Friday, September 25, 2020
Home ಸುದ್ದಿ ಜಾಲ ಅಧಿಕ ಮುಖಬೆಲೆಯ ಹಳೆಯ ನೋಟುಗಳನ್ನೇನು ಮಾಡುವುದು?: ಟಿಟಿಡಿ ದೇವಸ್ಥಾನಕ್ಕೆ ಚಿಂತೆ

ಇದೀಗ ಬಂದ ಸುದ್ದಿ

‘ಸುಶಾಂತ್ ಸಾವು ಆತ್ಮಹತ್ಯೆಯಲ್ಲ ಕೊಲೆ’ ಎಂದ ಏಮ್ಸ್‌...

ನವದೆಹಲಿ: 'ಬಾಲಿವುಡ್ ನಟ‌ ಸುಶಾಂತ್ ಸಿಂಗ್ ರಜಪೂತ್‌ ಅವರದ್ದು ಆತ್ಮಹತ್ಯೆಯಲ್ಲ, ಅವರನ್ನು ಕುತ್ತಿಗೆ ಹಿಸುಕಿ ಸಾಯಿಸಲಾಗಿದೆ ಎಂದು ನಾನು ಕಳುಹಿಸಿದ ಸುಶಾಂತ್‌ ಫೋಟೊಗಳನ್ನು ನೋಡಿದ ಏಮ್ಸ್‌ ಆಸ್ಪತ್ರೆಯ ವೈದ್ಯರೊಬ್ಬರು ಬಹಳ ಹಿಂದೆಯೇ...

‘ನನ್ನ ಪಾತ್ರಗಳನ್ನು ಹೊಸ ಎತ್ತರಕ್ಕೆ ಒಯ್ದಿದ್ದೇ SPB...

ಬೆಂಗಳೂರು: ಬಹುಭಾಷಾ ಹಿನ್ನಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿಯುತ್ತಿದೆ. ಕನ್ನಡದಲ್ಲೂ ಎಸ್.ಪಿ.ಬಿ. ಅವರು ಎರಡು ತಲೆಮಾರಿನ ನಾಯಕ ನಟರ ಚಿತ್ರಗಳಲ್ಲಿ...

BIG NEWS: 2021ರ ವೇಳೆಗೆ ಕೊರೊನಾ ಲಸಿಕೆ...

ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿವೆ. ಈ ಮಧ್ಯೆ ಚೀನಾದ ಔಷಧೀಯ ಕಂಪನಿಯೊಂದು 2021 ರ ವೇಳೆಗೆ ಕೊರೊನಾ ವೈರಸ್ ಲಸಿಕೆ ಯುಎಸ್ ಸೇರಿದಂತೆ ವಿಶ್ವದಾದ್ಯಂತ ವಿತರಣೆಗೆ...

ಕೊರೊನಾ ಹಾವಳಿ ನಡುವೆ ಬಿಹಾರ ವಿಧಾನಸಭೆ ಚುನಾವಣೆಗೆ...

ಕೊರೊನಾ ವೈರಸ್ ಹಾವಳಿ ನಡುವೆದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿರುವ ಬಿಹಾರದ 243 ಕ್ಷೇತ್ರಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಅಕ್ಟೋಬರ್ 28, ನವೆಂಬರ್ 3 ಮತ್ತು 7ರಂದು ಮೂರು ಹಂತಗಳಲ್ಲಿ...

ಐಪಿಎಲ್-2020 : ಇಂದು ಚೆನ್ನೈ ಸೂಪರ್ ಕಿಂಗ್ಸ್‌...

 ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಸೆಣಸಾಟ ನಡೆಸಲಿವೆ. ಚೆನ್ನೈ ತಂಡವು ಟೂರ್ನಿಯ ಮೊದಲ ಪಂದ್ಯದಲ್ಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ವಿರುದ್ಧ ಜಯಿಸಿತ್ತು. ಎರಡನೇ...

ಅಧಿಕ ಮುಖಬೆಲೆಯ ಹಳೆಯ ನೋಟುಗಳನ್ನೇನು ಮಾಡುವುದು?: ಟಿಟಿಡಿ ದೇವಸ್ಥಾನಕ್ಕೆ ಚಿಂತೆ

ಹೈದರಾಬಾದ್ : ಅಧಿಕ ಮುಖಬೆಲೆಯ ನೋಟುಗಳನ್ನ ರದ್ದುಗೊಳಿಸಿ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡು ನಾಲ್ಕು ವರ್ಷಗಳಾಗುತ್ತಾ ಬಂದರೂ ಅದರ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ತಿರುಪತಿ ತಿರುಮಲ ದೇವಸ್ಥಾನದ ಹುಂಡಿಗಳಲ್ಲಿ ಈಗಲೂ ಅಪನಗದೀಕರಣಗೊಂಡ ನೋಟುಗಳು ಕಾಣಿಕೆ ರೂಪದಲ್ಲಿ ಬೀಳುತ್ತಲೇ ಇವೆ. ದೊಡ್ಡ ಮೊತ್ತದ ಹಣವು ಈ ರೀತಿ ಟಿಟಿಡಿ ಹುಂಡಿಗಳನ್ನು ಸೇರಿದ್ದು, ಅವುಗಳ ನಿರ್ವಹಣೆಗೆ ಸಹಾಯ ಮಾಡುವಂತೆ ಟಿಟಿಡಿ, ಕೇಂದ್ರ ಸರ್ಕಾರದ ಮೊರೆ ಹೋಗಿದೆ.

ಭಕ್ತರು ಹುಂಡಿಗಳಲ್ಲಿ ಹಾಕಿದ 500 ಮತ್ತು 1000 ರೂ. ಮುಖಬೆಲೆಯ ಅಪನಗದೀಕರಣಗೊಂಡ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಠೇವಣಿ ಇರಿಸಲು ಅನುಮತಿ ನೀಡುವಂತೆ ಅದು ಕೇಂದ್ರ ಸರ್ಕಾರವನ್ನು ಕೋರಿದೆ. ಈ ನೋಟುಗಳನ್ನು ಟಿಟಿಡಿ ನಡೆಸುವ ಅಭಿವೃದ್ಧಿ ಕಾರ್ಯಗಳಿಗೆ ಬಳಸುವ ಸಾಧ್ಯತೆ ಇದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರೆ ಮಾಡಿದ್ದ ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ, ಅಪನಗದೀಕರಣಗೊಂಡ ನೋಟುಗಳನ್ನು ಆರ್‌ಬಿಐನಲ್ಲಿ ಠೇವಣಿ ಇರಿಸಲು ಕೇಂದ್ರ ಸರ್ಕಾರ ಸಹಾಯ ಮಾಡುವಂತೆ ಕೋರಿದ್ದಾರೆ. ಈ ನೋಟುಗಳನ್ನು ಭಕ್ತರು ಹುಂಡಿಗಳಲ್ಲಿ ಹಾಕಿರುವುದರಿಂದ ಅದು ತಮ್ಮ ನಿಯಂತ್ರಣದಾಚೆ ಸಂಗ್ರಹಗೊಂಡಿದೆ ಎಂದು ತಿಳಿಸಿದ್ದಾರೆ.

2016ರ ನವೆಂಬರ್ 8ರ ಮಧ್ಯರಾತ್ರಿಯಿಂದ 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಲಾಗಿತ್ತು. ನಂತರ ಪತ್ತೆಯಾಗುವ ನೋಟುಗಳನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಲಾಗಿತ್ತು. ಆರ್‌ಬಿಐ ಮಾರ್ಗಸೂಚಿಯಂತೆ ಹಳೆಯ ಕರೆನ್ಸಿ ನೋಟುಗಳನ್ನು ಸ್ವೀಕರಿಸುವುದನ್ನು ಆಗಲೇ ನಿಲ್ಲಿಸಲಾಗಿತ್ತು. ಆದರೆ ಹುಂಡಿಯಲ್ಲಿ ಭಕ್ತರು ಹಾಕುವ ಹಳೆಯ ನೋಟುಗಳನ್ನು ನಿಯಂತ್ರಿಸುವುದು ಸಾಧ್ಯವಾಗಿಲ್ಲ.

ಟಿಟಿಡಿಯು ದೇಶದ ಅನೇಕ ಭಾಗಗಳಲ್ಲಿ ದೇವಸ್ಥಾನಗಳು ಹಾಗೂ ಹುಂಡಿಗಳನ್ನು ಹೊಂದಿದೆ. ಇವುಗಳಲ್ಲಿ ಅಧಿಕ ಮೊತ್ತದಲ್ಲಿ ಹಳೆಯ ನೋಟುಗಳು ಸಂಗ್ರಹವಾಗಿವೆ. ಈ ಹುಂಡಿ ಖಾತೆಗಳನ್ನು ಕೂಡ ವಿಭಿನ್ನ ಬ್ಯಾಂಕುಗಳಲ್ಲಿ ಇರಿಸಲಾಗಿದೆ. ಹೀಗಾಗಿ ಆರ್‌ಬಿಐ ಮಾರ್ಗಸೂಚಿಗೆ ಅನುಗುಣವಾಗಿ ವಿಭಿನ್ನ ಬ್ಯಾಂಕುಗಳ ಖಾತೆಗಳಲ್ಲಿ ಹಳೆಯ ನೋಟುಗಳನ್ನು ಇರಿಸುವುದು ಸಮಸ್ಯೆಯಾಗಿ ಪರಿಣಮಿಸಿದೆ.

TRENDING