Monday, September 21, 2020
Home ಸುದ್ದಿ ಜಾಲ ತರಕಾರಿ ಗುಡ್ಡೆ ಮುಂದೆ ಕುಳಿತಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ‘ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ’

ಇದೀಗ ಬಂದ ಸುದ್ದಿ

ಶೀಘ್ರದಲ್ಲಿಯೇ ರಫೇಲ್ ಜೆಟ್ ಹಾರಿಸಲಿದ್ದಾರೆ ಮಹಿಳಾ ಪೈಲಟ್

 ನವದೆಹಲಿ, ಸೆ 21: ಅಂಬಾಲಾ ವಾಯುನೆಲೆಯಲ್ಲಿನ ಸಂಪೂರ್ಣ ಪುರುಷ ಪೈಲಟ್‌ಗಳ ರಫೇಲ್ ತಂಡಕ್ಕೆ ಶೀಘ್ರದಲ್ಲಿಯೇ ಮೊದಲ ಮಹಿಳಾ ಪೈಲಟ್ ಸೇರ್ಪಡೆಯಾಗಲಿದ್ದಾರೆ. ಭಾರತೀಯ ವಾಯು ಪಡೆಯಲ್ಲಿ ಸಕ್ರಿಯರಾಗಿರುವ...

ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ; ಆದಿತ್ಯ ಅಗರ್ವಾಲ್...

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್​ ಲಿಂಕ್ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆದಿತ್ಯಾ ಅಗರ್ವಾಲ್​​ನನ್ನ ಮತ್ತೆ ಸಿಸಿಬಿಗೆ ಒಪ್ಪಿಸಲಾಗಿದೆ. ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಎನ್​ಡಿಪಿಎಸ್​ ಕೋರ್ಟ್​ಗೆ...

ದೆಹಲಿ ಗಲಭೆ ಪ್ರಕರಣ : ಕುಟುಂಬ ಭೇಟಿಗೆ...

ನವದೆಹಲಿ: ದೆಹಲಿ ಗಲಭೆಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ಬಂಧಿತರಾಗಿರುವ ಜೆಎನ್‌ಯು ಹ‌ಳೆಯ ವಿದ್ಯಾರ್ಥಿ ‌ಉಮರ್ ಖಾಲಿದ್, ತಮ್ಮ ಕುಟುಂಬ ಭೇಟಿಗಾಗಿ ಅನುಮತಿ...

N L S I U ಬೆಂಗಳೂರಿನ...

 ನವದೆಹಲಿ: ಬೆಂಗಳೂರಿನ ಎನ್‌ಎಲ್‌ಎಸ್‌ಐಯು ನ ಬಿಎ.ಎಲ್‌ಎಲ್ ಬಿ (ಆನರ್ಸ್) ಪ್ರವೇಶಕ್ಕೆ ನಡೆಸಲಾಗುತ್ತಿದ್ದ ಪ್ರತ್ಯೇಕ ಪ್ರವೇಶ ಪರೀಕ್ಷೆ ಎನ್‌ಎಲ್‌ಎಟಿ-2020 ನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಎಲ್ಲಾ 22 ರಾಷ್ಟ್ರೀಯ...

ಡ್ರಗ್ ಪ್ರಕರಣ : ನಶೆ ರಾಣಿಯರ...

ಬೆಂಗಳೂರು,ಸೆ.21: ಡ್ರಗ್ ಜಾಲದಲ್ಲಿ ಭಾಗಿಯಾಗಿ ಬಂಧಿತರಾಗಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನಗರದ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ವಿಚಾರಣೆಯನ್ನು...

ತರಕಾರಿ ಗುಡ್ಡೆ ಮುಂದೆ ಕುಳಿತಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ‘ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ’

ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ನಾರಾಯಣಮೂರ್ತಿ ತಮ್ಮ ಸರಳತೆಯಿಂದಲೇ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಇತ್ತೀಚೆಗೆ ತರಕಾರಿಗಳ ಗುಡ್ಡೆಗಳ ನಡುವೆ ಕುಳಿತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“#DidYouKnow ಸುಧಾ ಮೂರ್ತಿ (2500 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಮಡದಿ) ತಮ್ಮ ಅಹಂಕಾರವನ್ನು ಇಳಿಸಿಕೊಳ್ಳಲು, ಪ್ರತಿ ವರ್ಷ ಒಂದು ದಿನದ ಮಟ್ಟಿಗೆ ವೆಂಕಟೇಶ್ವರ ದೇವಸ್ಥಾನದ ಎದುರು ಕುಳಿತುಕೊಂಡು ತರಕಾರಿ ಮಾರುತ್ತಾರೆ” ಎಂದು ಈ ಫೋಟೋಗೆ ಕ್ಯಾಪ್ಷನ್‌ ಸಹ ನೀಡಲಾಗಿದೆ.

ಆದರೆ ಅವರು ಅಲ್ಲಿ ಕುಳಿತಿರುವುದು ತರಕಾರಿ ಮಾರಾಟ ಮಾಡಲು ಅಲ್ಲ ಎಂದು ತಿಳಿದುಬಂದಿದೆ.

“ಈ ಸಂಪ್ರದಾಯ ನನ್ನ ಹೃದಯಕ್ಕೆ ಹತ್ತಿರವಾದುದಾಗಿದೆ. ಜಯನಗರ 5ನೇ ಬ್ಲಾಕ್‌ನಲ್ಲಿರುವ ನಮ್ಮ ಮನೆಯ ಬಳಿ ಇರುವ ರಾಘವೇಂದ್ರ ಮಠದ ಬಳಿ ನಾನು ಈ ತರಕಾರಿ ಗುಡ್ಡೆಗಳ ನಡುವೆ ಕುಳಿತುಕೊಂಡಿದ್ದು, ರಾಘವೇಂದ್ರ ರಾಯರ ಸಮಾರಾಧನೆಯ ಮೂರು ದಿನಗಳ ಮಟ್ಟಿಗೆ ದಾಸೋಹ ವ್ಯವಸ್ಥೆ ಮಾಡುತ್ತೇನೆ” ಎಂದು ಖುದ್ದು ಸುಧಾ ಮೂರ್ತಿ ಅವರೇ ಸ್ಪಷ್ಟನೆ ನೀಡಿದ್ದಾರೆ.

“ನಾನು ಹೀಗೆ ಮಾಡುವುದರಿಂದ ಒಂದು ರೀತಿಯ ಸಂತೃಪ್ತಿ ಸಿಗುತ್ತದೆ. ಇದರಿಂದ ನನಗೆ ಧ್ಯಾನ ಮಾಡಲು ಸಹಾಯವಾಗುತ್ತದೆ. ಈ ಸಂಪ್ರದಾಯವು ವ್ಯಕ್ತಿಗತ ಮಟ್ಟದಲ್ಲಿ ನನ್ನ ಹೃದಯಕ್ಕೆ ಹತ್ತಿರವಾದುದಾಗಿದೆ. ನಾನು ದೇವರ ಸೇವೆ ಮಾಡುತ್ತಿದ್ದೇನೆ ಎಂದು ನನಗೆ ನಿಜಕ್ಕೂ ಅನಿಸುತ್ತದೆ. ದೇವರ ಮುಂದೆ ನಾವೆಲ್ಲರೂ ಸಮ. ನೀವು ಅವನ ಮುಂದೆ ತಲೆಬಾಗಿಯೇ ನಿಲ್ಲಬೇಕಾಗುತ್ತದೆ. ನಾನು ಅಲ್ಲಿ ಸೇವೆ ಮಾಡುವಾಗ ಆಗುವ ಭಾವ ಅಂಥಾದ್ದು. ಆದ್ದರಿಂದ ನಾನು ಅಲ್ಲಿ ಇರುವಾಗ ನನ್ನ ಫೋಟೋ ತೆಗೆದುಕೊಳ್ಳಲು ಯಾರಿಗೂ ಅನುಮತಿ ಕೊಡುವುದಿಲ್ಲ. ನಾನು ಕೆಲಸ ಮಾಡುವುದಲ್ಲದೇ ಧ್ಯಾನ ಮಾಡುವುದರಲ್ಲೂ ನಿರತಳಾಗಿರುತ್ತೇನೆ” ಎಂದು ಸುಧಾ ಮೂರ್ತಿ ತಿಳಿಸಿದ್ದಾರೆ.

TRENDING