Saturday, October 24, 2020
Home ಜಿಲ್ಲೆ ಬೆಂಗಳೂರು 63,629 ಕಾಮಗಾರಿಗಳಲ್ಲಿ 28,314 ಮಾತ್ರ ಅನುಷ್ಠಾನ!

ಇದೀಗ ಬಂದ ಸುದ್ದಿ

ಕಾಲೇಜು ಪುನಾರಂಭದ ಬಗ್ಗೆ ವಿದ್ಯಾರ್ಥಿಗಳ ಆತಂಕ

ಬೆಂಗಳೂರು : ನವೆಂಬರ್ 17 ರಿಂದ ಮೊದಲ ಹಂತವಾಗಿ ಉನ್ನತ ಶಿಕ್ಷಣ ಸಂಸ್ಥೆಗಳ ತರಗತಿಗಳನ್ನು ಪುನಾರಂಭಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಕಳೆದ ಏಳೆಂಟು ತಿಂಗಳಿನಿಂದ ಮುಚ್ಚಿದ್ದ ಎಲ್ಲ ಪದವಿ, ಇಂಜಿನಿಯರಿಂಗ್ ಹಾಗೂ...

ಹಂಪಿ ಡಿವೈಎಸ್​​ಪಿ ರಾಜೀನಾಮೆ ವಿಚಾರ

ಬಳ್ಳಾರಿ: ಹಂಪಿ ಡಿವೈಎಸ್​​ಪಿ ರಾಜೀನಾಮೆ ಪತ್ರ ಸಲ್ಲಿಕೆ ವಿಚಾರದಲ್ಲಿ ಶಿಷ್ಠಾಚಾರ ಪಾಲನೆಯಾಗಿಲ್ಲ. ಹೀಗಾಗಿ ವಾಪಸ್ ಕಳುಹಿಸಿರಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ10 ಕೋಟಿ ಗಡಿ ದಾಟಿದ ಕೊರೊನಾ ...

 ನವದೆಹಲಿ: ದೇಶದಲ್ಲಿ ಶನಿವಾರದ ವೇಳೆಗೆ 10 ಕೋಟಿಗೂ ಹೆಚ್ಚು ಕೊವಿಡ್ -19 ಪರೀಕ್ಷೆಗಳನ್ನು ನಡೆಸುವ ಮೂಲಕ ಹೊಸ ಎತ್ತರಕ್ಕೇರಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೇಂದ್ರೀಕೃತ...

ಕೇಂದ್ರದ ‘ಬಜೆಟ್’ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಕೇಂದ್ರ ಬಜೆಟ್‌ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ. ಹಾಲಿ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಇಂದಿರಾಗಾಂಧಿಯವರ ಬಳಿಕ ಬಜೆಟ್ ಮಂಡನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡ್ರಗ್ಸ್ ಪ್ರಕರಣ : ರಾಗಿಣಿ ಆಪ್ತ ಗಿರೀಶ್...

ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ಅವರಿಗೆ ಆಪ್ತ ಎನ್ನಲಾದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. 2 ಲಕ್ಷ ರೂಪಾಯಿ...

63,629 ಕಾಮಗಾರಿಗಳಲ್ಲಿ 28,314 ಮಾತ್ರ ಅನುಷ್ಠಾನ!

 ಬೆಂಗಳೂರು: ‘ಐದು ವರ್ಷಗಳಲ್ಲಿ ಬಿಬಿಎಂಪಿ ಅಂದಾಜು ₹21,653 ಕೋಟಿ ವೆಚ್ಚದ 63,629 ಕಾಮಗಾರಿಗಳಿಗೆ ಅನುಮೋದನೆ ನೀಡಿದೆ. ಈ ಪೈಕಿ 28,314 ಕಾಮಗಾರಿ ಮಾತ್ರ ಕಾರ್ಯಗತಗೊಂಡಿವೆ. ಸುಮಾರು ₹4,721 ಕೋಟಿ ವೆಚ್ಚದ ಕಾಮಗಾರಿಗಳಲ್ಲಿ ಶೇಕಡ 50ರಷ್ಟನ್ನು, ಒಬ್ಬರೇ ಗುತ್ತಿಗೆದಾರರಿಗೆ ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಐದು ವರ್ಷಗಳಲ್ಲಿ ನಡೆದ ಕಾಮಗಾರಿಗಳ ಮರ್ಮವನ್ನು ಬೆಂಗಳೂರು ನವನಿರ್ಮಾಣ ಪಕ್ಷವು (ಬಿಎನ್‍ಪಿ) ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಬಿಚ್ಚಿಟ್ಟಿದ್ದು ಹೀಗೆ. ಅನುಮೋದನಯಾಗಿರುವ ಕಾಮಗಾರಿಗಳ ಸಂಖ್ಯೆ, ಅವುಗಳಿಗೆ ಆಗಿರುವ ವೆಚ್ಚವನ್ನು ವಿವರಿಸಿದ ಪಕ್ಷದ ವಿಶ್ಲೇಷಣಾ ಘಟಕದ ಮುಖ್ಯಸ್ಥ ಸಂಜಯ್ ಮೆಹರೋತ್ರ, ‘ಪಾಲಿಕೆಯ ಎಲ್ಲ ವಾರ್ಡ್‍ಗಳಲ್ಲಿ ಅನುಮತಿ ನೀಡಿರುವ ಯೋಜನೆಗಳ ಆಳವಾದ ಅಧ್ಯಯನದ ಬಳಿಕವೇ ಈ ಅಂಕಿ ಅಂಶ ನೀಡುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಖಜಾಂಚಿ ಸುಬ್ಬು ಹೆಗಡೆ, ‘ಪಾಲಿಕೆ ಬಹುತೇಕ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ವಹಿಸಲಾಗಿದ್ದು, ಟೆಂಡರ್ ಆಹ್ವಾನಿಸದೆಯೇ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿ ಯೋಜನೆಗೆ ಶೇ 10ರಷ್ಟು ಕಮಿಷನ್ ಪಡೆಯಲಾಗಿದೆ. ಸಾವಿರಾರು ಕೋಟಿ ವೆಚ್ಚದ ಯೋಜನೆಗಳನ್ನು ಯಾವುದೇ ಟೆಂಡರ್ ಕರೆಯದೆಯೇ ಒಬ್ಬರೇ ಗುತ್ತಿಗೆದಾರರಿಗೆ ನೀಡಿರುವುದು ಅಗಾಧ ಭ್ರಷ್ಟಾಚಾರ ಹಾಗೂ ಆಡಳಿತದ ದುರ್ಬಳಕೆಗೆ ಹಿಡಿದ ಕನ್ನಡಿ’ ಎಂದು ದೂರಿದರು.

ಪದ್ಮನಾಭನಗರ ಕ್ಷೇತ್ರದ ಬಿಎನ್‍ಪಿ ಮುಖಂಡ ಸಿದ್ಧಾರ್ಥ ಶೆಟ್ಟಿ, ‘ಕಾಮಗಾರಿಗಳ ಗುತ್ತಿಗೆ ನೀಡುವಾಗ ಕೆಟಿಪಿಪಿಎ ಕಾಯ್ದೆಯ ಷರತ್ತುಗಳನ್ನು ಗಾಳಿಗೆ ತೂರಲಾಗಿದೆ. ಮಳೆನೀರು ಚರಂಡಿ, ಬೀದಿದೀಪ, ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಯಂತಹ ಕಾರ್ಯಗಳನ್ನೂ ಕೆಆರ್‌ಐಡಿಎಲ್‌ಗೆ ಒಪ್ಪಿಸುವ ಅಗತ್ಯವೇನಿದೆ’ ಎಂದು ಪ್ರಶ್ನಿಸಿದರು.

ಪಕ್ಷದ ತಾಂತ್ರಿಕ ವಿಭಾಗದ ಮುಖ್ಯಸ್ಥ ಅರುಣ್ ಮಹೇಂದ್ರನ್, ‘ಬೆಂಗಳೂರಿನ ಎಲ್ಲ ನಾಗರಿಕರಿಗೆ ತಮ್ಮ ವಾರ್ಡ್‍ಗಳಲ್ಲಿ ನಡೆದಿರುವ ಯೋಜನೆಗಳ ವಿವರ ಹಾಗೂ ದುರುಪಯೋಗವಾಗಿರುವ ಹಣದ ದತ್ತಾಂಶವನ್ನು ವಾರ್ಡ್‍ವಾರು ವಿಂಗಡಿಸಲಾಗಿದೆ. ವಿವರಗಳನ್ನು ವೆಬ್‍ಸೈಟ್ www.nammabnp.org, 4g Scam section ಮೂಲಕ ಪಡೆಯಬಹುದು’ ಎಂದರು.

‘ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ನಮ್ಮ ಪಕ್ಷವು ಸ್ಪರ್ಧಿಸಲಿದೆ. ಆದರೆ, ಆ ಕಾರಣಕ್ಕೆ ನಾವು ಈ ಆರೋಪ ಮಾಡುತ್ತಿಲ್ಲ. ಜನರಿಗೆ ಮಾಹಿತಿ ನೀಡುವುದಷ್ಟೇ ನಮ್ಮ ಉದ್ದೇಶ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರಿಕಾಂತ್‌ ನರಸಿಂಹನ್‌ ತಿಳಿಸಿದರು.

TRENDING