Thursday, October 22, 2020
Home ಕ್ರೈಂ ನ್ಯೂಸ್ ಅರ್ಚಕರ ಕೊಲೆ ಪ್ರಕರಣ; ಆರೋಪಿಗಳಿಂದ ಪೊಲೀಸರ ಮೇಲೆ ಗುಂಡಿನ ದಾಳಿ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿ ‘ನವೆಂಬರ್’ನಲ್ಲಿ ಯುಜಿ, ಪಿಜಿ ‘ಕಾಲೇಜು ಆರಂಭ

ಬೆಂಗಳೂರು : ಕೊರೋನಾ ಸೋಂಕಿನ ಸಂಕಷ್ಟದ ನಡುವೆಯೂ ರಾಜ್ಯದಲ್ಲಿ ನವೆಂಬರ್ 2ನೇ ವಾರದಲ್ಲಿ ಯುಜಿ, ಪಿಜಿ ಕಾಲೇಜು ಆರಂಭದ ಬಗ್ಗೆ ಚಿಂತನೆ ನಡೆಸಲಾಗಿದೆ ಎಂಬುದಾಗಿ ಶಿಕ್ಷಣ ಇಲಾಖೆ ಉನ್ನತ ಮೂಲಗಳಿಂದ...

ಗೋಲ್ಡನ್ ಚಾರಿಯಟ್ ರೈಲು ಸಂಚಾರಕ್ಕೆ ದಿನಾಂಕ ನಿಗದಿ

ಮೂರು ವರ್ಷಗಳ ಬಳಿಕ ಮತ್ತೆ ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ಸಂಚಾರ ಮಾಡುತ್ತಿದೆ. 2020ರ ಜನವರಿಯಿಂದ ಸಂಚಾರ ಆರಂಭಿಸಬೇಕಿದ್ದ ಈ ರೈಲು 2021 ಜನವರಿಯಿಂದ ತನ್ನ ಸಂಚಾರ ಆರಂಭ ಮಾಡುತ್ತಿದೆ....

ಮಿಸ್​ ವರ್ಲ್ಡ್​ ಅಮೆರಿಕ ಕಿರೀಟ ತಯಾರಿಸಿದ ಸೂರತ್‌...

ಮಿಸ್​ ವರ್ಲ್ಡ್​ ಅಮೆರಿಕದಲ್ಲಿ ವಿಜೇತರಾದವರಿಗೆ ಕಿರೀಟ ತೊಡಿಸುತ್ತಾರೆ. ಆ ಕಿರೀಟವನ್ನು ಚೀನಾ ಮತ್ತು ಹಾಂಕಾಂಗ್​​​ನಲ್ಲಿ ತಯಾರಿಸಲಾಗುತ್ತಿತ್ತು. ಆದರೆ, ಈ ಬಾರಿ ಸೂರತ್‌ನ ಡೈಮಂಡ್ ಜ್ಯುವೆಲ್ಲರ್ಸ್ ಕಂಪನಿಗೆ ಕಿರೀಟ ತಯಾರಿ ಮಾಡುವ...

ಮಳೆಯಿಂದ ಹೊಲದಲ್ಲಿ ಕೊಳೆತ ಈರುಳ್ಳಿ

ಕಳೆದ ಎರಡು ವಾರದಿಂದ ಸುರಿಯುತ್ತಿರುವ ಮಳೆಯಿಂದ ಹೊಲದಲ್ಲಿ ಗೂಡು ಹಾಕಿರುವ ಈರುಳ್ಳಿ ಕೊಳೆತ ಹಿನ್ನೆಲೆ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಗಗನಕ್ಕೆ ಏರಿದೆ. ರಾಣೆಬೆನ್ನೂರು ತಾಲೂಕಿನಲ್ಲಿ ಕಳೆದೆರೆಡು...

ಚಿಕ್ಕಮಗಳೂರು ಜಿ.ಪಂ ಅಧ್ಯಕ್ಷೆ ಕಿರಿಕ್ ಆರೋಪ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸ್ಥಾನ ಸಖತ್ ಸ್ಟ್ರಾಂಗ್ ಅನಿಸುತ್ತದೆ. ಏಕೆಂದರೆ ಅಧಿಕಾರದಲ್ಲಿ ಕುಳಿತ ಮೇಲೆ ನಾನು ರಾಜೀನಾಮೆ ಕೊಡಲ್ಲ ಅನ್ನೋದು ಎಲ್ಲರ ಡೈಲಾಗ್​ ಆಗಿದೆ. ಅಧ್ಯಕ್ಷರಾಗಬೇಕಾದ್ರೆ ನಾನು ಪಕ್ಷದ...

ಅರ್ಚಕರ ಕೊಲೆ ಪ್ರಕರಣ; ಆರೋಪಿಗಳಿಂದ ಪೊಲೀಸರ ಮೇಲೆ ಗುಂಡಿನ ದಾಳಿ

 ಮಂಡ್ಯ (ಸೆ. 14): ಮಂಡ್ಯದ ಅರಕೇಶ್ವರ ದೇವಸ್ಥಾನದ ಅರ್ಚಕರನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಂಡು ಹೋಗುತ್ತಿದ್ದ ಆರೋಪಿಗಳು ಪೊಲೀಸರ ಮೇಲೆ ಇಂದು ಮುಂಜಾನೆ ಗುಂಡು ಹಾರಿಸಿದ್ದಾರೆ. ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಕೂಡ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಮೂವರು ಆರೋಪಿಗಳ ಕಾಲಿಗೆ ಗಾಯವಾಗಿದೆ. ಮೂರ್ನಾಲ್ಕು ಪೊಲೀಸರಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಮಂಡ್ಯದ ಶ್ರೀ ಅರ್ಕೇಶ್ವರ ದೇವಾಲಯದ ಪ್ರಾಂಗಣದಲ್ಲಿ ಮಲಗಿದ್ದ ಗಣೇಶ್ (35), ಪ್ರಕಾಶ್ (36) ಮತ್ತು ಆನಂದ್ (33) ಅವರನ್ನು ಶುಕ್ರವಾರ ಬೆಳಗ್ಗಿನ ಜಾವ ಹತ್ಯೆಗೈದು ಹುಂಡಿಯ ಹಣವನ್ನು ಕಳ್ಳತನ ಮಾಡಲಾಗಿತ್ತು. ಅವರು ದೇವಾಲಯದ ಅರ್ಚಕರು ಮತ್ತು ಕಾವಲುಗಾರರಾಗಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಮೂವರು ರಾತ್ರಿ ಗೋಪುರ ಮುಖ್ಯದ್ವಾರದ ಬಾಗಿಲಿನ ಚಿಲಕವನ್ನು ಒಳಗಿನಿಂದ ಹಾಕಿಕೊಂಡು ಮಲಗಿದ್ದರು. ಉತ್ತರ ದಿಕ್ಕಿನ ಕಾಂಪೌಂಡ್ ಪಕ್ಕದಲ್ಲಿರುವ ಮರವನ್ನೇರಿ ದೇವಾಲಯದ ಒಳಗೆ ಪ್ರವೇಶಿಸಿರುವ ದರೋಡೆಕೋರರು ಮೊದಲು ಮೂವರನ್ನು ಕೊಲೆ ಮಾಡಿ ನಂತರ ಹುಂಡಿ ಒಡೆದಿದ್ದಾರೆ. ಬೆಳಗ್ಗೆ ಬೇರೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಈ ಕೊಲೆಯ ವಿಚಾರ ಬಯಲಾಗಿತ್ತು. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ 5 ಲಕ್ಷ ರೂ. ಪರಿಹಾರ ಘೋಷಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ಕಾರ್ಯದ ವೇಳೆ ಪೊಲೀಸರ ಮೇಲೆ ಆರೋಪಿಗಳಿಂದ ಫೈರಿಂಗ್ ಆಗಿತ್ತು. ಆತ್ಮ ರಕ್ಷಣೆಗಾಗಿ ಪೊಲೀಸರಿಂದ ಆರೋಪಿಗಳ ಮೇಲೆ ಪ್ರತಿದಾಳಿ ನಡೆಸಲಾಗಿದ್ದು, ಮದ್ದೂರು ತಾಲೂಕಿನ ಸಾದೊಳಲು ಗ್ರಾಮದ ಬಳಿ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಮೂವರು ಆರೋಪಿಗಳ ಕಾಲಿಗೆ ಗುಂಟೇಟು ತಗುಲಿದೆ. ಮೂರ್ನಾಲ್ಕು ಪೊಲೀಸರಿಗೂ ಘಟನೆಯಲ್ಲಿ ಗಾಯಗಳಾಗಿವೆ. ಕೊಲೆ ಆರೋಪಿಗಳಾದ ಆಂಧ್ರ ಪ್ರದೇಶ ಮೂಲದ ವಿಜಿ (25), ಮದ್ದೂರಿ ಅರೆಕಲ್ ದೊಡ್ಡಿಯ ಗಾಂಧಿ (28) ಹಾಗೂ ತೊಪ್ಪನಹಳ್ಳಿಯ ಮಂಜು (30) ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದಾರೆ.

ಮಂಡ್ಯದ ಪಿಎಸ್​ಐ ಶರತ್ ಕುಮಾರ್​, ಎಎಸ್​ಐ ಕೃಷ್ಣ ಕುಮಾರ್ ಹಾಗೂ ಹೆಡ್​ಕಾನ್ಸ್‌ಟೇಬಲ್ ಅನಿಲ್​ಗೆ ಗಾಯಗಳಾಗಿವೆ. ಗಾಯಾಳುಗಳಾದ ಆರೋಪಿಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಾಯಗೊಂಡ ಪೊಲೀಸರಿಗೆ ಮದ್ದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  

TRENDING