Sunday, September 20, 2020
Home ಜಿಲ್ಲೆ ಕಲಬುರ್ಗಿ ರೈತರಿಗೆ ಶೀಘ್ರದಲ್ಲೇ ಬೆಳೆ ವಿಮೆ‌ ಮಂಜೂರು: ಬಿ.ಸಿ.ಪಾಟೀಲ್

ಇದೀಗ ಬಂದ ಸುದ್ದಿ

ಡ್ರಗ್ಸ್ ಪ್ರಕರಣ: ಖ್ಯಾತ ನಟ ಮತ್ತು ಡ್ಯಾನ್ಸರ್...

ಡ್ರಗ್ಸ್ ಮಾರಾಟ ಮಾಡುತ್ತಿದ್ದ ಖ್ಯಾತ ಡ್ಯಾನ್ಸರ್ ಮತ್ತು ನಟ ಕಿಶೋರ್ ಶೆಟ್ಟಿ ಸೇರಿದಂತೆ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಮುಂಬೈಯಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು...

ಚಾಮರಾನಗರ : ಒಂದೇ ದಿನ 72 ಹೊಸ...

 ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಶನಿವಾರ 72 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. 28 ಮಂದಿ ಗುಣಮುಖರಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ ಕಾರಣದಿಂದ ಮೃತಪಟ್ಟವರ ಸಂಖ್ಯೆ 53ಕ್ಕೆ...

ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ : ಸಿಸಿಬಿ...

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಲಿಂಕ್ ಆರೋಪದಲ್ಲಿ ನಿರೂಪಕ ಅಕುಲ್ ಬಾಲಾಜಿ, ಮಾಜಿ ಕಾರ್ಪೊರೇಟರ್​​ ಯುವರಾಜ್ ಹಾಗೂ ನಟ ಸಂತೋಷ್​​ಗೆ ಸಿಸಿಬಿ ನೋಟಿಸ್ ನೀಡಿತ್ತು. ಅದರಂತೆ ಮೂವರು ಇಂದು ಸಿಸಿಬಿ ಅಧಿಕಾರಿಗಳ...

ಅರ್ಕೇಶ್ವರ ದೇವಸ್ಥಾನದ ಮೂವರು ಅರ್ಚಕರ ಹತ್ಯೆ ಪ್ರಕರಣ:...

ಮಂಡ್ಯ: ನಗರದ ಅರ್ಕೇಶ್ವರ ದೇವಸ್ಥಾನದ ಮೂವರು ಅರ್ಚಕರ ಹತ್ಯೆ ಮಾಡಿ ಹುಂಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿಗಳನ್ನು ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಸನ...

ಜೆಡಿಎಸ್‌ನವರು ಆರ್‌ಎಸ್‌ಎಸ್ ಜತೆ ಸೇರಿದ್ರೂ ಸೇರಬಹುದು:...

ಬೆಂಗಳೂರು: ಜೆಡಿಎಸ್ ಅವಕಾಶವಾದಿ ಪಕ್ಷ. ಸ್ವಾರ್ಥ, ಅಧಿಕಾರಕ್ಕೆ ಬಿಜೆಪಿ ಜತೆಯೂ ಹೋಗುತ್ತಾರೆ. ಆರ್‌ಎಸ್‌ಎಸ್ ಜತೆ ಸೇರಿದ್ರೂ ಸೇರಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು. ಕೆಪಿಸಿಸಿ...

ರೈತರಿಗೆ ಶೀಘ್ರದಲ್ಲೇ ಬೆಳೆ ವಿಮೆ‌ ಮಂಜೂರು: ಬಿ.ಸಿ.ಪಾಟೀಲ್

ಕಲಬುರಗಿ: ಕಳೆದ 2019-20ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆವಿಮೆಯನ್ನು ಶೀಘ್ರದಲ್ಲೇ ಮಂಜೂರಾಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

ಮಂಗಳವಾರ ಇಲ್ಲಿನ‌ ಕೃಷಿ ಮಹಾವಿದ್ಯಾಲಯದಲ್ಲಿ ಬೆಳೆ ಸಮೀಕ್ಷೆ ಹಾಗೂ ಇಲಾಖೆಯ ವಿಭಾಗ ಮಟ್ಟದ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟೋತ್ತಿಗೆ ಬೆಳೆ ವಿಮೆ ಮಂಜೂರಾಗಿ ರೈತರ ಖಾತೆಗೆ ಪರಿಹಾರ ಮೊತ್ತ ಜಮಾವಾಗಬೇಕಿತ್ತು.‌ಆದರೆ ಬೆಳೆ ಹಾನಿಯ ಪ್ರಮಾಣ ವರದಿ ರೂಪಿಸುವಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಲು ಕೆಲವು ತಿಂಗಳು ಹಿಡಿದಿದೆ. ಈಗ ಎಲ್ಲ ಕಾರ್ಯ ಮುಗಿದಿದೆ. ಹೀಗಾಗಿ ವಾರ ಇಲ್ಲವೇ 15 ದಿನದಲ್ಲಿ ಬೆಳೆ ವಿಮೆ ಮಂಜೂರಾಗಲಿದೆ ಎಂದರು.

ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿ ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ. ಹೀಗಾಗಿ ರಾಜ್ಯಕ್ಕೆ ಅಂದಾಜು ಸಾವಿರ ಕೋ.ರೂ ಬೆಳೆ ವಿಮ ಹಣ ಮಂಜೂರಾಗುವ ವಿಶ್ವಾಸ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.

ಬೆಳೆ ಇಳುವರಿ ಪ್ರಮಾಣ ನಿಗದಿ ಮಾಡುವ ವರದಿಗಳು ಸಮರ್ಪಕವಾಗಿ ನಡೆಯಿತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಹೀಗಾಗಿ ಬೆಳೆವಿಮೆಯಲ್ಲಿನ ಲೋಪ ದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳೊಂದಿ ಸಭೆ ನಡೆಸಲಾಗುವುದು. ಈಗಿನ ಬೆಳೆವಿಮೆ ಪದ್ದತಿ ಕೈ ಬಿಟ್ಟು ಹವಾಮಾನ ಆಧಾರಿತ ಬೆಳೆವಿಮೆ ಜಾರಿಗೆ ತರಲು ಮುಂದಾಗುವುದಾಗಿ ಸಚಿವ ಪಾಟೀಲ್ ತಿಳಿಸಿದರು.

ಬೆಳೆವಿಮೆ ಮಂಜೂರಾತಿಯಲ್ಲಿ ರೈತರಿಗೆ ಶೋಷಣೆ ಯಾಗುತ್ತಿದೆ. ಒಂದು ತಾಲೂಕಿಗೆ ಪರಿಹಾರ ಬಂದರೆ ಪಕ್ಕದ ತಾಲೂಕಿಗೆ ನಯಾ ಪೈಸೆ ಬರೋದಿಲ್ಲ. ಇದರ ಬಗ್ಗೆ ಸ್ವತಃ: ಅರಿತುಕೊಳ್ಳಲಾಗುವುದು ಎಂದರು.

ಬಿಎಸ್ಸಿ ಕೃಷಿ, ಪಶು ಸಂಗೋಪನಾ, ತೋಟಗಾರಿಕೆ ಸೇರಿ ಇತರ ವೃತ್ತಿಪರ ಕೋರ್ಸುಗಳ ರೈತರ ಮಕ್ಕಳು ಶೇ. 40ರಷ್ಟು ಸೀಟುಗಳ ಮೀಸಲಾತಿಗೆ ಯಾವುದೇ ಧಕ್ಕೆ ಬಾರದಂತೆ ನಿಗಾ ವಹಿಸಲಾಗುವುದು. ಕೊವಿಡ್- ೧೯ ಹಿನ್ನಲೆ ಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಿಕ್ಕಾಗಿಲ್ಲ. ಸಿಇಟಿ ಫಲಿತಾಂಶ ಹಾಗೂ ರೈತ ಮಕ್ಕಳ ಸರ್ಟಿಫಿಕೇಟ್ ಆಧಾರದ ಮೇಲೆ ಪ್ರವೇಶಾತಿ ಕಲ್ಪಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಶಾಸಕ ಬಿ.ಜಿ.ಪಾಟೀಲ್, ಮಾಜಿ ಶಾಸಕ ದೊಡ್ಡ ಪ್ಪಗೌಡ ಪಾಟೀಲ್ ನರಿಬೋಳ, ಜಿ.ಪಂ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಗುರುಶಾಂತಗೌಡ ಪಾಟೀಲ್ ಹಾಜರಿದ್ದರು.

TRENDING