Saturday, October 31, 2020
Home ಅಂತರ್ ರಾಷ್ಟ್ರೀಯ ಲಡಾಖ್‌ ಗಡಿ ಸಂಘರ್ಷ: ಪೂರ್ವ ಗಡಿ ಪ್ರದೇಶಗಳಲ್ಲಿ ಹಾರಾಟ ನಡೆಸಲಿದೆ ರಫೇಲ್

ಇದೀಗ ಬಂದ ಸುದ್ದಿ

ಮಾಜಿ ಮೇಯರ್ ಸಂಪತ್ ರಾಜ್ ನಾಪತ್ತೆ

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಹಾಗೂ ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದು, ಸಿಸಿಬಿ ಪೊಲೀಸರು ಸಂಪತ್...

ಮನೆಯೊಂದರಲ್ಲಿದ್ದ 435 ಕೆ.ಜಿ ಬ್ರೌನ್​ ಶುಗರ್ ವಶಕ್ಕೆ

ತೌಬಲ್ ಜಿಲ್ಲೆಯ ಮೌಜಿಂಗ್ ಪ್ರದೇಶದ ಮನೆಯೊಂದರ ಮೇಲೆ ದಾಳಿ ಮಾಡಿ ಸುಮಾರು 435 ಕೆ.ಜಿಗೂ ಹೆಚ್ಚು ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ ಎಂದು ಮಣಿಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ಫೋಸಿಸ್ ಸೇರಿ 3 ಸಂಸ್ಥೆಗಳಿಂದ ಭೀಮಾ ನೆರೆ...

ಕಲಬುರಗಿ: ಭೀಮಾ ನದಿ ಪ್ರವಾಹ ಸಂತ್ರಸ್ತರ ನೆರವಿಗೆ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ, ಇನ್ಫೋಸಿಸ್ ಹಾಗೂ ರಾಮಕೃಷ್ಣ ಸೇವಾ ಆಶ್ರಮ ಮುಂದಾಗಿವೆ. ಮೂರು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ...

ಕಾರ್ಮಿಕರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿ: ಡಿಸಿ...

ಮೈಸೂರು: ಜಿಲ್ಲೆಯ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರಿಗೆ ಕಡ್ಡಾಯವಾಗಿ ಆಗಾಗ್ಗೆ ಕೋವಿಡ್-19 ಪರೀಕ್ಷೆ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ...

ರಾಜ್ಯೋತ್ಸವಕ್ಕೆ ಕ್ಯಾತೆ ತೆಗೆದ ಮಹಾರಾಷ್ಟ್ರ

ಮುಂಬೈ (ಮಹಾರಾಷ್ಟ್ರ): ನಾವು ಬೆಳಗಾವಿಯ ಕೆಲವು ಭಾಗಗಳು ಸೇರಿದಂತೆ ಹಲವು ಪ್ರದೇಶಗಳನ್ನು ಆದಷ್ಟು ಬೇಗ ಮಹಾರಾಷ್ಟ್ರದೊಳಗೆ ಸೇರಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ ಎಂದು ಏಕನಾಥ್ ಶಿಂಧೆ ಹಾಗೂ ಚಗನ್ ಭುಜ್ಪಾಲ್ ಗಡಿ...

ಲಡಾಖ್‌ ಗಡಿ ಸಂಘರ್ಷ: ಪೂರ್ವ ಗಡಿ ಪ್ರದೇಶಗಳಲ್ಲಿ ಹಾರಾಟ ನಡೆಸಲಿದೆ ರಫೇಲ್

 ನವದೆಹಲಿಪೂರ್ವ ಲಡಾಖ್‌ ಗಡಿ ಪ್ರದೇಶದಲ್ಲಿ ವ್ಯೂಹಾತ್ಮಕವಾಗಿ ಮುಖ್ಯವಾಗಿರುವ 20 ಪರ್ವತ ಪ್ರದೇಶಗಳ ಮೇಲೆ ಭಾರತೀಯ ಸೇನೆ ಪ್ರಾಬಲ್ಯ ಹೆಚ್ಚಿಸಿದೆ. ಪಾಂಗಾಂಗ್ ಸರೋವರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇರಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಗಡಿ ಬಿಕ್ಕಟ್ಟು ಶಮನಕ್ಕೆ ಭಾರತ-ಚೀನಾ ಸೇನಾ ಕಮಾಂಡರ್‌ಗಳ ನಡುವೆ ಮಾತುಕತೆ ನಡೆಯಲಿದೆ. ಈ ಮಧ್ಯೆ, ಚೀನಾ ಸೇನೆಯ ಪ್ರಚೋದನೆ ಕೃತ್ಯಗಳಿಗೆ ಉತ್ತರವಾಗಿ ಅತ್ಯಾಧುನಿಕ ಯುದ್ಧ ವಿಮಾನ ರಫೇಲ್‌ ಅನ್ನು ಲಡಾಖ್‌ ಪ್ರದೇಶದಲ್ಲಿ ಹಾರಾಟ ನಡೆಸಲು ವಾಯುಪಡೆ ಸಜ್ಜಾಗಿದೆ. ಭಾರತದ ಯುದ್ಧಸನ್ನದ್ಧತೆಯನ್ನು ಪ್ರದರ್ಶಿಸಲು ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಮೂಲಗಳು ಹೇಳಿವೆ. ರಫೇಲ್ ಯುದ್ಧವಿಮಾನವನ್ನು ಇತ್ತೀಚೆಗಷ್ಟೇ ಭಾರತೀಯ ವಾಯುಪಡೆಗೆ ನಿಯೋಜನೆಗೊಳಿಸಲಾಗಿದೆ.

ಸಂಘರ್ಷ ಶಮನಕ್ಕೆ ಉಭಯ ದೇಶಗಳು ಮಾಡಿಕೊಂಡಿರುವ ಐದು ಅಂಶಗಳ ಸೂತ್ರವನ್ನು ಅನುಷ್ಠಾನಕ್ಕೆ ತರುವ ಕುರಿತು ಕಮಾಂಡರ್‌ ಮಟ್ಟದ ಮಾತುಕತೆ ವೇಳೆ ಚರ್ಚೆ ನಡೆಯಲಿದೆ.

ಗಡಿ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಭಾರತ-ಚೀನಾ ವಿದೇಶಾಂಗ ಸಚಿವರಾದ ಎಸ್.ಜೈಶಂಕರ್ ಮತ್ತು ವಾಂಗ್‌ ಯಿ ಕಳೆದ ವಾರ ಒಮ್ಮತಕ್ಕೆ ಬಂದಿದ್ದರು. ರಷ್ಯಾ ರಾಜಧಾನಿ ಮಾಸ್ಕೊದಲ್ಲಿ ನಡೆದಿದ್ದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಮಾವೇಶದ ಸಂದರ್ಭದಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ್ದರು. ಆ ಸಂದರ್ಭ, ಗಡಿಯಲ್ಲಿನ ಸಂಘರ್ಷ ತಪ್ಪಿಸುವುದಕ್ಕಾಗಿ ದ್ವಿಪಕ್ಷೀಯವಾದ ಎಲ್ಲ ಒಪ್ಪಂದಗಳಿಗೆ ಚೀನಾವು ಕಟ್ಟುನಿಟ್ಟಿನ ಬದ್ಧತೆ ತೋರಬೇಕು ಎಂದು ಜೈಶಂಕರ್‌ ಅವರು ವಾಂಗ್‌ಗೆ ಹೇಳಿದ್ದರು.

ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದು, ಉದ್ವಿಗ್ನ ಪರಿಸ್ಥಿತಿ ಹೆಚ್ಚಿಸುವಂಥ ಚಟುವಟಿಕೆಗಳಿಗೆ ಆಸ್ಪದ ನೀಡದಿರುವುದು, ಗಡಿ ನಿರ್ವಹಣೆಗೆ ಸಂಬಂಧಿಸಿದ ಎಲ್ಲ ಒಪ್ಪಂದಗಳಿಗೆ ಬದ್ಧರಾಗಿರುವುದು ಮತ್ತು ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಯಥಾಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ಒಮ್ಮತಕ್ಕೆ ಬರಲಾಗಿತ್ತು. ಈ ವಿಚಾರವನ್ನು ಅನುಷ್ಠಾನಗೊಳಿಸುವ ಬಗ್ಗೆ ಮುಂದೆ ನಡೆಯಲಿರುವ ಕಮಾಂಡರ್‌ ಮಟ್ಟದ ಮಾತುಕತೆ ವೇಳೆ ಚರ್ಚೆಯಾಗಲಿದೆ ಎನ್ನಲಾಗಿದೆ.

TRENDING