿರುವ 7 ವರ್ಷದಿಂದ ಜೀವಿತಾವಧಿವರೆಗೆ ವಿಸ್ತರಿಸಲು...

ಸಿಎಎ ವಿರುದ್ಧದ ಹೋರಾಟಕ್ಕೆ ಮಹಿಳೆಯರಿಗೆ ದಿನಗೂಲಿ! ಸಾಕ್ಷ್ಯ ಒದಗಿಸಿದ ದೆಹಲಿ ಪೊಲೀಸರು

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಕಳೆದ ಫೆಬ್ರುವರಿಯಲ್ಲಿ ದೆಹಲಿಯ ಶಾಹೀನ್ ಬಾಗ್ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ಸಮೀಪವಿರುವ ಸ್ಥಳಗಳಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಮಹಿಳೆಯರಿಗೆ ಸಕಲ ಸೌಲಭ್ಯಗಳ ಜತೆಗೆ ದಿನಗೂಲಿ ರೂಪದಲ್ಲಿ ಸಹಸ್ರಾರು ರೂಪಾಯಿಗಳನ್ನು ನೀಡಲಾಗುತ್ತಿತ್ತು!

ಈ ಕುರಿತು ದೆಹಲಿ ಪೊಲೀಸರ ತನಿಖೆಯಿಂದ ತಿಳಿದುಬಂದಿದ್ದು, ಈ ಮಾಹಿತಿಯನ್ನು ಕೋರ್ಟ್​ಗೆ ನೀಡಿದೆ. ಪ್ರತಿಭಟನೆ ಕುರಿತಂತೆ ಸಲ್ಲಿಸಿರುವ ಚಾರ್ಜ್​ಷೀಟ್​ನಲ್ಲಿ ಕಾರ್ಕಾರ್ಡೂಮಾ ಕೋರ್ಟ್​ಗೆ ಪೊಲೀಸರು ಈ ಅಂಶವನ್ನು ವಿವರಿಸಿದ್ದಾರೆ. ಇವುಗಳ ಕುರಿತು ಸಂಗ್ರಹಿಸಲಾಗಿರುವ ಸಾಕ್ಷ್ಯಗಳ ಮಾಹಿತಿ ಜತೆಗೆ ವಾಟ್ಸ್​ಆಯಪ್​ ಸಂದೇಶಗಳನ್ನು ಕೋರ್ಟ್​ಗೆ ಪೊಲೀಸರು ಸಲ್ಲಿಸಿದ್ದಾರೆ.

ಹೆಚ್ಚೆಚ್ಚು ಮಹಿಳೆಯರನ್ನು ಪ್ರತಿಭಟನೆ ಕರೆತರುವ ನಿಟ್ಟಿನಲ್ಲಿ ಜಾಮಿಯಾ ಸಮನ್ವಯ ಸಮಿತಿ ಸದಸ್ಯೆ ಮತ್ತು ಜೆಎಂಐನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆಯಾಗಿರುವ ಶಿಫಾ-ಉರ್-ರೆಹಮಾನ್ ಮತ್ತು ಇತರರ ಬ್ಯಾಂಕ್​ ಖಾತೆಗಳಿಗೆ ಪ್ರತಿದಿನವೂ ಸಾವಿರಾರು ರೂಪಾಯಿಗಳನ್ನು ಜಮಾ ಮಾಡಲಾಗುತ್ತಿತ್ತು. ಅಲುಮ್ನಿ ಅಸೋಸಿಯೇಶನ್ ಆಫ್ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ (ಎಎಜೆಎಂಐ) ಈ ಹಣಕಾಸಿನ ನೆರವು ನೀಡುತ್ತಿತ್ತು. ಈ ಹಣವನ್ನು ಮಹಿಳೆಯರಿಗೆ ದಿನಗೂಲಿ ರೂಪದಲ್ಲಿ ನೀಡಲು ಜತೆಗೆ, ಪ್ರತಿಭಟನೆಗೆ ಬರುವವರಿಗೆ ಬಸ್​ ಇತ್ಯಾದಿ ಸೌಲಭ್ಯ ಒದಗಿಸಲು ಖರ್ಚು ಮಾಡಲಾಗುತ್ತಿತ್ತು.

ಮೈಕ್, ಪೋಸ್ಟರ್, ಬ್ಯಾನರ್‌ಗಳು, ಹಗ್ಗಗಳು ಇತ್ಯಾದಿ ಪ್ರತಿಭಟನಾ ಸಲಕರಣೆಗಳಿಗೆ ವ್ಯವಸ್ಥೆ ಮಾಡಲು ಹಣವನ್ನು ಬಳಸಲಾಗುತ್ತಿತ್ತು. ಆಜ್ಮಿ ಜಾಮಿಯಾ ಮಿಲಿಯಾ ಪ್ರತಿಭಟನಾ ಸ್ಥಳದ 7 ನೇ ಗೇಟ್‌ ಒಂದರಲ್ಲಿಯೇ ಪ್ರತಿದಿನವೂ 10 ಸಾವಿರ ರೂಪಾಯಿಗಳವರೆಗೆ ಖರ್ಚು ಮಾಡಿರುವುದು ತನಿಖೆಯಿಂದ ತಿಳಿದುಬಂದಿರುವುದಾಗಿ ಕೋರ್ಟ್​ಗೆ ಸಲ್ಲಿಸಿರುವ ಚಾರ್ಜ್​ಷೀಟ್​ನಲ್ಲಿ ಉಲ್ಲೇಖ ಮಾಡಲಾಗಿದೆ.

53 ಮಂದಿಯನ್ನು ಬಲಿ ಪಡೆಯುವಲ್ಲಿ ಈ ಸಂಘಟನೆಯದ್ದು ಬಹುದೊಡ್ಡ ಪಾತ್ರವಿದೆ. ಹಿಂಸಾಚಾರ ಎಸಗಿರುವ ಹಿಂದೆ ಇರುವ ಉದ್ದೇಶವೇ ಬೇರೆಯದ್ದಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

TRENDING