Tuesday, September 22, 2020
Home ಅಂತರ್ ರಾಜ್ಯ ‘ಮೊಘಲರು ನಮ್ಮ ಹೀರೋಗಳಾಗಲು ಹೇಗೆ ಸಾಧ್ಯ?’: ಸಿಎಂ ಆದಿತ್ಯನಾಥ್

ಇದೀಗ ಬಂದ ಸುದ್ದಿ

ದೆಹಲಿ ಹಿಂಸಾಚಾರ ಅನುಷ್ಠಾನಕ್ಕಾಗಿ 1.61 ಕೋಟಿ ರೂ....

ನವದೆಹಲಿ: ನಮಸ್ತೆ ಟ್ರಂಪ್ ಕಾರ್ಯಕ್ರಮದ ಸಂದರ್ಭದಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ನೆಪದಲ್ಲಿ ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಕಿಚ್ಚು ಹಚ್ಚುವುದಕ್ಕಾಗಿ ಐವರ ಬ್ಯಾಂಕ್​ ಖಾತೆಗೆ 1.61 ಕೋಟಿ ರೂಪಾಯಿ...

ಭಾರತದಲ್ಲಿ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ ಶೇ.80ಕ್ಕೆ...

ನವದೆಹಲಿ: ಭಾರತದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣ ಶೇ.80ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಇಲಾಖೆ ಮಾಹಿತಿ ನೀಡಿದೆ. ಭಾರತದಲ್ಲಿ ಸತತ ಮೂರನೇ ದಿನ ಸೋಂಕಿನಿಂದ...

ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ವಿರುದ್ಧ...

ಹೈದರಾಬಾದ್ : ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಹೈದರಾಬಾದ್ ನಲ್ಲಿ ಮನೆಯೊಂದನ್ನು ಖರೀದಿಸಿದ್ದಾರಂತೆ. ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಗೊಚ್ಚಿಬೋಲಿ ಏರಿಯಾದಲ್ಲಿ 4 ಬೆಡ್ ರೂಂನ ವಿಶಾಲವಾದ ಮನೆಯನ್ನು...

ಕೊರೊನಾ ಹಿನ್ನೆಲೆ : ಕೊಳ್ಳೇಗಾಲದಲ್ಲಿ ಮಧ್ಯಾಹ್ನದ ನಂತರ...

ಕೊಳ್ಳೇಗಾಲ: ನಗರದಲ್ಲಿ ಪ್ರತಿನಿತ್ಯ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಜನರಲ್ ಮರ್ಚೆಂಟ್ಸ್ ಅಸೋಸಿಯೇಷನ್ ಅವರು ಸೆ. 21ರಿಂದ ಅ.4 ರವರೆಗೆ ಪ್ರತಿದಿನ ಮಧ್ನಾಹ 2.30ರ ನಂತರ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್...

ನಿರ್ಮಾಪಕ ಮಹೇಶ್ ಭಟ್, ರಿಯಾ ಚಕ್ರವರ್ತಿ ಖಾಸಗಿ...

ಮುಂಬೈ: ರಿಯಾ ಚಕ್ರವರ್ತಿ ಮತ್ತು ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರ ಹೊಸ ವೀಡಿಯೊ ಈಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವಿಡಿಯೊದಲ್ಲಿ ರಿಯಾ ಮತ್ತು ಮಹೇಶ್ ಭಟ್ ಒಂದು ಕೋಣೆಯಲ್ಲಿ ಒಟ್ಟಿಗೆ...

‘ಮೊಘಲರು ನಮ್ಮ ಹೀರೋಗಳಾಗಲು ಹೇಗೆ ಸಾಧ್ಯ?’: ಸಿಎಂ ಆದಿತ್ಯನಾಥ್

ಉತ್ತರ ಪ್ರದೇಶದ ಐತಿಹಾಸಿಕ ಆಗ್ರಾ ನಗರದಲ್ಲಿ ನಿರ್ಮಾಣವಾಗುತ್ತಿರುವ ಮೊಘಲ್ ಮ್ಯೂಸಿಯಂಗೆ ಛತ್ರಪತಿ ಶಿವಾಜಿ ಮಹಾರಾಜ್ ಹೆಸರು ಇಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ತಿಳಿಸಿದ್ದಾರೆ. ಮೊಘಲರ ಕಾಲದ ಆಡಳಿತದ ವಸ್ತುಗಳನ್ನು ಪ್ರದರ್ಶನಕ್ಕೆ ಇಡುವ ಈ ಮ್ಯೂಸಿಯಂಗೆ ‘ಮೊಘಲ್ ಮ್ಯೂಸಿಯಂ’ ಎಂದೇ ಹೆಸರಿಡಲು ಉದ್ದೇಶಿಸಲಾಗಿತ್ತು. ಆದರೆ ಯೋಗಿ, ಹೆಸರು ಬದಲಿಸುವುದಾಗಿ ತಿಳಿಸಿದ್ದಾರೆ.

ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ನಡೆಸಿದ ಅವರು, ‘ಮೊಘಲರು ನಮ್ಮ ಹೀರೋಗಳಾಗಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು. ಮಾನಸಿಕ ದಾಸ್ಯತನ ಎನಿಸುವ ಯಾವುದೇ ಸಂಗತಿಗಳನ್ನಾದರೂ ತಮ್ಮ ಸರ್ಕಾರ ತೆಗೆದುಹಾಕಲಿದೆ ಎಂದು ಹೇಳಿದರು.

ಯೋಗಿ ಆದಿತ್ಯನಾಥ್ ಸರ್ಕಾರದಡಿ ಉತ್ತರ ಪ್ರದೇಶದ ಅನೇಕ ಪ್ರದೇಶಗಳ ಹೆಸರುಗಳನ್ನು ಬದಲಿಸಲಾಗಿದೆ. ಅಲಹಾಬಾದ್ ಈಗ ಪ್ರಯಾಗ್ ರಾಜ್ ಆಗಿ ಬದಲಾಗಿದೆ. ಉತ್ತರ ಪ್ರದೇಶದಲ್ಲಿ ದಾಸ್ಯ ಮನೋಭಾವದ ಸಂಕೇತಕ್ಕೆ ಜಾಗವಿಲ್ಲ ಎಂದು ಯೋಗಿ ಹೇಳಿದ್ದಾರೆ.

‘ಆಗ್ರಾದಲ್ಲಿ ನಿರ್ಮಾಣ ಹಂತದಲ್ಲಿರುವ ವಸ್ತು ಸಂಗ್ರಹಾಲಯಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಹೆಸರು ನಾಮಕರಣ ಮಾಡಲಾಗುವುದು. ನಿಮ್ಮ ಹೊಸ ಉತ್ತರ ಪ್ರದೇಶದಲ್ಲಿ ಮಾನಸಿಕ ಗುಲಾಮಗಿರಿಯ ಸಂಕೇತಗಳಿಗೆ ಯಾವುದೇ ಜಾಗವಿಲ್ಲ. ಶಿವಾಜಿ ಮಹಾರಾಜ್ ನಮ್ಮ ಹೀರೋ. ಜೈ ಹಿಂದ್, ಜೈ ಭಾರತ್’ ಎಂದು ಯೋಗಿ ಟ್ವೀಟ್ ಮಾಡಿದ್ದಾರೆ.

ಆಗ್ರಾ ನಗರದಲ್ಲಿ ತಾಜ್ ಮಹಲ್ ಸಮೀಪದಲ್ಲಿ ಆರು ಎಕರೆ ಪ್ರದೇಶದಲ್ಲಿ ಈ ಮ್ಯೂಸಿಯಂ ನಿರ್ಮಾಣವಾಗುತ್ತಿದೆ. ಈ ಯೋಜನೆಗೆ 2015ರಲ್ಲಿ ಅಖಿಲೇಶ್ ಯಾದವ್ ಸರ್ಕಾರ ಅನುಮತಿ ನೀಡಿತ್ತು. ಮೊಘಲರ ಕಾಲದ ಸಂಸ್ಕೃತಿ, ಚಿತ್ರಕಲೆ, ಅಡುಗೆ,ದಿರಿಸು, ಯುದ್ಧೋಪಕರಣಗಳು ಮುಂತಾದವುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ.

TRENDING