Saturday, October 24, 2020
Home ಅಂತರ್ ರಾಜ್ಯ ತನ್ನ ಮಕ್ಕಳ ಚಿಕಿತ್ಸೆಗಾಗಿ ತಮ್ಮಎಲ್ಲ ಅಂಗಾಂಗ ಮಾರಾಟಕ್ಕೆ ಮುಂದಾದ ತಾಯಿ!

ಇದೀಗ ಬಂದ ಸುದ್ದಿ

ಅ.26 ರಿಂದ 4 ದಿನಗಳ ಕಾಲ ಮದ್ಯ...

ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ (ಅ.26) ದಿಂದ ನಾಲ್ಕು ದಿನಗಳ ಕಾಲ ಕೋಲಾರ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ.

ನಟ ಧನ್ವೀರ್ ವಿರುದ್ದ FIR ದಾಖಲು

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಫಾರಿ ನಡೆಸಿರುವ ಆರೋಪಕ್ಕೆ ಸಂಬಂಧಪಟ್ಟಂತೆ ನಟ ಧನ್ವೀರ್ ಗೌಡ ಸೇರಿದಂತೆ ಐವರ ವಿರುದ್ದ ಅರಣ್ಯ ಇಲಾಖೆ ಅಧಿಕಾರಿಗಳು ಎಫ್‌ಐಆರ್ ದಾಖಲು ಮಾಡಲಾಗಿದೆ.

ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ಗೂ ಕೊರೊನಾ

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್​ಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಬಗ್ಗೆ ಟ್ವೀಟ್​ ಮಾಡಿ ಸ್ಪಷ್ಟಪಡಿಸಿರುವ ಅವರು, "ನಾನು ಲಾಕ್​ಡೌನ್​...

ಹೂ, ಹಣ್ಣುಗಳ ಬೆಲೆ ಏರಿಕೆ

ರಾಯಚೂರು: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ತೋಟಗಾರಿಕೆ ಬೆಳೆಗಳಿಗೂ ಹಾನಿ ಸಂಭವಿಸಿದೆ. ದಸರಾ ಹಬ್ಬದ ಮುಂಚಿನ ದಿನವಾದ ಇಂದು ಸರಸ್ವತಿ ಪೂಜೆ ಹಿನ್ನೆಲೆ ಮಾರುಕಟ್ಟೆಗೆ ವಿವಿಧ ಬಗ್ಗೆಯ ಹೂವು, ಹಣ್ಣುಗಳು ಬಂದಿದೆ....

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಿ.ವೈ.ವಿಜಯೇಂದ್ರ

ತುಮಕೂರು: ಇಲ್ಲಿನ ಸಿದ್ಧಗಂಗಾ ಮಠಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಅವರ ದರ್ಶನ ಪಡೆದರು. ನಂತರ ಸಿದ್ಧಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ತನ್ನ ಮಕ್ಕಳ ಚಿಕಿತ್ಸೆಗಾಗಿ ತಮ್ಮಎಲ್ಲ ಅಂಗಾಂಗ ಮಾರಾಟಕ್ಕೆ ಮುಂದಾದ ತಾಯಿ!

 ತಿರುವನಂತಪುರತನ್ನ ಮಕ್ಕಳ ಚಿಕಿತ್ಸೆಗಾಗಿ ಕೇರಳದಲ್ಲಿ ತಾಯಿಯೊಬ್ಬರು ತಮ್ಮ ಎಲ್ಲ ಅಂಗಾಂಗಗಳ ಮಾರಾಟಕ್ಕೆ ಮುಂದಾಗಿದ್ದಾರೆ.

ಕೊಚ್ಚಿಯ ವರಪ್ಪುಳದಲ್ಲಿ ವಾಸಿಸುತ್ತಿರುವ ಈ ಮಹಿಳೆ ತನ್ನ ಗುಡಿಸಲ ಮುಂದೆ ಈ ಕುರಿತು ಫಲಕವನ್ನು ಅಳವಡಿಸಿದ್ದು, ‘ತನ್ನ ಮಕ್ಕಳ ವೈದ್ಯಕೀಯ ಚಿಕಿತ್ಸೆ ಹಾಗೂ ಸಾಲವನ್ನು ತೀರಿಸಲು ಹೃದಯ ಸೇರಿದಂತೆ ಎಲ್ಲ ಅಂಗಾಂಗಗಳು ಮಾರಾಟಕ್ಕಿವೆ’ ಎಂದು ಅದರಲ್ಲಿ ಬರೆದಿದ್ದಾರೆ.

ಮಹಿಳೆಯ ಇಬ್ಬರು ಹಿರಿಯ ಗಂಡುಮಕ್ಕಳು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಮಗಳು ನರದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಗಂಡನಿಂದ ದೂರವಾಗಿರುವ ಮಹಿಳೆ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಬಾಡಿಗೆ ಕಟ್ಟಲಾಗದೆ ಭಾನುವಾರ(ಸೆ.20) ಮನೆ ಬಿಟ್ಟು ಬಂದಿರುವ ಕುಟುಂಬ, ರಸ್ತೆ ಬದಿಯಲ್ಲೇ ಗುಡಿಸಲು ನಿರ್ಮಿಸಿ ವಾಸಿಸುತ್ತಿದೆ. ಭಾರಿ ಮಳೆಯ ನಡುವೆಯೇ ರಾತ್ರಿಯನ್ನು ಕಳೆದಿದೆ.

‘ಹಲವು ಜನರಿಗೆ ಲಕ್ಷಾಂತರ ರೂಪಾಯಿ ಸಾಲ ಹಿಂದಿರುಗಿಸಬೇಕಾಗಿದೆ. ಮಕ್ಕಳು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಯಾವ ಕೆಲಸಕ್ಕೂ ನನಗೆ ಹೋಗಲಾಗುತ್ತಿಲ್ಲ. ನನ್ನ ಮುಂದೆ ಇನ್ಯಾವುದೇ ಆಯ್ಕೆ ಉಳಿದಿಲ್ಲ. ಹೀಗಾಗಿ ಈ ಫಲಕವನ್ನು ಅಳವಡಿಸಿದ್ದೇನೆ. ಇದು ಯಾರ ವಿರುದ್ಧದ ಪ್ರತಿಭಟನೆ ಅಲ್ಲ. ಬದಲಾಗಿ ಇದು ನನ್ನದೇ ಅಸಹಾಯಕತೆ’ ಎಂದು ಶಾಂತಿ ಅಳಲುತೋಡಿಕೊಂಡರು.

ಈ ಘಟನೆ ಸರ್ಕಾರದ ಗಮನಕ್ಕೆ ಬರುತ್ತಿದ್ದಂತೆಯೇ ಕುಟುಂಬವನ್ನು ಆಶ್ರಯ ಮನೆಗೆ ಸ್ಥಳಾಂತರಿಸಲಾಗಿದ್ದು, ಮಕ್ಕಳ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿಯೂ ಸರ್ಕಾರ ತಿಳಿಸಿದೆ. ಕುಟುಂಬದ ನಿರ್ವಹಣೆಗೆ ಆರ್ಥಿಕ ನೆರವು ನೀಡಲು ಹಲವು ಸಂಘ-ಸಂಸ್ಥೆಗಳೂ ಮುಂದೆ ಬಂದಿವೆ.

TRENDING