Saturday, October 24, 2020
Home ಬೆಂಗಳೂರು ಕನ್ನಡಕ್ಕೆ ಹಿಂದಿಯಷ್ಟೇ ಸ್ಥಾನಮಾನ ನಿರಾಕರಣೆ: ಕೇಂದ್ರದ ವಿರುದ್ಧ ಎಚ್.ಡಿ ಕುಮಾರಸ್ವಾಮಿ ಕಿಡಿ

ಇದೀಗ ಬಂದ ಸುದ್ದಿ

ದೇಶದಲ್ಲಿ10 ಕೋಟಿ ಗಡಿ ದಾಟಿದ ಕೊರೊನಾ ...

 ನವದೆಹಲಿ: ದೇಶದಲ್ಲಿ ಶನಿವಾರದ ವೇಳೆಗೆ 10 ಕೋಟಿಗೂ ಹೆಚ್ಚು ಕೊವಿಡ್ -19 ಪರೀಕ್ಷೆಗಳನ್ನು ನಡೆಸುವ ಮೂಲಕ ಹೊಸ ಎತ್ತರಕ್ಕೇರಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೇಂದ್ರೀಕೃತ...

ಕೇಂದ್ರದ ‘ಬಜೆಟ್’ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಕೇಂದ್ರ ಬಜೆಟ್‌ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ. ಹಾಲಿ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಇಂದಿರಾಗಾಂಧಿಯವರ ಬಳಿಕ ಬಜೆಟ್ ಮಂಡನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡ್ರಗ್ಸ್ ಪ್ರಕರಣ : ರಾಗಿಣಿ ಆಪ್ತ ಗಿರೀಶ್...

ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ಅವರಿಗೆ ಆಪ್ತ ಎನ್ನಲಾದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. 2 ಲಕ್ಷ ರೂಪಾಯಿ...

ಕೊರೊನಾ: ಮುಂದಿನ ಮೂರು ತಿಂಗಳೇ ನಿರ್ಣಾಯಕ –...

ನವದೆಹಲಿ : ಕೊರೊನಾ ಪರಿಸ್ಥಿತಿ ನಿರ್ಣಯಿಸಲು ಮುಂದಿನ ಮೂರು ತಿಂಗಳು ದೇಶದಲ್ಲಿ ನಿರ್ಣಾಯಕವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ದೇಶದಲ್ಲಿ ಸಾಲು ಸಾಲು...

ಕೊರೊನಾ : ಮಹಾಮಾರಿಯಿಂದ ಚೇತರಿಕೆಯಲ್ಲೂ...

ನವದೆಹಲಿ: ಈ ಹಿಂದೆ ಮಾರಕ ಕೊರೋನಾ ವೈರಸ್ ಸೋಂಕಿನ ಹೊಡೆತಕ್ಕೆ ಒಳಗಾಗಿ ಗರಿಷ್ಠ ಸೋಂಕಿತರನ್ನು ಹೊಂದಿ ಕುಖ್ಯಾತಿ ಪಡೆದಿದ್ದ 10 ರಾಜ್ಯಗಳಲ್ಲಿ ಇದೀಗ ದಾಖಲೆ ಪ್ರಮಾಣದ ಚೇತರಿಕೆ ಕಾಣುತ್ತಿದೆ.

ಕನ್ನಡಕ್ಕೆ ಹಿಂದಿಯಷ್ಟೇ ಸ್ಥಾನಮಾನ ನಿರಾಕರಣೆ: ಕೇಂದ್ರದ ವಿರುದ್ಧ ಎಚ್.ಡಿ ಕುಮಾರಸ್ವಾಮಿ ಕಿಡಿ

 ಬೆಂಗಳೂರು: ಕನ್ನಡವೂ ಸೇರಿ ಪ್ರಾದೇಶಿಕ ಭಾಷೆಗಳಿಗೆ ಹಿಂದಿಯಷ್ಟೇ ಸ್ಥಾನಮಾನ ನೀಡುವ ಕುರಿತು ಸಂವಿಧಾನ ತಿದ್ದುಪಡಿ ತರಲು ನಿರಾಕರಿಸಿರುವ ಕೇಂದ್ರ ಸರ್ಕಾರದ ನಡೆ ಭಾಷಾ ತಿರಸ್ಕಾರದ ಸಂಕೇತ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಹಿಂದಿಯಂತೆ ಕನ್ನಡವೂ ದೇಶದ ಅಧಿಕೃತ ಭಾಷೆ. ಕನ್ನಡ ರಾಷ್ಟ್ರ ಭಾಷೆಯೇ. ಕೇಂದ್ರ ಸರ್ಕಾರದ ಆಡಳಿತದಲ್ಲಿ ಕನ್ನಡ ಸೇರಿ ಇತರ ಭಾಷೆಗಳನ್ನು ಸೇರಿಸಬೇಕಷ್ಟೆ. ಸಂವಿಧಾನದ ಪರಿಚ್ಛೇದ 343, 344, 345ರಲ್ಲಿ ಹಿಂದಿಗೆ ಉತ್ತೇಜನ ನೀಡುವ ಅಂಶಗಳಿವೆ. ಇದೇ ನೆಪದಲ್ಲಿ ಹಿಂದಿ ಹೇರುವ ಪ್ರಯತ್ನ ಕೇಂದ್ರ ಸರ್ಕಾರಗಳಿಂದ ನಿರಂತರವಾಗಿ ನಡೆದಿದೆ ಎಂದು ದೂರಿದ್ದಾರೆ.

ಸಂವಿಧಾನವನ್ನು ಬದಲಿಸುವ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಕನ್ನಡ ಮತ್ತು ಇತರ ಭಾಷೆಗಳಿಗೆ ಹಿಂದಿಯಷ್ಟೇ ಸ್ಥಾನಮಾನ ನೀಡಲು ಸಾಂವಿಧಾನಿಕ ತಿದ್ದುಪಡಿ ತರಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದ್ದಾರೆ.

ಇತರ ಭಾಷೆಗಳಿಗೆ ಹಿಂದಿಯಷ್ಟು ಸ್ಥಾನಮಾನ ನೀಡಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರ ಮತ್ತು ಅದರ ನೇತೃತ್ವ ವಹಿಸಿರುವ ಬಿಜೆಪಿ, ಹಿಂದಿಯೇತರ ರಾಜ್ಯಗಳ, ಹಿಂದಿಯೇತರ ಭಾಷಿಕರ ಸಂಸದರನ್ನೂ ಒಳಗೊಂಡು ಸರ್ಕಾರ ರಚಿಸಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಎಲ್ಲ ಅಧಿಕೃತ ಭಾಷೆಗಳನ್ನು ಆಡಳಿತದಲ್ಲಿ ಜಾರಿಗೆ ತಂದು ಅವರೆಲ್ಲರ ಋಣ ತೀರಿಸುವುದು ಬಿಜೆಪಿಯ ಕರ್ತವ್ಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಅಧಿಸೂಚನೆ, ಪ್ರಕಟಣೆಗಳು ಇತರೆ ಅಧಿಕೃತ ಭಾಷೆಗಳಲ್ಲಿಯೂ ಇರಬೇಕು ಎಂದು ಸುಪ್ರೀಂ ಕೋರ್ಟ್​ ಇತ್ತೀಚಿಗೆ ಪ್ರಕರಣವೊಂದರ ವಿಚಾರಣೆ ವೇಳೆ ಕೇಂದ್ರಕ್ಕೆ ಸೂಚನೆ ನೀಡಿದೆ. ಅಲ್ಲದೆ, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ, ಎಲ್ಲ ಭಾಷೆಗಳೂ ಸರಿಸಮಾನ ಎಂಬುದನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಎಚ್​ಡಿಕೆ ತಿಳಿಸಿದ್ದಾರೆ.

ಮೋದಿ ಹುಟ್ಟುಹಬ್ಬದ ದಿನ ನಿರುದ್ಯೋಗ ದಿನ ಅಭಿಯಾನ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮೋದಿಯವರ ಹುಟ್ಟುಹಬ್ಬಕ್ಕೆ ಅಭಿನಂದನೆ ತಿಳಿಸುತ್ತೇನೆ. ಆದರೆ, ನಿರುದ್ಯೋಗದ ವಿಚಾರಕ್ಕೆ ಬಂದಾಗ ಒಂದು ಕೋಟಿ ವಲಸಿಗರು ಉದ್ಯೋಗ ಇಲ್ಲದೇ ಬೀದಿಗೆ ಬಂದಿದ್ದಾರೆ. ಮೋದಿ ಆಡಳಿತದಲ್ಲಿ 20 ಕೋಟಿ ಜನ ಉದ್ಯೋಗ ಇಲ್ಲದೇ ಬೀದಿಗೆ ಬರುವಂತಾಗಿದೆ. ಇದರ ಜತೆಗೆ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಮೋದಿ ಮೇಲೆ ವಿಶ್ವಾಸ ಇಟ್ಡಿದ್ದಾರೆ. 70ನೇ ಹುಟ್ಟುಹಬ್ಬದಲ್ಲಾದರೂ ದೇಶಕ್ಕೆ ಒಳ್ಳೇದಾಗಲಿ ಎಂದು ಆಶಿಸುವುದಾಗಿ ಚುಚ್ಚಿದ್ದಾರೆ.

TRENDING