Tuesday, September 22, 2020
Home ಜಿಲ್ಲೆ ಕಲಬುರ್ಗಿ ಲಂಚ ಪಡೆದ ಸಹಕಾರ ಸಂಘದ ವ್ಯವಸ್ಥಾಪಕನಿಗೆ ಜೈಲು ಶಿಕ್ಷೆ

ಇದೀಗ ಬಂದ ಸುದ್ದಿ

ಮಹಾಮಾರಿ ʼಕೊರೊನಾʼ ಕುರಿತು ಬಹಿರಂಗವಾಯ್ತು ಮತ್ತೊಂದು ಆತಂಕಕಾರಿ...

ಕೊರೊನಾ ಮಹಾಮಾರಿಯ ಕರಿ ಛಾಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾದಿಂದ ಸಾಯುವವರ ಸಂಖ್ಯೆಯಲ್ಲೂ ಕೂಡ ಹೆಚ್ಚಾಗಿದೆ. ಇದರ ಜೊತೆಗೆ ಈ ಕೊರೊನಾ ಯಾವಾಗ ಕೊನೆಯಾಗುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ....

ಸುಶಾಂತ್ ಸಾವಿನ ಪ್ರಕರಣ: ನಟಿ ರಿಯಾಗೆ ಅಕ್ಟೋಬರ್...

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 6 ರವರೆಗೆ ವಿಸ್ತರಿಸಿ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯವು...

ಬೈಂದೂರಿನ ಸಮುದ್ರ ತೀರದಲ್ಲಿ ಕ್ಷಿಪಣಿ ಮಾದರಿಯ ಉಪಕರಣ...

 ಉಡುಪಿ: ಬೈಂದೂರು ತಾಲ್ಲೂಕಿನ ಶಿರೂರು ಸಮೀಪದ ಕಳಿಹಿತ್ಲು ಸಮುದ್ರ ತೀರದಲ್ಲಿ ಮಂಗಳವಾರ ಕ್ಷಿಪಣಿ ಮಾದರಿಯ ವಸ್ತುವೊಂದು ಪತ್ತೆಯಾಗಿದೆ. ಸುಮಾರು 10 ಅಡಿ ಉದ್ದವಿರುವ ಕೆಂಪು ಬಣ್ಣದ ಉಪಕರಣವನ್ನು...

ಹಿರಿಯ ನಟಿ ಆಶಾಲತಾ ಕೊರೊನಾ ಸೋಂಕಿಗೆ ಬಲಿ

ನವದೆಹಲಿ:ಕೋವಿಡ್ 19 ಸೋಂಕಿಗೆ ಮರಾಠಿ ಚಿತ್ರರಂಗದ ಪ್ರಸಿದ್ಧ ನಟಿ ಆಶಾಲತಾ ವಾಬ್ಗಾಂವ್ ಕರ್ (79ವರ್ಷ) ಸತಾರಾ ಆಸ್ಪತ್ರೆಯಲ್ಲಿ ಮಂಗಳವಾರ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ. ಐಎಎನ್ ಎಸ್...

ಭಾರತದಲ್ಲಿ 55 ಲಕ್ಷದ ಗಡಿ ದಾಟಿದ ಕೊರೊನಾ...

 ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಮುಂದುವರಿದಿದ್ದು, ಇದೀಗ ಸೋಂಕಿತರ ಸಂಖ್ಯೆ 55 ಲಕ್ಷದ ಗಡಿ ದಾಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ...

ಲಂಚ ಪಡೆದ ಸಹಕಾರ ಸಂಘದ ವ್ಯವಸ್ಥಾಪಕನಿಗೆ ಜೈಲು ಶಿಕ್ಷೆ

ಕಲಬುರ್ಗಿರೈತರೊಬ್ಬರಿಗೆ ಉದ್ದಿನ ಬೆಳೆ ಮಾರಾಟ ಮಾಡಿದ ಚೆಕ್ ವಿತರಿಸಲು ₹ 15 ಸಾವಿರ ಲಂಚ ಪಡೆದ ಆರೋಪ ಸಾಬೀತಾಗಿದ್ದರಿಂದ ಚಿತ್ತಾಪುರದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ವ್ಯವಸ್ಥಾಪಕ ಬಸವರಾಜ ಗುಳೇದಗೆ ಜಿಲ್ಲಾ ಪ್ರಧಾನ ಹಾಗು ವಿಶೇಷ ಸೆಷನ್ಸ್ ನ್ಯಾಯಾಧೀಶ ಆರ್.ಜೆ. ಸತೀಶ ಸಿಂಗ್ ಅವರು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಚಿತ್ತಾಪುರದ ಅಂತಯ್ಯ ಸಾತಪ್ಪ ಕಲಾಲ ಅವರು ಸಂಘಕ್ಕೆ ಮಾರಾಟ ಮಾಡಿದ ಉದ್ದಿನ ಚೆಕ್‍ಗಳನ್ನು ಕೇಳಲು ಹೋದಾಗ ವ್ಯವಸ್ಥಾಪಕ ಬಸವರಾಜ ಚೆಕ್ಕಿಗೆ ತಲಾ ₹ 5 ಸಾವಿರದಂತೆ ಮೂರು ಚೆಕ್‍ಗಳಿಗೆ ಒಟ್ಟು ₹ 15 ಸಾವಿರ ಲಂಚವನ್ನು ನೀಡಲು ಒತ್ತಾಯಿಸಿದ್ದರು.
ಈ ಬಗ್ಗೆ ಅಂತಯ್ಯ ನೀಡಿದ ದೂರಿನ ಆಧಾರದ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಜೇಮ್ಸ್ ಮೆನೇಜಸ್ ಅವರು 18 ಮಾರ್ಚ್‌ 2013ರಂದು ಪ್ರಕರಣ ದಾಖಲು ಮಾಡಿಕೊಂಡು, ಅಂದೇ ಹಣ ಪಡೆಯುವ ಸಂದರ್ಭದಲ್ಲಿ ಬಲೆಗೆ ಕೆಡವಿದರು.

ನಂತರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ಜೆ. ಸತೀಶ ಸಿಂಗ್ ರವರು ವರು ಕಲಂ. 7 ಪಿ.ಸಿ ಆಕ್ಟ್‌ನಡಿ 3 ವರ್ಷ ಶಿಕ್ಷೆ ₹ 5 ಸಾವಿರ ದಂಡ, ಜೊತೆಗೆ ಲಂಚ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ 3 ವರ್ಷ ಶಿಕ್ಷೆ ₹ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು.

TRENDING