Tuesday, September 22, 2020
Home ಕೋವಿಡ್-19 ಕೊರೊನಾ ಸೋಂಕಿತನ ಉಸಿರಾಟ ಭಾಗದ ಕೋಶಗಳ ಚಿತ್ರ ಬಿಡುಗಡೆ

ಇದೀಗ ಬಂದ ಸುದ್ದಿ

ದೆಹಲಿ ಹಿಂಸಾಚಾರ ಅನುಷ್ಠಾನಕ್ಕಾಗಿ 1.61 ಕೋಟಿ ರೂ....

ನವದೆಹಲಿ: ನಮಸ್ತೆ ಟ್ರಂಪ್ ಕಾರ್ಯಕ್ರಮದ ಸಂದರ್ಭದಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ನೆಪದಲ್ಲಿ ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಕಿಚ್ಚು ಹಚ್ಚುವುದಕ್ಕಾಗಿ ಐವರ ಬ್ಯಾಂಕ್​ ಖಾತೆಗೆ 1.61 ಕೋಟಿ ರೂಪಾಯಿ...

ಭಾರತದಲ್ಲಿ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ ಶೇ.80ಕ್ಕೆ...

ನವದೆಹಲಿ: ಭಾರತದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣ ಶೇ.80ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಇಲಾಖೆ ಮಾಹಿತಿ ನೀಡಿದೆ. ಭಾರತದಲ್ಲಿ ಸತತ ಮೂರನೇ ದಿನ ಸೋಂಕಿನಿಂದ...

ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ವಿರುದ್ಧ...

ಹೈದರಾಬಾದ್ : ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಹೈದರಾಬಾದ್ ನಲ್ಲಿ ಮನೆಯೊಂದನ್ನು ಖರೀದಿಸಿದ್ದಾರಂತೆ. ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಗೊಚ್ಚಿಬೋಲಿ ಏರಿಯಾದಲ್ಲಿ 4 ಬೆಡ್ ರೂಂನ ವಿಶಾಲವಾದ ಮನೆಯನ್ನು...

ಕೊರೊನಾ ಹಿನ್ನೆಲೆ : ಕೊಳ್ಳೇಗಾಲದಲ್ಲಿ ಮಧ್ಯಾಹ್ನದ ನಂತರ...

ಕೊಳ್ಳೇಗಾಲ: ನಗರದಲ್ಲಿ ಪ್ರತಿನಿತ್ಯ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಜನರಲ್ ಮರ್ಚೆಂಟ್ಸ್ ಅಸೋಸಿಯೇಷನ್ ಅವರು ಸೆ. 21ರಿಂದ ಅ.4 ರವರೆಗೆ ಪ್ರತಿದಿನ ಮಧ್ನಾಹ 2.30ರ ನಂತರ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್...

ನಿರ್ಮಾಪಕ ಮಹೇಶ್ ಭಟ್, ರಿಯಾ ಚಕ್ರವರ್ತಿ ಖಾಸಗಿ...

ಮುಂಬೈ: ರಿಯಾ ಚಕ್ರವರ್ತಿ ಮತ್ತು ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಅವರ ಹೊಸ ವೀಡಿಯೊ ಈಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವಿಡಿಯೊದಲ್ಲಿ ರಿಯಾ ಮತ್ತು ಮಹೇಶ್ ಭಟ್ ಒಂದು ಕೋಣೆಯಲ್ಲಿ ಒಟ್ಟಿಗೆ...

ಕೊರೊನಾ ಸೋಂಕಿತನ ಉಸಿರಾಟ ಭಾಗದ ಕೋಶಗಳ ಚಿತ್ರ ಬಿಡುಗಡೆ

ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾದ ಉಸಿರಾಟ ಭಾಗದ ಕೋಶಗಳ ಮೇಲೆ ನಾವೆಲ್ ಕೊರೊನಾ ವೈರಸ್ ಸೋಂಕು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಚಿತ್ರಗಳನ್ನು ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ. ಶ್ವಾಸಕೋಶದ ಒಳಗೆ ವೈರಾಣು ಕಣಗಳು ಪ್ರತಿ ಕೋಶಗಳಲ್ಲಿ ಉತ್ಪಾದನೆಯಾದ ಮತ್ತು ಬಿಡುಗಡೆಯಾದ ಸಂಖ್ಯೆಗಳ ಚಿತ್ರಣವನ್ನು ನೀಡಿದ್ದಾರೆ.

ನಾರ್ತ್ ಕೆರೋಲಿನಾ ಮಕ್ಕಳ ಸಂಶೋಧನಾ ಸಂಸ್ಥೆ ವಿಶ್ವವಿದ್ಯಾಲಯದ ಕ್ಯಾಮಿಲೆ ಎಹ್ರೆ ಹಾಗೂ ಇತರೆ ಸಂಶೋಧಕರು ಸಾರ್ಸ್-ಕೋವ್-2 ಸೋಂಕು ಗಾಳಿಯ ಮೂಲಕ ಹೇಗೆ ತೀವ್ರಗೊಳ್ಳುತ್ತದೆ ಎಂಬುದನ್ನು ಚಿತ್ರಗಳ ಮೂಲಕ ಸುಲಭವಾಗಿ ಅರ್ಥವಾಗುವಂತೆ ವಿವರಿಸಲು ಈ ಚಿತ್ರಗಳನ್ನು ಸೆರೆಹಿಡಿದಿದ್ದಾರೆ.

ಅಧಿಕ ಸಾಮರ್ಥ್ಯದ ಮೈಕ್ರೋಸ್ಕೋಪಿಕ್ ಚಿತ್ರಗಳಲ್ಲಿ ಅಪಾರ ಪ್ರಮಾಣದ ವೈರಾಣು ಅಂಶಗಳು ಮಾನವನ ಉಸಿರಾಟದ ಅಂಗಗಳ ಮೇಲ್ಭಾಗದಲ್ಲಿ ಅಂಗಾಂಶಗಳಿಗೆ ಹಾಗೂ ಇತರೆ ಜನರಿಗೆ ಸೋಂಕು ಹರಡಿಸಲು ಹೇಗೆ ಸಿದ್ಧವಾಗಿವೆ ಎನ್ನುವುದು ಕಂಡುಬರುತ್ತದೆ.

ಈ ಸಂಶೋಧನೆಗಾಗಿ ವಿಜ್ಞಾನಿಗಳು ನಾವೆಲ್ ಕೊರೊನಾ ವೈರಸ್ ಸಾರ್ಸ್-ಕೋವ್-2ಅನ್ನು ಮಾನವನ ಶ್ವಾಸಕೋಶದ ಕೃತಕ ಸೃಷ್ಟಿಯೊಳಗೆ ಅಳವಡಿಸಿದ್ದಾರೆ. 96 ಗಂಟೆಗಳ ಕಾಲ ಅತ್ಯಧಿಕ ಸಾಮರ್ಥ್ಯದ ಸ್ಕ್ಯಾನಿಂಗ್ ಎಲೆಕ್ಟ್ರಾನ್ ಮೈಕ್ರೋಸ್ಕೋಪಿ ಬಳಸಿ ಅದನ್ನು ಪರಿಶೀಲಿಸಿದ್ದಾರೆ.

ಈ ವೇಳೆ ಕಂಡುಬಂದ ದೃಶ್ಯಗಳನ್ನು ಚಿತ್ರಗಳಲ್ಲಿ ಸೆರೆಹಿಡಿದಿದ್ದಾರೆ. ಅದಕ್ಕೆ ಹೊಸದಾಗಿ ಬಣ್ಣ ನೀಡಿದ್ದಾರೆ. ಇದರಿಂದ ವೈರಸ್‌ನ ಚಟುವಟಿಕೆಗಳು ಸುಲಭವಾಗಿ ಕಾಣಿಸುವಂತೆ ಇದೆ. ಶ್ವಾಸಕೋಶದೊಳಗೆ ದೊಡ್ಡ ಪ್ರಮಾಣದಲ್ಲಿ ಮರುಸೃಷ್ಟಿಯಾಗುವ ವೈರಸ್‌ಗಳ ಗುಂಪು ಉಸಿರಾಟ ವ್ಯವಸ್ಥೆಯ ಪ್ರತಿ ಕೋಶದೊಳಗೂ ಬಿಡುಗಡೆಯಾಗುತ್ತವೆ. ಸೋಂಕಿತ ವ್ಯಕ್ತಿಯಿಂದ ಬಹು ಅಂಗಾಂಗಗಳಿಗೆ ಹಾಗೂ ಇತರರಿಗೆ ಹರಡಲು ಇದು ಮುಖ್ಯ ಮೂಲವಾಗುತ್ತದೆ. ಈ ಚಿತ್ರಗಳಲ್ಲಿ ಕಂಡುಬಂದಿರುವುದೇನೆಂದರೆ ಸೋಂಕಿತ ಜನರು ಸೋಂಕು ಹರಡಿಸದಂತೆ ಹಾಗೂ ಸಂಕು ತಗುಲದೆ ಇರುವವರು ಅದಕ್ಕೆ ಒಳಗಾಗುವ ಸಾಧ್ಯತೆಯನ್ನು ತಗ್ಗಿಸಲು ಮಾಸ್ಕ್ ಧರಿಸುವುದು ಎಷ್ಟು ಮುಖ್ಯ ಎಂದು ಸಂಶೋಧಕರು ಹೇಳಿದ್ದಾರೆ.

TRENDING