Tuesday, October 27, 2020
Home ಬೆಂಗಳೂರು ಡ್ರಗ್ ಪ್ರಕರಣ : ನಶೆ ರಾಣಿಯರ ಜಾಮೀನು ಅರ್ಜಿ ಸೆ.24ಕ್ಕೆ ಮುಂದೂಡಿಕೆ

ಇದೀಗ ಬಂದ ಸುದ್ದಿ

ಬಂಡೀಪುರದಲ್ಲಿ ನಟ ಧನ್ವೀರ್​​ ವಿರುದ್ಧ ಎಫ್ಐಆರ್

ಚಾಮರಾಜನಗರ: ನಟ ಧನ್ವೀರ್ ವಿರುದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಮೀಸಲು ಪ್ರದೇಶದ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972- ಸೆಕ್ಷನ್...

R R ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ...

 ಬೆಂಗಳೂರು : ರಾಜರಾಜೇಶ್ವರಿನಗರ ಉಪ ಚುನಾವಣೆಯ ಕಣ ತಾರಕಕ್ಕೇರಿದೆ. ಆಡಳಿತ ವಿರೋಧ ಪಕ್ಷಗಳ ನಡುವೆ ವಾಕ್ ಸಮರ ಮುಂದುವರಿದಂತ ಸಂದರ್ಭದಲ್ಲಿಯೇ ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಚುನಾವಣಾ ಅವ್ಯವಹಾರದ...

ಕಮಲ್‌ನಾಥ್, ದಿಗ್ವಿಜಯ್ ಸಿಂಗ್ ‘ಅತಿದೊಡ್ಡ ವಂಚಕರು’: ಜ್ಯೋತಿರಾದಿತ್ಯ...

ನವದೆಹಲಿ: 'ಮಧ್ಯಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಕಮಲ್ ನಾಥ್ ಮತ್ತು ದಿಗ್ವಿಜಯ್ ಸಿಂಗ್ ಅವರೇ 'ಅತಿದೊಡ್ಡ ವಂಚಕರು' ಎಂದು ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಆರೋಪಿಸಿದ್ದಾರೆ. 'ಭ್ರಷ್ಟ ಆಡಳಿತ'ವನ್ನು ನೀಡುವ ಮೂಲಕ ಇವರು...

ಮತ್ತೆ ಗತವೈಭವದತ್ತ ಸಾಗುತ್ತಿದೆ ವಾಹನಗಳ ಮಾರಾಟ

ಪ್ರಸಕ್ತ ಆರ್ಥಿಕ ವರ್ಷ ಆರಂಭದಿಂದ ಹಿನ್ನಡೆ ಅನುಭವಿಸಿದ್ದ ವಾಹನಗಳ ಮಾರಾಟ ಮತ್ತೆ ಗತವೈಭವಕ್ಕೆ ಸಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ ಸಪ್ಟೆಂಬರ್ ನಲ್ಲಿ ಹಿನ್ನಡೆ ಅನುಭವಿಸಿದ್ದ ದ್ವಿಚಕ್ರ ವಾಹನಗಳ ಮಾರಾಟ ಮತ್ತು...

TET ಉತ್ತೀರ್ಣರಾದವರಿಗೆ ಭರ್ಜರಿ ಗುಡ್...

ಬೆಂಗಳೂರು: ಶಿಕ್ಷಕರ ಹುದ್ದೆಗೆ ಅರ್ಹತೆ ಪಡೆಯಲು ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಉತ್ತೀರ್ಣರಾದವರ ಪ್ರಮಾಣಪತ್ರದ ಸಿಂಧುತ್ವ ಅವಧಿಯನ್ನು ಜೀವಿತಾವಧಿವರೆಗೆ ವಿಸ್ತರಿಸಲಾಗಿದೆ. ಈಗಿರುವ 7 ವರ್ಷದಿಂದ ಜೀವಿತಾವಧಿವರೆಗೆ ವಿಸ್ತರಿಸಲು...

ಡ್ರಗ್ ಪ್ರಕರಣ : ನಶೆ ರಾಣಿಯರ ಜಾಮೀನು ಅರ್ಜಿ ಸೆ.24ಕ್ಕೆ ಮುಂದೂಡಿಕೆ

ಬೆಂಗಳೂರು,ಸೆ.21: ಡ್ರಗ್ ಜಾಲದಲ್ಲಿ ಭಾಗಿಯಾಗಿ ಬಂಧಿತರಾಗಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನಗರದ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಸೆ. 24ಕ್ಕೆ ಮುಂದೂಡಿದೆ.

ನಟಿ ಸಂಜನಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಸಿಸಿಬಿ ಕಾಲಾವಕಾಶ ಕೇಳಿತ್ತು. ಸಿಸಿಬಿ ಮನವಿಗೆ ಸಮ್ಮಿಸಿದ ನ್ಯಾಯಾಲಯ ಸಂಜನಾ ಬೇಲ್ ಅರ್ಜಿಯನ್ನ ಸೆ. 24ಕ್ಕೆ ಮುಂದೂಡಲಾಗಿದೆ. ಹಾಗಾಗಿ ಸಂಜನಾ ಇನ್ನು ಮೂರು ದಿನ ಪರಪ್ಪನ ಅಗ್ರಹಾರದಲ್ಲಿರಬೇಕಾಗಿದೆ. ರಾಗಿಣಿ ಅರ್ಜಿಯ ವಿಚಾರಣೆ ನಡೆಸಿದ್ದು, ಆದೇಶವನ್ನು ಸೆಪ್ಟೆಂಬರ್ 24ಕ್ಕೆ ನ್ಯಾಯಾಧೀಶರು ಕಾಯ್ದಿರಿಸಿದ್ದಾರೆ.

ನಟಿ ರಾಗಿಣಿ ವಿರುದ್ಧ ಸಿಸಿಬಿ ಪರ ವಕೀಲರು 12 ಪುಟಗಳ ಆಕ್ಷೇಪಣೆ ಸಲ್ಲಿಸಿ, ಆರೋಪಿಗಳು ಜಾಮೀನು ನೀಡಬಾರದು. ಆರೋಪಿಗಳು ಪ್ರಭಾವಿಗಳಾಗಿದ್ದು, ಪ್ರಕರಣದ ತನಿಖೆಗೆ ಅಡ್ಡಿಯುಂಟಾಗಬಹುದು. ಇವರ ವಿರುದ್ಧ ಗಂಭೀರ ಆರೋಪಗಳಿದ್ದು, ಈ ಹಂತದಲ್ಲಿ ಜಾಮೀನು ಕೊಡುವುದು ಸರಿಯಲ್ಲ ಎಂದು ವಾದ ಮಂಡಿಸಿದ್ದರು.

ರಾಗಿಣಿ ಐದು ವರ್ಷಗಳಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ನಡೆದ ಡ್ರಗ್ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. ಡ್ರಗ್ ಪೆಡ್ಲರ್ ಗಳ ಗ್ಯಾಂಗ್ ಜೊತೆಯಲ್ಲಿ ರಾಗಿಣಿ ಮೋಜು ಮಸ್ತಿ ನಡೆಸಿದ್ದಾರೆ. ಪಾರ್ಟಿಗಳಿಗೆ ಬಂದವರಿಗೆ ರಾಗಿಣಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು.

ಆಂಧ್ರ ಪ್ರದೇಶ, ಗೋವಾ, ಮುಂಬೈ, ಪಂಜಾಬ್ ಮತ್ತು ವಿದೇಶಗಳಿಂದಲೂ ಡ್ರಗ್ಸ್ ತೆರೆಸಿಕೊಂಡಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ರಾಗಿಣಿಯ ಆಯಕ್ಟಿವ್ ಮೆಂಬರ್. ಎಂಡಿಎಂಎ, ಎಲ್ ಎಸ್‍ಡಿ, ಕೋಕೆನ್ ಕೊಡುತ್ತಿದ್ದರು. ಆರೋಪಿಗಳ ಜೊತೆ ನಡೆಸಿರುವ ಸಂಭಾಷಣೆಯ ಡಿಜಿಟಲ್ ಸಾಕ್ಷ್ಯವಿದೆ. ಮೂತ್ರ ಪರೀಕ್ಷೆ ವೇಳೆ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದರು ಎಂಬ ಅಂಶಗಳನ್ನು ಉಲ್ಲೇಖಿಸಿ ಸಿಸಿಬಿ ವಕೀಲರು ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.

ರಾಗಿಣಿ ಪರ ವಕೀಲ ಕಲ್ಯಾಣ್ ಕೃಷ್ಣ, ಕಕ್ಷಿದಾರರು ಸಿಸಿಬಿ ಪೊಲೀಸರ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಕಕ್ಷಿದಾರರ ಪರ ಯಾವುದೇ ಆರೋಪಗಳಿಲ್ಲ ಮತ್ತು ಸಾಕ್ಷ್ಯ ಇಲ್ಲ. ಈ ಹಂತದಲ್ಲಿ ಕಕ್ಷಿದಾರರಿಗೆ ಜಾಮೀನು ನೀಡಬಹುದು. ಪೊಲೀಸರು ಆತುರದಲ್ಲಿ ತನಿಖೆಯ ದಿಕ್ಕು ತಲುಪಿಸು ಕೆಲಸ ಮಾಡುತ್ತಿದ್ದಾರೆ. ಪ್ರಕರಣ ಒಂದೇ ದಿಕ್ಕಿನಲ್ಲಿ ಸಾಗದೇ, ಬೇರೆ ಬೇರೆ ಆಯಾಮಗಳಲ್ಲಿ ಸಾಗಿ ನಮ್ಮ ಕಕ್ಷಿದಾರರನ್ನು ಸಿಲುಕಿಸುವ ಹುನ್ನಾರ ಮಾಡಲಾಗುತ್ತಿದೆ. ಪೊಲೀಸರು ರಾಗಿಣಿ ಆರೋಪಿ ಎಂದು ಕಲ್ಪನೆ ಮಾಡಿಕೊಂಡಿದ್ದಾರೆ. ಕಲ್ಪನೆಯಲ್ಲಿ ತನಿಖೆ ಸಾಗುತ್ತಿದೆ.

TRENDING