Tuesday, September 22, 2020
Home ಕೋವಿಡ್-19 ದೇಶದಲ್ಲಿ 50 ಲಕ್ಷದ ಗಡಿ ದಾಟಿದ ಕೊರೋನ ಪ್ರಕರಣಗಳು

ಇದೀಗ ಬಂದ ಸುದ್ದಿ

ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ವಿರುದ್ಧ...

ಹೈದರಾಬಾದ್ : ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಹೈದರಾಬಾದ್ ನಲ್ಲಿ ಮನೆಯೊಂದನ್ನು ಖರೀದಿಸಿದ್ದಾರಂತೆ. ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಗೊಚ್ಚಿಬೋಲಿ ಏರಿಯಾದಲ್ಲಿ 4 ಬೆಡ್ ರೂಂನ ವಿಶಾಲವಾದ ಮನೆಯನ್ನು...

ಕೊರೊನಾ ಹಿನ್ನೆಲೆ : ಕೊಳ್ಳೇಗಾಲದಲ್ಲಿ ಮಧ್ಯಾಹ್ನದ ನಂತರ...

ಕೊಳ್ಳೇಗಾಲ: ನಗರದಲ್ಲಿ ಪ್ರತಿನಿತ್ಯ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಜನರಲ್ ಮರ್ಚೆಂಟ್ಸ್ ಅಸೋಸಿಯೇಷನ್ ಅವರು ಸೆ. 21ರಿಂದ ಅ.4 ರವರೆಗೆ ಪ್ರತಿದಿನ ಮಧ್ನಾಹ 2.30ರ ನಂತರ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್...

ನಿರ್ಮಾಪಕ ಮಹೇಶ್ ಭಟ್, ರಿಯಾ ಚಕ್ರವರ್ತಿ ಖಾಸಗಿ...

ಮುಂಬೈ: ರಿಯಾ ಚಕ್ರವರ್ತಿ ಮತ್ತು ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರ ಹೊಸ ವೀಡಿಯೊ ಈಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವಿಡಿಯೊದಲ್ಲಿ ರಿಯಾ ಮತ್ತು ಮಹೇಶ್ ಭಟ್ ಒಂದು ಕೋಣೆಯಲ್ಲಿ ಒಟ್ಟಿಗೆ...

ಕೊರೊನಾ ಸೋಂಕಿತರಿಗೆ ‘ ICU ‘ ಲಭ್ಯವಾಗುವ...

ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 55 ಲಕ್ಷ ದಾಟಿರುವ ನಡುವೆ ಆಸ್ಪತ್ರೆಗಳಲ್ಲಿ ರೋಗಿಗಳ ನಿರ್ವಹಣೆಯ ಸವಾಲುಗಳೂ ಸಹ ಹೆಚ್ಚಾಗುತ್ತಿವೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆ ಆಸ್ಪತ್ರೆಗಳಲ್ಲಿ ಐಸಿಯು ಲಭ್ಯತೆ ಕಡಿಮೆಯಾಗುತ್ತಿದೆ.

ವಿಶ್ವದಾದ್ಯಂತ 3 ಕೋಟಿ ದಾಟಿದ ಕೊರೊನಾ ಸೋಂಕಿತರ...

ವಿಶ್ವದ ಒಟ್ಟು 210 ದೇಶಗಳಲ್ಲಿ ಈವರೆಗೆ 3 ಕೋಟಿಗೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಒಟ್ಟು 9.47 ಲಕ್ಷ ಮಂದಿ ಕೋವಿಡ್-19ರಿಂದ ಮೃತಪಟ್ಟಿದ್ದಾರೆ. ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯಕ್ಕೆ...

ದೇಶದಲ್ಲಿ 50 ಲಕ್ಷದ ಗಡಿ ದಾಟಿದ ಕೊರೋನ ಪ್ರಕರಣಗಳು

ಹೊಸದಿಲ್ಲಿ: ವಿಶ್ವದಲ್ಲಿ ಅಮೆರಿಕ ಹೊರತುಪಡಿಸಿದರೆ ಐವತ್ತು ಲಕ್ಷ ಕೊರೋನ ವೈರಸ್ ಪ್ರಕರಣಗಳು ವರದಿಯಾದ ಏಕೈಕ ದೇಶವಾಗಿ ಭಾರತ ಹೊರಹೊಮ್ಮಿದೆ. ಕಳೆದ 11 ದಿನಗಳಲ್ಲಿ ದೇಶದಲ್ಲಿ 10 ಲಕ್ಷ ಹೊಸ ಪ್ರಕರಣಗಳು ಸೇರ್ಪಡೆಯಾಗಿರುವುದು ದೇಶದಲ್ಲಿ ಮಾರಕ ಸಾಂಕ್ರಾಮಿಕದ ತೀವ್ರತೆಗೆ ಸಾಕ್ಷಿಯಾಗಿದೆ.

ಮಂಗಳವಾರ ದೇಶದಲ್ಲಿ 90 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಒಂದೇ ದಿನ 1275 ಮಂದಿ ಬಲಿಯಾಗಿದ್ದಾರೆ. ಇದುವರೆಗೆ ಒಂದೇ ದಿನ ಸೋಂಕಿನಿಂದ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮೃತಪಟ್ಟಿರುವುದು ಇದೇ ಮೊದಲು.

ಭಾರತದಲ್ಲಿ ಮೊದಲ 10 ಲಕ್ಷ ಪ್ರಕರಣಗಳು ದಾಖಲಾಗಲು 167 ದಿನ ತೆಗೆದುಕೊಂಡಿತ್ತು. ವಿಶ್ವದ ಯಾವುದೇ ದೇಶದಲ್ಲಿ ಸೋಂಕು ಅತ್ಯಂತ ನಿಧಾನವಾಗಿ ಹರಡಿದ ನಿದರ್ಶನ ಇದಾಗಿತ್ತು. ಆದರೆ ಮುಂದಿನ 40 ಲಕ್ಷ ಪ್ರಕರಣಗಳು ಕೇವಲ 61 ದಿನಗಳಲ್ಲಿ ವರದಿಯಾಗಿದ್ದು, ಇದು ವಿಶ್ವದಲ್ಲೇ ಅತಿವೇಗದ ಪ್ರಗತಿಯಾಗಿದೆ. 67 ಲಕ್ಷ ಪ್ರಕರಣಗಳು ವರದಿಯಾದ ಅಮೆರಿಕ ಮಾತ್ರ ಭಾರತಕ್ಕಿಂತ ಹೆಚ್ಚು ಪ್ರಕರಣ ಕಂಡಿದೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡಾ ಮಂಗಳವಾರ 10 ಲಕ್ಷ ದಾಟಿದೆ. ಅಮೆರಿಕದಲ್ಲಿ ಪ್ರಸ್ತುತ ಇರುವ 25 ಲಕ್ಷ ಪ್ರಕರಣಗಳನ್ನು ಹೊರತುಪಡಿಸಿದರೆ, ವಿಶ್ವದಲ್ಲೇ ಎರಡನೇ ಗರಿಷ್ಠ ಸಕ್ರಿಯ ಪ್ರಕರಣಗಳು ದಾಖಲಾಗಿರುವುದು ಕೂಡಾ ಭಾರತದಲ್ಲಿ.

ಮಂಗಳವಾರ 90,789 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 50,14,395ಕ್ಕೇರಿದೆ. ಸೆಪ್ಟೆಂಬರ್ ತಿಂಗಳ ಮೊದಲ 15 ದಿನಗಳಲ್ಲೇ 13 ಲಕ್ಷಕ್ಕೂ ಅಧಿಕ ಪ್ರಕರಣಗಳು ಅಂದರೆ ಒಟ್ಟು ಪ್ರಕರಣಗಳ ಶೇಕಡ 27ರಷ್ಟು ಪ್ರಕರಣಗಳು ದಾಖಲಾಗಿವೆ.

ದಿನದ ಸಾವಿನ ಸಂಖ್ಯೆ ಕೂಡಾ ದಾಖಲೆ ನಿರ್ಮಿಸಿದ್ದು, ಮಹಾರಾಷ್ಟ್ರದಲ್ಲಿ ಒಂದೇ ದಿನ 515 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶ (113), ಕರ್ನಾಟಕ (97), ಪಂಜಾಬ್ (90), ಆಂಧ್ರಪ್ರದೇಶ (69), ತಮಿಳುನಾಡು (68) ಮತ್ತು ಬಂಗಾಳ (59) ಅತಿಹೆಚ್ಚು ಸಾವನ್ನು ಕಂಡಿವೆ.

TRENDING