Monday, September 21, 2020
Home ಬೆಂಗಳೂರು ನಟಿ ರಾಗಿಣಿ ದ್ವಿವೇದಿ ಖರೀದಿಸಿದ್ದ ಕನಸಿನ ಮನೆಯನ್ನ ಮಾರಾಟಕ್ಕಿಟ್ಟ ಅಪ್ಪ

ಇದೀಗ ಬಂದ ಸುದ್ದಿ

ಶೀಘ್ರದಲ್ಲಿಯೇ ರಫೇಲ್ ಜೆಟ್ ಹಾರಿಸಲಿದ್ದಾರೆ ಮಹಿಳಾ ಪೈಲಟ್

 ನವದೆಹಲಿ, ಸೆ 21: ಅಂಬಾಲಾ ವಾಯುನೆಲೆಯಲ್ಲಿನ ಸಂಪೂರ್ಣ ಪುರುಷ ಪೈಲಟ್‌ಗಳ ರಫೇಲ್ ತಂಡಕ್ಕೆ ಶೀಘ್ರದಲ್ಲಿಯೇ ಮೊದಲ ಮಹಿಳಾ ಪೈಲಟ್ ಸೇರ್ಪಡೆಯಾಗಲಿದ್ದಾರೆ. ಭಾರತೀಯ ವಾಯು ಪಡೆಯಲ್ಲಿ ಸಕ್ರಿಯರಾಗಿರುವ...

ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ; ಆದಿತ್ಯ ಅಗರ್ವಾಲ್...

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್​ ಲಿಂಕ್ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆದಿತ್ಯಾ ಅಗರ್ವಾಲ್​​ನನ್ನ ಮತ್ತೆ ಸಿಸಿಬಿಗೆ ಒಪ್ಪಿಸಲಾಗಿದೆ. ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಎನ್​ಡಿಪಿಎಸ್​ ಕೋರ್ಟ್​ಗೆ...

ದೆಹಲಿ ಗಲಭೆ ಪ್ರಕರಣ : ಕುಟುಂಬ ಭೇಟಿಗೆ...

ನವದೆಹಲಿ: ದೆಹಲಿ ಗಲಭೆಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ಬಂಧಿತರಾಗಿರುವ ಜೆಎನ್‌ಯು ಹ‌ಳೆಯ ವಿದ್ಯಾರ್ಥಿ ‌ಉಮರ್ ಖಾಲಿದ್, ತಮ್ಮ ಕುಟುಂಬ ಭೇಟಿಗಾಗಿ ಅನುಮತಿ...

N L S I U ಬೆಂಗಳೂರಿನ...

 ನವದೆಹಲಿ: ಬೆಂಗಳೂರಿನ ಎನ್‌ಎಲ್‌ಎಸ್‌ಐಯು ನ ಬಿಎ.ಎಲ್‌ಎಲ್ ಬಿ (ಆನರ್ಸ್) ಪ್ರವೇಶಕ್ಕೆ ನಡೆಸಲಾಗುತ್ತಿದ್ದ ಪ್ರತ್ಯೇಕ ಪ್ರವೇಶ ಪರೀಕ್ಷೆ ಎನ್‌ಎಲ್‌ಎಟಿ-2020 ನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಎಲ್ಲಾ 22 ರಾಷ್ಟ್ರೀಯ...

ಡ್ರಗ್ ಪ್ರಕರಣ : ನಶೆ ರಾಣಿಯರ...

ಬೆಂಗಳೂರು,ಸೆ.21: ಡ್ರಗ್ ಜಾಲದಲ್ಲಿ ಭಾಗಿಯಾಗಿ ಬಂಧಿತರಾಗಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನಗರದ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ವಿಚಾರಣೆಯನ್ನು...

ನಟಿ ರಾಗಿಣಿ ದ್ವಿವೇದಿ ಖರೀದಿಸಿದ್ದ ಕನಸಿನ ಮನೆಯನ್ನ ಮಾರಾಟಕ್ಕಿಟ್ಟ ಅಪ್ಪ

ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಕೊಂಡಿರುವ ನಟಿ ರಾಗಿಣಿ ದ್ವಿವೇದಿ ಅವರ ಕನಸಿನ ಮನೆ ಮಾರಾಟಕ್ಕಿದೆ. ಯಲಹಂಕದ ಜ್ಯುಡಿಶಿಯಲ್ ಲೇಔಟ್ನಲ್ಲಿರುವ ಅವರ ಮನೆಯನ್ನು ಖಾಸಗಿ ವೆಬ್ ಸೈಟ್ನಲ್ಲಿ ಸೇಲ್ಗೆ ಇಡಲಾಗಿದೆ. ನಟಿ ರಾಗಿಣಿ ಬಹಳ ಅಸ್ಥೆ ವಹಿಸಿ ಖರೀದಿಸಿದ್ದ ಪ್ಲಾಟ್ ಇದು. ಲಕ್ಷಾಂತರ ರೂ ಖರ್ಚು ಮಾಡಿ ತಮ್ಮಿಷ್ಟದಂತೆ ಇಂಟೀರಿಯರ್ ಡೆಕೋರೇಶನ್ ಮಾಡಿಸಿಕೊಂಡಿದ್ದರು. ಅನನ್ಯ ಅಪಾರ್ಟ್ಮೆಂಟ್ ಎರಡನೇ ಮಹಡಿಯಲ್ಲಿರುವ ಮೂರು ಬೆಡ್ ರೂಮ್ಗಳ 2061 ಚದರಡಿಯ ವಿಶಾಲ ಮನೆಯನ್ನು ಅವರ ತಂದೆ ರಾಕೇಶ್ ದ್ವಿವೇದಿ 2 ಕೋಟಿ ರೂಪಾಯಿಗೆ ಮಾರಾಟಕ್ಕಿಟ್ಟಿದ್ದಾರೆ. ಖಾಸಗಿ ವೆಬ್​​ಸೈಟ್ನಲ್ಲಿ (NoBroker.In) ಮನೆಯ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಇಲ್ಲಿ ಮಗಳು ರಾಗಿಣಿ ದ್ವಿವೇದಿ ಜೈಲಿನಲ್ಲಿರುವಾಗ ಈಕೆಯ ಆಸ್ತಿಯನ್ನು ಅಪ್ಪ ಮಾರಾಟಕ್ಕಿಡಲು ಕಾರಣವಾದರೂ ಏನುರಾಗಿಣಿ ದ್ವಿವೇದಿ ಅವರ ಕುಟುಂಬದವರು ಇದೀಗ ಮೌನವಾಗಿರಲು ತೀರ್ಮಾನಿಸಿದ್ಧಾರೆ. ಅಪ್ಪ ರಾಕೇಶ್ ದ್ವಿವೇದಿ ಕನಲಿ ಹೋಗಿದ್ದಾರೆ. ಸಾರ್ವಜನಿಕವಾಗಿ ಹೆಚ್ಚು ಮಾತನಾಡುತ್ತಿಲ್ಲ. ಅಕ್ಕಪಕ್ಕದವರ ಜೊತೆ ಮುಖ ಕೊಟ್ಟು ಮಾತನಾಡುತ್ತಿಲ್ಲ. ಮಾಧ್ಯಮಗಳನ್ನು ದೂರವೇ ಇಟ್ಟಿದ್ದಾರೆ. ವಕೀಲರ ಫೀಸು, ಕೋರ್ಟು ಕಟ್ಟಳೆ ಖರ್ಚು ಇತ್ಯಾದಿ ನೆನೆದು ಅವರು ಕಳವಳಗೊಂಡಿದ್ದಾರೆ. ಅದಕ್ಕಾಗಿಯೇ ಅವರು ಮನೆ ಮಾರಾಟಕ್ಕಿಟ್ಟಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಆದರೆ, ವಾಸ್ತವದಲ್ಲಿ ಅವರ ಮನೆ ಮಾರಾಟದ ಹಿಂದೆ ಬೇರೆಯೇ ಕಾರಣ ಇದೆ, ಲೆಕ್ಕಾಚಾರಗಳಿವೆ ಎನ್ನುತ್ತವೆ ಕೆಲ ಮೂಲಗಳು.

ರಾಗಿಣಿ ದ್ವಿವೇದಿ ಅವರು ಡ್ರಗ್ಸ್ ದಂಧೆ ಮೂಲಕ ಅಕ್ರಮವಾಗಿ ಈ ಮನೆಯನ್ನು ಕೊಂಡಿದ್ದರೆನ್ನಲಾಗಿದೆ. ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇರುವುದರಿಂದ ಸದ್ದಿಲ್ಲದೆ ಮನೆ ಮಾರಾಟ ಮಾಡಿ ಕೈತೊಳೆದುಕೊಳ್ಳಲು ಅವರ ಕುಟುಂಬದವರು ಯೋಜನೆ ಹಾಕಿರಬಹುದು ಎಂಬ ಮಾತು ಕೇಳಿಬರುತ್ತಿದೆ.

ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳಾದ ರಾಗಿಣಿ ದ್ವಿವೇದಿ, ಪ್ರಶಾಂತ್ ರಾಂಕಾ, ಸಿಮೋನ್, ರಾಹುಲ್ ಮತ್ತು ನಿಯಾಜ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಡಲಾಗಿದೆ. ಇನ್ನು, ಸಂಜನಾ ಗಲ್ರಾಣಿ ಮತ್ತು ವೀರೇನ್ ಖನ್ನ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಮುಂದುವರಿಸಲಾಗುತ್ತಿದೆ.

TRENDING