Thursday, September 24, 2020
Home ದೆಹಲಿ ಕೊರೊನಾ ಲಸಿಕೆ ತಯಾರಿಕೆಯಲ್ಲಿ ಭಾರತದ ಪ್ರಮುಖ ಪಾತ್ರವಹಿಸಲಿದೆ: ಬಿಲ್‌ಗೇಟ್ಸ್

ಇದೀಗ ಬಂದ ಸುದ್ದಿ

ಕೇಂದ್ರ ಸರ್ಕಾರ ರೈತರ ನಂತರ, ಕಾರ್ಮಿಕರನ್ನು...

ನವದೆಹಲಿ: ಸಂಸತ್ತು ಅಂಗೀಕರಿಸಿದ ಮೂರು ಕಾರ್ಮಿಕ ಸುಧಾರಣಾ ಮಸೂದೆಗಳ ಕುರಿತು ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರ ರೈತರ ನಂತರ ಕಾರ್ಮಿಕರನ್ನು...

ಪಂಜಾಬ್ ನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ:...

ಮೊಹಾಲಿ : ನಿರ್ಮಾಣ ಹಂತದ ಎರಡು ಮಹಡಿಯ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು ಕಟ್ಟಡದ ಮಾಲೀಕ ಸೇರಿ ಹಲವರು ಗಾಯಗೊಂಡು ಇನ್ನು ಕೆಲವರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ...

ಡಿ. ಜೆ. ಹಳ್ಳಿ ಗಲಭೆ ಪ್ರಕರಣ ;...

ಬೆಂಗಳೂರು ನಗರದ ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಬಗ್ಗೆ ಎನ್‌ಐಎ ತನಿಖೆ ಆರಂಭವಾಗಿದೆ. ನಗರದ 12 ಕಡೆಗಳಲ್ಲಿ ಎನ್‌ಐಎ...

ಅಧಿವೇಶನ ಮುಗಿಯುತ್ತಿದ್ದಂತೆಯೇ ಭಾರತಕ್ಕೆ ಬಂದಿಳಿದ ಅಮ್ಮ-ಮಗ

 ನವದೆಹಲಿ: ಇತ್ತ ಮುಂಗಾರು ಅಧಿವೇಶನ ಶುರುವಾಗುತ್ತಿದ್ದಂತೆಯೇ ವೈದ್ಯಕೀಯ ಚಿಕಿತ್ಸೆ ಎಂದು ಹೇಳಿ ಅಮೆರಿಕಕ್ಕೆ ಹಾರಿದ್ದ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ಅಧಿವೇಶನ ಮುಗಿಯುತ್ತಿದ್ದಂತೆಯೇ ಕೊನೆಗೂ...

ಡ್ರಗ್ಸ್ ಕೇಸ್; ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ...

 ಬೆಂಗಳೂರು: ಡ್ರಗ್ಸ್​ ಕೇಸ್​ ಪ್ರಕರಣ ಸಂಬಂಧ ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ ಸಮನ್ಸ್ ಜಾರಿ ಮಾಡಿದೆ. ಡ್ರಗ್ಸ್​ ರಾಕೆಟ್​ ಕೇಸ್​ನಲ್ಲಿ ಸ್ಫೋಟಕ ತಿರುವು ಪಡೆದಿದ್ದು, ನಿತ್ಯ ಹೊಸ-ಹೊಸ...

ಕೊರೊನಾ ಲಸಿಕೆ ತಯಾರಿಕೆಯಲ್ಲಿ ಭಾರತದ ಪ್ರಮುಖ ಪಾತ್ರವಹಿಸಲಿದೆ: ಬಿಲ್‌ಗೇಟ್ಸ್

ನವದೆಹಲಿಕೊರೊನಾ ಲಸಿಕೆ ಸಿದ್ಧವಾದ ನಂತರ ಅದನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವಲ್ಲಿ ಭಾರತ ಪ್ರಮುಖ ಪಾತ್ರವಹಿಸಲಿದ್ದು, ಇದನ್ನು ಜಗತ್ತೇ ಎದುರು ನೋಡುತ್ತಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆಯ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿ ಸಂಸ್ಥೆಯೊಂದರ ಜತೆ ದೂರವಾಣಿ ಮೂಲಕ ಮಾತನಾಡಿರುವ ಅವರು, ‘ಭಾರತದ ದೊಡ್ಡ ಪ್ರಮಾಣದಲ್ಲಿ ಕೊರೊನಾ ಲಸಿಕೆಯನ್ನು ತಯಾರಿಸಿ, ಜಗತ್ತಿನ ಇತರೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ’ ಎಂದು ಹೇಳಿದ್ದಾರೆ.

‘ಮುಂದಿನ ವರ್ಷದ ವೇಳೆಗೆ ಲಸಿಕೆ ತಯಾರಾಗಲಿದೆ. ಆದಷ್ಟು ಬೇಗ ಭಾರತ ಈ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಿ ಎಂದು ನಾವೆಲ್ಲ ಬಯಸುತ್ತಿದ್ದೇವೆ. ಒಮ್ಮೆ ಲಸಿಕೆ ತಯಾರಾಗಿ, ಪರಿಣಾಮಕಾರಿ ಮತ್ತು ಸುರಕ್ಷತೆಯಿಂದ ಕೂಡಿದೆ ಎಂದು ಗೊತ್ತಾದರೆ, ಭಾರತದಿಂದಲೇ ಈ ಲಸಿಕೆಯನ್ನು ಖರೀದಿಸಬಹುದು’ ಎಂದು ಬಿಲ್‌ಗೇಟ್ಸ್‌ ಹೇಳಿದ್ದಾರೆ.

‘ಇದು ವಿಶ್ವದ ಮಹಾಯುದ್ಧದಂತಲ್ಲ. ಅದಕ್ಕಿಂತ ದೊಡ್ಡದು. ನಾವು ಹಿಂದೆಂದೂ ನೋಡದಂತಹ ಸಮಯ ಎದುರಾಗುತ್ತದೆ’ ಎಂದು ಕೊರೊನೋತ್ತರದ ದಿನಗಳ ಕುರಿತು ಬಿಲ್‌ಗೇಟ್ಸ್‌ ಭವಿಷ್ಯ ನುಡಿದಿದ್ದಾರೆ.

ವಿಶ್ವದ ಅತಿದೊಡ್ಡ ಚಾರಿಟಬಲ್‌ ಟ್ರಸ್ಟ್‌ಗಳಲ್ಲಿ ಒಂದಾದ ಬಿಲ್‌ಮತ್ತು ಮಿಲಿಂಡಾ ಪ್ರತಿಷ್ಠಾನ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಭಾರತದಲ್ಲಿ ಕೋವಿಡ್ -19 ಲಸಿಕೆಗಳ ತಯಾರಿಕೆ ಮತ್ತು ವಿತರಣೆಯನ್ನು ವೇಗಗೊಳಿಸಲು ಪ್ರತಿಷ್ಠಾನವು ಸೀರಮ್ ಸಂಸ್ಥೆಯೊಂದಿಗೆ ಸಹಭಾಗಿತ್ವವನ್ನು ಹೊಂದಿದೆ.

TRENDING